ಸಾಯುವ ಸ್ಥಿತಿಯಲ್ಲಿದ್ದ ಶೆರ್ಪಾನ ಮಾರ್ಗಮಧ್ಯೆಯೇ ಬಿಟ್ಟು ತೆರಳಿದ ಪರ್ವತಾರೋಹಿ

ಕೇವಲ 3 ತಿಂಗಳು ಹಾಗೂ 1 ದಿನದಲ್ಲಿ 8 ಸಾವಿರ ಮೀ.ಗಿಂತ ಎತ್ತರದ 14 ಶಿಖರಗಳನ್ನು ಏರಿದ ದಾಖಲೆ ಮಾಡಿದ ನಾರ್ವೆ ಸಾಹಸಿ ಮಹಿಳೆ ವಿವಾದಕ್ಕೀಡಾಗಿದ್ದಾರೆ. ದಾಖಲೆಗಾಗಿ ಕೆ2 ಶಿಖರ ಏರುವ ವೇಳೆ ಸಾಯುವ ಸ್ಥಿತಿಯಲ್ಲಿದ್ದ ಶೆರ್ಪಾನ ಮೇಲೆ ಹತ್ತಿ ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.

climbing 14 peaks in 3 months A Norwegian adventurer who left an injured Sherpa on middle of the route for a record akb

ನವದೆಹಲಿ: ಕೇವಲ 3 ತಿಂಗಳು ಹಾಗೂ 1 ದಿನದಲ್ಲಿ 8 ಸಾವಿರ ಮೀ.ಗಿಂತ ಎತ್ತರದ 14 ಶಿಖರಗಳನ್ನು ಏರಿದ ದಾಖಲೆ ಮಾಡಿದ ನಾರ್ವೆ ಸಾಹಸಿ ಮಹಿಳೆ ವಿವಾದಕ್ಕೀಡಾಗಿದ್ದಾರೆ. ದಾಖಲೆಗಾಗಿ ಕೆ2 ಶಿಖರ ಏರುವ ವೇಳೆ ಸಾಯುವ ಸ್ಥಿತಿಯಲ್ಲಿದ್ದ ಶೆರ್ಪಾನ ಮೇಲೆ ಹತ್ತಿ ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.

ನಾರ್ವೆಯ ಪರ್ವತಾರೋಹಿ ಕ್ರಿಸ್ಟಿನ್‌ ಹರಿಲಾ ಹಾಗೂ ಆಕೆಯ ಮಾರ್ಗದರ್ಶಕ ನೇಪಾಳದ ತೆಂಜಿನ್‌ ಲಾಮಾ ಶೆರ್ಪಾ 3 ತಿಂಗಳಲ್ಲಿ 14 ಶಿಖರಗಳನ್ನು ಏರಿ ದಾಖಲೆ ನಿರ್ಮಾಣ ಮಾಡಿದ್ದಾರೆ. ಕೊನೆಯದಾಗಿ ಜು.27ರಂದು ಈ ಇಬ್ಬರು ಕೆ2 ಶಿಖರ ಏರಿದ್ದರು. ಇದಾದ ಬಳಿಕ ಹರಿಲಾ ಹಂಚಿಕೊಂಡಿಕೊಂಡಿರುವ ಡ್ರೋನ್‌ ವಿಡಿಯೋದಲ್ಲಿ ಆಕೆ ಮತ್ತೊಂದು ಗುಂಪಿನ ಶೆರ್ಪಾ ಮೇಲೆ ಹತ್ತಿ ಹೋಗುತ್ತಿರುವುದು ದಾಖಲಾಗಿದೆ. ಆತ ಸಾಯುವ ಸ್ಥಿತಿಯಲ್ಲಿದ್ದರೂ ಸಹಾಯ ಮಾಡದೇ ದಾಖಲೆಗಾಗಿ ಆತನ ಮೇಲೆ ಹತ್ತಿ ಹೋಗಿದ್ದು ಮಾನವೀಯತೆಯಲ್ಲ ಎಂದು ಹಲವರು ಟೀಕಿಸಿದ್ದಾರೆ.

ಇದಕ್ಕೆ ಸ್ಪಷ್ಟನೆ ನೀಡಿರುವ ಹರಿಲಾ, ಶೆರ್ಪಾ ಮೊಹಮ್ಮದ್‌ ಹಸನ್‌ (Sherpa Mohammad Hasan) ಪರ್ವತದ ಕಿರಿದಾಗ ಭಾಗವೊಂದರಲ್ಲಿ ಸಿಕ್ಕಿಕೊಂಡಿದ್ದರು. ನಾವು ಅವರನ್ನು ರಕ್ಷಿಸಲು ಸಾಕಷ್ಟು ಪ್ರಯತ್ನ ಮಾಡಿದೆವು. ಅವರನ್ನು ಅಲ್ಲಿಂದ ಎತ್ತಲು ಸಾಧ್ಯವಾಗದ ಕಾರಣ ನಾನು ಅಲ್ಲಿಂದ ತೆರಳಿದೆ. ನನ್ನ ಕ್ಯಾಮರಾಮನ್‌ ಗ್ಯಾಬ್ರಿಯಲ್‌ ಸುಮಾರು 1 ಗಂಟೆಗಳ ಕಾಲ ಅವರಿಗೆ ಆಮ್ಲಜನಕ ನೀಡಿ ಬದುಕಿಸಲು ಪ್ರಯತ್ನ ಪಟ್ಟರು. ಆದರೆ ಆಮ್ಲಜನಕ ಖಾಲಿಯಾಗುವ ಭೀತಿಯಿಂದ ಅವರು ಅಲ್ಲಿಂದ ಕೆಳಗಿಳಿದರು ಎಂದು ಹೇಳಿದ್ದಾರೆ. ರಕ್ಷಣಾ ಸಿಬ್ಬಂದಿ ಹಸನ್‌ ಅವರ ದೇಹವನ್ನು ಕೆಳತರುವಷ್ಟರಲ್ಲೇ ಅವರು ಮೃತಪಟ್ಟಿದ್ದರು.

Latest Videos
Follow Us:
Download App:
  • android
  • ios