Boycott Maldives ಅಭಿಯಾನಕ್ಕೆ ಕೈಜೋಡಿಸಿದ ಸಚಿನ್, ಅಕ್ಷಯ್; ಕಂಗಾಲಾದ ವಿದೇಶಿ ಪ್ರವಾಸೋದ್ಯಮ!
ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ತೀವ್ರಗೊಂಡಿದೆ. ಇದೀಗ ಸಚಿನ್ ತೆಂಡೂಲ್ಕರ್, ಅಕ್ಷಯ್ ಕುಮಾರ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಕೈಜೋಡಿಸಿದ್ದಾರೆ. ಭಾರತದ ಸುಂದರ ತಾಣಗಳನ್ನು ನೋಡಿ ಆನಂದಿಸಿ ಎಂದಿದ್ದಾರೆ. ಇದೇ ವೇಳೆ ಮಾಲ್ಡೀವ್ಸ್ ಸಚಿವರ ಹೇಳಿಕೆ ವಿರುದ್ಧ ಖಡಕ್ ಎಚ್ಚರಿಕೆಯನ್ನೂ ನೀಡಿದ್ದಾರೆ.
ನವದೆಹಲಿ(ಜ.07) ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದ ಬೆನ್ನಲ್ಲೇ ಮಾಲ್ಡೀವ್ಸ್ ಕಂಗಾಲಾಗಿದೆ. ಇದರ ಬೆನ್ನಲ್ಲೇ ಮಾಲ್ಡೀವ್ಸ್ ಸಚಿವರು ಭಾರತ ಹಾಗೂ ಭಾರತೀಯರ ವಿರುದ್ಧ ನೀಡಿದ ವಿವಾದಾತ್ಮಕ ಹೇಳಿಕೆಯಿಂದ ಭಾರತದಲ್ಲಿ ಬಾಯ್ಕಾಟ್ ಮಾಲ್ಡೀವ್ಸ್ ಭಾರಿ ಟ್ರೆಂಡ್ ಆಗಿದೆ. ಹಲವರು ಮಾಲ್ಡೀವ್ಸ್ ಪ್ರವಾಸ ರದ್ದುಗೊಳಿಸಿದ್ದಾರೆ. ಇದೀಗ ಸಚಿನ್ ತೆಂಡೂಲ್ಕರ್, ಅಕ್ಷಯ್ ಕುಮಾರ್ ಸೇರಿದಂತೆ ಸೆಲೆಬ್ರೆಟಿಗಳು ಮಾಲ್ಡೀವ್ಸ್ ಸಚಿವರ ಹೇಳಿಕೆ ಖಂಡಿಸಿದ್ದು ಮಾತ್ರವಲ್ಲ, ಭಾರತದಲ್ಲಿರುವ ಅತ್ಯಂತ ಸುಂದರ ಐಲ್ಯಾಂಡ್‌ಗೆ ಪ್ರವಾಸ ತೆರಳಿ ಎಂದು ಕರೆ ನೀಡಿದ್ದಾರೆ.
ಮಾಲ್ಡೀವ್ಸ್ ಸಚಿವರು ಸೇರಿದಂತೆ ಹಲವರು ಪ್ರಧಾನಿ ಮೋದಿ ಲಕ್ಷದ್ವೀಪ ಪ್ರವಾಸೋದ್ಯಮ ಉತ್ತೇಜಿಸಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮಾಲ್ಡೀವ್ಸ್ ಸಚಿವ ಜಾಹೀದ್ ರಮೀಜ್, ಭಾರತೀಯರ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದರು. ಭಾರತೀಯರು ಶುಚಿತ್ವ ಕಾಪಾಡುವುದಿಲ್ಲ. ಅವರ ರೂಂಗೆ ತೆರಳಿದರೆ ಗಬ್ಬು ವಾಸನೆ ಬರುತ್ತದೆ ಎಂದಿದ್ದರು. ಇದೇ ವೇಳೆ ಹಲವರು ಭಾರತದ ಕೈಯಲ್ಲಿ ಬೀಚ್ ಪ್ರವಾಸೋದ್ಯಮ ಸಾಧ್ಯವಿಲ್ಲ ಎಂದು ಅಣಕಿಸಿದ್ದಾರೆ. ಎಲ್ಲೆಡೆ ಮೂತ್ರ ವಿಸರ್ಜಿಸುವ ಜನ ಎಂದಿದ್ದರು. ಈ ಟ್ವೀಟ್‌ಗಳ ಬೆನ್ನಲ್ಲೇ ಭಾರತೀಯರು ಭಾರಿ ಸಂಖ್ಯೆಯಲ್ಲಿ ಮಾಲ್ಡೀವ್ಸ್ ಪ್ರವಾಸ ರದ್ದು ಮಾಡುತ್ತಿದ್ದಾರೆ. ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ಆರಂಭಿಸಿದ್ದಾರೆ. ಈ ಅಭಿಯಾನದ ಮುಂದುವರಿದ ಭಾಗವಾಗಿ ಸೆಲೆಬ್ರೆಟಿಗಳು ಭಾರತೀಯ ಸುಂದರಣ ತಾಣಗಳಿಗೆ ಭೇಟಿ ನೀಡಿ. ಇಂತಹ ಹೇಳಿಕೆಯನ್ನು ಸಹಿಸಿಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.
