ಉಡುಪಿ(ನ.21): ಅಮೆರಿಕ ನೂತನ ಅಧ್ಯಕ್ಷ ಜೋ ಬೈಡನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸಂಪುಟ ಇದೀಗ ಭಾರತೀಯರಿಂದಲೇ ತುಂಬಿ ತುಳುಕುತ್ತಿದೆ. ಇದೀಗ ಅಮೆರಿಕಾ ಅಧ್ಯಕ್ಷರ ಪತ್ನಿ ಪಾಲಿಸಿ ಡೈರೆಕ್ಟರ್ ಆಗಿ ಕನ್ನಡತಿ ಮಾಲಾ ಆಡಿಗ ಆಯ್ಕೆಯಾಗಿದ್ದಾರೆ. ಮಾಲಾ ಉಡುಪಿ ಜಿಲ್ಲೆಯ ಕುಂದಾಪುರ ಮೂಲದವರಾಗಿದ್ದಾರೆ.

ಬೈಡೆನ್ ಸಂಪುಟದಲ್ಲಿ ಮಂಡ್ಯದ ವಿವೇಕ್ ಮೂರ್ತಿ , ಅರುಣ್ ಮಜುಂದಾರ್‌ಗೆ ಪ್ರಮುಖ ಹುದ್ದೆ?

ಜೋ ಬೈಡೆನ್ ಪತ್ನಿ ಜಿಲ್ ಬೈಡೆನ್ ಅಮೆರಿಕದ ಪಥಮೆ ಮಹಿಳೆಯಾಗಿದ್ದಾರೆ.  ಇದೀಗ ಮಹತ್ವ ಬಿಲ್ ಬೈಡೆನ್ ಅವರ ಪಾಲಿಸಿ ನಿರ್ದೇಶಕರಾಗಿ ಮಾಲಾ ಅಡಿಕ ಆಯ್ಕೆಯಾಗಿದ್ದಾರೆ.  ಕಳೆದ 50 ವರ್ಷಗಳಿಂದ ಮಾಲಾ ಅಡಿಗ ಕುಟುಂಬ ಅಮೆರಿಕದಲ್ಲಿ ವಾಸವಾಗಿದೆ.

ಈ ಹಿಂದೆ ಬಿಡೆನ್ ಫೌಂಡೇಶನ್ ನ ಉನ್ನತ ಶಿಕ್ಷಣ ನಿರ್ದೇಶಕಿಯಾಗಿ ಮಾಲಾ ಅಡಿಗ ಸೇವೆ ಸಲ್ಲಿಸಿದ್ದಾರೆ. ಬರಾಕ್ ಒಬಾಮಾಗೆ ಶಿಕ್ಷಣ, ಸಾಂಸ್ಕೃತಿಕ ವಿಭಾಗದ ಉಪ ಸಹಾಯಕ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ ಅನುಭವವಿದೆ.  ಇನ್ನು ಮಾಲಾ  ಅಮೇರಿಕಾದ ನ್ಯಾಶನಲ್ ಸೆಕ್ಯೂರಿಟಿ ಸ್ಟಾಫ್ ನಲ್ಲಿ ಮಾನವ ಹಕ್ಕುವಿಭಾಗದ ನಿರ್ದೇಶಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಮಾಲಾ ಅಡಿಗ ತಂದೆ ರಮೇಶ್ ಅಡಿಗ ಅಮೇರಿಕಾದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಾಲಾ ಅಡಿಗ ಅಮೇರಿಕಾದಲ್ಲೇ ಹುಟ್ಟಿ ಬೆಳೆದಿದ್ದಾರೆ. ಕುಂದಾಪುರ ತಾಲೂಕು ಕಕ್ಕುಂಜೆಯ ಅಡಿಗ ಕುಟುಂಬದ ಕುಡಿ ಮಾಲಾ ಅಡಿಗ ಇದೀಗ ಅಮೆರಿಕದಲ್ಲಿ ಅತ್ಯುನ್ನತ ಸ್ಥಾನ ಅಲಂಕರಿಸಿದ್ದಾರೆ.