ಕೇರಳ ಮೂಲದ ವ್ಯಕ್ತಿಯೊಬ್ಬರಿಗೆ ಅದೃಷ್ಟಲಕ್ಷ್ಮಿ ಎರಡೆರಡು ಬಾರಿ ಒಲಿದಿದ್ದಾಳೆ. ಅವರಿಗೆ ದುಬೈ ಡ್ಯೂಟಿ-ಫ್ರೀ ಮಿಲೇನಿಯಮ್ ಮಿಲಿಯನೇರ್ ಸ್ಪರ್ಧೆಯಲ್ಲಿ ಎರಡನೇ ಬಾರಿಗೆ $1 ಮಿಲಿಯನ್ ಲಾಟರಿ ಹೊಡೆದಿದೆ.
ದುಬೈ: ಒಬ್ಬರಿಗೆ ಬಂಪರ್ ಲಾಟರಿ ಒಂದು ಸಲ ಹೊಡೆಯುವುದೇ ಅಪರೂಪ. ಆದರೆ ಕೇರಳದ ವ್ಯಕ್ತಿಯೊಬ್ಬರಿಗೆ ಎರಡೆರಡು ಬಾರಿ ಅದೃಷ್ಟ ಖುಲಾಯಿಸಿದೆ. ಅವರಿಗೆ ಒಂದು ಮಿಲಿಯನ್‌ನ ಲಾಟರಿ ಮಗುಚಿದ್ದು ಭೂಮಿ ಮೇಲಿನ ಅತ್ಯಂತ ಅದೃಷ್ಟವಂತನನ್ನಾಗಿಸಿದೆ. ದುಬೈ ಲಾಟರಿಯಲ್ಲಿ ಯುಎಇನಲ್ಲಿ ವಾಸಿಸುತ್ತಿರುವ ಕೇರಳ ಮೂಲದ ವ್ಯಕ್ತಿಗೆ 8.5 ಕೋಟಿಯ ಲಾಟರಿ ಮಗುಚಿದೆ. ದುಬೈನಲ್ಲಿ ಪ್ರಸಿದ್ಧವಾಗಿರುವ ದುಬೈ ಡ್ಯೂಟಿ-ಫ್ರೀ ಮಿಲೇನಿಯಮ್ ಮಿಲಿಯನೇರ್ ಸ್ಪರ್ಧೇಯಲ್ಲಿ ಕೇರಳದ 60 ವರ್ಷದ ಪಾಲ್ ಜೋಸ್ ಮಾವೆಲಿ ಅವರಿಗೆ 1 ಮಿಲಿಯನ್ ಡಾಲರ್ ಮೊತ್ತದ ಲಾಟರಿ ಜಾಕ್‌ಪಾಟ್ ಹೊಡೆದಿದೆ. ಮತ್ತೊಂದು ವಿಶೇಷ ಎಂದರೆ ಪಾಲ್ ಜೋಸ್ ಮಾವೆಲಿ ಅವರಿಗೆ ಈ ರೀತಿ ಲಾಟರಿ ಹೊಡೆದಿದ್ದು ಇದೇ ಮೊದಲಲ್ಲ, ಹತ್ತು ವರ್ಷದೊಳಗೆ ಅವರಿಗೆ ಇಲ್ಲಿ 2ನೇ ಬಾರಿ ಈ ರೀತಿ ಲಾಟರಿ ಹೊಡೆದಿದ್ದು, ಅವರನ್ನು ಲಕ್ಷ್ಮಿಪುತ್ರನನ್ನಾಗಿಸಿದೆ.
