Asianet Suvarna News Asianet Suvarna News

ಕಡಲ ತೀರದಲ್ಲಿ ಕಂಡು ಬಂದ ನಿಗೂಢ ಲೋಹದ ಚೆಂಡಿಗೆ ಬೆಚ್ಚಿದ ಜಪಾನ್

ಗ ಜಪಾನ್‌ನ ಕಡಲ ತೀರದಲ್ಲಿ ನಿಗೂಢವಾದ ಬೃಹದಾಕಾರದ ಲೋಹದ ಚೆಂಡು ಸಮುದ್ರ ತೀರಕ್ಕೆ ತೇಲಿ ಬಂದಿದೆ.  ಸುಮಾರು 1.5 ಮೀಟರ್ ಅಗಲದ ಈ ನಿಗೂಢ ಲೋಹದ ಚೆಂಡಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,  ಆನ್‌ಲೈನ್‌ನಲ್ಲಿ ತೀವ್ರವಾದ ಊಹಾಪೋಹ ಹಬ್ಬಲು ಕಾರಣವಾಗಿದೆ

Japan shocked after it found mysterious metal ball in the Enshu beach akb
Author
First Published Feb 23, 2023, 12:22 PM IST | Last Updated Feb 23, 2023, 12:22 PM IST

ಇತ್ತೀಚೆಗಷ್ಟೇ ಅಮೆರಿಕಾದ ಆಕಾಶದಲ್ಲಿ ದೊಡ್ಡ ಗಾತ್ರದ ನಿಗೂಢ ಬಲೂನ್‌ಗಳನ್ನು  ಅಲ್ಲಿನ ರಕ್ಷಣಾ ಪಡೆ ಹೊಡೆದುರುಳಿಸಿದ ಘಟನೆ ನಡೆದಿತ್ತು, ಚೀನಾ ಬೇಹುಗಾರಿಕೆ ನಡೆಸುವ ಸಲುವಾಗಿ ಈ ನಿಗೂಢ ಬಲೂನ್‌ಗಳನ್ನು ಅಮೆರಿಕಾದ ಆಕಾಶದಲ್ಲಿ ಹಾರಿ ಬಿಟ್ಟಿದೆ ಎಂಬ ಆರೋಪ ಆಗ ಕೇಳಿ ಬಂದಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಚೀನಾ ಅದು ಸಂಶೋಧನೆಗಾಗಿ ಹಾರಿಬಿಟ್ಟ ಬಲೂನ್ ಎಂದು ತೇಪೆ ಹಾಕಿತ್ತು. ಈ ಘಟನೆ ಮಾಸುವ ಮೊದಲೇ ಈಗ ಜಪಾನ್‌ನ ಕಡಲ ತೀರದಲ್ಲಿ ನಿಗೂಢವಾದ ಬೃಹದಾಕಾರದ ಲೋಹದ ಚೆಂಡು ಸಮುದ್ರ ತೀರಕ್ಕೆ ತೇಲಿ ಬಂದಿದೆ.  

ಸುಮಾರು 1.5 ಮೀಟರ್ ಅಗಲದ ಈ ನಿಗೂಢ ಲೋಹದ ಚೆಂಡಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,  ಆನ್‌ಲೈನ್‌ನಲ್ಲಿ ತೀವ್ರವಾದ ಊಹಾಪೋಹ ಹಬ್ಬಲು ಕಾರಣವಾಗಿದೆ.  ಜಪಾನಿನ ಕರಾವಳಿ ಪ್ರದೇಶದಲ್ಲಿ ತೇಲಿ ಬಂದ ಈ ದೊಡ್ಡದಾದ ಕಬ್ಬಿಣದ ಚೆಂಡು ನೋಡಿದ ಜನ ಹಾಗೂ ಪೊಲೀಸರು ಇದೇನು ಎಂದು ಅಚ್ಚರಿಯಿಂದ ನೋಡುತ್ತಿದ್ದು, ಅಧಿಕಾರಿಗಳಿಗೂ ಇದು ಏನು ಎಂದು ಕಂಡುಕೊಳ್ಳಲಾಗಿಲ್ಲ.  ಆದರೆ ಇದು ಸ್ಫೋಟಗೊಳ್ಳುವ ವಸ್ತುವಂತು ಅಲ್ಲ ಎಂಬುದನ್ನು ಅವರು ಖಚಿತಪಡಿಸಿಕೊಂಡಿದ್ದಾರೆ. 

