Asianet Suvarna News Asianet Suvarna News

ಸಕ್ಕರೆನಾಡು ಮಂಡ್ಯಕ್ಕೆ ಅಮೇರಿಕಾ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ

ಕರ್ನಾಟಕದ ಸಕ್ಕರೆ ನಾಡು ಖ್ಯಾತಿಯ ಮಂಡ್ಯ ನಗರಕ್ಕೆ ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ದಂಪತಿ ಸಮೇತವಾಗಿ ಆಗಮಿಸಲಿದ್ದಾರೆ.

Former US President Barak Obama arrived in Karnataka Sugar town Mandya sat
Author
First Published Aug 31, 2023, 11:03 AM IST

ಮಂಡ್ಯ (ಆ.31): ರಾಜ್ಯದ ಸಕ್ಕರೆ ನಾಡು ಮಂಡ್ಯ ಜಿಲ್ಲೆಗೆ ಜಾಗತಿಕ ದೊಡ್ಡಣ್ಣನೆಂದು ಕರೆಸಿಕೊಂಡಿರುವ ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಆಗಮಿಸಲಿದ್ದಾರೆ. ಜಾಗತಿಕ ಮಟ್ಟದಲ್ಲಿ ಮೊಟ್ಟ ಮೊದಲ ಬಾರಿಗೆ ಸರ್ವಧರ್ಮ ಸಮನ್ವಯ ಕೇಂದ್ರವನ್ನು (ಮದರ್ ಅರ್ಥ್ ಆಧ್ಯಾತ್ಮಿಕ ಕೇಂದ್ರ) ಮಂಡ್ಯದಲ್ಲಿ ಸ್ಥಾಪಿಸಲಾಗುತ್ತಿದ್ದು, ಇದಕ್ಕೆ ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ದಂಪತಿ ಆಗಮಿಸಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಹೌದು, ಸಕ್ಕರೆ ನಾಡು ಮಂಡ್ಯಕ್ಕೆ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಭೇಟಿ ನೀಡಲಿದ್ದಾರೆ. ಅದು ಈಗಲ್ಲ, ಮುಂಬರುವ 2024ರ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಆಗಮಿಸಲಿದ್ದಾರೆ. ಮಂಡ್ಯದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಭೂದೇವಿ ಆಧ್ಯಾತ್ಮಿಕ ಕೇಂದ್ರ ಶಂಕುಸ್ಥಾಪನೆಗೆ ಒಬಾಮಾ ಅವರು ದಂಪತಿ ಸಮೇತರಾಗಿ ಆಗಮಿಸಲಿದ್ದಾರೆ. 

ರಾಹುಲ್ ಯೋಗ್ಯತೆಗೆ ಸವಾಲೆಸೆದ್ರೆ, ಡಾ. ಸಿಂಗ್ ಹೊಗಳಿದ ಒಬಾಮಾ!

ಇನ್ನು ಮಂಡ್ಯ ತಾಲೂಕಿನ ಹಲ್ಲೇಗೆರೆ ಗ್ರಾಮದಲ್ಲಿ ಭೂದೇವಿ ಆಧ್ಯಾತ್ಮಿಕ ಕೇಂದ್ರ ನಿರ್ಮಾಣ ಮಾಡಲಾಗುತ್ತಿದೆ. ಇದನ್ನು ಜಗತ್ತಿನಲ್ಲಿ ಮೊಟ್ಟ ಮೊದಲನೆಯದಾಗಿ ನಿರ್ಮಾಣ ಮಾಡಲಾಗುತ್ತಿರುವ ಸರ್ವಧರ್ಮ ಸಮನ್ವಯ ಕೇಂದ್ರವೆಂದೂ (ಮದರ್ ಅರ್ಥ್) ಕರೆಯಬಹುದು. ಇದು ಒಂದು ಧರ್ಮಕ್ಕೆ ಸೀಮತವಾಗದೇ ಎಲ್ಲಾ ಧರ್ಮದವೂ ಸಮಾನ ಎಂದು ಸಾರುವ ಸದುದ್ದೇಶದೊಂದಿಗೆ ನಿರ್ಮಾಣ ಮಾಡಲಾಗುತ್ತಿದೆ. ಇದನ್ನು ಅಮೇರಿಕಾದ ಖ್ಯಾತ ಸರ್ಜನ್ ಜನರಲ್ ಡಾ.ವಿವೇಕ್ ಮೂರ್ತಿ ಹಾಗೂ ಅವರ ತಂದೆ ಡಾ.ಮೂರ್ತಿ ಜಂಟಿಯಾಗಿ ಮದರ್ ಅರ್ಥ್ ನಿರ್ಮಾಣ ಮಾಡುತ್ತಿದ್ದಾರೆ. 

