ಡ್ಯಾಂ 999 ಸಿನಿಮಾ ನೆನಪಿಸಿದ ಲಿಬಿಯಾ ದುರಂತ: ಅಣೆಕಟ್ಟೆ ಒಡೆದು 7500ಕ್ಕೂ ಹೆಚ್ಚು ಜನ ನಾಪತ್ತೆ
ಉತ್ತರ ಆಫ್ರಿಕಾದ ಮೊರಾಕ್ಕೋದಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ 3000ಕ್ಕೂ ಹೆಚ್ಚು ಜನ ಸಾವನ್ನಪ್ಪಿದ ಕಹಿ ಸುದ್ದಿಯ ನಡುವೆಯೇ ನೆರೆಯ ಲಿಬಿಯಾದಲ್ಲಿ ಸಂಭವಿಸಿದ ಭಾರೀ ಪ್ರವಾಹ ಹಾಗೂ ಅದರಿಂದ 2 ಅಣೆಕಟ್ಟೆಗಳು ಒಡೆದು 10 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಆತಂಕ ಎದುರಾಗಿದೆ.

ಕೈರೋ: ಉತ್ತರ ಆಫ್ರಿಕಾದ ಮೊರಾಕ್ಕೋದಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ 3000ಕ್ಕೂ ಹೆಚ್ಚು ಜನ ಸಾವನ್ನಪ್ಪಿದ ಕಹಿ ಸುದ್ದಿಯ ನಡುವೆಯೇ ನೆರೆಯ ಲಿಬಿಯಾದಲ್ಲಿ ಸಂಭವಿಸಿದ ಭಾರೀ ಪ್ರವಾಹ ಹಾಗೂ ಅದರಿಂದ 2 ಅಣೆಕಟ್ಟೆಗಳು ಒಡೆದು 10 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಆತಂಕ ಎದುರಾಗಿದೆ. ಅಧಿಕೃತ ಅಂಕಿ ಅಂಶಗಳ ಪ್ರಕಾರ 2500ಕ್ಕೂ ಹೆಚ್ಚು ಸಾವನ್ನಪ್ಪಿರುವುದು ಖಚಿತವಾಗಿದ್ದು, 7500ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರೆಲ್ಲಾ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಪೂರ್ವ ಲಿಬಿಯಾದ ಹಲವು ಪಟ್ಟಣಗಳು ಪ್ರವಾಹಕ್ಕೆ ತುತ್ತಾಗಿದ್ದು, ಈ ಪೈಕಿ ಕರಾವಳಿ ನಗರ ಡೆರ್ನಾ ಅತ್ಯಂತ ಹೆಚ್ಚು ಹಾನಿಗೊಳಾಗಿದೆ. ಇಡೀ ನಗರವನ್ನು ವಿಪತ್ತು ಪ್ರದೇಶ ಎಂದು ಘೋಷಿಸಲಾಗಿದೆ. ಪ್ರವಾಹಕ್ಕೆ ತುತ್ತಾದ ನಗರಗಳಿಗೆ ರಕ್ಷಣಾ ತಂಡಗಳು ಧಾವಿಸಿದ್ದು, ಪ್ರವಾಹದಿಂದ ಧರೆಗುರುಳಿದ ಕಟ್ಟಡಗಳ ಅಡಿಯಿಂದ ಜನರನ್ನು ರಕ್ಷಿಸುವ, ಶವಗಳನ್ನು ಹೊರತೆಗೆಯುವ ಕೆಲಸದಲ್ಲಿ ನಿರತರಾಗಿದ್ದಾರೆ.
ಪಾಕಿಸ್ತಾನದ 108 ಹಿಂದುಗಳಿಗೆ ಭಾರತೀಯ ಪೌರತ್ವ ವಿತರಣೆ
ಏನಾಯ್ತು?:
ಮೆಡಿಟರೇನಿಯನ್ ವಲಯದಿಂದ (Mediterranean region) ಧಾವಿಸಿ ಬಂದ ಡೇನಿಯಲ್ ಚಂಡಮಾರುತ ಸೋಮವಾರ ಲಿಬಿಯಾದ ಪೂರ್ವ ಭಾಗಗಳ ಮೇಲೆ ಅಪ್ಪಳಿಸಿದ್ದು ಭಾರೀ ಪ್ರಮಾಣದ ಮಳೆಗೆ ಕಾರಣವಾಗಿದೆ. ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದ ನೀರು ಹರಿದು ಬಂದ ಕಾರಣ ಎರಡು ಅಣೆಕಟ್ಟುಗಳು ಒತ್ತಡ ತಾಳಲಾಗದೇ ರಾತ್ರಿ ವೇಳೆ ಒಡೆದು ಹೋಗಿದೆ. ಹೀಗಾಗಿ ಅಣೆಕಟ್ಟೆಯಲ್ಲಿನ ನೀರು ಭಾರೀ ರಭಸದೊಂದಿಗೆ ವಾಡಿ ಡೆರ್ನಾ ನದಿಗೆ (Wadi Derna river) ಸೇರಿಕೊಂಡು ಡೆರ್ನಾ ನಗರವನ್ನು ಅಪೋಶನ ತೆಗೆದುಕೊಂಡಿದೆ.