ಡ್ರ್ಯಾಗನ್ ರಾಷ್ಟ್ರದ ಮೇಲೆ ಮತ್ತೆ ಬ್ರಹ್ಮಾಸ್ತ್ರ: ಚೀನಾ ಲಿಂಕ್ ಹೊಂದಿರುವ 138 ಬೆಟ್ಟಿಂಗ್, 94 ಲೋನ್‌ ಆ್ಯಪ್‌ ನಿಷೇಧ..!

ಸುಮಾರು 1.5 ಮೀಟರ್ ವ್ಯಾಸವನ್ನು ಹೊಂದಿರುವ ಈ ಚೆಂಡು  ಜಪಾನ್‌ ಕರಾವಳಿಯ ಹಮಾಮಟ್ಸು (Hamamatsu) ನಗರದ ಎನ್ಶು ಕಡಲತೀರದಲ್ಲಿ (Enshu beach) ಕಾಣಿಸಿಕೊಂಡಿದೆ. ಇದರ ಒಳಗೆ ಏನಿದೆ ಎಂದು ತಿಳಿಯಲು ಅಲ್ಲಿನ ತಜ್ಞರು ಎಕ್ಸರೇ ನಡೆಸಿದಾಗ ಅದರ ಒಳಭಾಗ ಟೊಳ್ಳಾಗಿದೆ ಎಂಬುದು ಗೊತ್ತಾಗಿದೆ. 

ಆದರೆ ಇದೇನಾದರೂ ನೆರೆಯ ದೇಶಗಳಾದ ಉತ್ತರ ಕೊರಿಯಾ (North Korea) ಅಥವಾ ಚೀನಾದ (China) ಬೇಹುಗಾರಿಕೆಯ (espionage) ಸಾಧನವೇ ಎಂಬುದಕ್ಕೆ ಯಾವುದೇ ಸೂಚನೆಗಳು ಇದರಲಿಲ್ಲ.  ಇದರ ಮೇಲ್ಮೈಯಲ್ಲಿ ಎರಡು ಹಿಡಿಕೆಗಳಿದ್ದು, ಇದು ಬಹುಶಃ ಬೇರೆ ಯಾವುದಾದರೂ ವಸ್ತುವಿನ ಕೊಂಡಿಯಾಗಿರಬಹುದೇ ಎಂಬ ಶಂಕೆಯೂ ಮೂಡಿದೆ.  ಅಥವಾ ಇದು ಒಂದು ಮೂರಿಂಗ್  ಬೋಯ್ ಆಗಿರಬಹುದು ಎಂದು ಶಂಕಿಸಲಾಗಿದೆ. ಮೂರಿಂಗ್ ಬೋಯ್ ಎಂದರೆ  ತೇಲುವ ನೀರಿನಲ್ಲಿ ಹಡಗು ದೋಣಿಗಳು ಲಂಗರು ಹಾಕಲು ಅಥವ ಆಳವಾದ ನೀರಿನಲ್ಲಿ ದೋಣಿಗಳನ್ನು ಲಂಗರು ಹಾಕಿಸಲು ಬಳಸುವ ಸಾಧನ. 