ಭೂದೇವಿ ಪ್ರತಿಮೆ ಜೊತೆಗೆ, 64 ವಿಶ್ವಮಾನವರ ಪ್ರತಿಮೆ ನಿರ್ಮಾಣ: ಅಮೇರಿಕಾದ ಖ್ಯಾತ ವೈದ್ಯ ಡಾ.ಮೂರ್ತಿ ಅವರು ಹಲ್ಲೇಗೆರೆ ಗ್ರಾಮದವರೇ ಆಗಿದ್ದಾರೆ. ಸದ್ಯ ಅಮೇರಿಕದಲ್ಲಿ ಡಾ.ಮೂರ್ತಿ ಹಾಗೂ ಕುಟುಂಬ ವಾಸವಾಗಿದೆ. ಹುಟ್ಟೂರು ಮರೆಯದೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಡಾ.ಮೂರ್ತಿ, ಈಗ ಭೂದೇವಿ ಆಧ್ಯಾತ್ಮಿಕ ಕೇಂದ್ರ ನಿರ್ಮಾಣಕ್ಕೆ ಮುಂದಾಗುವ ಮೂಲಕ ಸರ್ವ ಧರ್ಮ ಸಮನ್ವಯ ಸಂದೇಶ ಸಾರಲು ಹೊರಟಿದ್ದಾರೆ. ಮಂಟಪದಲ್ಲಿ ಭೂ ದೇವಿ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಚಿಂತನೆ ಮಾಡಲಾಗಿಎ. ಭೂಮಿ ಪ್ರತಿಮೆ ಜೊತೆಗೆ ಪ್ರಪಂಚದ ವಿಶ್ವ ಮಾನವರ ಪ್ರತಿಮೆ ನಿರ್ಮಾಣ ಮಾಡಲಾಗುತ್ತದೆ. ಈ ಪೈಕಿ ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ 64 ಮಂದಿ ವಿಶ್ವಮಾನವರ ಪ್ರತಿಮೆಗೆ ಪ್ಲಾನ್ ಮಾಡಲಾಗಿದೆ.

Bengaluru: ಮೊಟ್ಟ ಮೊದಲ ಬಾರಿಗೆ ಸ್ಯಾಂಡಲ್‌ವುಡ್‌ ನಟ ಭೈರವ ವಜ್ರಮುನಿ ಪ್ರತಿಮೆ ನಿರ್ಮಾಣ

ಸಿದ್ದರಾಮಯ್ಯ ಅವರೊಂದಿಗೆ ಸಿದ್ಧತಾ ಸಭೆ: ಮಂಡ್ಯದ ಹಲ್ಲೇಗೆರೆ ಗ್ರಾಮದಲ್ಲಿ 12 ಎಕರೆ ಪ್ರದೇಶದಲ್ಲಿ ಭೂದೇವಿ ಆಧ್ಯಾತ್ಮಿಕ ಕೇಂದ್ರ ನಿರ್ಮಾಣವಾಗಲಿದೆ. ಜನವರಿ ಅಥವಾ ಫೆಬ್ರವರಿಯಲ್ಲಿ ಆಧ್ಯಾತ್ಮಿಕ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಲಿದೆ. ಬರಾಕ್ ಒಬಾಮಾ ದಂಪತಿಯಿಂದ ನೆರವೇರಲಿರುವ ಶಂಕುಸ್ಥಾಪನೆ ನೆರವೇರಲಿದ್ದು, ಈ ಬಗ್ಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಭೆ ಮಾಡಲಾಗುತ್ತಿದೆ. ಡಾ.ಮೂರ್ತಿ ಸೇರಿದಂತೆ ಮಂಡ್ಯ ಜಿಲ್ಲೆಯ ಕೆಲವು ಜನಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಒಬಾಮಾ ಆಗಮನದ ಹಿನ್ನೆಲೆಯಲ್ಲಿ ಸಿದ್ಧತೆ ಸಂಬಂಧ ಸಭೆ ಮಾಡಲಾಗುತ್ತಿದೆ. ಇನ್ನು ಒಬಾಮಾ ಸಂಚರಿಸುವ ರಸ್ತೆ ಅಭಿವೃದ್ಧಿ ಸೇರಿದಂತೆ ಕೆಲವು ಕಾಮಗಾರಿಗ ಬಗ್ಗೆ ಸುದೀರ್ಘ ಚರ್ಚೆಯನ್ನು ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ಮಾಡಲಾಗುತ್ತಿದೆ.

Follow Us:
Download App:
  • android
  • ios