ಕೇರಳದ 60 ವರ್ಷದ ಪಾಲ್ ಜೋಸ್ ಮಾವೆಲಿ, ಇತ್ತೀಚಿನ ದುಬೈ ಡ್ಯೂಟಿ-ಫ್ರೀ ಮಿಲೇನಿಯಮ್ ಮಿಲಿಯನೇರ್ ಡ್ರಾ (ಸರಣಿ 503) ಗೆದ್ದಿದ್ದಾರೆ ಎಂದು ಈ ಲಾಟರಿ ಸಂಸ್ಥೆ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಘೋಷಿಸಿದೆ. ಮತ್ತೊಂದು ಮಿಲಿಯನೇರ್ ಕ್ಷಣ! ಇಂದು ದುಬೈ ಡ್ಯೂಟಿ-ಫ್ರೀ ಮೂಲಕ ತಮ್ಮ ಎರಡನೇ US$1 ಮಿಲಿಯನ್ ಗೆದ್ದ ಭಾರತದ ಮಾವೆಲಿಗೆ ಅಭಿನಂದನೆಗಳು ಎಂದು ಲಾಟರಿ ಸಂಸ್ತೆ ಇನ್ಸ್ಟಾದಲ್ಲಿ ಬರೆದು ಮಾವೆಲಿ ಅವರಿಗೆ ಅಭಿನಂದನೆ ಸಲ್ಲಿಸಿದೆ.
ಈ ವಿಚಾರವೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅನೇಕರು ಇವರಿಗೆ ಅಭಿನಂದನೆ ಸಲ್ಲಿಸಿದ್ದು, ಎರಡೆರಡು ಬಾರಿ ಲಾಟರಿ ಗೆದ್ದಿರುವುದರ ಹಿಂದಿನ ರಹಸ್ಯ ಏನು ಅಂತ ಕೇಳ್ತಿದ್ದಾರೆ. ಒಬ್ಬರು, ಅಭಿನಂದನೆಗಳು ನಾನು ಭಾರತೀಯನ ಈ ಅದೃಷ್ಟದ ರಹಸ್ಯಗಳನ್ನು ತಿಳಿದುಕೊಳ್ಳಬೇಕು ಎಂದು ಕಾಮೆಂಟ್ ಮಾಡಿದ್ದಾರೆ.
ಮಾವೆಲಿ ಅವರು ಕಳೆದ 38 ವರ್ಷಗಳಿಂದ ದುಬೈನಲ್ಲಿ ವಾಸಿಸುತ್ತಿದ್ದಾರೆ ಮತ್ತು ಸಣ್ಣ ಗುತ್ತಿಗೆ ವ್ಯವಹಾರಗಳ ಸಂಸ್ಥೆಯಲ್ಲಿ ಸೈಟ್ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದಾರೆ. ಅಂದಹಾಗೆ ಈ ಲಾಟರಿ ಸ್ಪರ್ಧೆಯ ಇತಿಹಾಸದಲ್ಲಿ ಎರಡು ಬಾರಿ ಲಾಟರಿ ಗೆದ್ದ 11 ನೇ ವ್ಯಕ್ತಿ ಅವರು, ಈ ಹಿಂದೆ ನವೆಂಬರ್ 2016 ರಲ್ಲಿ ಅವರು ಇದೇ ರೀತಿಯ ಲಾಟರಿ ಗೆದ್ದಿದ್ದರು.
ದುಬೈ ಡ್ಯೂಟಿ-ಫ್ರೀ ಡ್ರಾ ಲಾಟರಿಯೂ 1999 ರಲ್ಲಿ ಆರಂಭವಾಗಿದ್ದು, ಮಾವೆಲಿ ಅವರು ಅಂದಿನಿಂದಲೂ ನಿರಂತರವಾಗಿ ಈ ಲಾಟರಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಅಲ್ಲಿನ ಖಲೀಜ್ ಟೈಮ್ಸ್ ವರದಿ ಮಾಡಿದೆ. ಅವರು ವರ್ಷಗಳಿಂದ ಟಿಕೆಟ್ ಬೆಲೆಯನ್ನು ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ. ತಮ್ಮ ಇತ್ತೀಚಿನ ಗೆಲುವಿನಿಂದ ಖುಷಿಯಾದ ಅವರು ತಮ್ಮ 17 ಸ್ನೇಹಿತರಿಗೆ ತಮ್ಮ ಟಿಕೆಟ್ ಸಂಖ್ಯೆಯನ್ನು ನೀಡಿದ್ದರು. ತಮಗೆ ಹೀಗೆ 2ನೇ ಬಾರಿ ಗೆಲುವು ಸಾಧಿಸಿರುವುದಕ್ಕೆ ಅವರು ಡ್ರಾ ಆಯೋಜಕರಿಗೆ ಧನ್ಯವಾದ ಹೇಳಿದ್ದಾರೆ.
