Asianet Suvarna News Asianet Suvarna News

ಮಸೀದಿಯ ಹೊರಗಡೆ ಪ್ರಾರ್ಥನೆಗೆ ನಿಷೇಧ, ಕಾನೂನು ತರಲು ಸಿದ್ಧತೆ ನಡೆಸಿದ ಸರ್ಕಾರ!

ಇಟಲಿಯ ಸಂಸತ್‌ ಸಮಿತಿಯಲ್ಲಿ ಕರಡು ಮಸೂದೆಯನ್ನು ಚರ್ಚಿಸಲು ವಿರೋಧ ಪಕ್ಷದ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗೇನಾದರೂ ಈ ಮಸೂದೆ ಅಂಗೀಕಾರವಾದಲ್ಲಿ ಅದು ಧಾರ್ಮಿಕ ಸ್ವಾತಂತ್ರ್ಯವನ್ನು ನಿರ್ಬಂಧಿಸುತ್ತದೆ ಎಂದು ಹೇಳಿದೆ.

Italy right wing party and PM Giorgia Meloni draft law to ban Muslim prayer spaces outside of mosques san
Author
First Published Jun 15, 2023, 3:21 PM IST

ರೋಮ್‌ (ಜೂ.15): ಇಟಲಿ ದೇಶದಲ್ಲಿ ಬಲಪಂಥೀಯ ಸರ್ಕಾರ ಅಧಿಕಾರ ಹಿಡಿದ ಬೆನ್ನಲ್ಲಿಯೇ ದೇಶದಲ್ಲಿ ಗುರುತರ ಬದಲಾವಣೆಗಳು ಆಗುತ್ತಿವೆ. ಇತ್ತೀಚೆಗೆ ಇಟಲಿಯಲ್ಲಿ ಅಧಿಕೃತ ಸಂಭಾಷಣೆಯ ವೇಳೆ ಇಂಗ್ಲೀಷ್‌ ಭಾಷೆಯನ್ನು ಪ್ರಮುಖವಾಗಿ ಬಳಸುವಂತಿಲ್ಲ. ಇಟಾಲಿಯನ್‌ಗೆ ಆದ್ಯತೆ ನೀಡಬೇಕು ಎಂದು ಸರ್ಕಾರ ಕಾನೂನು ತಂದ ಬೆನ್ನಲ್ಲಿಯೇ ಮತ್ತೊಂದು ದೊಡ್ಡ ಕಾನೂನಿಗೆ ದೇಶ ಸಜ್ಜಾಗಿದೆ. ಬಲಪಂಥೀಯ ಧೋರಣೆಯ ಪಕ್ಷಗಳು ಸೇರಿ ರಚಿಸಿರುವ ಇಟಲಿಯ ಸರ್ಕಾರವನ್ನು ಪ್ರಧಾನಿ ಜಾರ್ಜಿಯಾ ಮೆಲೋನಿ ಮುನ್ನಡೆಸುತ್ತಿದ್ದು, ಮಸೀದಿಗಳ ಹೊರಗೆ ಮುಸ್ಲಿಮರು ಯಾವುದೇ ಕಾರಣಕ್ಕೂ ಪ್ರಾರ್ಥನೆಗಳು ಮಾಡುವಂತಿಲ್ಲ. ಇದಕ್ಕೆ ನಿಷೇಧ ವಿಧಿಸಿ ಕರಡು ಕಾನೂನನ್ನು ಸಿದ್ಧಪಡಿಸುತ್ತಿದೆ. ಈ ಕುರಿತಂತೆ ಇಟಲಿಯ ಪತ್ರಿಕೆಗಳು ವರದಿ ಮಾಡಿದ್ದು, ದೇಶದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಇಟಲಿಯ ವಿರೋಧ ಪಕ್ಷಗಳು ಇದನ್ನು ವಿರೋಧಿಸುತ್ತಿದ್ದರೆ, ಸರ್ಕಾರ ಮಾತ್ರ ಇಂಥ ಕಾನೂನು ತಂದೇ ತರುವುದಾಗಿ ಹೇಳಿದೆ. ಪ್ರಸ್ತುತ ಸಂಸತ್ತಿನ ಸಮಿತಿಯಲ್ಲಿ ಚರ್ಚೆಯಲ್ಲಿರುವ ಬ್ರದರ್ಸ್ ಆಫ್ ಇಟಲಿ (ಎಫ್‌ಡಿಐ) ಪಕ್ಷವು ಪ್ರಸ್ತಾಪಿಸಿದ ಮಸೂದೆಯು ಗ್ಯಾರೇಜುಗಳು ಮತ್ತು ಕೈಗಾರಿಕಾ ಗೋದಾಮುಗಳನ್ನು ಮಸೀದಿಗಳಾಗಿ ಬಳಸುವುದನ್ನು ನಿಷೇಧಿಸುವ ಗುರಿಯನ್ನು ಹೊಂದಿದೆ ಎಂದು ಡೈಲಿ 24 ಓರ್‌ ಕಳೆದ ಶನಿವಾರ ವರದಿ ಮಾಡಿದೆ.

