ಖಾನ್ ಸರ್, ತಮ್ಮ ವಿಶಿಷ್ಟ ಬೋಧನಾ ಶೈಲಿಯಿಂದ ಪ್ರಸಿದ್ಧರಾದ ಶಿಕ್ಷಣತಜ್ಞ. ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ಪಾಕಿಸ್ತಾನದ ನಕ್ಷೆಯನ್ನು ನಾಯಿಗೆ ಹೋಲಿಸಿ, ಅವರ ಬುದ್ಧಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ಈ ಮಾತುಗಳು ನೆಟ್ಟಿಗರ ಚರ್ಚೆಗೆ ಕಾರಣವಾಗಿದೆ.

ಖಾನ್​ ಸರ್​ ಎಂದ್ರೆ ಸಾಕು, ವಿದ್ಯಾರ್ಥಿಗಳಿಗಂತೂ ಸಿಕ್ಕಾಪಟ್ಟೆ ಅಚ್ಚುಮೆಚ್ಚು. ಬಹಳ ಕಠಿಣ ವಿಷಯಗಳನ್ನು ಮಕ್ಕಳಿಗೆ ಅರ್ಥ ಆಗುವ ರೀತಿಯಲ್ಲಿ ಯುಟ್ಯೂಬ್​ನಲ್ಲಿ ವಿವರಿಸುವ ಮೂಲಕ ಅದ್ಭುತವಾಗಿ ಪಾಠ ಮಾಡುವ ಕೌಶಲ ಇವರದ್ದು. ಇವರು ಬಿಹಾರದ ಪಾಟ್ನಾದವರಾಗಿದ್ದು, ಶಿಕ್ಷಣತಜ್ಞರಾಗಿ ಫೇಮಸ್​ ಆಗಿದ್ದಾರೆ. ಭಾರತದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಕೋಚಿಂಗ್ ಕ್ಲಾಸ್​​ ಮೂಲಕ ಎಲ್ಲರ ಫೆವರೆಟ್​ ಆಗಿದ್ದಾರೆ. ಇದೀಗ ಅವರು ಪಾಕಿಸ್ತಾನದ ನಕ್ಷೆಯನ್ನು ತೋರಿ ಕುತೂಹಲದ ವಿಷಯವನ್ನು ತೆರೆದಿಟ್ಟಿದ್ದಾರೆ.

ನಕ್ಷೆಯಂತೆಯೇ ಬುದ್ಧಿ

ks__research ಇನ್​ಸ್ಟಾಗ್ರಾಮ್​ನಲ್ಲಿ ಇವರ ಸಂದರ್ಶನ ಶೇರ್​ ಮಾಡಲಾಗಿದೆ. ಇದರಲ್ಲಿ ಅವರು ಬಹುತೇಕ ಜನರಿಗೆ ಗೊತ್ತಿಲ್ಲದ ಪಾಕಿಸ್ತಾನದ ನಕ್ಷೆಯನ್ನು ತೋರಿದ್ದಾರೆ. ಇದು ನಾಯಿಯ ಶೇಪ್​ನಲ್ಲಿ ಇದೆ. ಆದರೆ ನಾಯಿ ಎನ್ನುವುದು ನಿಯತ್ತಿನ ಸಂಕೇತವಾಗಿದೆ. ಇದರ ಹೊರತಾಗಿಯೂ ಇದನ್ನು ಕೆಟ್ಟ ಶಬ್ದವಾಗಿಯೂ ಬಳಕೆ ಮಾಡಲಾಗುತ್ತದೆ. ಇದನ್ನೇ ಹೇಳಿರುವ ಖಾನ್​​ ಸರ್​, ಬೀದಿನಾಯಿಗಳ ಬುದ್ಧಿಯೇ ಪಾಕಿಗಳಿಗೆ ಇರುವುದು, ಇದೇ ಕಾರಣಕ್ಕೆ ಇದರ ನಕ್ಷೆ ನಾಯಿಯಂತೆ ಇದೆ ಎಂದು ನೇರಾನೇರವಾಗಿ ಹೇಳಿದ್ದಾರೆ.

ಫ್ರೆಷ್​ ಬಾಡಿ

ಆಗ ಸಂದರ್ಶಕ, ನೀವು ಪಾಕಿಸ್ತಾನದ ಬಗ್ಗೆ ಈ ರೀತಿ ಮಾತನಾಡುತ್ತೀರಲ್ಲ, ನಿಮಗೆ ಬೆದರಿಕೆಗಳು ಬರಲ್ವಾ ಎಂದು ಪ್ರಶ್ನಿಸಿದಾಗ, ನನಗೆ ಸಾಧ್ಯವಾಗಿದ್ದರೆ ಇವರೆಲ್ಲರನ್ನೂ ಒಟ್ಟಿಗೇ ಮುಗಿಸಿ ಹೂತು ಹಾಕುತ್ತಿದ್ದೆ ಎಂದಿದ್ದಾರೆ. ಆಪರೇಷನ್​ ಸಿಂದೂರ್​ ಬಗ್ಗೆ ಮಾತನಾಡಿರುವ ಖಾನ್ ಸರ್​ ಅವರು, ನಾನು ಆಪರೇಷನ್​ ಸಿಂದೂರ್​ ಮಾಡಿದಾಗ, ಪಾಕಿಸ್ತಾನದಿಂದ ಕೆಲವೊಂದು ಫ್ರೆಷ್​ ಬಾಡಿಗಳು ಬಂದು ನಮ್ಮ ಭಾರತದ ಪ್ರಯೋಗಾಲಯದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಸಿಗತ್ತೆ ಅಂದುಕೊಂಡಿದ್ದೆ. ಆದರೆ ಹಾಗಾಗಲಿಲ್ಲ. ಹಾಗಾಗಿದ್ದರೆ ಚೆನ್ನಾಗಿತ್ತು ಎಂದು ಹೇಳಿದ್ದಾರೆ.

ನೆಟ್ಟಿಗರ ಮಾತು

ಈ ಮೂಲಕ ಭಾರತದಲ್ಲಿ ಇದ್ದುಕೊಂಡೇ ಪಾಕಿಸ್ತಾನದ ಉಗ್ರರಿಗೆ ಸಪೋರ್ಟ್ ಮಾಡುವ, ಪಾಕಿಗಳ ಬೆಂಬಲಕ್ಕೆ ನಿಲ್ಲುವ, ಪಾಕಿಸ್ತಾನದ ಜಿಂದಾಬಾದ್​ ಎನ್ನುವ ಘೋಷಣೆ ಮಾಡಿದರೂ, ಮತಗಳ ಓಲೈಕೆಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂಜರಿಯುವ ಕೆಲ ರಾಜಕಾರಣಿಗಳು, ಭಾರತದ ನೆಲದಲ್ಲಿ ನೆಮ್ಮದಿಯಿಂದ ಇದ್ದು, ಇಲ್ಲಿಯ ಎಲ್ಲಾ ಸೌಲಭ್ಯಗಳನ್ನು ಪಡೆದು ಪಾಕಿಸ್ತಾನಕ್ಕೆ ಬೆಂಬಲಿಸುವವರಿಗೆ ಖಾನ್​ ಸರ್​ ಅವರ ಈ ಮಾತು ಅನ್ವಯ ಆಗುತ್ತದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

View post on Instagram