ಮಾಲ್ಡೀವ್ಸ್ ಸಚಿವರ ಜನಾಂಗೀಯ ಟ್ವೀಟ್: ಸಾಮಾಜಿಕ ಜಾಲತಾಣದಲ್ಲಿ #BoycottMaldives ಟ್ರೆಂಡ್
ಮಾಲ್ಟೀವ್ಸ್ ಸಚಿವರು ಭಾರತೀಯರ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದಾರೆ. ಮಾಲ್ಡೀವ್ಸ್‌ಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭಾರತದಿಂದಲೇ ತೆರಳುತ್ತಾರೆ. ಆದರೂ ಭಾರತದ ವಿರುದ್ಧ ಇಂತಹ ಹೇಳಿಕೆ ನೀಡುತ್ತಿದ್ದಾರೆ. ನಮ್ಮ ನೆರೆಯ ರಾಷ್ಟ್ರಗಳ ಜೊತೆ ನಾವು ಉತ್ತಮ ಸಂಬಂಧ ಬಯಸಿದ್ದೇವೆ. ಆದರೆ ಇಂತಹ ಹೇಳಿಕೆಯನ್ನು ಸಹಿಸಿಕೊಳ್ಳುವ ಅಗತ್ಯವಿಲ್ಲ. ನಾನು ಹಲವು ಬಾರಿ ಮಾಲ್ಡೀವ್ಸ್ ಭೇಟಿ ನೀಡಿದ್ದೇನೆ. ಎಲ್ಲವನ್ನೂ ಹೊಗಳಿದ್ದೇನೆ. ಆದರೆ ಸ್ವಾಭಿಮಾನಕ್ಕೆ ಧಕ್ಕೆಯಾಗುವುದು ಸಹಿಸಲು ಸಾಧ್ಯವಿಲ್ಲ. ನಾವೀಗ ನಮ್ಮಲ್ಲೇ ಇರುವ ಸುಂದರಣ ತಾಣಗಳಿಗೆ ಭೇಟಿ ನೀಡೋಣ, ನಮ್ಮ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡೋಣ ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೇಳಿದ್ದಾರೆ.
ಇತ್ತ ಸಚಿನ್ ತೆಂಡೂಲ್ಕರ್ ಕೂಡ ಭಾರತದ ಪ್ರವಾಸಿ ತಾಣ ಹಾಗೂ ಆತಿಥ್ಯದ ಕುರಿತ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಮಾಲ್ಡೀವ್ಸ್‌ಗೆ ತಕ್ಕ ತಿರುಗೇಟು ನೀಡಿದ್ದಾರೆ. ಭಾರತದ ಅತೀ ದೊದ್ದ ಕರಾವಳಿ ತೀರ್ ಪ್ರದೇಶವಿದೆ. ಜೊತೆಗೆ ಐಲ್ಯಾಂಡ್ ಸೌಂದರ್ಯವೂ ಇದೆ. ಅತಿಥಿ ದೇವೋ ಭವ ನಮ್ಮ ಮೂಲಮಂತ್ರವಾಗಿದೆ . ನಾವು ನಮ್ಮ ಸುಂದರ ತಾಣಗಳತ್ತ ಸವಿ ಅನುಭವಿಸೋಣ ಎಂದು ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.
ಭಾರತದ ಜೊತೆ ಕ್ಯಾತೆ ನಡುವೆಯೇ ಮಾಲ್ಡೀವ್ಸ್ ಅಧ್ಯಕ್ಷರಿಂದ ಚೀನಾ ಭೇಟಿ