ಈ ರೈಲು ಸುರಂಗ ಪ್ರವೇಶಿಸಿದ ಬೆನ್ನಲ್ಲೇ ಮಾಯ, 113 ವರ್ಷವಾದರೂ ಪತ್ತೆಯಾಗಿಲ್ಲ ಘೋಸ್ಟ್ ಟ್ರೈನ್!

ರೈಲು 106 ಪ್ರಯಾಣಿಕರನ್ನು ಹೊತ್ತು ಸಂಚಾರ ಆರಂಭಿಸಿತ್ತು. ಸುರಂಗ ಮಾರ್ಗ ತಲುಪಿದ ಬಳಿಕ ರೈಲಿನ ಪತ್ತೆ ಇಲ್ಲ. ಈ ರೈಲು ಏನಾಯಿತು? ಇದರಲ್ಲಿದ್ದ ಪ್ರಯಾಣಿಕರು, ಸಿಬ್ಬಂದಿಗಳು ಏನಾದರು? 

Italy Ghost rail story facts did train disappear after entering tunnel in 1911 ckm

ರೋಮ್(ನ.21) ನಿಗೂಢ ರಹಸ್ಯಗಳನ್ನು ತಿಳಿದುಕೊಳ್ಳಲು ಎಲ್ಲರೂ ಪ್ರಯತ್ನಿಸುತ್ತಾರೆ. ಅದರಲ್ಲೂ ಪ್ರಮುಖವಾಗಿ ಭೂತ, ಪ್ರೇತ, ವಿಶಾಚಿ
ರೀತಿಯ ಕತೆಗಳು ಸಾವಿರಾರಿದೆ. ಈ ಕತೆಗಳು ತಲೆ ತಲೆಮಾರುಗಳಿಂದ ಸಾಗುತ್ತಿದೆ. ಆದರೆ ಮೊದಲಿನ ಕತೆಗೂ ಈಗಿನ ಕತೆಗೂ ಹಲವು ವ್ಯತ್ಯಾಸಗಳಾಗಿರುತ್ತದೆ. ಹೀಗೆ ಇಟಲಿಯ ರೈಲಿನ ಸುತ್ತ ಒಂದು ನಿಘೂಡ ಕತೆ ಇದೆ. ರೋಮ್ - ಝೆನ್ನಿತ್ ನಡುವಿನ ರೈಲು ಸುರಂಗ ಮಾರ್ಗ ಪ್ರವೇಶಿಸಿದ ಬೆನ್ನಲ್ಲೇ ನಾಪತ್ತೆಯಾದ ಕತೆ ಈಗಲೂ ನಿಗೂಢಗಳ ಆಗರವಾಗಿ ಉಳಿದುಕೊಂಡಿದೆ. ಉತ್ತರ ಸಿಗದೆ, ಖಚಿತತೆ ಇಲ್ಲದ, ಈ ಘೋಸ್ಟ್ ರೈಲಿನ ಕತೆ ಇಲ್ಲಿದೆ.

1911ರ ಜೂನ್ 14ರಂದು ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಪ್ರಚಾರದ ಭಾಗವಾಗಿ ಈ ರೈಲು ಸಂಚಾರ ಆಯೋಜಿಸಲಾಗಿತ್ತು. 106 ಪ್ರಯಾಣಕರು ಹಾಗೂ 6 ಸಿಬ್ಬಂದಿಗಳು ಪ್ರಯಾಣ ಆರಂಭಿಸಿದ್ದರು. ಇಟಲಿಯ ಝೆನ್ನಿತ್ ಖಾಸಗಿ ಕಂಪನಿ ಈ ರೈಲು ನಿರ್ಮಾಣ ಮಾಡಿತ್ತು. ಹೀಗಾಗಿ ಈ ರೈಲನ್ನು ಪ್ರಚಾರದ ಭಾಗವಾಗಿ ಒಂದಷ್ಟು ಪ್ರಯಾಣಿಕರನ್ನು ಉಚಿತವಾಗಿ ಕರೆದೊಯ್ಯಲು ನಿರ್ಧರಿಸಿದೆ. ಇದರಿಂದ ಪ್ರಯಾಣಿಕರು ಇಟಲಿಯ ಸುಂದರ ತಾಣಗಳನ್ನು ರೈಲಿನ ಮೂಲಕ ಸವಿಯಲ್ಲು ಆಗಮಿಸಿದ್ದರು.

ಬೆಂಗಳೂರು ರೈಲು ನಿಲ್ದಾಣಗಳಲ್ಲಿ ಟಿಕೆಟ್ ಖರೀದಿ ಇನ್ನು ಸುಲಭ, ನೀವಿದ್ದಲ್ಲೇ ಸಿಗುತ್ತೆ ಟೆಕೆಟ್!

