ಬರಾಕ್ ಒಬಾಮ ಜೊತೆ ಸೆಕ್ಸ್, 1999ರ ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಲ್ಯಾರಿ ಸಿನ್‌ಕ್ಲೈರ್!
ಅಮೆರಿಕ ಮಾಜಿ ಅಧ್ಯಕ್ಷ ಸಲಿಂಕ ಸೆಕ್ಸ್ ನಡೆಸಿರುವ ವಿಚಾರ ಬೆಳಕಿಗೆ ಬಂದಿದೆ. ಕೊಕೈನ್ ಸೇವೆನೆ ಮಾಡಿ ತನ್ನ ಜೊತೆ ಸೆಕ್ಸ್ ನಡೆಸಿದ್ದಾರೆ ಎಂದು ಲ್ಯಾರಿ ಸಿನ್‌ಕ್ಲೈರ್ ಸಂದರ್ಶನದಲ್ಲಿ ಹೇಳಿದ್ದಾರೆ. ಈ ಕುರಿತ ಸ್ಫೋಟಕ ಮಾಹಿತಿ ಇಲ್ಲಿದೆ.

ನ್ಯೂಯಾರ್ಕ್(ಸೆ.06) ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ವ್ಯಕ್ತಿತ್ವವನ್ನು ಬಿಡಿಸಿ ಹೇಳಬೇಕಿಲ್ಲ. ಹಿತ ಮಿತ ಮಾತು, ಯೋಚಿಸಿ ತಕ್ಕ ಉತ್ತರ ನೀಡುವ ಮೂಲಕ ವಿವಾದಕ್ಕೆ ಗುರಿಯಾದವರಲ್ಲ. ಅಧ್ಯಕ್ಷರಾಗಿ ಆಡಳಿತ ನಡೆಸುತ್ತಿದ್ದ ವೇಳೆಯೂ ಎಡವಟ್ಟು ಮಾಡಿಕೊಂಡವರಲ್ಲ. ಆದರೆ ಇದೀಗ ಬರಾಕ್ ಒಬಾಮ ಸಲಿಂಗ ಸೆಕ್ಸ್ ನಡೆಸಿರುವ ಶಾಕಿಂಗ್ ವಿಚಾರ ಬಹಿರಂಗವಾಗಿದೆ. ಈ ಮಾಹಿತಿಯನ್ನು ಒಬಾಮಾ ಆಪ್ತ, ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಲ್ಯಾರಿ ಸಿನ್‌ಕ್ಲೆರ್ ಬಹಿರಂಗ ಪಡಿಸಿದ್ದಾರೆ.
ಈ ಸ್ಫೋಟಕ ಮಾಹಿತಿಯನ್ನು ಲ್ಯಾರಿ ಸಿನ್‌ಕ್ಲೈರ್ ಸಂದರ್ಶನ ಒಂದರಲ್ಲಿ ಬಹಿರಂಗಪಡಿಸಿದ್ದಾರೆ. ಫಾಕ್ಸ್ ನ್ಯೂಸ್ ಮಾಜಿ ನಿರೂಪಕ ಟಕ್ಕರ್ ಕಾರ್ಲ್ಸನ್ ನಡೆಸಿರುವ ಸಂದರ್ಶನದಲ್ಲಿ ಈ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿದೆ. ಡ್ರಗ್ಸ್ ಏಟಿನಲ್ಲಿ ಬರಾಕ್ ಒಬಾಮಾ ತನ್ನ ಜೊತೆ ಸೆಕ್ಸ್ ನಡೆಸಿದ್ದಾರೆ ಎಂದು ಬಾಯ್ಬಿಟ್ಟಿದ್ದಾರೆ. ಈ ಹೇಳಿಕೆ ಇದೀಗ ಅಮೆರಿಕ ಮಾತ್ರವಲ್ಲ ವಿಶ್ವಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ. ಸಂದರ್ಶನದ ಆಯ್ದ ಭಾಗದ ಒಂದು ತುಣುಕು ಮಾತ್ರ ಸಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ. ಈ ಪ್ರಮೋಶನಲ್ ವಿಡಿಯೋ ಕುರಿತು ಪರ ವಿರೋಧಗಳು ವ್ಯಕ್ತವಾಗುತ್ತಿದೆ.
