Asianet Suvarna News Asianet Suvarna News

ಮುಸ್ಲಿಂ ದೇಶ ತಜಕಿಸ್ತಾನದಲ್ಲಿ ಹಿಜಾಬ್‌ ನಿಷೇಧ: ಸಾರ್ವಜನಿಕ ಸ್ಥಳದಲ್ಲಿ ಧರಿಸಿದರೆ ₹5 ಲಕ್ಷದವರೆಗೂ ದಂಡ..!

ಸುಮಾರು 1 ಕೋಟಿ ಜನಸಂಖ್ಯೆ ಹೊಂದಿರುವ ತಜಕಿಸ್ತಾನದಲ್ಲಿ ಶೇ.96ರಷ್ಟು ಜನರು ಮುಸ್ಲಿಮರು. ಆದರೆ ಹಾಲಿ ಆಡಳಿತದಲ್ಲಿರುವ ಅಧ್ಯಕ್ಷ ಎಮೋಮಲಿ ರೆಹಮಾನ್‌ ಸರ್ಕಾರವು, ತಜಕಿಸ್ತಾನವನ್ನು ಜಾತ್ಯತೀತ ದೇಶ ಎಂದು ಜಗತ್ತಿನ ಮುಂದೆ ತೆರೆದಿಡುವ ಭಾಗವಾಗಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

Hijab Ban in Muslim Country Tajikistan grg
Author
First Published Jun 22, 2024, 4:28 AM IST

ದುಶಾನ್ಬೆ(ಜೂ.22): ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್‌ ಧರಿಸಲು ಅವಕಾಶ ನಿರಾಕರಿಸಿದ ಘಟನೆ ಕರ್ನಾಟಕ ಸೇರಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿ ಭಾರೀ ಗದ್ದಲ, ಕಾನೂನು ಹೋರಾಟಕ್ಕೆ ಕಾರಣವಾಗಿದ್ದರೆ, ಅತ್ತ ಮುಸ್ಲಿಮರೇ ಹೆಚ್ಚಿರುವ ತಜಕಿಸ್ತಾನ ದೇಶದಲ್ಲಿ ಸರ್ಕಾರ ಹಿಜಾಬ್‌ ಸೇರಿದಂತೆ ಇಸ್ಲಾಮಿಕ್‌ ವಸ್ತ್ರಗಳನ್ನೇ ನಿಷೇಧಿಸಿ ಅಚ್ಚರಿಯ ನಿರ್ಧಾರ ಕೈಗೊಂಡಿದೆ. ಹಿಜಾಬ್‌ ಧರಿಸುವುದು ಬಡತನ ಮತ್ತು ಅನಾಗರಿಕತೆಯ ಸೂಚಕ ಎಂದು ಬಣ್ಣಿಸಿರುವ ಅಧ್ಯಕ್ಷ ಎಮೋಮಲಿ ರೆಹಮಾನ್‌ ನೇತೃತ್ವದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಸುಮಾರು 1 ಕೋಟಿ ಜನಸಂಖ್ಯೆ ಹೊಂದಿರುವ ತಜಕಿಸ್ತಾನದಲ್ಲಿ ಶೇ.96ರಷ್ಟು ಜನರು ಮುಸ್ಲಿಮರು. ಆದರೆ ಹಾಲಿ ಆಡಳಿತದಲ್ಲಿರುವ ಅಧ್ಯಕ್ಷ ಎಮೋಮಲಿ ರೆಹಮಾನ್‌ ಸರ್ಕಾರವು, ತಜಕಿಸ್ತಾನವನ್ನು ಜಾತ್ಯತೀತ ದೇಶ ಎಂದು ಜಗತ್ತಿನ ಮುಂದೆ ತೆರೆದಿಡುವ ಭಾಗವಾಗಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಶೇ.96 ಮುಸ್ಲಿಮರನ್ನೇ ಹೊಂದಿರೋ ಈ ದೇಶದಲ್ಲಿ ಹಿಜಾಬ್, ಗಡ್ಡ ಬ್ಯಾನ್!

ಸಂಸತ್ತಿನ ಉಭಯ ಸದನಗಳಲ್ಲೂ ಅಂಗೀಕಾರವಾದ ಮಸೂದೆ ಅನ್ವಯ, ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್‌ ಸೇರಿದಂತೆ ಯಾವುದೇ ಇಸ್ಲಾಮಿಕ್‌ ಧಾರ್ಮಿಕ ವಸ್ತ್ರ ಧರಿಸುವಂತಿಲ್ಲ. ಒಂದು ವೇಳೆ ಧರಿಸಿದರೆ 3ರಿಂದ 5 ಲಕ್ಷ ರು.ವರೆಗೆ ದಂಡ ಕಟ್ಟಬೇಕಾಗುತ್ತದೆ. ಇದರ ಜೊತೆಗೆ ಹಬ್ಬದ ವೇಳೆ ಮಕ್ಕಳು, ಮನೆಯ ಹಿರಿಯರು ಅಥವಾ ಇತರರಿಂದ ಹಣ ಕೇಳುವ ಸಂಪ್ರದಾಯವನ್ನೂ ಸರ್ಕಾರ ಮಸೂದೆ ಮೂಲಕ ನಿಷೇಧಿಸಿದೆ.