ರೈಲಿನಲ್ಲಿ ಆಹಾರದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಪ್ರಯಾಣಿಕರನ್ನು ಹೊತ್ತ ರೈಲು ರೋಮ್ ನಗರ ಸೇರಿಲ್ಲ ಅನ್ನೋದು ವರದಿ. ಆದರೆ ಈ ವರದಿಗೆ ಸ್ಪಷ್ಟ ಆಧಾರಗಳು ಇಲ್ಲ. ಈ ನಾಪತ್ತೆಯಾದ ರೈಲಿನ ಕುರಿತು ಹಲವು ಕತೆಗಳಿವೆ. ರೈಲು ನಗರದಿಂದ ಹೊರಟು ಹಳ್ಳಿ, ಕಾಡಿನ ಮೂಲಕ ಸಾಗಿತ್ತು. ಸುರಂಗ ಮಾರ್ಗದ ಮೂಲಕ ಸಾಗಿದ ರೈಲು ಬಳಿಕ ಪತ್ತೆಯಾಗಿಲ್ಲ. ಅತ್ತ ರೋಮ್ ನಗರ ಸೇರಿಲ್ಲ ಅನ್ನೋದು ವಾದ. ನಾಪತ್ತೆಯಾದ ರೈಲಿನ ಹುಡುಕಾಟ ಮಾಡಲಾಗಿತ್ತ ಎಂದು ಹಲವರು ಹೇಳುತ್ತಾರೆ. ಇದಕ್ಕೆ ಸಂಬಂಧಿಸಿದ ಕೆಲ ವರದಿಗಳೂ ರೈಲು ನಾಪತ್ತೆಯಾಗಿ ಹುಡುಕಾಟ ನಡೆಸಲಾಗಿತ್ತು. ಆದರೆ ಸುಳಿವು ಪತ್ತೆಯಾಗಿರಲಿಲ್ಲ ಎಂದು ಉಲ್ಲೇಖಿಸಿದ್ದಾರೆ. 

ಈ ರೈಲು ನಿಜಕ್ಕೂ ನಾಪತ್ತೆಯಾಗಿತ್ತಾ ಅನ್ನೋ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲ. ಆದರೆ ಹಲವರ ಪ್ರಕಾರ ಇದು ಪಿಶಾಚಿ ಟ್ರೈನ್. ಈ ರೈಲಿನಲ್ಲಿ ತೆರಳಿದ ಯಾರೊಬ್ಬರು ಪತ್ತೆಯಾಗಿಲ್ಲ ಎಂದಿದ್ದಾರೆ. ಆದರೆ ರೈಲು ನಾಪತ್ತೆಯಾದ ಕೆಲ ವರ್ಷಗಳ ಬಳಿಕ ವೈದ್ಯರೊಬ್ಬರು 106 ರೈಲು ಪ್ರಯಾಣಿಕರನ್ನು ಮೆಕ್ಸಿಕೋ ನಗರದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಅನ್ನೋ ಮಾಹಿತಿ ನೀಡಿದ್ದರು. ಇಟಲಿಯ ನಾಪತ್ತೆಯಾದ ಸ್ಥಳಿಂದ ಮೆಕ್ಸಿಕೋ ನಗರ ಬರೋಬ್ಬರಿ 10 ಸಾವಿರ ಕಿಲೋಮೀಟರ್‌ಗೂ ಅಧಿಕ. ಇನ್ನು ಇಟಲಿ  ಹಾಗೂ ಮೆಕ್ಸಿಕೋ ಎರಡು ದೇಶಗಳ ನಡುವೆ ಅಂಟ್ಲಾಟಿಕಾ ಮಹಾಸಾಗರವಿದೆ. ಹೀಗಾಗಿ ಈ ಮಾತು ಸುಳ್ಳು ಅನ್ನೋದು ಸ್ಪಷ್ಟ. ಇನ್ನು ಕೆಲ ವರದಿಗಳ ಪ್ರಕಾರ ರೈಲು ಅಪಘಾಾತಕ್ಕೀಡಾಗುತ್ತಿದ್ದಂತೆ ಹಲವರು ರೈಲಿನಿಂದ ಜಿಗಿದಿದ್ದಾರೆ. ಈ ಪೈಕಿ ಇಬ್ಬರು ಮಾತ್ರ ಬದುಕುಳಿದಿದ್ದರು ಎಂದಿದ್ದಾರೆ. ಬದುಕಿಳಿದವರು ಎಲ್ಲಿದ್ದಾರೆ ಅನ್ನೋ ಪ್ರಶ್ನೆಗೂ ಉತ್ತರವಿಲ್ಲ.

ಇಟಲಿಯ ಘೋಸ್ಟ್ ರೈಲು ಎಂದೇ ಕುಖ್ಯಾತಿ ಪಡೆದಿರುವ ಈ ನಾಪತ್ತೆಯಾದ ರೈಲು ಘಟನೆ ನಿಜಕ್ಕೂ ನಡೆದಿತ್ತಾ ಅನ್ನೋದಕ್ಕೂ ಸ್ಪಷ್ಟ ದಾಖಲೆ ಇಲ್ಲ. ಇಟಲಿ ರೈಲು ವಿಭಾಗದಲ್ಲೂ ಈ ಕುರಿತು ದಾಖಲೆ ಇಲ್ಲ. ಕಾರಣ ಅದು ಇಟಲಿ ರೈಲು ಇತಿಹಾಸದ ಆರಂಭಿಕ ದಿನಗಳು. ಹೀಗಾಗಿ ಯಾವುದರಲ್ಲೂ ಸ್ಪಷ್ಟತೆ ಇಲ್ಲ. ಈಗಲೂ ಈ ರೈಲು, ಪ್ರಯಾಣಿಕರು ಹಾಗೂ ಅವಶೇಷ ಪತ್ತೆ ಇಲ್ಲ ಅನ್ನೋ ವರದಿಗಳೇ ಹೆಚ್ಚು ಚಾಲ್ತಿಯಲ್ಲಿದೆ. ಯಾವ ವರದಿಗೂ ದಾಖಲೆ ಇಲ್ಲ. 

ಕಾಶ್ಮೀರ ಪ್ರವಾಸಕ್ಕೆ ಬೇಕಿಲ್ಲ ಹೆಚ್ಚು ಸಮಯ, ಶೀಘ್ರದಲ್ಲೇ ದೆಹಲಿ-ಕಾಶ್ಮೀರ ವಂದೇ ಭಾರತ್ ರೈಲು!
 

Latest Videos
Follow Us:
Download App:
  • android
  • ios