ನ್ಯೂಸ್ ನಿರೂಪಕಿಯ ಸೀರೆ ನೋಡಿ ಸಿಡಿಸಿಡಿಯಾದ ಇಸ್ರೇಲ್ ಅಧಿಕಾರಿ: ವೀಡಿಯೋ
ಪ್ಯಾಲೇಸ್ತೀನ್ ಧ್ವಜ ಹೋಲುವ ಸೀರೆಯುಟ್ಟ ನಿರೂಪಕಿ ನೋಡಿ ಸಿಟ್ಟಿಗೆದ್ದ ಇಸ್ರೇಲಿ ಅತಿಥಿ; ಮಿರರ್ ನೌ ಟಿವಿ ಚರ್ಚಾ ಕಾರ್ಯಕ್ರಮದಲ್ಲಿ ಘಟನೆ
ನವದೆಹಲಿ: ಇಸ್ರೇಲ್ ಹಾಗೂ ಹಮಾಸ್ ನಡುವಣ ಯುದ್ಧದ ಬಗ್ಗೆ ಎಲ್ಲಾ ಟಿವಿ ಮಾಧ್ಯಮಗಳು ಭರದ ಚರ್ಚೆಯಲ್ಲಿ ತೊಡಗಿವೆ. ಹಾಗೆಯೇ ಅಂಗ್ಲ ಮಾಧ್ಯಮ ಮಿರರ್ ನೌ ಕೂಡ ಇಸ್ರೇಲ್ ಪ್ಯಾಲೇಸ್ತೀನ್ ಸಮರಕ್ಕೆ ಸಂಬಂಧಿಸಿದಂತೆ ಚರ್ಚಾ ಕಾರ್ಯಕ್ರಮ ನಡೆಸಿದ್ದರು. ಈ ವೇಳೆ ಕಾರ್ಯಕ್ರಮ ನಿರೂಪಕಿ ಶ್ರೇಯಾ ಧೌಂಡಿಯಾಲ್ (Shreya Dhoundial) ಅವರು ಕೆಂಪು ಹಾಗೂ ಹಸಿರು ಮಿಶ್ರಿತ ಬಣ್ಣದ ಸೀರೆ ಧರಿಸಿದ್ದು ಇದಕ್ಕೆ ಕಪ್ಪು ಬಣ್ಣದ ರವಿಕೆ ತೊಟ್ಟಿದ್ದರು. ಇದರಿಂದ ಇಸ್ರೇಲ್ ಪರ ಮಾತನಾಡಲು ಬಂದಿದ್ದ ಅತಿಥಿಯೊಬ್ಬರು ಈಕೆ ಪ್ಯಾಲೇಸ್ತೀನ್ ಪರ ವಹಿಸುತ್ತಿದ್ದಾರೆ ಎಂದು ಊಹಿಸಿ ಸಿಟ್ಟಿಗೆದ್ದ ಘಟನೆ ನಡೆದಿದೆ. ಹಸಿರು ಹಾಗೂ ಕೆಂಪು ಪ್ಯಾಲೇಸ್ತೀನ್ ಧ್ವಜದ ಬಣ್ಣದ ಸಂಯೋಜನೆಯಾಗಿದ್ದು, ಇದರಿಂದ ಅತಿಥಿ ಸಿಟ್ಟಿಗೆದ್ದಿದ್ದಾರೆ. ಆದರೆ ಇದಕ್ಕೆ ನಿರೂಪಕಿಯೂ ಸರಿಯಾದ ಉತ್ತರ ನೀಡಿದ್ದಾರೆ.
