ಸಮುದ್ರದಲ್ಲಿ ಈಜುತ್ತಿದ್ದ ರಷ್ಯನ್ ಪ್ರವಾಸಿಗನೋರ್ವ ಶಾರ್ಕ್‌ ಮೀನಿಗೆ ಆಹಾರವಾಗಿದ್ದು, ಆತನ ಸಾವಿನ ಕೊನೆಕ್ಷಣದ ವಿಡಿಯೋ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಮೈ ಜುಮ್ಮೆನಿಸುತ್ತಿದೆ.

ಸಮುದ್ರದಲ್ಲಿ ಈಜುತ್ತಿದ್ದ ರಷ್ಯನ್ ಪ್ರವಾಸಿಗನೋರ್ವ ಶಾರ್ಕ್‌ ಮೀನಿಗೆ ಆಹಾರವಾಗಿದ್ದು, ಆತನ ಸಾವಿನ ಕೊನೆಕ್ಷಣದ ವಿಡಿಯೋ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಮೈ ಜುಮ್ಮೆನಿಸುತ್ತಿದೆ. ಈಜಿಫ್ಟ್ ಪ್ರಸಿದ್ಧ ಹುರ್ಗಾದ ರೆಸಾರ್ಟ್‌ ಬೀಚ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಅಪ್ಪನ ಕಣ್ಣೆದುರೇ 23 ವರ್ಷದ ಮಗನನ್ನು ಶಾರ್ಕ್ ಕಚ್ಚಿ ಎಳೆದಾಡಿ ನುಂಗಿ ಹಾಕಿದ್ದು, ಆತ ಪಪ್ಪ ಪಪ್ಪ ಎಂದು ಕಿರುಚಿಕೊಳ್ಳುತ್ತಿರುವುದು ವೀಡಿಯೋದಲ್ಲಿ ಕೇಳಿಸುತ್ತಿದೆ. ಘಟನೆಯ ಮೈ ನವೀರೇಳಿಸುವ ವೀಡಿಯೋ ಈಗ ಕ್ಯಾಮರಾದಲ್ಲಿ ಸೆರೆ ಆಗಿದ್ದು, ವೈರಲ್ ಆಗಿದೆ. ಈತ ಸಮುದ್ರದಲ್ಲಿ ಈಜುತ್ತಿದ್ದಾಗ ಟೈಗರ್ ಶಾರ್ಕ್‌ ಈತನ ಬೆನ್ನಟ್ಟಿ ಬಂದಿದ್ದು, ಕೆಲ ಸೆಕೆಂಡುಗಳಲ್ಲಿ ಎಲ್ಲವೂ ಮುಗಿದು ಹೋಗಿದೆ. 

ಇತ್ತ ಈತನ ತಂದೆ ಮಗನನ್ನು ರಕ್ಷಿಸಲಾಗದೇ ಅಸಹಾಯಕ ಸ್ಥಿತಿಯಲ್ಲಿ ನೋಡುತ್ತಾ ನಿಂತಿದ್ದು, ಮಗನನ್ನು ರಕ್ಷಿಸುವಂತೆ ಅಂಗಲಾಚುತ್ತಿರುವುದು ಕೇಳಿ ಬಂದಿದೆ. ನೀರಿನ ಮಧ್ಯೆ ಹೊಡೆದಾಟ ಹಾಗೂ ಕಿರುಚಾಟದ ಜೊತೆ ಕ್ಷಣದಲ್ಲಿ ನೀರು ರಕ್ತದಿಂದ ಕೆಂಪಾಗಿದೆ. ರೆಸಾರ್ಟ್‌ನ ಹೊಟೇಲ್ ಸಿಬ್ಬಂದಿ ಎಚ್ಚರಿಕೆ ಕರೆಗಂಟೆ ಬಾರಿಸಿ ಇತರ ಸ್ವಿಮ್ಮರ್‌ಗಳನ್ನು ಸಮುದ್ರದಿಂದ ಮೇಲೆ ಬರುವಂತೆ ಕೇಳಿದ್ದಾರೆ. ಇದು ಕೇವಲ ಕೆಲ ಕ್ಷಣಗಳಲ್ಲಿ ನಡೆದು ಹೋಗಿದೆ. 

