ಅಧಿಕೃತ ಸಂಭಾಷಣೆಯಲ್ಲಿ ಇಂಗ್ಲೀಷ್ ಬಳಸಿದ್ರೆ ಇಟಲಿಯಲ್ಲಿ 89 ಲಕ್ಷ ದಂಡ
ದೇಶದಲ್ಲಿ ಅಧಿಕೃತ ಸಂವಹನಗಳಲ್ಲಿ ಇಟಾಲಿಯನ್ ಹೊರತಾಗಿ ಇಂಗ್ಲೀಷ್ ಅಥವಾ ಬೇರಾವುದೇ ವಿದೇಶಿ ಭಾಷೆ ಅಥವಾ ಪದಗಳನ್ನು ಬಳಸುವುದನ್ನು ನಿಷೇಧಿಸಲಾಗಿದ್ದು, ತಪ್ಪಿದ ಇಟಲಿಯನ್ನರಿಗೆ ಬರೋಬ್ಬರಿ 89 ಲಕ್ಷ ರು. ಗಳ ದಂಡ ವಿಧಿಸುವ ನೂತನ ಕಾನೂನನ್ನು ಇಟಲಿ ಸರ್ಕಾರ ಜಾರಿ ಮಾಡಿದೆ.
ರೋಮ್: ದೇಶದಲ್ಲಿ ಅಧಿಕೃತ ಸಂವಹನಗಳಲ್ಲಿ ಇಟಾಲಿಯನ್ ಹೊರತಾಗಿ ಇಂಗ್ಲೀಷ್ ಅಥವಾ ಬೇರಾವುದೇ ವಿದೇಶಿ ಭಾಷೆ ಅಥವಾ ಪದಗಳನ್ನು ಬಳಸುವುದನ್ನು ನಿಷೇಧಿಸಲಾಗಿದ್ದು, ತಪ್ಪಿದ ಇಟಲಿಯನ್ನರಿಗೆ ಬರೋಬ್ಬರಿ 89 ಲಕ್ಷ ರು. ಗಳ ದಂಡ ವಿಧಿಸುವ ನೂತನ ಕಾನೂನನ್ನು ಇಟಲಿ ಸರ್ಕಾರ ಜಾರಿ ಮಾಡಿದೆ. ಪ್ರಧಾನಿ ಜಾರ್ಜಿಯಾ ಮೆಲೊನಿ ನೇತೃತ್ವದ ಬ್ರದರ್ಸ್ ಆಫ್ ಇಟಲಿ ಪಕ್ಷದ ಸರ್ಕಾರ ಈ ನೂತನ ಕ್ರಮ ಕೈಗೊಂಡಿದೆ. ಅಲ್ಲದೇ ವಿದೇಶಿ ಭಾಷೆಗಳ ಬಳಕೆಯು ಇಟಾಲಿಯನ್ ಭಾಷೆಯ ಮೌಲ್ಯವನ್ನು ಕಡಿಮೆ ಮಾಡುತ್ತದೆ. ಅತಿಯಾದ ಇಂಗ್ಲೀಷ್ ಸಮಾಜವನ್ನು ‘ಆಂಗ್ಲೋಮಿಯಾ’ಗೊಳಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿ ಈ ಕರಡು ಮಸೂದೆ ರಚಿಸಲಾಗಿದೆ ಎನ್ನಲಾಗಿದೆ.