ಚೀನಾ ಗಡಿಯಲ್ಲಿ ತಾಲಿಬಾನ್ ಸೂಸೈಡ್‌ ಬಾಂಬರ್, ಮುಂದಿನ ಟಾರ್ಗೆಟ್‌ ಪಾಕ್‌!

ಹೆಣ್ಣು ಮಕ್ಕಳು ಹಿಜಾಬ್‌ ಧರಿಸುವುದು ಬಡತನ ಮತ್ತು ಅನಾಗರಿಕತೆ ಸೂಚಕ ಎಂದೇ ಟೀಕಿಸಿಕೊಂಡು ಬಂದಿರುವ ರೆಹಮಾನ್‌ 2007ರಲ್ಲೇ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸಿದ್ದರು. ಬಳಿಕ ಅದನ್ನು ಸಾರ್ವಜನಿಕ ಸಂಸ್ಥೆಗಳಿಗೂ ವಿಸ್ತರಿಸಲಾಗಿತ್ತು. ಇದೀಗ ಅದನ್ನು ದೇಶವ್ಯಾಪಿ ವಿಸ್ತರಣೆ ಮಾಡಲಾಗಿದೆ. ಆದರೆ ಸರ್ಕಾರದ ನಿರ್ಧಾರವನ್ನು ದೇಶದ ಸಂಪ್ರದಾಯವಾದಿಗಳು ಕಟುವಾಗಿ ಟೀಕಿಸಿದ್ದಾರೆ. ಇದು ದೇಶದ ಸಂಸ್ಕೃತಿ, ಇಸ್ಲಾಮಿಕ್‌ ಸಂಪ್ರದಾಯಕ್ಕೆ ಆಪಾಯ ತರಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಏನಿದು ನಿರ್ಧಾರ?

- 1 ಕೋಟಿ ಜನಸಂಖ್ಯೆ ಹೊಂದಿರುವ ತಜಕಿಸ್ತಾನದಲ್ಲಿ 96% ಜನರು ಮುಸ್ಲಿಮರು
- ಆದರೂ 2007ರಲ್ಲೇ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ಗೆ ನಿಷೇಧ ಹೇರಿದ್ದ ಸರ್ಕಾರ
- ಇದೀಗ ದೇಶವ್ಯಾಪಿ ಹಿಜಾಬ್‌ ನಿಷೇಧ ವಿಸ್ತರಣೆ ಮಾಡಲು ಮಸೂದೆ ಅಂಗೀಕಾರ
- ಈ ವಿಧೇಯಕದ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್‌ ಧಾರಣೆ ನಿಷಿದ್ಧ
- ಇದನ್ನು ಉಲ್ಲಂಘಿಸಿದರೆ 3ರಿಂದ 5 ಲಕ್ಷ ರು.ವರೆಗೂ ದಂಡ ಹೇರುವ ಅವಕಾಶ
- ಕರ್ನಾಟಕ ಸೇರಿ ಭಾರತದಲ್ಲಿ ಕೆಲ ವರ್ಷಗಳ ಹಿಂದೆ ಭುಗಿಲೆದ್ದಿದ್ದ ಹಿಜಾಬ್‌ ವಿವಾದ
- ಇದೀಗ ಮುಸ್ಲಿಂ ದೇಶದಲ್ಲೇ ಹಿಜಾಬ್‌ಗೆ ನಿಷೇಧ ಹೇರಿರುವ ಬಗ್ಗೆ ಭಾರಿ ಚರ್ಚೆ

ಏಕೆ ನಿಷೇಧ?

- ಹೆಣ್ಣುಮಕ್ಕಳು ಹಿಜಾಬ್‌ ಧರಿಸುವುದು ಬಡತನ, ಅನಾಗರಿಕತೆಯ ಸೂಚಕ ಎಂಬ ಭಾವನೆ
- ತಜಕಿಸ್ತಾನವನ್ನು ಜಾತ್ಯತೀತ ದೇಶ ಎಂದು ಜಗತ್ತಿನೆದುರು ಬಿಂಬಿಸುವ ಯತ್ನದ ಭಾಗ
- ಅಧ್ಯಕ್ಷ ಎಮೋಮಲಿ ರೆಹಮಾನ್‌ ಸರ್ಕಾರದಿಂದ ಹಿಜಾಬ್‌ಗೆ ನಿಷೇಧ ಹೇರಿ ತೀರ್ಮಾನ
- ಕಟ್ಟರ್‌ ಸಂಪ್ರದಾಯವಾದಿಗಳಿಂದ ತಜಕಿಸ್ತಾನ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ

Latest Videos
Follow Us:
Download App:
  • android
  • ios