ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಧುತ್ತನೇ ಎದುರಾದ ಸಿಂಹ... ದೇವರನಾಮ ಜಪಿಸಿದ ಸವಾರರು.. ವೈರಲ್ ವಿಡಿಯೋ
- ರಸ್ತೆಯಲ್ಲಿ ಹೋಗುತ್ತಿರಬೇಕಾದರೆ ಧುತ್ತನೇ ಎದುರಾದ ಸಿಂಹ
- ಸಿಂಹವನ್ನು ನೋಡಿ ಭಗವಂತನ ನಾಮಸ್ಮರಣೆ ಮಾಡಿದ ಸವಾರರು
- ಗುಜರಾತ್‌ನ ಗಿರ್ ಅರಣ್ಯ ಪ್ರದೇಶದಲ್ಲಿ ಘಟನೆ
ಇಬ್ಬರು ಸವಾರರು ಸ್ಕೂಟರ್‌ನಲ್ಲಿ ತೆರಳುತ್ತಿರಬೇಕಾದರೆ ಇವರೆದುರಿಗೆ ಧುತ್ತನೇ ಸಿಂಹವೊಂದು ಕಾಣಿಸಿಕೊಂಡಿದ್ದು, ಇದರಿಂದ ಭಯಭೀತರಾದ ಸವಾರರು ದೇವರ ನಾಮ ಜಪಿಸುತ್ತಿದ್ದಾರೆ. ಈ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಸ್ತೆ ಮಧ್ಯೆ ಸಿಂಹಿಣಿ ಎದುರಾದರೆ ಏನು ಮಾಡುತ್ತೀರಿ? ಸಹಜವಾಗಿ, ನೀವು ಆಘಾತಕ್ಕೊಳಗಾಗುತ್ತೀರಿ ಮತ್ತು ಭಯಭೀತರಾಗುತ್ತೀರಿ, ನಿಮ್ಮ ಜೀವನದ ಸುರಕ್ಷತೆಗಾಗಿ ಪ್ರಾರ್ಥಿಸುತ್ತೀರಿ. ಅಪಾಯ ಎದುರಾದಾಗ ನಾಸ್ತಿಕರು ಏನು ಮಾಡುತ್ತಾರೋ ತಿಳಿಯದು, ಆದರೆ ಆಸ್ತಿಕರು ಇದ್ದ ಬದ್ಧ ದೇವರ ನಾಮವನ್ನು ಸ್ಮರಿಸುತ್ತಾ ಕಷ್ಟದಿಂದ ಕಾಪಾಡು ಎಂದು ದೇವರನ್ನು ಬೇಡುವುದು ಸಾಮಾನ್ಯ. ಇಲ್ಲೂ ಸ್ಕೂಟರ್ ಸವಾರರು ಅದನ್ನೇ ಮಾಡಿದ್ದಾರೆ. ಒಮ್ಮೆಲೇ ಎದುರು ಸಿಕ್ಕಿದ ಸಿಂಹವನ್ನು ನೋಡಿ ಭಯಗೊಂಡ ಸ್ಕೂಟರ್ ಸವಾರರು ದೇವರ ನಾಮಸ್ಮರಣೆಯಲ್ಲಿ ತೊಡಗಿದ್ದಾರೆ.
ಟ್ವಿಟರ್‌ನಲ್ಲಿ ರೌಂಡ್ ಹೊಡೆಯುತ್ತಿರುವ ವೀಡಿಯೊದಲ್ಲಿ, ಸಿಂಹವೊಂದು ಸ್ಕೂಟರ್‌ನಲ್ಲಿ ಬರುವ ಪ್ರಯಾಣಿಕರ ಕಡೆಗೆ ನಡೆದುಕೊಂಡು ಬರುವುದನ್ನು ಕಾಣಬಹುದು. ಸಿಂಹ ಅವರನ್ನು ಸಮೀಪಿಸುತ್ತಿದ್ದಂತೆ, ಸ್ಕೂಟರ್ ಹಿಂಬಂದಿ ಕುಳಿತ ಮಹಿಳೆ ವೀಡಿಯೊವನ್ನು ಸೆರೆಹಿಡಿಯುತ್ತಾ ಗುರುಗಳ ನಾಮವನ್ನು ಜಪಿಸುತ್ತಿರುವುದು ವಿಡಿಯೋದ ಹಿನ್ನೆಲೆಯಲ್ಲಿ ಕೇಳಿಸುತ್ತಿದೆ. ಅದೃಷ್ಟವಶಾತ್, ಸಿಂಹ ಅವರ ಮೇಲೆ ದಾಳಿ ಮಾಡುವುದಿಲ್ಲ, ಬದಲಿಗೆ, ಮಣ್ಣಿನ ರಸ್ತೆಯನ್ನು ದಾಟಿ ಪಕ್ಕದ ಹೊಲದತ್ತ ಹೋಗುತ್ತದೆ.
ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಸುಶಾಂತ್ ನಂದಾ (Susanta Nanda)ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಹಳ್ಳಿಯ ರಸ್ತೆಯ ಸಹ ಪ್ರಯಾಣಿಕರು. ಹೀಗೆ ಭಾರತದಲ್ಲಿ ನಡೆಯುತ್ತದೆ ಎಂದು ಬರೆದು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಘಟನೆ ಗುಜರಾತ್‌ನ(Gujarat) ಗಿರ್ ಅರಣ್ಯದಲ್ಲಿ (Gir forest) ನಡೆದಿದೆ ಎಂದು ವರದಿಯಾಗಿದೆ.
ಮೊಸಳೆ ಬಾಯಿಯಿಂದ ಕ್ಷಣದಲ್ಲಿ ಎಸ್ಕೇಪ್ ಆದ ಸಿಂಹ.. ವಿಡಿಯೋ
ಈ ವಿಡಿಯೋ ವೈರಲ್ ಆಗಿದ್ದು, ಪ್ರಯಾಣಿಕರ ಮೇಲೆ ಸಿಂಹ ಏಕೆ ದಾಳಿ ಮಾಡಲಿಲ್ಲ ಎಂಬ ಕುತೂಹಲ ಹಲವರಲ್ಲಿ ಮೂಡಿದೆ. ಸಿಂಹಗಳು ಪ್ರಚೋದನೆಗೆ ಒಳಗಾಗದ ಹೊರತು ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಪ್ರಯಾಣಿಕನ ತಾಳ್ಮೆಯನ್ನು ಶ್ಲಾಘಿಸಿ, ಧೈರ್ಯಶಾಲಿ ಪುರುಷ ಮತ್ತು ಮಹಿಳೆ ಎಂದು ಕಾಮೆಂಟ್ ಮಾಡಿದ್ದಾರೆ. ಸಿಂಹಿಣಿಯು ಆಕ್ರಮಣ ಮಾಡುವ ಮನಸ್ಥಿತಿಯಲ್ಲಿರಲಿಲ್ಲ, ಅದು ದೂರ ಸರಿಯಲು ಬಯಸುತ್ತಿತ್ತು. ಆದರೂ ಅದರೆದುರು ಹಾಗೆ ನಿಲ್ಲಲು ಸಾಕಷ್ಟು ಧೈರ್ಯ ಬೇಕಾಗುತ್ತದೆ. ಈ ಪ್ರದೇಶದಲ್ಲಿ ಇಂತಹ ಘಟನೆಗಳು ಬಹಳ ಸಾಮಾನ್ಯವಾಗಿದೆ ಎಂದು ವಿಡಿಯೋ ನೋಡಿದ ಕೆಲವರು ಹೇಳಿದರು.
ಆಹಾರಕ್ಕಾಗಿ ಹೋರಾಟ... ಜಿಂಕೆಯನ್ನು ಕಚ್ಚಿ ಅತಿಂದಿತ್ತ ಎಳೆದಾಡಿದ ಸಿಂಹ, ಮೊಸಳೆ
ಈ ಏಷಿಯಾಟಿಕ್ ಸಿಂಹಗಳನ್ನು ವನ್ಯಜೀವಿ (ರಕ್ಷಣೆ) ಕಾಯಿದೆ 1972 ರ ವೇಳಾಪಟ್ಟಿ ಒಂದರಲ್ಲಿ ಪಟ್ಟಿಮಾಡಲಾಗಿದೆ ಮತ್ತು ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ಕೆಂಪು ಪಟ್ಟಿಯಲ್ಲಿ ಅಳಿವಿನಂಚಿನಲ್ಲಿರುವ ಪ್ರಬೇಧ ಎಂದು ವರ್ಗೀಕರಿಸಲಾಗಿದೆ.