ವಿಚಿತ್ರ ಆಕಾರದ ಮರಿ ಶಾರ್ಕ್ ಮೀನು ಪತ್ತೆ ಅಧ್ಯಯನಕ್ಕೆ ತೆರಳಿದ ವಿಜ್ಞಾನಿಗಳಲ್ಲಿ ಅಚ್ಚರಿ ಘೋಸ್ಟ್ ಬೇಬಿ ಶಾರ್ಕ್ ಎಂದು ಹೆಸರಿಟ್ಟ ಸಂಶೋಧಕರು
ಸೌಥ್ ಐಸ್‌ಲೆಂಡ್(ಮಾ.25): ಸಮುದ್ರದಲ್ಲಿನ ಜಲಚರಗಳ ಕುರಿತು ನಿರಂತರ ಸಂಶೋಧನೆ, ಅಧ್ಯಯನಗಳು ನಡೆಯತ್ತಲೇ ಇದೆ. ಹೀಗೆ ಆಳಸಾಗರದಲ್ಲಿ ಅಧ್ಯಯನ ನಡೆಸಲು ತೆರಳಿದ ವಿಜ್ಞಾನಿಗಳಿಗೆ ಅಚ್ಚರಿಯೊಂದು ಕಾದಿತ್ತು. ಆಗಷ್ಟೇ ಮೊಟ್ಟೆಯೊಡೆದು ಹೊರಬಂದ ಶಾರ್ಕ್ ಮೀನಿನ ಮರಿ ವಿಜ್ಞಾನಿಗಳ ತಂಡವವನ್ನು ಆಕರ್ಷಿಸಿದೆ. ಕಾರಣ ಇದು ಶಾರ್ಕ್ ಮೀನಿನ ಸಹಜ ಮರಿಯಾಗಿರಲಿಲ್ಲ.ನೋಡಲು ಭಯಹುಟ್ಟಿಸುವ ಶಾರ್ಕ್ ಮೀನಿನ ಮರಿ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.
ನ್ಯೂಜಿಲೆಂಡ್‌ನ ದಕ್ಷಿಣ ಐಸ್‌ಲೆಂಡ್ ತೀರದ ಸಮುದ್ರದಲ್ಲಿ ಅಧ್ಯಯನಕ್ಕೆ ತೆರಳಿದ ವಿಜ್ಞಾನಿಗಳ ತಂಡ ಈ ಹೊಸ ಹಾಗೂ ವಿಚಿತ್ರ ಆಕಾರಾದ ಶಾರ್ಕ್ ಮೀನಿನ ಮರಿಯನ್ನು ಪತ್ತೆ ಹಚ್ಚಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವಾಟರ್ ಅಂಡ್ ಅಟ್ಮಾಸ್ಫಿಯರಿಕ್ ರಿಸರ್ಚ್ ತಂಡದ ವಿಜ್ಞಾನಿಗಳು ಆಳ ಸಮುದ್ರದಲ್ಲಿ ಈ ಶಾರ್ಕ್ ಮರಿ ಮೀನನ್ನು ಪತ್ತೆ ಹಚ್ಚಿದ್ದಾರೆ.
ಪ್ರವಾಸದ ಖುಷಿಯಲ್ಲಿದ್ದ ವ್ಯಕ್ತಿಯ ಹೊತ್ತೊಯ್ದ ಶಾರ್ಕ್
ಅಧ್ಯಯನಕ್ಕೆ ತೆರಳಿದ ತಂಡಕ್ಕೆ ಆಗಷ್ಟೆ ಹುಟ್ಟಿದ ಮರಿ ಶಾರ್ಕ್ ಮೀನು ಪತ್ತೆಯಾಗಿದೆ. ಈ ರೀತಿ ಮೀನುಗಳು ಪತ್ತೆಯಾಗಿರುವುದು ಅತೀ ವಿರಳವಾಗಿದೆ. ಇದು ನೋಡಲು ವಿಚಿತ್ರವಾಗಿದೆ. ಜೊತೆಗೆ ಭಯಹುಟ್ಟಿಸುವಂತಿದೆ. ಆಳ ಸಮುದ್ರದಲ್ಲಿ ಶಾರ್ಕ್ ಮೀನು ಮೊಟ್ಟೆ ಇಡುತ್ತದೆ. ನಾವು ಆಳ ಸಮುದ್ರದ ಅಧ್ಯಯನ ಹೆಚ್ಚಾಗಿ ಮಾಡಬೇಕಿದೆ. ಈ ರೀತಿಯ ಮೀನುಗಳ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕಬೇಕಿದೆ ಎಂದು ಅಧ್ಯಯನ ತಂಡದ ಸದಸ್ಯ ಡಾ ಬ್ರಿಟ್ ಫಿನುಸಿ ಹೇಳಿದ್ದಾರೆ.
