Asianet Suvarna News Asianet Suvarna News

ಬೈಡೆನ್ ಸಂಪುಟದಲ್ಲಿ ಮಂಡ್ಯದ ವಿವೇಕ್ ಮೂರ್ತಿ , ಅರುಣ್ ಮಜುಂದಾರ್‌ಗೆ ಪ್ರಮುಖ ಹುದ್ದೆ?

ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡೆನ್ ಸರ್ಕಾರ ರಚನೆಗೆ ಸಿದ್ಧತೆ| ಭಾರತೀಯ ಮೂಲದ ಅರುನ್ ಮಜುಂದಾರ್, ವಿವೇಕ್ ಮೂರ್ತಿಗೆ ಪ್ರಮುಖ ಸ್ಥಾನ| 

Indian American Vivek Murthy Arun Majumdar Likely Faces In Biden Cabinet Report
Author
Bangalore, First Published Nov 18, 2020, 5:30 PM IST

ವಾಷಿಂಗ್ಟನ್(ನ.18): ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡೆನ್ ಸರ್ಕಾರ ರಚನೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಹೀಗಿರುವಾಗ ಅಅವರ ಆಪ್ತರಾಗಿ ಗುರುತಿಸಿಕೊಂಡಿರುವ ಮಂಡ್ಯ ಮೂಲದ ಡಾ. ವಿವೇಕ್ ಮೂರ್ತಿ ಆರೋಗ್ಯ ಸಚಿವರಾಗುವುದು ಬಹುತೇಕ ಖಚಿತವಾಗಿದೆ.  43 ವರ್ಷದ ಡಾ.ವಿವೇಕ್ ಮೂರ್ತಿ ಅಮೆರಿಕದ ಮಾಜಿ ಸರ್ಜನ್ ಜನರಲ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಇಷ್ಟೇ ಅಲ್ಲದೇ ಅಮೆರಿಕದ ಚುನಾಯಿತ ಅಧ್ಯಕ್ಷ ಬೈಡೆನ್  ಆಪ್ತ ಸಲಹೆಗಾರರಲ್ಲಿ ಡಾ.ಮೂರ್ತಿ ಕೂಡಾ ಒಬ್ಬರು. ಪ್ರಸ್ತುತ ಅಮೆರಿಕದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಬೈಡೆನ್ ರಚಿಸಿರುವ ಸಲಹಾ ಸಮಿತಿಯ ಮೂವರು ಖ್ಯಾತ ಸಹ ಅಧ್ಯಕ್ಷರಲ್ಲಿ ಡಾ. ಮೂರ್ತಿ ಕೂಡಾ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಮೆರಿಕದ ಕೊರೋನಾ ತಜ್ಞರ ಸಮಿತಿಗೆ ಮಂಡ್ಯ ವಿವೇಕ್ ಹಲ್ಲೇಗೆರೆ ಬಾಸ್!

ಅಮೆರಿಕದ ನೂತನ ಸಂಪುಟದಲ್ಲಿ ವಿವೇಕಗ್‌ ಅವರಿಗೆ ಆರೋಗ್ಯ ಮತ್ತು ಮಾನವ ಸೇವೆ ಕಾರ್ಯದರ್ಶಿ(ಸಚಿವ) ಸ್ಥಾನ ಲಭಿಸುವುದು ಬಹುತೇಕ ಖಚಿತ ಎಂದು ವಾಷಿಂಗ್ಟನ್ ಫೋಸ್ಟ್, ನ್ಯೂಯಾರ್ಕ್ ಟೈಂ ಮತ್ತು ಪೊಲಿಟಿಕೋ ಪತ್ರಿಕೆಗಳು ವರದಿ ಮಾಡಿವೆ. 

ಇನ್ನು ಸ್ಟಾನ್‍ಫೋರ್ಡ್ ಯೂನಿವರ್ಸಿಟಿಯ ಪ್ರಾಧ್ಯಾಪಕ ಭಾರತೀಯ ಮೂಲದ ಅರುಣ್ ಮಜುಂದಾರ್ ಅವರಿಗೆ ಇಂಧನ ಖಾತೆ ನೀಡುವುದು ಕೂಡಾ ಬಹುತೇಕ ಖಚಿತವಾಗಿದೆ. 

ಅಮೆರಿಕದ ಖ್ಯಾತ ತಂತ್ರ ಶಿಲ್ಪಿಗಳಲ್ಲಿ ಒಬ್ಬರಾದ ಡಾ.ಅರುಣ್ ಮಜುಂದಾರ್ ಪ್ರಸ್ತುತ ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರ್ ವಿಭಾಗದ ಮುಖ್ಯಸ್ಥರು ಮತ್ತು ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲದೆ ಅಮೆರಿಕದ ವಿವಿಧ ಸರ್ಕಾರಿ ಹುದ್ದೆಗಳಲ್ಲಿ ಭಾರತೀಯ ಮೂಲದವರಿಗೆ ಬೈಡೆನ್ ಆದ್ಯತೆ ನೀಡಲಿದ್ದಾರೆ. 

ಬೈಡನ್‌ ಅಧ್ಯಕ್ಷರಾದರೆ ಮಂಡ್ಯದ ಮೂರ್ತಿಗೆ ಪ್ರಮುಖ ಹುದ್ದೆ?

ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪ್ರಾಧ್ಯಾಪಕರಾಗಿರುವ ಅರುಣ್‌ ಅವರು ಇಂಧನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಬೈಡನ್‌ ಅವರಿಗೆ ಹಿರಿಯ ಸಲಹೆಗಾರರಾಗಿದ್ದಾರೆ. ಸ್ಟ್ಯಾನ್‌ಫೋರ್ಡ್‌ನಲ್ಲಿನ ‘ಅಡ್ವಾನ್ಸ್ಡ್‌ ರಿಸರ್ಚ್‌ ಪ್ರಾಜೆಕ್ಟ್‌ ಏಜನ್ಸಿ’ ಮೊದಲ ನಿರ್ದೇಶಕರಾಗಿಯೂ ಅರುಣ್‌ ಕಾರ್ಯನಿರ್ವಹಿಸಿದ್ದಾರೆ.

Follow Us:
Download App:
  • android
  • ios