ಕಳೆದ ವಾರ ಜಪಾನ್ ಕಡಲ ತೀರದಲ್ಲಿ ಮಹಿಳೆಯೊಬ್ಬರು ವಾಕ್ ಮಾಡುತ್ತಾ ವಿಶ್ರಾಂತಿ ಮಾಡಲು ಬಂದಾಗ ಈ ಕಬ್ಬಿಣದ ಚೆಂಡು ಅವರ ಕಣ್ಣಿಗೆ ಬಿದ್ದಿತ್ತು.  ತೀರದಿಂದ ಸ್ವಲ್ಪವೇ ದೂರದಲ್ಲಿ ನೀರಿನಲ್ಲಿ  ಕಿತ್ತಲೆ ಕಂದು ಬಣ್ಣದ ಅಲ್ಲಲ್ಲಿ ತುಕ್ಕು ಹಿಡಿದಿದ್ದ ಕಲೆಗಳನ್ನು ಹೊಂದಿದ್ದ ಈ ಚೆಂಡು ಕಾಣಿಸಿತ್ತು ಎಂದು ಜಪಾನ್‌ನ ಅಸಾಹಿ ಟಿವಿ ವರದಿ ಮಾಡಿತ್ತು. 

ಭಾರತದ ಗೂಢಚಾರಿಕೆ ನಡೆಸಲು 'ಸುಂದರಿ'ಯರ ಪಡೆಯನ್ನೇ ಸಿದ್ಧಪಡಿಸಿದೆ ಪಾಕಿಸ್ತಾನ!

ಈ ವಿಚಾರ ಅಲ್ಲಿನ ಪೊಲೀಸರಿಗೆ ಗೊತ್ತಾಗುತ್ತಿದ್ದಂತೆ ಸ್ಥಳವನ್ನು ಸುತ್ತುವರೆದ ಅವರು ಹೆಚ್ಚಿನ ತನಿಖೆಗಾಗಿ ಸ್ಫೋಟಕ ತಜ್ಞರನ್ನು ಕರೆಸಿ ಅದನ್ನು ತಪಾಸಣೆ ಮಾಡಿದರು. ಆದರೆ ವರದಿಗಳು ಹೇಳುವಂತೆ ಅಲ್ಲಿನ ಅಧಿಕಾರಿಗಳಿಗೆ ಗೋಳ ಯಾವುದು ಅಥವಾ ಅದು ಎಲ್ಲಿಂದ ಬಂದಿದೆ ಎಂದು ಇನ್ನೂ ತಿಳಿದಿಲ್ಲ. ಅಲ್ಲದೇ ಇದರ ಬಗ್ಗೆ ಹೆಚ್ಚಿನ ತನಿಖೆಗಾಗಿ ಇದರ ಫೋಟೋಗಳನ್ನು ಜಪಾನ್‌ನ ಕೋಸ್ಟ್‌ ಗಾರ್ಡ್‌ಗೆ (coast guard) ಕಳುಹಿಸಲಾಗಿದೆ. 

ಇನ್ನು ಈ ಚೆಂಡು ಪತ್ತೆಯಾದ ಕಡಲತೀರದಲ್ಲಿ ದಿನವೂ ವಾಕ್ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿ ಈ ಕಬ್ಬಿಣದ ಚೆಂಡು ಇದ್ದಕ್ಕಿದಂತೆ ಇಲ್ಲಿ ಹೇಗೆ ಪ್ರತ್ಯಕ್ಷವಾಯ್ತು ಎಂಬುದು ತಿಳಿಯುತ್ತಿಲ್ಲ.  ಒಂದು ತಿಂಗಳಿನಿಂದ ನಾನು ದಿನ ಅಲ್ಲಿ ವಾಕ್ ಮಾಡುತ್ತಿದೆ. ನಾನು ಅದನ್ನು ತಳ್ಳಲು ಯತ್ನಿಸಿದೆ ಆದರೆ ಅದು ಮಸುಕಾಡಲಿಲ್ಲ ಎಂದು ಅವರು ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಇದು ಭಾರಿ ಊಹಾಪೋಹಾಕ್ಕೆ ಕಾರಣವಾಗಿದೆ. ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ಚೀನಾ ಪತ್ತೇದಾರಿ ಬಲೂನ್‌ಗಳನ್ನು ತನ್ನ ಭೂಪ್ರದೇಶದಲ್ಲಿ ಬಿಟ್ಟಿರುವ ಬಗ್ಗೆ ಚೀನಾ ಹಲವು ಬಾರಿ ಆರೋಪ ಮಾಡಿದೆ. 

 

Latest Videos
Follow Us:
Download App:
  • android
  • ios