ಪ್ರವಾಹದ ಅಬ್ಬರಕ್ಕೆ ಡೆರ್ನಾ ನಗರದಲ್ಲಿನ (Derna city)ನದಿ ಪಾತ್ರದ ನೂರಾರು ಮನೆಗಳು ಕೊಚ್ಚಿ ಹೋಗಿ ಸಮುದ್ರ ಸೇರಿಕೊಂಡಿದೆ. ನದಿ ಪಾತ್ರದ ಎರಡೂ ಬದಿಯಲ್ಲಿ ಬಹಳಷ್ಟು ದೂರದವರೆಗೂ ಹೂಳು ತುಂಬಿಕೊಂಡಿದ್ದು ವಿನಾಶಕ್ಕೆ ಸಾಕ್ಷಿಯಾಗಿ ನಿಂತಿದೆ. ಡ್ಯಾಂ ಒಡೆದ ಬಳಿಕ ಅದರಿಂದ ನದಿಯಲ್ಲಿ ಭಾರೀ ಪ್ರಮಾಣದ ನೀರು ತುಂಬಿ ನಗರದೊಳಗೆ ಹರಿಯುತ್ತಿರುವ ವಿಡಿಯೋಗಳನ್ನು ಹಲವು ನಿವಾಸಿಗಳು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಮೈ ಝಮ್ಮೆನಿಸುವಂತಿದೆ.
ಪ್ರವಾಹದ ತೀವ್ರತೆಗೆ ನಗರವನ್ನು ಪ್ರವೇಶಿಸುವುದೇ ಕಷ್ಟವಾಗಿರುವ ಕಾರಣ ಪರಿಹಾರ ಕಾರ್ಯಗಳಿಗೆ ಅಡ್ಡಿಯಾಗಿದೆ. ಪರಿಹಾರ ಕಾರ್ಯ ನಮ್ಮ ಮಿತಿಗೆ ಮೀರಿದ್ದಾಗಿದ್ದು, ಅಂತಾರಾಷ್ಟ್ರೀಯ ನೆರವಿನ ಅವಶ್ಯಕತೆ ಇದೆ ಎಂದು ಸ್ಥಳೀಯ ಸರ್ಕಾರ ಮನವಿ ಮಾಡಿದೆ. ಹಲವು ದೇಶಗಳು ಮಂಗಳವಾರ ಮೊದಲ ಹಂತದ ಪರಿಹಾರ ಸಾಮಗ್ರಿಗಳನ್ನು ರವಾನಿಸಿದ್ದು, ಇನ್ನಷ್ಟು ನೆರವಿನ ಭರವಸೆ ನೀಡಿವೆ.
ಕೆಆರ್‌ಎಸ್ ಅಣೆಕಟ್ಟು ನೋಡಿದ್ರೆ ಹೊಟ್ಟೆ ಉರಿಯುತ್ತೆ: ಮಾಜಿ ಸಿಎಂ ಬೊಮ್ಮಾಯಿ
ಡೆರ್ನಾ ರೀತಿಯಲ್ಲೇ ಸುಸಾ, ಮರ್ಜ್, ಶಹಟ್ಟ್ ನಗರಗಳು ಕೂಡಾ ಸಾಕಷ್ಟು ಹಾನಿಗೊಳಾಗಿದೆ. ಆಂತರಿಕ ಸಂಘರ್ಷದಿಂದ ಲಿಬಿಯಾ ದೇಶ ಎರಡು ಭಾಗಗಳಾಗಿ ವಿಭಜನೆಯಾಗಿದೆ. ಎರಡೂ ಭಾಗಗಳನ್ನು ಒಂದು ಮಿಲಿಟರಿ ಪಡೆ ಬೆಂಬಲಿಸಿವೆ. ಈಶಾನ್ಯ ಲಿಬಿಯಾ ಪ್ರದೇಶವು ದೇಶದ ಅತ್ಯಂತ ಫಲವತ್ತಾದ ಭೂಮಿಯನ್ನು ಹೊಂದಿದ್ದು, ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ.
4 ವರ್ಷ ಬಳಿಕ ಅ.21ಕ್ಕೆ ಪಾಕಿಸ್ತಾನಕ್ಕೆ ನವಾಜ್ ಷರೀಫ್ ವಾಪಸ್
ಇಸ್ಲಾಮಾಬಾದ್: ಸ್ವಯಂಘೋಷಿತ ಗಡೀಪಾರು ವಿಧಿಸಿಕೊಂಡು ಲಂಡನ್ನಿನಲ್ಲಿ ವಾಸಿಸುತ್ತಿರುವ ಪಾಕಿಸ್ತಾನದ "ಮುಸ್ಲಿಂ ಲೀಗ್- ನವಾಜ್" (ಪಿಎಂಎಲ್-ಎನ್) ಮುಖ್ಯಸ್ಥ ನವಾಜ್ ಷರೀಫ್ (73) ಅ.21ರಂದು ಪಾಕಿಸ್ತಾನಕ್ಕೆ ಬರಲಿದ್ದಾರೆ ಎಂದು ಮಾಜಿ ಪ್ರಧಾನಿ ಹಾಗೂ ನವಾಜ್ ಸಹೋದರ ಶೆಹಬಾಜ್ ಷರೀಫ್ ಹೇಳಿದ್ದಾರೆ. 2019ರಿಂದ ಲಂಡನ್ನಿನಲ್ಲಿ ವಾಸಿಸುತ್ತಿರುವ ನವಾಜ್ ಪಾಕಿಸ್ತಾನದಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಪರ ಪ್ರಚಾರ ಮಾಡಲು ದೇಶಕ್ಕೆ ಮರಳುತ್ತಿದ್ದಾರೆ. ಭ್ರಷ್ಟಾಚಾರ ಪ್ರಕರಣಗಳಲ್ಲಿ ನವಾಜ್ ದೋಷಿ ಎಂದು ಸಾಬೀತಾದ ಬಳಿಕ ವೈದ್ಯಕೀಯ ಕಾರಣದಿಂದ ಅವರು ಲಂಡನ್ನಿಗೆ ಹೋಗಿದ್ದರು.