Asianet Suvarna News Asianet Suvarna News

ಇಸ್ತಾಂಬುಲ್ ನೈಟ್‌ಕ್ಲಬ್ ದುರಂತ, ಬೆಂಕಿ ಅವಘಡದಲ್ಲಿ 29 ಮಂದಿ ದಾರುಣ ಸಾವು!

ಇಸ್ತಾಂಬುಲ್ ನೈಟ್ ಕ್ಲಬ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 29 ಮಂದಿ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. 16 ಅಂತಸ್ತಿನ ಕಟ್ಟಡ ನೆಲಮಹಡಿಯಲ್ಲಿದ್ದ ನೈಟ್‌ಕ್ಲಬ್‌ನಲ್ಲಿ ಈ ದುರಂತ ಸಂಭವಿಸಿದೆ.
 

Istanbul nightclub tragedy several dead many injured after massive fire ckm
Author
First Published Apr 2, 2024, 8:51 PM IST

ಇಸ್ತಾಂಬುಲ್(ಏ.02) ನೈಟ್‌ಕ್ಲಬ್‌ನಲ್ಲಿನ ಬೆಂಕಿ ದುರಂತಕ್ಕೆ 29 ಮಂದಿ ಮೃತಪಟ್ಟ ಘಟನೆ ಟರ್ಕಿಯ ಇಸ್ತಾಂಬುಲ್‌ನಲ್ಲಿ ನಡೆದಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಇದೇ ವೇಳೆ ರಕ್ಷಣಾ ತಂಡ ನೈಟ್‌ಕ್ಲಬ್‌ನಲ್ಲಿ ಬೆಂಕಿಯ ಕೆನ್ನಾಲಿಗೆ ಸಿಲುಕಿದ ಹಲವರನ್ನು ರಕ್ಷಿಸಿ ಆಸ್ಪತ್ರೆ ದಾಖಲಿಸಿದ್ದಾರೆ. 29 ಮಂದಿ ಸಂಪೂರ್ಣ ಸುಟ್ಟು ಕರಕಲಾಗಿದ್ದಾರೆ. ಇನ್ನು 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯ ಆಸ್ಪತ್ರೆಯಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಹಲವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.

ಅಗ್ನಿ ಅವಘಡ ಕುರಿತು ಮಾಹಿತಿ ನೀಡಿರುವ ಸಚಿವ ಯಲಿಮಾಜ್ ಟಂಕ್, ಘಟನೆಗೆ ವಿಷಾಧ ವ್ಯಕ್ತಪಡಿಸಿದ್ದಾರೆ. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಗಾಯದ ಪ್ರಮಾಣ ಹೆಚ್ಚಿರುವ ಕಾರಣ ಆತಂಕವೂ ಹೆಚ್ಚಾಗಿದೆ ಎಂದಿದ್ದಾರೆ. ಇಸ್ತಾಂಬುಲ್‌ನ ಖ್ಯಾತ್ ನೈಟ್ ಕ್ಲಬ್ ಇದಾಗಿದೆ. ಆದರೆ ಈ  ಮಸ್ಕ್ಯೂರೇಡ್ ನೈಟ್‌ಕ್ಲಬ್‌ನಲ್ಲಿ ನವೀಕರಣ ಕೆಲಸ ನಡೆಯುತ್ತಿತ್ತು. ಹೀಗಾಗಿ ಕಾರ್ಮಿಕರು ಮಾತ್ರ ಒಳಗಿದ್ದರು. ನವೀಕರಣ ಕಾಮಾಗಾರಿ ನಡೆಯುತ್ತಿರುವ ಕಾರಣ ನೈಟ್‌ಕ್ಲಬ್‌ನ್ನು ಕಳೆದ ಕೆಲ ದಿನಗಳಿಂದ ಮುಚ್ಚಲಾಗಿದೆ ಎಂದು ಯಲಿಮಾಜ್ ಟಂಕ್ ಹೇಳಿದ್ದಾರೆ. ನೈಟ್ ಕ್ಲಬ್ ಮ್ಯಾನೇಜರ್, ನವೀಕರಣ ಗುತ್ತಿಗೆ ಪಡೆದ ಮ್ಯಾನೇಜರ್ , ಸೂಪರ್‌ವೈಸರ್ ಸೇರಿದಂತೆ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ದತ್ತಪೀಠ ಪರಿಸರದಲ್ಲಿ ಭಾರೀ ಬೆಂಕಿ; ಕುರುಚಲು , ಹಲ್ಲುಗಾವಲು ಸುಟ್ಟು ಕರಕಲು!

16 ಅಂತಸ್ತಿನ ಕಟ್ಟಡ ಇದಾಗಿದೆ. ಇದರ ನೆಲ ಮಹಡಿಯಲ್ಲಿ ನೈಟ್‌ಕ್ಲಬ್ ಕಾರ್ಯನಿರ್ವಹಿಸುತ್ತಿತ್ತು. ಕಳೆದ ಒಂದು ವಾರದಿಂದ ದುರಸ್ತಿ ಕಾರ್ಯಗಳು ಆರಂಭಿಸಲಾಗಿತ್ತು. ಹೀಗಾಗಿ ಸಾರ್ವಜನಿಕರ ಪ್ರವೇಶ ಬಂದ್ ಮಾಡಿ ಕೆಲಸ ಮಾಡಲಾಗುತ್ತಿತ್ತು. ನೈಟ್ ಕ್ಲಬ್ ಬಾಗಿಲು ಮುಚ್ಚಿ ಒಳಭಾಗದಲ್ಲಿ ನವೀಕರಣ ಕಾಮಗಾರಿ ನಡೆಯುತ್ತಿತ್ತು. ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್ ಕಾರಣದಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇವೆ ಎಂದು ಹೇಳಲಾಗುತ್ತಿದೆ. 

ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಅನ್ನೋ ಮಾಹಿತಿಗಳು ಬಯಲಾಗಿದೆ. ಇದೀಗ ವಶಕ್ಕೆ ಪಡೆದಿರುವ ಐವರನ್ನು ಪೊಲೀಸರು ವಿಚಾರಣೆ ನಡೆಸಿದ್ದರೆ. ಸ್ಥಳ್ಕಕೆ ಧಾವಿಸಿರುವ ಪೊಲೀಸರು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ. 

ತುಮಕೂರು : ಕಾಡ್ಗಿಚ್ಚಿಗೆ 75 ಎಕರೆ ಅರಣ್ಯ ಪ್ರದೇಶವೇ ಭಸ್ಮ

Follow Us:
Download App:
  • android
  • ios