Baby Ghost Shark ಸಮುದ್ರ ಆಳದಲ್ಲಿ ಭಯ ಹುಟ್ಟಿಸುವ ಘೋಸ್ಟ್ ಬೇಬಿ ಶಾರ್ಕ್ ಪತ್ತೆ!

ರಕ್ಷಣಾ ತಂಡ ಕೂಡಲೇ ಕಾರ್ಯಾಚರಣೆಗೆ ಇಳಿಯಿತಾದರೂ ಅದೂ ಶಾರ್ಕ್‌ ಎಂಬುದು ಕೂಡಲೇ ನನ್ನ ಗಮನಕ್ಕೆ ಬಂತು. ನಾನು ಕೂಡಲೇ ಶಾರ್ಕ್ ಶಾರ್ಕ್ ಎಂದು ಬೊಬ್ಬೆ ಹಾಕಿದೆ. ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ ಎಂದು ಹೇಳಿದೆ. ಆದರೆ ಯಾರು ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ಘಟನೆಯ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಇದೊಂದು ಭಯಾನಕ ಘಟನೆ, ನನಗೆ ನನ್ನ ಕಣ್ಣ ಮುಂದೆಯೇ ಶಾಕ್ ಆಗಿತ್ತು. ಆ ಹುಡುಗನನ್ನು ಶಾರ್ಕ್ ನುಂಗಿ ಹಾಕಿತ್ತು. ನನಗೆ ನಿಜವಾಗಿಯೂ ಬೇಸರವಾಗಿದೆ ಎಂದು ಪ್ರತ್ಯಕ್ಷದರ್ಶಿ ಮಹಿಳೆಯೊಬ್ಬರು ಟೆಲಿಗ್ರಾಮ್ ಚಾನೆಲ್‌ ಬಝಾಗೆ ಹೇಳಿದ್ದಾರೆ. 

ದೋಣಿಯನ್ನು ಕಚ್ಚುತ್ತಿರುವ ಶಾರ್ಕ್‌: ಹಳೆ ವಿಡಿಯೋ ಮತ್ತೆ ವೈರಲ್

ಹೋ ದೇವರೇ ಹೋ ದೇವರೇ ಅದು ಆತನ ಕಳೆಬರವನ್ನು ತಿನ್ನುತ್ತಿದೆ ಎಂದು ಮಹಿಳೆಯೊಬ್ಬರು ಚೀರುತ್ತಿರುವುದು ಕೂಡ ವೀಡಿಯೋದ ಹಿನ್ನೆಲೆಯಲ್ಲಿ ಕೇಳಿ ಬಂದಿದೆ. ಈ ಶಾರ್ಕ್ ಅನ್ನು ಹಿಡಿಯಲಾಗಿದೆ ಎಂದು ದೃಢಪಡಿಸಿದ ಈಜಿಪ್ಟ್‌ನ ಪರಿಸರ ಸಚಿವಾಲಯ, ಟೈಗರ್ ಶಾರ್ಕ್ ಅನ್ನು ತನಿಖೆ ಮಾಡಲು ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗುವುದು ಎಂದು ಹೇಳಿದೆ. ರಷ್ಯಾದ ಸುದ್ದಿವಾಹಿನಿ ಬಾಜಾ ಪ್ರಕಾರ, ಮೃತ ಯುವಕ ತನ್ನ ತಂದೆಯೊಂದಿಗೆ ಕೆಲವೇ ತಿಂಗಳುಗಳ ಹಿಂದೆ ರೆಸಾರ್ಟ್‌ಗೆ ತೆರಳಿದ್ದ. ಘಟನೆಯ ನಂತರ ರಷ್ಯಾದ ಪ್ರವಾಸಿಗರು ನೀರಿಗೆ ಇಳಿಯುವಾಗ ಜಾಗರೂಕರಾಗಿರಲು ಮತ್ತು ಅಧಿಕಾರಿಗಳು ವಿಧಿಸಿದ ಯಾವುದೇ ಈಜು ನಿಷೇಧಗಳಿಗೆ ಬದ್ಧರಾಗಿರಲು ಒತ್ತಾಯಿಸಲಾಗಿದೆ. 

Scroll to load tweet…