Asianet Suvarna News Asianet Suvarna News

ಯುದ್ಧದಲ್ಲಿ ಎರಡೂ ಕಾಲು ಕಳೆದುಕೊಂಡ ಯೋಧನಿಂದ ಎವರೆಸ್ಟ್‌ ಶಿಖರ ಆರೋಹಣ

 2010ರಲ್ಲಿ ಅಫ್ಘಾನಿಸ್ತಾನದಲ್ಲಿ ಯುದ್ಧದ ವೇಳೆ ತನ್ನ ಎರಡೂ ಕಾಲು ಕಳೆದುಕೊಂಡಿದ್ದ ಬ್ರಿಟಿಷ್‌ ಗೂರ್ಖಾ ಪಡೆಯ ಮಾಜಿ ಯೋಧ ಹರಿ ಬುದ್ದ ಮಾಗರ್‌ (Hari Buddha Magar) ಮೇ.19 ರಂದು ಯಶಸ್ವಿಯಾಗಿ ಮೌಂಟ್‌ ಎವರೆಸ್ಟ್‌ (Mount Everest) ಶಿಖರ ಏರುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

soldier Hari Buddha Magar who lost both his legs in the war climbed Mount Everest akb
Author
First Published May 21, 2023, 9:04 AM IST | Last Updated May 21, 2023, 9:04 AM IST

ಕಾಠ್ಮಂಡು: 2010ರಲ್ಲಿ ಅಫ್ಘಾನಿಸ್ತಾನದಲ್ಲಿ ಯುದ್ಧದ ವೇಳೆ ತನ್ನ ಎರಡೂ ಕಾಲು ಕಳೆದುಕೊಂಡಿದ್ದ ಬ್ರಿಟಿಷ್‌ ಗೂರ್ಖಾ ಪಡೆಯ ಮಾಜಿ ಯೋಧ ಹರಿ ಬುದ್ದ ಮಾಗರ್‌ (Hari Buddha Magar) ಮೇ.19 ರಂದು ಯಶಸ್ವಿಯಾಗಿ ಮೌಂಟ್‌ ಎವರೆಸ್ಟ್‌ (Mount Everest) ಶಿಖರ ಏರುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಎರಡೂ ಕಾಲು ಕಳೆದುಕೊಂಡು, ಕೃತಕ ಕಾಲು (artificial leg) ಅಳವಡಿಸಿಕೊಂಡ ವ್ಯಕ್ತಿಯೊಬ್ಬರು ಜಗತ್ತಿನ ಅತಿ ಎತ್ತರದ ಹಿಮ ಶಿಖರ ಏರಿದ ಮೊದಲ ಉದಾಹರಣೆ ಇದಾಗಿದೆ. 2018 ರಲ್ಲೇ ಹರಿ ಎವರೆಸ್ಟ್‌ ಏರುವ ಆಸೆ ಹೊಂದಿದ್ದರಾದರೂ ಎರಡೂ ಕಾಲು ಕಳೆದುಕೊಂಡವರಿಗೆ ಸರ್ಕಾರ ಅವಕಾಶ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಅವಕಾಶ ಪಡೆದುಕೊಂಡಿದ್ದ ಹರಿ, ಇದೀಗ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ.

27ನೇ ಬಾರಿ ಎವರೆಸ್ಟ್‌ ಏರಿ ದಾಖಲೆ ನಿರ್ಮಿಸಿದ ನೇಪಾಳದ ಕಮಿ ರಿಟಾ ಶೆರ್ಪಾ

ಮತ್ತೊಂದೆಡೆ ನೇಪಾಳದ ಪರ್ವತಾರೋಹಿ ಕಮಿ ರಿಟಾ (Kami Rita Sherpa)ಎಂಬ ಶೆರ್ಪಾ 27ನೇ ಬಾರಿಗೆ ಮೌಂಟ್‌ ಎವರೆಸ್ಟ್‌ ಶಿಖರ ಏರುವ ಮೂಲಕ ಅತಿ ಹೆಚ್ಚು ಬಾರಿ ಎವರೆಸ್ಟ್‌ ಏರಿದ ದಾಖಲೆಯನ್ನು ತಮ್ಮ ಹೆಸರಿಗೆ ಮತ್ತೊಮ್ಮೆ ಬರೆದುಕೊಂಡಿದ್ದಾರೆ.  ಭಾನುವಾರ ಪಸಾಂಗ್‌ ದಾವಾ (Pasang Dawa) ಎಂಬ ಶೆರ್ಪಾ 26ನೇ ಬಾರಿ ಎವರೆಸ್ಟ್‌ ಏರುವ ಮೂಲಕ ಕಮಿ ಅವರ ದಾಖಲೆಯನ್ನು ಸರಿಗಟ್ಟಿದ್ದರು. ಆದರೆ ಇದಾದ ಮೂರೇ ದಿನಕ್ಕೆ ಕಮಿ ಅವರು 27ನೇ ಸಲ ಜಗತ್ತಿನ ಅತಿ ಎತ್ತರದ ಶಿಖರ ಏರಿ ದಾಖಲೆ ಮರು ವಶಮಾಡಿಕೊಂಡಿದ್ದಾರೆ.

ದಶಕಗಳಿಂದ ಪರ್ವತಾರೋಹಿಗಳಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿರುವ ರಿಟಾ ಅವರು, 1994ರಲ್ಲಿ ಮೊದಲ ಬಾರಿಗೆ ಪರ್ವತದ ತುತ್ತತುದಿಗೆ (8,848 ಮೀ.) ಏರಿದ್ದರು. ಇದಾದ ಬಳಿಕ ಪ್ರತಿ ವರ್ಷ ಎವರೆಸ್ಟ್‌ ಶಿಖರ ಏರುವ ಮೂಲಕ ಈವರೆಗೆ 27 ಬಾರಿ ಈ ಸಾಧನೆ ಮಾಡಿದ್ದಾರೆ.