ಈ ಸಂಜೆ ನೀವು ಉದ್ದೇಶಪೂರ್ವಕವಾಗಿ ಧರಿಸಿರುವ ಹಸಿರು, ಕೆಂಪು ಮತ್ತು ಕಪ್ಪು ಬಣ್ಣದ ಎದುರು ನೀಲಿ ಮತ್ತು ಬಿಳಿ ಯಾವಾಗಲೂ ಮೇಲುಗೈ ಸಾಧಿಸುತ್ತದೆ ಎಂದು ಇಸ್ರೇಲ್ ಪರವಾಗಿ ಚರ್ಚಾ ಕಾರ್ಯಕ್ರಮದಲ್ಲಿ (television debate) ಭಾಗವಹಿಸಿದ ಇಸ್ರೇಲ್ ಗುಪ್ತಚರ ಅಧಿಕಾರಿ ಫ್ರೆಡೆರಿಕ್ ಲ್ಯಾಂಡೌ ಹೇಳಿದ್ದಾರೆ. ಗಮನಾರ್ಹವಾಗಿ, ಪ್ಯಾಲೇಸ್ಟಿನಿಯನ್ ಧ್ವಜವು ಮೂರು ಸಮತಲ ಪಟ್ಟಿಗಳಿಂದ ಮಾಡಲ್ಪಟ್ಟಿದ್ದು, ಅದರಲ್ಲಿ ಕಪ್ಪು, ಬಿಳಿ ಹಸಿರು ಸಮತಲ ಬಣ್ಣದ ಜೊತೆ ಕೆಂಪು ತ್ರಿಕೋನದ ಚಿತ್ರವಿದೆ. 1967 ರಲ್ಲಿ ಇಸ್ರೇಲ್ ಪ್ಯಾಲೇಸ್ತೇನ್ ನಡುವಣ ಆರು ದಿನಗಳ ಯುದ್ಧದ (Israel-Palestine conflict) ನಂತರ ಇಸ್ರೇಲ್‌ನಲ್ಲಿ ಪ್ಯಾಲೆಸ್ತೀನ್ ಧ್ವಜವನ್ನು ನಿಷೇಧಿಸಲಾಗಿದೆ.
ಅರಬ್ ರಾಷ್ಟ್ರಗಳೇಕೆ ಪ್ಯಾಲೆಸ್ತೀನ್ ನಿರಾಶ್ರಿತರ ದೇಶದೊಳಕ್ಕೆ ಬಿಡುತ್ತಿಲ್ಲ?
ಈ ಮಧ್ಯೆ ಟಿವಿ ಚರ್ಚೆಯ ವೇಳೆ ತನ್ನ ಧಿರಿಸು ನೋಡಿ ಸಿಟ್ಟಿಗೆದ್ದ ಇಸ್ರೇಲ್ ಅಧಿಕಾರಿ ಡಯಾಟ್ರಿಬ್‌ಗೆ ಪ್ರತಿಕ್ರಿಯಿಸಿದ ನಿರೂಪಕಿ ಶ್ರೇಯಾ, ಧರ್ಮದ ಆಧಾರದ ಮೇಲೆ ಬಣ್ಣಗಳನ್ನು ವಿಭಜಿಸಬೇಡಿ, ಇದು ಕೆಲವೊಮ್ಮೆ ನನ್ನ ದೇಶದಲ್ಲಿಯೂ ನಡೆಯುತ್ತದೆ. ಆದರೂ ನಾನು ಧರಿಸಿದ ಧಿರಿಸಿನ ಬಗ್ಗೆ ಹೇಳುವುದಾದರೆ ಇಂದು ನಾನು ಧರಿಸಿರುವುದು ಸೀರೆ, ಇದು ನನ್ನ ಅಜ್ಜಿಯ ಸೀರೆ, ಅವಳು ಬದುಕಿದ್ದರೆ ಇಂದು ಆಕೆಗೆ 105 ವರ್ಷ ವಯಸ್ಸಾಗಿರುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.