ಪ್ರಾದೇಶಿಕ ಭಾಷೆ ಹೆಸರಲ್ಲಿ ರಾಜಕೀಯದಾಟ: ಪ್ರಧಾನಿ ಮೋದಿ
ದೇಶದಲ್ಲಿ ಪ್ರಾದೇಶಿಕ ಭಾಷೆಗಳ ಹೆಸರಿನಲ್ಲಿ ನಡೆಯುವ ರಾಜಕೀಯಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಕಿಡಿಕಾರಿದ್ದಾರೆ. ಕಳೆದ 70 ವರ್ಷಗಳಲ್ಲಿ ಕೆಲ ರಾಜಕೀಯ ಪಕ್ಷಗಳು ಭಾಷೆಗಳ ಹೆಸರಿನಲ್ಲಿ ರಾಜಕೀಯದಾಟ ಆಡಿಕೊಂಡು ಬಂದಿವೆ. ರಾಜಕೀಯ ಸ್ವಾರ್ಥ ಮತ್ತು ವೋಟ್ ಬ್ಯಾಂಕ್‌ಗಾಗಿ ಪ್ರಾದೇಶಿಕ ಭಾಷೆಗಳನ್ನು ಬಳಸಿಕೊಂಡವೇ ಹೊರತು ಅವುಗಳಿಗೆ ಯಾವುದೇ ಪ್ರೋತ್ಸಾಹ ನೀಡಲಿಲ್ಲ. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ರಾಮೀಣ, ಬಡ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಕನ್ನಡ ಸೇರಿ ವಿವಿಧ ಪ್ರಾದೇಶಿಕ ಭಾಷೆಗಳಲ್ಲೂ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣ ಪಡೆಯಲು ಅವಕಾಶ ಒದಗಿಸಿದೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಶನಿವಾರ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಧುಸೂದನ ಸಾಯಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರ ಉದ್ಘಾಟಿಸಿದ ಬಳಿಕ ಪ್ರೇಮಾಮೃತಂ ಸಭಾಂಗಣದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಕನ್ನಡ ಒಂದು ಸಮೃದ್ಧ ಹಾಗೂ ದೇಶದ ಗೌರವ ಹೆಚ್ಚಿಸುವ ಭಾಷೆಯಾಗಿದೆ. ಈ ಹಿಂದಿನ ಸರ್ಕಾರಗಳು ಎಂಜಿನಿಯರಿಂಗ್, ಮೆಡಿಕಲ್ ಮತ್ತು ತಾಂತ್ರಿಕ ಶಿಕ್ಷಣವನ್ನು ಕನ್ನಡ ಸೇರಿ ಯಾವುದೇ ಪ್ರಾದೇಶಿಕ ಭಾಷೆಗಳಲ್ಲಿ ನೀಡಲು ಕ್ರಮ ಕೈಗೊಂಡಿರಲಿಲ್ಲ.
ಆಂಗ್ಲ ಭಾಷೆಯಲ್ಲಿರುವ ನಾಮಫಲಕ ತೆರವುಗೊಳಿಸಲು ಆಗ್ರಹ
ಕೆಲ ರಾಜಕೀಯ ಪಕ್ಷಗಳು ಭಾಷೆಗಳ ಹೆಸರಲ್ಲಿ ಸ್ವಹಿತಾಸಕ್ತಿ ಕಾಯ್ದುಕೊಂಡು ಬಂದಿವೆ. ಇಂಥವರಿಗೆ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದೇ ಮುಖ್ಯವಾಯಿತೇ ಹೊರತು ಭಾಷೆಗಳ ಅಭಿವೃದ್ಧಿಗೆ ಯಾವುದೇ ಬೆಂಬಲವಾಗಲಿ, ಪ್ರೋತ್ಸಾಹವಾಗಲಿ ಅವರಿಂದ ಸಿಗಲಿಲ್ಲ. ಅಲ್ಲದೆ ಅವರಿಗೆ ಗ್ರಾಮೀಣ, ಬಡ ಮತ್ತು ಹಿಂದುಳಿದ ಕುಟುಂಬಗಳ ಮಕ್ಕಳು ವೈದ್ಯರು, ಎಂಜಿನಿಯರ್‌ಗಳು ಆಗುವುದು ಇಷ್ಟವೂ ಇರಲಿಲ್ಲ ಎಂದು ದೂರಿದರು. ಆದರೆ ಗ್ರಾಮೀಣ ಪ್ರದೇಶದ ಯುವಕ, ಯುವತಿಯರು ಎದುರಿಸುತ್ತಿರುವ ಸವಾಲುಗಳನ್ನು ನಮ್ಮ ಸರ್ಕಾರ ಅರ್ಥ ಮಾಡಿಕೊಂಡಿದ್ದು, ಕನ್ನಡ ಸೇರಿ ಎಲ್ಲ ಪ್ರಾದೇಶಿಕ ಭಾಷೆಗಳಲ್ಲೂ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಟ್ಟಿದೆ ಎಂದು ಮೋದಿ ಹೇಳಿದರು.
PM Modi In Karnataka: ದೇಶದ ಸಮೃದ್ಧಿ, ಗೌರವ ಹೆಚ್ಚಿಸುವ ಭಾಷೆ ಕನ್ನಡ ಎಂದ ಪ್ರಧಾನಿ ಮೋದಿ!