ಸಕ್ಕರೆನಾಡು ಮಂಡ್ಯಕ್ಕೆ ಅಮೇರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ
ನಾನು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದೆ. ಹಲವರಿಗೆ ನೀಡುತ್ತಿದ್ದೆ. 1999ರಲ್ಲಿ ಒಬಾಮಾಗೆ 250 ಡಾಲರ್ ಮೊತ್ತದ ಕೊಕೈನ್ ನೀಡಿದ್ದೆ. ಬಳಿಕ ನಾವಿಬ್ಬರು ಕೊಕೈನ್ ತೆಗೆದುಕೊಂಡಿದ್ದೆವು. ಕೊಕೈನ್ ಅಮಲಿನಲ್ಲಿ ಬರಾಕ್ ಒಬಾಮ ನನ್ನ ಜೊತೆ ಸೆಕ್ಸ್ ನಡೆಸಿದ್ದಾರೆ. ನಾನು ಅಮಲಿನಲ್ಲಿದ್ದೆ. ಇದಾದ ಬಳಿಕ ಕೆಲವು ಬಾರಿ ಒಬಾಮಾಗೆ ಡ್ರಗ್ಸ್ ನೀಡಿದ್ದೆ ಎಂದು ಲ್ಯಾರಿ ಹೇಳಿದ್ದಾರೆ.
2008ರ ಅಮೆರಿಕ ಅಧ್ಯಕ್ಷ ಚುನಾವಣೆ ವೇಳೆಯೂ ಲ್ಯಾರಿ ಇದೇ ಮಾತನ್ನು ಹೇಳಿದ್ದರು. ಆದರೆ ಬಹಿರಂಗವಾಗಿ ಕಾಣಿಸಿಕೊಂಡು ಹೇಳಿಕೆ ನೀಡಿದ ಬೆನ್ನಲ್ಲೇ ಲ್ಯಾರಿ ಬಂಧನವಾಗಿದ್ದರು. ಡ್ರಗ್ಸ್ ಮಾರಾಟ, ವಂಚನೆ ಸೇರಿದಂತೆ ಹಲವು ಪ್ರಕರಣಗಳು ಲ್ಯಾರಿ ಮೇಲಿದೆ. ಹೀಗಾಗಿ 2008ರಲ್ಲಿ ಲ್ಯಾರಿ ಬಂಧನವಾಗಿತ್ತು. ಬಳಿಕ ಈ ಹೇಳಿಕೆಗೆ ಯಾವುದೇ ಸ್ಪಷ್ಟನೆ ಸಿಕ್ಕಿರಲಿಲ್ಲ. ಇದೀಗ ಮತ್ತೆ ಲ್ಯಾರಿ ಸುದೀರ್ಘ ಸಂದರ್ಶನದಲ್ಲಿ ಹಲವು ಮಾಹಿತಿ ಬಹಿರಂಗಪಡಿಸಿದ್ದಾರೆ.
ಭಾರತ ಟೀಕಿಸಿದ ಒಬಾಮಾಗೆ ಅಮೆರಿಕದಲ್ಲೇ ತೀವ್ರ ತರಾಟೆ: ಧರ್ಮಗಳ ಪ್ರಯೋಗಶಾಲೆ ಭಾರತ; ಜಾನಿ ಮೂರ್
2008ರಲ್ಲಿ 1 ಗಂಟೆ ಸುದ್ದಿಗೋಷ್ಠಿ ನಡೆಸಿದ್ದ ಲ್ಯಾರಿ ಹೊಟೆಲ್ ರೂಂನಲ್ಲಿ ನಡೆದಿದ್ದೆ ಸೆಕ್ಸ್ ಕತೆ ಬಿಚ್ಚಿಟ್ಟಿದ್ದರು. ಇದರ ಮುಂದುವರಿದ ಭಾಗ ಇದೀಗ ಸಂದರ್ಶನದಲ್ಲಿ ಹೇಳಿದ್ದಾರೆ. ತಾನು ಪಾರ್ಟಿ ಮಾಡಲು ಯಾರಾದರು ಇದ್ದಾರೆ ಎಂದು ಆಪ್ತರಲ್ಲಿ ಕೇಳಿಕೊಂಡಿದ್ದೆ. ಈ ವೇಳೆ ಡ್ರೈವರ್ ಒಬಾಮ ಅವರನ್ನು ಪರಿಚಯಿಸಿದ್ದರು. ಆಗ ಸೆನೆಟರ್ ಆಗಿದ್ದ ಒಬಮಾ ಜೊತೆಗೆ ಪಾರ್ಟಿ ಮುಂದುವರಿದಿತ್ತು. ಹೀಗಾಗಿ ಒಬಾಮಾ ಕೊಕೈನ್ ಸೇರಿದಂತೆ ಡ್ರಗ್ಸ್ ಪಡೆದುಕೊಳ್ಳುತ್ತಿದ್ದರು. ಹೀಗಾಗಿ ನಮ್ಮಲ್ಲಿ ಆತ್ಮೀಯತೆ ಬೆಳೆದಿತ್ತು ಎಂದು ಲ್ಯಾರಿ ಹೇಳಿದ್ದಾರೆ.