1 ಮಿಲಿಯನ್ ಡಾಲರ್‌ವರೆಗೆ ಗೆಲ್ಲುವ ಲಾಟರಿ ಟಿಕೆಟ್‌ಗಳ ದರವೂ 1,000 ದಿರ್ಹಮ್‌ಗಳಷ್ಟಿದೆ ಅಂದರೆ ಸುಮಾರು ರೂ. 22,700 ರೂಪಾಯಿಗಳು. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಡ್ಯೂಟಿ-ಫ್ರೀ ಅಂಗಡಿಗಳಲ್ಲಿ ಅಥವಾ ದುಬೈ ಡ್ಯೂಟಿ-ಫ್ರೀ ವೆಬ್‌ಸೈಟ್‌ನಲ್ಲಿಈ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಿರುತ್ತದೆ.
ತಿಂಗಳಿಗೆ ಎರಡು ಬಾರಿ ನಡೆಯುವ ಈ ಡ್ರಾದಲ್ಲಿ ಎಲ್ಲಾ ರಾಷ್ಟ್ರಗಳ ಜನರು ಭಾಗವಹಿಸಲು ಅವಕಾಶವಿದೆ. ಹಾಗೂ ಇದರ ಡ್ರಾ ಇದು ನಡೆಯುವಾಗ ದುಬೈನಲ್ಲೇ ಇರಬೇಕಾದ ಅಗತ್ಯವಿಲ್ಲ, ಪ್ರತಿ ಡ್ರಾ ವೂ 5,000 ಟಿಕೆಟ್‌ಗಳಿಗೆ ಸೀಮಿತವಾಗಿರುತ್ತದೆ. 1999 ರಲ್ಲಿ ಪ್ರಾರಂಭವಾದಾಗಿನಿಂದ ಕನಿಷ್ಠ 251 ಭಾರತೀಯರು ಈ ಲಾಟರಿಯನ್ನು ಗೆದ್ದಿದ್ದಾರೆ.
ಮೇ ತಿಂಗಳ ಆರಂಭದಲ್ಲಿ ಇದ್ದ ದುಬೈ ಡ್ಯೂಟಿ ಫ್ರೀ ಮಿಲೇನಿಯಮ್ ಮಿಲಿಯನೇರ್ ಡ್ರಾದಲ್ಲಿ 52 ವರ್ಷದ ಕೇರಳದ ಮತ್ತೊಬ್ಬ ವ್ಯಕ್ತಿ ವೇಣುಗೋಪಾಲ್ $1 ಮಿಲಿಯನ್ ಗೆದಿದ್ದರು. ಕೇರಳದವರಾದ ವೇಣುಗೋಪಾಲ್, ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಜ್ಮಾನ್‌ನಲ್ಲಿ ವಾಸ ಮಾಡುತ್ತಿದ್ದಾರೆ. ಅವರು ಏಪ್ರಿಲ್ 23 ರಂದು ದುಬೈ ವಿಮಾನ ನಿಲ್ದಾಣದಲ್ಲಿ ಈ ಲಕ್ಕಿ ಟಿಕೆಟ್ ಖರೀದಿಸಿದರು. ಈ ಲಾಟರಿ ಗೆದ್ದಿದ್ದರಿಂದ ತನ್ನ ಹೆಗಲ ಮೇಲಿದ್ದ ದೊಡ್ಡ ಆರ್ಥಿಕ ಭಾರ ಇಳಿದು ಹೋಯ್ತು ಎಂದು ಅವರು ಹೇಳಿಕೊಂಡಿದ್ದಾರೆ.