ಇಟಾಲಿಯನ್ ರಾಜ್ಯದೊಂದಿಗೆ ಒಪ್ಪಂದಕ್ಕೆ ಸಹಿ ಹಾಕದ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಸ್ಥೆಗಳ ಆಸ್ತಿಯನ್ನು ಪ್ರಾರ್ಥನಾ ಸ್ಥಳವಾಗಿ ಬಳಸಲು ಈ ಮಸೂದೆಯು ಅನುಮತಿ ನೀಡೋದಿಲ್ಲ ಎಂದು ಪತ್ರಿಕೆ ವರದಿ ಮಾಡಿದೆ. ದೇಶದ ಮುಸ್ಲಿಂ ಸಮುದಾಯವು ರಾಜ್ಯದೊಂದಿಗೆ ಅಂತಹ ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ. ದಿನಪತ್ರಿಕೆಯ ಪ್ರಕಾರ, ಮಸೂದೆಯನ್ನು ಸಂಸತ್ತಿನ ಸಮಿತಿಯಲ್ಲಿ ವಿರೋಧ ಪಕ್ಷಗಳ ಶಾಸಕರು ಬಲವಾಗಿ ವಿರೋಧಿಸಿದ್ದಾರೆ. ಇದನ್ನು ಅಂಗೀಕರಿಸಿದರೆ ಅದು ಧಾರ್ಮಿಕ ಸ್ವಾತಂತ್ರ್ಯವನ್ನು ನಿರ್ಬಂಧಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೂಲಭೂತವಾದಿಗಳ ಎದೆ ನಡುಗಿಸಿದ ಇಟಲಿಯ 'ಉಮಾ ಭಾರತಿ' ಜಾರ್ಜಿಯಾ ಮೆಲೋನಿ!

ರೋಮ್‌ನ ಮ್ಯಾಗ್ಲಿಯಾನಾ ಮಸೀದಿಯ ಇಮಾಮ್ ಆಗಿರುವ ಸಾಮಿ ಸೇಲಂ, "ಇದು ಮುಸ್ಲಿಮರ ವಿರುದ್ಧ ಸ್ಪಷ್ಟವಾಗಿ ತಾರತಮ್ಯ ಮಾಡುವ ಮಸೂದೆಯಾಗಿದೆ ಮತ್ತು ಇಟಲಿಯಲ್ಲಿ ವಾಸಿಸುವ ಎಲ್ಲಾ ನಾಗರಿಕರನ್ನು ರಕ್ಷಿಸುವ ಇಟಾಲಿಯನ್ ಸಂವಿಧಾನವನ್ನು ಈ ಮಸೂದೆ ಗೌರವಿಸುವುದಿಲ್ಲ" ಎಂದು ಹೇಳಿದರು. ಫ್ಲಾರೆನ್ಸ್‌ನ ಉತ್ತರ ಪ್ರಾಂತ್ಯದ ಮುಸ್ಲಿಂ ಸಮುದಾಯದ ಇನ್ನೊಬ್ಬ ಇಮಾಮ್ ಇಝೆದ್ದೀನ್ ಎಲ್ಜಿರ್, ಕರಡು ಕಾನೂನಿನ ಕಾನೂನುಬದ್ಧತೆಯ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಅಧಿಕೃತ ಸಂಭಾಷಣೆಯಲ್ಲಿ ಇಂಗ್ಲೀಷ್‌ ಬಳಸಿದ್ರೆ ಇಟಲಿಯಲ್ಲಿ 89 ಲಕ್ಷ ದಂಡ

Latest Videos
Follow Us:
Download App:
  • android
  • ios