ಆಳ ಸಮುದ್ರದಲ್ಲಿ ಹೊಸ ಪ್ರಭೇದದ ಜಲಚರಗಳನ್ನು ಪತ್ತೆ ಹಚ್ಚುವುದು ಕಷ್ಟ. ಆದರೆ ಹಲವು ಬಾರಿ ಈ ರೀತಿಯ ವಿಚಿತ್ರ ಮೀನುಗಳ ಪತ್ತೆಯಾಗಿದೆ. ಈ ಕುರಿತು ಹೆಚ್ಚಿನ ಅಧ್ಯಯನಕ್ಕೆ ಹಲವು ತೊಡಕುಗಳಿವೆ. ಆಳ ಸಮುದ್ರಲ್ಲಿನ ಸಂಪೂರ್ಣ ಪ್ರಕ್ರಿಯೆ ಅಧ್ಯಯನ ಕಷ್ಟ ಎಂದು ಬ್ರಿಟ್ ಹೇಳಿದ್ದಾರೆ.
ಈ ರೀತಿಯ ವಿಚ್ರಿತ್ರವಾಗಿ ಕಾಣುವ ಪ್ರೇತ ಶಾರ್ಕ್‌ಗಳೆಂದು ಕರೆಯಲ್ಪಡು ಹಲವು ಶಾರ್ಕ್ ಹಾಗೂ ಜಲಚರಗಳು ಆಳ ಸಮುದ್ರದಲ್ಲಿದೆ. ಈಗಾಗಲೇ ಕೆಲ ಘೋಸ್ಟ್ ಶಾರ್ಕ್ ಪತ್ತೆಯಾಗಿತ್ತು. ಆಳವಾದ ಸಮುದ್ರದಲ್ಲಿ ಈ ರೀತಿಯ ವಿಚಿತ್ರ ಜೀವಿಗಳು ವಾಸಿಸುತ್ತದೆ ಎಂದು ಬ್ರಿಟ್ ಹೇಳಿದ್ದಾರೆ.
ಬಲೆಗೆ ಬಿತ್ತು ಬೃಹತ್ ವೇಲ್ ಶಾರ್ಕ್, ಇದರ ವಿಶೇಷತೆ ಏನ್ಗೊತ್ತಾ..?
ಬಲೆಗೆ ಬಿದ್ದ ಬೃಹತ್ ಶಾರ್ಕ್
ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಪರ್ಸೈನ್ ಬೋಟ್‌ನ ಬಲೆಗೆ ಬೃಹತ್ ಗಾತ್ರದ ಶಾರ್ಕ್ ಬಿದ್ದ ಘಟನೆ ಭಾರಿ ಸಂಚಲನ ಸೃಷ್ಟಿಸಿತ್ತು. ತದಡಿ ಸಮೀಪ ಸಮುದ್ರದಲ್ಲಿ ಸಿಕ್ಕಿದ್ದು, ವೈಜ್ಞಾನಿಕವಾಗಿ ವೇಲ್‌್ಹ ಶಾರ್ಕ್ ಎಂದು ಕರೆಯಲಾಗುವ ಇದಕ್ಕೆ ಸ್ಥಳೀಯವಾಗಿ ತಿಮಿಂಗಲು ಸೋರಾ, ನೀರು ಸೋರಾ ಎಂದು ಕೂಡಾ ಹೇಳಲಾಗುತ್ತದೆ. ಬಲೆಗೆ ಬಿದ್ದ ಮೀನು 650ರಿಂದ 700 ಕೆಜಿ ಇತ್ತು. ಕರ್ನಾಟಕ ಕರಾವಳಿ ಭಾಗದಲ್ಲಿ ವೇಲ್‌್ಹ ಶಾರ್ಕ್ ಅಪರೂಪವಾಗಿದ್ದು, ಮಹಾರಾಷ್ಟ್ರ, ಗುಜರಾತ್ ಅರಬ್ಬಿ ಸಮುದ್ರದಲ್ಲಿ ಕಾಣಸಿಗುತ್ತವೆ. ಈ ಮೀನು ಬೇಟೆ ನಿಷೇಧವಿದ್ದು, ಹೀಗಾಗಿ ಬೋಟ್‌ನವರು ಪುನಃ ಸಮುದ್ರಕ್ಕೆ ಬಿಟ್ಟಿದ್ದಾರೆ.
ಕಡಲತಡಿಗೆ ಬಂದ ಮೃತ ಶಾರ್ಕ್ ದೇಹ
ಮಂಗಳೂರಿನ ಎನ್‌ಐಟಿಕೆ ಸಮುದ್ರ ಕಿನಾರೆಯಲ್ಲಿ ಶನಿವಾರ ಬೃಹತ್ ಗಾತ್ರದ ಶಾರ್ಕ್ ಮೃತಪಟ್ಟಸ್ಥಿತಿಯಲ್ಲಿ ಪತ್ತೆಯಾಗಿದೆ. ಬಳಿಕ ಇದನ್ನು ಕ್ರೇನ್ ಮೂಲಕ ಸಮುದ್ರ ತಟದಿಂದ ಸಾಗಿಸಲಾಯಿತು. ಟೈಗರ್ ಶಾರ್ಕ್ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದೆ.ಸುಮಾರು 30- 40 ವರ್ಷ ತನಕ ಇದು ಜೀವಿಸಬಲ್ಲದು. ಪತ್ತೆಯಾದ ಟೈಗರ್ ಶಾರ್ಕ್ 2 ಮೀಟಕ್ ಉದ್ದವಿದ್ದು, ಹೆಣ್ಣು ಶಾರ್ಕ್ ಆಗಿದೆ.
