Asianet Suvarna News Asianet Suvarna News

29ನೇ ಬಾರಿ ಎವರೆಸ್ಟ್ ಶಿಖರ ಏರಿ ತನ್ನದೇ ದಾಖಲೆ ಮುರಿದ ಕಮಿರಿಟಾ

ನೇಪಾಳದ ಪರ್ವತಾರೋಹಿ ಕಮಿ ರೀಟಾ ಶೆರ್ಪಾ, 29ನೇ ಬಾರಿ ಮೌಂಟ್ ಎವರೆಸ್ಟ್ ಶಿಖರವನ್ನೇರುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. 54 ವರ್ಷದ ಶೆರ್ಪಾ, ಜಗತ್ತಿನ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ ತುದಿಯನ್ನು ಕಳೆದ ವರ್ಷ ವಾರದಲ್ಲಿಯೇ ಎರಡು ಬಾರಿ ತಲುಪಿದ ಸಾಧನೆ ಮಾಡಿದ್ದರು.

Kami rita broke his own record by climbing Everest for the 29th time akb
Author
First Published May 13, 2024, 9:30 AM IST

ನವದೆಹಲಿ: ನೇಪಾಳದ ಪರ್ವತಾರೋಹಿ ಕಮಿ ರೀಟಾ ಶೆರ್ಪಾ, 29ನೇ ಬಾರಿ ಮೌಂಟ್ ಎವರೆಸ್ಟ್ ಶಿಖರವನ್ನೇರುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. 54 ವರ್ಷದ ಶೆರ್ಪಾ, ಜಗತ್ತಿನ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ ತುದಿಯನ್ನು ಕಳೆದ ವರ್ಷ ವಾರದಲ್ಲಿಯೇ ಎರಡು ಬಾರಿ ತಲುಪಿದ ಸಾಧನೆ ಮಾಡಿದ್ದರು. ಈ ಬಾರಿ ಮತ್ತೊಮ್ಮೆ ಎವರೆಸ್ಟ್ ತುದಿ ತಲುಪುವ ಮೂಲಕ ಅತಿ ಹೆಚ್ಚು ಬಾರಿ ಮೌಂಟ್ ಎವರೆಸ್ಟ್ ಏರಿದ ಜಗತ್ತಿನ ಏಕೈಕ ವ್ಯಕ್ತಿ ಎನ್ನುವ ತಮ್ಮದೇ ದಾಖಲೆಯನ್ನು ತಾವೇ ಮುರಿದಿದ್ದಾರೆ.

ಸುಮಾರು 28 ಪರ್ವತಾರೋಹಿಗಳ ತಂಡ ಭಾನುವಾರ ಬೆಳಗ್ಗೆ 7.25ರ ವೇಳೆಗೆ ‘ಸೆವೆನ್ ಸಮ್ಮಿಟ್ ಟ್ರೆಕ್ಸ್’ ಆಯೋಜಿಸಿದ್ದ ಕಾರ್ಯಕ್ರಮದ ಭಾಗವಾಗಿ ಮೌಂಟ್ ಎವರೆಸ್ಟ್ ಹತ್ತಿದ್ದರು. ಈ ತಂಡದಲ್ಲಿ ಕಮಿ ರೀಟಾ ಶೆರ್ಪಾ ಇತರ ಪರ್ವಾತಾರೋಹಿಗಳಿಗೆ ಮಾರ್ಗದರ್ಶಕರಾಗಿದ್ದರು.

ಸಾಯುವ ಸ್ಥಿತಿಯಲ್ಲಿದ್ದ ಶೆರ್ಪಾನ ಮಾರ್ಗಮಧ್ಯೆಯೇ ಬಿಟ್ಟು ತೆರಳಿದ ಪರ್ವತಾರೋಹಿ  

1994ರಲ್ಲಿ ಮೊದಲ ಬಾರಿಗೆ ಮೌಂಟ್‌ ಎವರೆಸ್ಟ್‌ ಶಿಖರ ಏರಿದ್ದ ಕಮಿ ರಿಟಾ (49) ನಂತರ ಪ್ರತಿ ವರ್ಷವೂ, ಹಿಮಪರ್ವತವನ್ನ ಏರುತ್ತಲೇ ಇದ್ದಾರೆ. 2017ರಲ್ಲಿ ಅಪಾ ಶೆರ್ಪಾ ಮತ್ತು ಪುರ್ಬಾ ತಶಿ ಶೆರ್ಪಾ ಮತ್ತು ಕಮಿ ರಿತಾ 21ನೇ ಬಾರಿ ಎವರೆಸ್ಟ್‌ ಏರುವ ಮೂಲಕ ದಾಖಲೆ ನಿರ್ಮಿಸಿದ್ದರು. ಆದರೆ 2018ರಲ್ಲಿ ಕಮಿ ರಿತಾ 22ನೇ ಬಾರಿ ಏರಿ ವಿಶ್ವದಾಖಲೆ ಸ್ಥಾಪಿಸಿದ್ದರು. ಇದಾದ ನಂತರವೂ ಪ್ರತಿ ವರ್ಷ ಎವರೆಸ್ಟ್ ಏರುತ್ತಲೇ ಇರುವ ಕಮಿ ರಿಟಾ ಈ ಬಾರಿ 29ನೇ ಬಾರಿ ಎವರೆಸ್ಟ್ ಏರಿ ತಮ್ಮದೇ ದಾಖಲೆ ಬ್ರೇಕ್ ಮಾಡಿದ್ದಾರೆ. ಎವರೆಸ್ಟ್‌ ಪರ್ವತವನ್ನು ನೇಪಾಳ ಮತ್ತು ಟಿಬೆಟ್‌ ಮಾರ್ಗವಾಗಿ ಏರಬಹುದು. ನೇಪಾಳ ಸರ್ಕಾರ ಪರ್ವತಾರೋಹಿಗಳಿಗೆ ಲೈಸೆನ್ಸ್‌ ನೀಡುತ್ತದೆ. ಪ್ರತಿ ಪರ್ವತಾರೋಹಿ ಜೊತೆಗೆ ಒಬ್ಬ ಶೆರ್ಪಾ ಇದ್ದೇ ಇರುತ್ತಾರೆ.

ಯುದ್ಧದಲ್ಲಿ ಎರಡೂ ಕಾಲು ಕಳೆದುಕೊಂಡ ಯೋಧನಿಂದ ಎವರೆಸ್ಟ್‌ ಶಿಖರ ಆರೋಹಣ

Latest Videos
Follow Us:
Download App:
  • android
  • ios