ಆಕ್ರೋಶಕ್ಕೆ ಬೆಚ್ಚಿದ ಮಾಲ್ಡೀವ್ಸ್ ಸರ್ಕಾರ, ಭಾರತ-ಪ್ರಧಾನಿ ಮೋದಿ ನಿಂದಿಸಿದ ಸಚಿವರು ವಜಾ!
ಭಾರತೀಯರು, ಪ್ರಧಾನಿ ಮೋದಿ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ ಸಚಿವರನ್ನು ಮಾಲ್ಡೀವ್ಸ್ ಸರ್ಕಾರ ವಜಾ ಮಾಡಿದೆ.
ಮಾಲ್ಡೀವ್ಸ್(ಜ.07) ಪ್ರಧಾನಿ ಮೋದಿ ಲಕ್ಷದ್ವೀಪ ಪ್ರವಾಸೋದ್ಯಮ ಉತ್ತೇಜಿಸಿದ ಬೆನ್ನಲ್ಲೇ ಭಾರತ ಹಾಗೂ ಮೋದಿ ವಿರುದ್ಧ ಮಾಲ್ಡೀವ್ಸ್ ಸಚಿವರು, ಕೆಲ ನಾಯಕರು ಹರಿಹಾಯ್ದಿದ್ದರು. ಅದರಲ್ಲೂ ಕೆಲವರು ಭಾರತೀಯರ ನಿಂದನೆ ಮಾಡಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ಅವಹೇಳನ ಮಾತುಗಳನ್ನಾಡಿದ್ದಾರೆ. ಇದರ ಬೆನ್ನಲ್ಲೇ ಭಾರತದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಜೊತಗೆ ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ಕೂಡ ಆರಂಭಗೊಂಡಿತ್ತು. ವಿಶ್ವದ ಇತರ ರಾಷ್ಟ್ರಗಳ ನಾಯಕರು ಮಾಲ್ಡೀವ್ಸ್ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಈ ಎಲ್ಲಾ ಬೆಳವಣಿಗೆಗೆ ಬೆಚ್ಚಿ ಬಿದ್ದ ಮಾಲ್ಡೀವ್ಸ್ ಸರ್ಕಾರ ಇದೀಗ ಭಾರತೀಯರು ಹಾಗೂ ಪ್ರಧಾನಿ ಮೋದಿ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ್ದ ಸಚಿವರನ್ನು ಸಂಪುಟದಿಂದ ವಜಾ ಮಾಡಿದೆ.
ಮಾಲ್ಡೀವ್ಸ್ ವಿದೇಶಾಂಗ ಸಚಿವಾಲಯ ಈ ಕುರಿತು ಪ್ರಕಟಣೆ ಹೊರಡಿಸಿದೆ. ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರ ಹೇಳಿಕೆ ಹಾಗೂ ಅಭಿಪ್ರಾಯವನ್ನು ಮಾಲ್ಡೀವ್ಸ್ ಸರ್ಕಾರ ಒಪ್ಪುವುದಿಲ್ಲ. ಹೀಗಾಗಿ ಈ ತಕ್ಷಣದಿಂದಲೇ ಅಂತಹ ಸಚಿವರನ್ನು ತಮ್ಮ ಸ್ಥಾನದಿಂದ ವಜಾ ಮಾಡಲಾಗಿದೆ ಎಂದು ಮಾಲ್ಡೀವ್ಸ್ ವಿದೇಶಾಂಗ ಸಚಿವಾಲಯ ಪ್ರಕಟಣೆ ಹೊರಡಿಸಿದೆ. ಆದರೆ ಈ ಪ್ರಕಟಣೆಯಲ್ಲಿ ಯಾವ ಸಚಿವರನ್ನು ವಜಾ ಮಾಡಲಾಗಿದೆ ಅನ್ನೋ ಮಾಹಿತಿ ನೀಡಿಲ್ಲ.
Boycott Maldives ಅಭಿಯಾನಕ್ಕೆ ಕೈಜೋಡಿಸಿದ ಸಚಿನ್, ಅಕ್ಷಯ್; ಕಂಗಾಲಾದ ವಿದೇಶಿ ಪ್ರವಾಸೋದ್ಯಮ!
ಮಾಲ್ಡೀವ್ಸ್ ಸ್ಥಳೀಯ ಮಾಧ್ಯಮಳ ವರದಿ ಪ್ರಕಾರ ಸಚಿವರಾದ ಮರಿಯಾಮ್ ಶಿಯುನಾ, ಮಾಲ್ಶಾ ಹಾಗೂ ಹಸನ್ ಜಿಹಾನ್ ಅವರನ್ನ ಸಂಪಟದಿಂದ ವಜಾ ಮಾಡಲಾಗಿದೆ ಎಂದಿದೆ. ಇಷ್ಟೇ ಅಲ್ಲ, ಇಂತಹ ಹೇಳಿಕೆಯಿಂದ ದ್ವಿಪಕ್ಷೀಯ ಸಂಬಂಧದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಮಾಲ್ಡೀವ್ಸ್ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ದೇಶ. ಹೀಗಾಗಿ ಹೇಳಿಕೆ ಕುರಿತು ಎಚ್ಚರಿಕೆ ಇರಬೇಕು ಅನ್ನೋ ಖಡಕ್ ಸಂದೇಶವನ್ನು ಸಚವರಿಗೆ ರವಾನಿಸಿದೆ ಎಂದು ಸ್ಥಳೀಯ ಮಾಧ್ಯಮಗಲು ವರದಿ ಮಾಡಿದೆ.
ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದ್ದರು. ಇದು ಮಾಲ್ಡೀವ್ಸ್ ಕೆಂಗಣ್ಣಿಗೆ ಗುರಿಯಾಗಿತ್ತು. ಇದರ ಬೆನ್ನಲ್ಲೇ ಸಚಿವರು ಭಾರತ ಹಾಗೂ ಮೋದಿ ವಿರುದ್ದ ಹರಿಹಾಯ್ದಿದ್ದರು. ಭಾರತ ಎಂದಿಗೂ ಮಾಲ್ಡೀವ್ಸ್ ಬೀಚ್ ಪ್ರವಾಸೋದ್ಯಮಕ್ಕೆ ಸ್ಪರ್ಧೆ ನೀಡಲು ಸಾಧ್ಯವಿಲ್ಲ. ಭಾರತಕ್ಕೆ ಆತಿಥ್ಯ ನೀಡಲು ಸಾಧ್ಯವೇ ಇಲ್ಲ. ಭಾರತೀಯರ ರೂಂಗಳು ಗಬ್ಬು ವಾಸನೆಯಿಂದ ಕೂಡಿರುತ್ತದೆ ಎಂದು ಮಾಲ್ಡೀವ್ಸ್ ಸಚಿವ ಜಹಿದ್ ರಮೀಜ್ ಟ್ವೀಟ್ ಮಾಡಿದ್ದರು. ಇತರ ಮಾಲ್ಡೀವ್ಸ್ ಸಚಿವರು ಕೂಡ ಇದೇ ರೀತಿ ನಿಂದಿಸಿದ್ರು. ಭಾರತೀಯರು ಎಲ್ಲಾ ಕಡೆ ಮೂತ್ರ ವಿಸರ್ಜನೆ ಮಾಡುತ್ತಾರೆ. ಶುಚಿತ್ವದ ಪರಿವಿಲ್ಲ. ಇವರು ಪ್ರವಾಸಿರಿಗೆ ಆತಿಥ್ಯ ನೀಡಲು ಸಾಧ್ಯವಿಲ್ಲ. ಭಾರತದಲ್ಲಿ ಸುಂದರ ಬೀಚ್‌ಗಳೇ ಇಲ್ಲ ಎಂದು ನಿಂದನೆ ಮಾಡಿದ್ದರು. ಭಾರತೀಯರ ನಿಂದನೆ, ಪ್ರಧಾನಿ ಮೋದಿ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ ಬೆನ್ನಲ್ಲೇ ಭಾರತದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ಆರಂಭಗೊಂಂಡಿತ್ತು. ಇದಕ್ಕೆ ಬಾಲಿವುಡ್ ನಟ ಅಕ್ಷಯ್ ಕುಮಾರ್, ನಟಿ ಕಂಗನಾ ರನೌತ್, ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಸುರೇಶ್ ರೈನಾ ಸೇರಿದಂತೆ ದಿಗ್ಗಜರು ಸಾಥ್ ನೀಡಿದ್ದರು. ಭಾರತದ ತಾಣಗಳಿಗೆ ಬೇಟಿ ನೀಡಿ, ಭಾರತದ ಪ್ರವಾಸೋದ್ಯಮ ಉತ್ತೇಜಿಸಿ. ಈ ರೀತಿಯ ಹೇಳಿಕೆಯನ್ನು ಸಹಿಸುವ ಅಗತ್ಯ ಭಾರತಕ್ಕಿಲ್ಲ ಎಂದು ಖಡಕ್ ತಿರುಗೇಟು ನೀಡಿದ್ದರು. ಇತ್ತ ಭಾರತದ ಹೈಕಮಿಷನ್ ಕೂಡ ಭಾರತೀಯರು ಹಾಗೂ ಪ್ರಧಾನಿ ಮೋದಿ ನಿಂದನೆಯನ್ನು ಪ್ರಶ್ನಿಸಿತ್ತು.
ಮಾಲ್ಡೀವ್ಸ್ ಟ್ರಿಪ್ ಕ್ಯಾನ್ಸಲ್ ಮಾಡಿದ ಭಾರತೀಯರು: ಬೆದರಿದ ಮುಯಿಝು ಸರ್ಕಾರದಿಂದ ಟೀಕೆಗೆ ಸ್ಪಷ್ಟನೆ
ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಮಾಲ್ಡೀವ್ಸ್ ಸರ್ಕಾರ ಕ್ರಮ ಕೈಗೊಂಡಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ದ್ವೇಷ, ಪ್ರಚೋಜನೆ, ಸೌಹಾರ್ಧ ಹಾಳುಗೆಡವುವ, ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆ ಬರುವ ಯಾವುದೇ ಹೇಳಿಕೆಯನ್ನು ಮಾಲ್ಡೀವ್ಸ್ ಸರ್ಕಾರ ಬೆಂಬಲಿಸುವುದಿಲ್ಲ. ಇಂತವಹರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಹಿಂದೇಟು ಹಾಕುವುದಿಲ್ಲ ಎಂದು ಮಾಲ್ಡೀವ್ಸ್ ಸರ್ಕಾರ ಹೇಳಿದೆ.
ಪ್ರಧಾನಿ ಮೋದಿ ಲಕ್ಷದ್ವೀಪ ಬೇಟಿ ನೀಡಿದ ಬೆನ್ನಲ್ಲೇ ಮಾಲ್ಡೀವ್ಸ್‌ನ ಮಿನಿಸ್ಟರ್ ಮರಿಯಾಮ್ ಶಿಯುನಾ, ಮೋದಿ ಒರ್ವ ಕಾಮಿಡಿ ನಟ ಮಾತ್ರವಲ್ಲ ಕೈಗೊಂಬೆ ಎಂದು ಹೇಳಿಕೆ ನೀಡಿದ್ದರು.