ನವದೆಹಲಿ(ನ.18): ವಿಶ್ವದಾದ್ಯಂತ 200ಕ್ಕೂ ಹೆಚ್ಚು ದೇಶಗಳ 5.54 ಲಕ್ಷ ಜನರಿಗೆ ವ್ಯಾಪಿಸಿ, 13 ಲಕ್ಷ ಜನರನ್ನು ಬಲಿ ಪಡೆದ ಕೊರೋನಾ ಸೋಂಕಿನ ಮೊದಲ ಪ್ರಕರಣ ಬೆಳಕಿಗೆ ಬಂದು ಮಂಗಳವಾರಕ್ಕೆ 1 ವರ್ಷ ತುಂಬಿತು. ಚೀನಾದ ಹುಬೇ ಪ್ರಾಂತ್ಯದ 55 ವರ್ಷದ ವ್ಯಕ್ತಿಯೊಬ್ಬರಲ್ಲಿ 2019ರ ನ.17ರಂದು ನಾವೆಲ್‌ ಕೊರೋನಾ ವೈರಸ್‌ ಪತ್ತೆಯಾಗಿರುವ ಬಗ್ಗೆ ಚೀನಾ ಆರೋಗ್ಯ ಇಲಾಖೆಯ ಆಂತರಿಕವಾಗಿ ಹಂಚಿಕೊಂಡ ವರದಿಯಲ್ಲಿ ಪ್ರಸ್ತಾಪ ಮಾಡಿತ್ತು. ಈ ಕುರಿತು ಚೀನಾ ಸರ್ಕಾರ ಅಧಿಕೃತವಾಗಿ ಎಲ್ಲೂ ಮಾಹಿತಿ ನೀಡಿಲ್ಲವಾದರೂ, ‘ದ ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌’ ಸರ್ಕಾರದ ದಾಖಲೆಗಳನ್ನು ಆಧರಿಸಿ ಕೆಲ ತಿಂಗಳ ಹಿಂದೆ ಇಂಥದ್ದೊಂದು ಮಾಹಿತಿಯನ್ನು ಹೊರಗೆಡವಿತ್ತು.

ಕೊರೋನಾ ಅಬ್ಬರ ತಡೆಗೆ ದಿಲ್ಲಿ ಮಾರುಕಟ್ಟೆಬಂದ್‌?: ವಿವಾಹಕ್ಕೂ ಜನರ ಮಿತಿ

ಚೀನಾ ಸರ್ಕಾರದ ಆಂತರಿಕ ದಾಖಲೆಗಳ ಅನ್ವಯ ಮೊದಲ ಕೇಸು ಪತ್ತೆಯಾದ ನ.17ರಿಂದ ಡಿ.15ರವರೆಗಿನ ಅವಧಿಯಲ್ಲಿ ಒಟ್ಟಾರೆ 27 ಕೇಸುಗಳು ಮಾತ್ರವೇ ದಾಖಲಾಗಿದ್ದವು. ಅಲ್ಲಿಯವರೆಗೂ ಒಂದಕಿಯಲ್ಲಿ ಮಾತ್ರವೇ ಹೊಸ ಕೇಸು ದಾಖಲಾಗುತ್ತಿದ್ದವು. ಡಿ.17ರಂದು ಮೊದಲ ಬಾರಿಗೆ ಎರಡಂಕಿಯಲ್ಲಿ ಹೊಸ ಕೇಸು ದಾಖಲಾಗಿದ್ದವು. ಪರಿಣಾಮ ಡಿ.20ಕ್ಕೆ ಒಟ್ಟು ಕೇಸುಗಳ ಸಂಖ್ಯೆ 60ಕ್ಕೆ ತಲುಪಿತ್ತು. ಇನ್ನು ಡಿಸೆಂಬರ್‌ ಅಂತ್ಯದ ವೇಳೆಗೆ ಚೀನಾದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 266ಕ್ಕೆ ತಲುಪಿತ್ತು.

ನಂತರದಲ್ಲಿ ದಿನೇ ದಿನೇ ಭಾರೀ ಪ್ರಮಾಣದಲ್ಲಿ ಹೊಸ ಕೇಸು ಏರಿಕೆಯಾಗುತ್ತಲೇ ಹೋಗಿತ್ತು. ಆದರೆ ಈ ಕುರಿತು ಚೀನಾ ಸರ್ಕಾರ ವಿಶ್ವ ಆರೋಗ್ಯ ಸಂಸ್ಥೆಯ ಗಮನಕ್ಕೆ ತರುವಲ್ಲಿ ವಿಳಂಬ ಮಾಡಿದ ಕಾರಣ, ಸೋಂಕು ರಹಸ್ಯವಾಗಿ ಇಡೀ ವಿಶ್ವಕ್ಕೆ ಹಬ್ಬಿಕೊಂಡಿತ್ತು.

ಜಯಲಲಿತಾ ಮಾರ್ಗ ಅನುಸರಿಸುವತ್ತ ಜೆಡಿಎಸ್ : ಏನದು ಹೊಸ ರಾಜಕೀಯ ತಂತ್ರ?

ವಿಶೇಷವೆಂದರೆ ನಂತರದ ವಿಶ್ವದ ಬಹುತೇಕ ದೇಶಗಳಲ್ಲಿ ಸೋಂಕು ಭಾರೀ ಪ್ರಮಾಣದಲ್ಲಿ ವ್ಯಾಪಿಸಿದರೂ, ಜನಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಚೀನಾದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಕೇವಲ 87000ಕ್ಕೆ ಸೀಮಿತಗೊಂಡಿತ್ತು. ಇನ್ನು ಸಾವಿನ ಸಂಖ್ಯೆ 4635ಕ್ಕೆ ಸೀಮಿತಗೊಂಡಿತ್ತು.