Achiever : 26ನೇ ಬಾರಿ ಮೌಂಟ್ ಎವರೆಸ್ಟ್ ಏರಿ ವ್ಯಕ್ತಿದ ಸಾಧನೆಗೆ ಬೇಷೆ ಎಂದ ನೆಟ್ಟಿಗರು!

ಈ ಸಾಧನೆಯನ್ನು ವೈಯಕ್ತಿಕವಾಗಿ ಮಾಡಲೇಬೇಕು ಎಂದೇನೂ ಮಾಡುತ್ತಿಲ್ಲ. ನಾನು ಮಾರ್ಗದರ್ಶಕನಾಗಿರುವ ಕಾರಣ ಇದು ನಡೆಯುತ್ತಿದೆ ಎಂದು ಕಮಿ ರಿಟಾ ಹೇಳಿದ್ದಾರೆ. 2019ರಲ್ಲಿ ಇವರು 6 ದಿನಗಳ ಅವಧಿಯಲ್ಲಿ 2 ಬಾರಿ ಪರ್ವತಾರೋಹಣ ಮಾಡಿದ್ದರು. ಹೆಚ್ಚಾಗಿ ಕಮಿ ಹಾಕಿಕೊಟ್ಟ ಮಾರ್ಗದಲ್ಲೇ ಇಂದು ಪರ್ವತಾರೋಹಿಗಳು ಶಿಖರ ಏರುತ್ತಾರೆ. ಕಳೆದ ಭಾನುವಾರ ಮತ್ತೊಬ್ಬ ತರಬೇತುದಾರಾಗಿರುವ ಪಸಾಂಗ್‌ ದಾವಾ ಅವರು 26ನೇ ಬಾರಿ ಶಿಖರ ಏರುವ ಮೂಲಕ ಅತಿ ಹೆಚ್ಚು ಬಾರಿ ಮೌಂಟ್‌ ಎವರೆಸ್ಟ್‌ ಏರಿದವರಲ್ಲಿ ಕಮಿ ಜತೆ ಜಂಟಿ ದಾಖಲೆ ನಿರ್ಮಾಣ ಮಾಡಿದ್ದರು.

1953ರಲ್ಲಿ ಮೊದಲ ಬಾರಿಗೆ ನ್ಯೂಜಿಲೆಂಡ್‌ನ ಎಡ್ಮಂಡ್‌ ಹಿಲರಿ (Edmund Hillary) ಮತ್ತು ಶೆರ್ಪಾ ತೇನ್‌ಸಿಂಗ್‌ (Sherpa Tenzing) ಎವರೆಸ್ಟ್‌ ಶಿಖರ ಏರಿದ್ದರು. 

26ನೇ ಬಾರಿ ಮೌಂಟ್‌ ಎವರೆಸ್ಟ್‌ ಏರಿ ದಾಖಲೆ ಸರಿಗಟ್ಟಿದ್ದ ಪಸಂಗ್‌

ಪರ್ವತಾರೋಹಿಗಳಿಗೆ ಮೌಂಟ್‌ ಎವರೆಸ್ಟ್‌ ಶಿಖರ ಏರಲು ನೆರವಾಗುವ ಪಸಂಗ್‌ ದವಾ (Pasang Dawa) ಎಂಬ ಶೆರ್ಪಾ, ಭಾನುವಾರ 26ನೇ ಬಾರಿ ಮೌಂಟ್‌ ಎವರೆಸ್ಟ್‌ ಏರುವ ಮೂಲಕ ವಿಶ್ವದಾಖಲೆಯನ್ನು ಸರಿಗಟ್ಟಿದ್ದರು. ನೇಪಾಳದವರೇ ಆದ ಕಮಿ ರಿಟಾ ಎಂಬ ಮಹಿಳಾ ಶೆರ್ಪಾ ಕಳೆದ ವರ್ಷ 26ನೇ ಬಾರಿ ಮೌಂಟ್‌ ಎವರೆಸ್ಟ್‌ ಏರಿ ದಾಖಲೆ ಸೃಷ್ಟಿಸಿದ್ದರು. ಅದನ್ನು ಪಸಂಗ್‌ ಸರಿಗಟ್ಟಿದ್ದರು. 1998ರಲ್ಲಿ ಮೊದಲ ಬಾರಿಗೆ ಮೌಂಟ್‌ ಎವರೆಸ್ಟ್‌ ಏರಿದ್ದ ಪಸಂಗ್‌, ನಂತರ ಪ್ರತಿ ವರ್ಷಕ್ಕೆ ಒಂದು ಬಾರಿಯಂತೆ ಶಿಖರ ಏರುತ್ತಾ ಬಂದಿದ್ದಾರೆ. ಭಾನುವಾರ ಅವರು ಹಂಗೇರಿಯಾ ದೇಶದ ಪರ್ವಾರೋಹಿಯೊಬ್ಬರ ಜೊತೆಗೆ ಯಶಸ್ವಿಯಾಗಿ ಶಿಖರ ಏರಿದ್ದಾರೆ.

ಮೌಂಟ್ ಎವರೆಸ್ಟ್‌ನಿಂದ ರಾತ್ರಿ ಹೊತ್ತು ಕೇಳಿ ಬರುತ್ತೆ ವಿಚಿತ್ರ ಶಬ್ದ, ಏನದು?

Latest Videos
Follow Us:
Download App:
  • android
  • ios