ತನಗೆ ಇಸ್ರೇಲ್ ಹಮಾಸ್ ನಡುವಿನ ಸಂಘರ್ಷ ಏನೆಂದು ತಿಳಿದಿಲ್ಲ. ಈ ಸೀರೆಯು ಯಾವುದೋ ಒಂದು ಪಕ್ಷದ, ಸಮುದಾಯದ ಪರ ಬೆಂಬಲವನ್ನು ಸೂಚಿಸುವುದಿಲ್ಲ. ಅಲ್ಲಿ ಏನಾಗುತ್ತಿದೆ, ಗಾಜಾದಲ್ಲಿ ಏನಾಯಿತು, ಆಸ್ಪತ್ರೆಯ ಮೇಲೆ ಬಾಂಬ್ ಸ್ಫೋಟ, 500 ಜನರು ಸತ್ತರು, ಇದು ಕೇವಲ ಅಪರಾಧವಾಗಿದೆ. ನಾನೀಗ ಉಟ್ಟಿರುವುದು ನನ್ನ ಅಜ್ಜಿಯ ಸೀರೆ ಎಂದು ನಿರೂಪಕಿ ಹೇಳಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಇಸ್ರೇಲಿ ವಕ್ತಾರರು ನೀವು ವಿಶೇಷವಾಗಿ ಈ ದಿನ ಈ ಬಣ್ಣದ ಸೀರೆ ಧರಿಸಬಾರದಿತ್ತು ಬೇರೆ ದಿನ ಧರಿಸಬೇಕಿತ್ತು ಎಂದು ಹೇಳಿದ್ದಾರೆ.
ಪ್ಯಾಲೆಸ್ತೀನ್‌ಗೆ ಎಲ್ಲಾ ಮಾನವೀಯ ನೆರವು: ಪ್ಯಾಲೆಸ್ತೀನ್ ಅಧ್ಯಕ್ಷರಿಗೆ ಕರೆ ಮಾಡಿದ ಮೋದಿ
ಇದಕ್ಕೆ ಪ್ರತಿಕ್ರಿಯಿಸಿ ನಿರೂಪಕಿ ನೋ ಫೆಡ್ರಿಕ್, ನಾನು ಏನು ಧರಿಸಬೇಕು ಎಂಬುದನ್ನು ನೀವು ಹೇಳುವುದಕ್ಕೆ ನಾನು ಅವಕಾಶ ಕೊಡುವುದಿಲ್ಲ, ನಾನು ಏನು ಹೇಳಬೇಕು ಎಂದು ಬಯಸುತ್ತೇನೋ ಅದನ್ನು ನಾನು ಹೇಳುವೆ. ಹಾಗೂ ನಾನು ನೋಡಿದ ರೀತಿಯಲ್ಲಿ ಸತ್ಯವನ್ನು ಹೇಳುವೆ ಎಂದು ಹೇಳಿದ್ದಾರೆ. ಗಾಜಾಪಟ್ಟಿಯಲ್ಲಿರುವ ಅಲ್ ಅಹ್ಲಿ ಆಸ್ಪತ್ರೆ ಮೇಲೆ ಬಾಂಬ್ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಮಿರರ್ ನೌನಲ್ಲಿ ಡಿಬೇಟ್ ಏರ್ಪಡಿಸಲಾಗಿತ್ತು. ಈ ದುರಂತದಲ್ಲಿ 500ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಈ ಕೃತ್ಯವನ್ನು ನಾವು ಮಾಡಿಲ್ಲ ಎಂದು ಇಸ್ರೇಲ್ ಹೇಳಿತ್ತು. ಜಿಹಾದ್ ಇಸ್ಲಾಮಿಕ್ ಉಗ್ರರೇ ಫೈರ್ ಮಾಡಿದ ರಾಕೆಟ್ ಮಿಸ್ ಆಗಿ ಆಸ್ಪತ್ರೆ ಮೇಲೆ ಬಿದ್ದಿದೆ ಎಂದು ಇಸ್ರೇಲ್ ಆರೋಪಿಸಿತ್ತು. ಆದರೆ ಪ್ಯಾಲೇಸ್ತೀನ್ ಹಾಗೂ ಹಮಾಸ್ ಉಗ್ರರು ಈ ಕೃತ್ಯವನ್ನು ಇಸ್ರೇಲೇ ಮಾಡಿದೆ ಎಂದು ಆರೋಪಿಸಿತ್ತು.