ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ಯುದ್ಧದಲ್ಲಿ ನೆರೆಯ ಅರಬ್‌ ರಾಷ್ಟ್ರಗಳು ಪ್ಯಾಲೆಸ್ತೀನ್‌ಗೆ ಬೆಂಬಲ ನೀಡಿವೆಯಾದರೂ ಪ್ಯಾಲೆಸ್ತೀನ್‌ನಿಂದ ತಮ್ಮ ದೇಶಕ್ಕೆ ವಲಸೆ ಬರಲು ಹಾತೊರೆಯುತ್ತಿರುವ ನಿರಾಶ್ರಿತರನ್ನು ಅವು ತಮ್ಮ ದೇಶದೊಳಗೆ ಬರದಂತೆ ನಿರ್ಬಂಧಿಸಿವೆ.

ಜೆರುಸಲೇಂ: ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ಯುದ್ಧದಲ್ಲಿ ನೆರೆಯ ಅರಬ್‌ ರಾಷ್ಟ್ರಗಳು ಪ್ಯಾಲೆಸ್ತೀನ್‌ಗೆ ಬೆಂಬಲ ನೀಡಿವೆಯಾದರೂ ಪ್ಯಾಲೆಸ್ತೀನ್‌ನಿಂದ ತಮ್ಮ ದೇಶಕ್ಕೆ ವಲಸೆ ಬರಲು ಹಾತೊರೆಯುತ್ತಿರುವ ನಿರಾಶ್ರಿತರನ್ನು ಅವು ತಮ್ಮ ದೇಶದೊಳಗೆ ಬರದಂತೆ ನಿರ್ಬಂಧಿಸಿವೆ.

ಏಕೆಂದರೆ ಗಾಜಾ ಪಟ್ಟಿ ಮತ್ತು ಪ್ಯಾಲೆಸ್ತೀನ್‌ನಲ್ಲಿರುವ ಜನರನ್ನು ವಿದೇಶಗಳಿಗೆ ಫಲಾಯನ ಮಾಡಿಸುವುದು ಮತ್ತು ಆ ಪ್ರದೇಶವನ್ನು ಸಂಪೂರ್ಣವಾಗಿ ಖಾಲಿ ಮಾಡಿಸಿ ತನ್ನ ವಶಕ್ಕೆ ತೆಗೆದುಕೊಳ್ಳುವುದೇ ಇಸ್ರೇಲ್‌ ಗುರಿಯಾಗಿದೆ ಎಂಬುದು ಅವುಗಳ ಅನುಮಾನ. ಈಗ ನಾವು ಪ್ಯಾಲೆಸ್ತೀನ್‌ ನಿರಾಶ್ರಿತರಿಗೆ ಆಶ್ರಯ ನೀಡಿದರೆ ಅವರು ನಮ್ಮ ದೇಶದಲ್ಲೇ ಖಾಯಂ ಆಗಿ ನೆಲೆಸುತ್ತಾರೆ ಮತ್ತೆ ಹಿಂದಿರುಗುವುದಿಲ್ಲ. ಹೀಗಾದರೆ ಪ್ಯಾಲೆಸ್ತೀನ್‌ನ ಪ್ರತ್ಯೇಕ ರಾಷ್ಟ್ರದ ಹೋರಾಟವು ಮರೆಮಾಚಿಬಿಡುತ್ತದೆ. ಪ್ಯಾಲೆಸ್ತೀನ್‌ ಪೂರ್ತಿ ಇಸ್ರೇಲ್‌ ವಶವಾಗುತ್ತದೆ ಎಂಬುದು ಅರಬ್‌ ದೇಶಗಳ ಆತಂಕ.

ಇಸ್ರೇಲ್‌ ಪೊಲೀಸರಿಗೆ ಕೇರಳದಿಂದ ಸಮವಸ್ತ್ರ ಪೂರೈಕೆ: ಯುದ್ಧಾರಂಭದ ನಂತರ ಹೆಚ್ಚಿದ ಬೇಡಿಕೆ

ಈ ಹಿಂದೆ 1948 ಮತ್ತು 1967ರ ಯುದ್ಧದಲ್ಲಿಯೂ ಇಸ್ರೇಲ್‌ಗೆ ಹೆದರಿ ಅಲ್ಲಿಂದ ಬಂದಿರುವ ಲಕ್ಷಾಂತರ ಜನರು ನಮ್ಮ ದೇಶದಲ್ಲಿಯೇ ಖಾಯಂ ಆಗಿ ನೆಲೆಸಿದ್ದಾರೆ ಎಂದು ಈಜಿಪ್ಟ್‌ ಮತ್ತು ಜೋರ್ಡಾನ್‌ ಸೇರಿದಂತೆ ಹಲವು ರಾಷ್ಟ್ರಗಳು ಅಭಿಪ್ರಾಯಪಟ್ಟಿವೆ. ಅಲ್ಲದೇ ತನ್ನ ಮೇಲಿನ ದಾಳಿಗೆ ಪ್ರತಿಯಾಗಿ ಇಸ್ರೇಲ್‌ ಹಮಾಸ್‌ ಉಗ್ರರ ವಿರುದ್ಧ ಭಾರೀ ದಾಳಿ ನಡೆಸುತ್ತಿದೆ ಎಂದು ಜಗತ್ತು ಯೋಚಿಸಿದೆ. ಆದರೆ ಇಸ್ರೇಲ್‌ ಗುರಿಯೇ ಪ್ಯಾಲೆಸ್ತೀನ್‌ ವಶವಾಗಿದೆ ಎಂದು ಇಸ್ಲಾಮಿಕ್‌ ರಾಷ್ಟ್ರಗಳು ಈ ಕ್ರಮ ಕೈಗೊಂಡಿವೆ ಎಂದು ವರದಿಯಾಗಿದೆ.

ಪ್ಯಾಲೆಸ್ತೀನ್‌ಗೆ ಎಲ್ಲಾ ಮಾನವೀಯ ನೆರವು: ಪ್ಯಾಲೆಸ್ತೀನ್‌ ಅಧ್ಯಕ್ಷರಿಗೆ ಕರೆ ಮಾಡಿದ ಮೋದಿ

ಈಜಿಪ್ಟ್‌ನಿಂದ ಗಾಜಾ ಪಟ್ಟಿಗೆ ಔಷಧ, ಆಹಾರ ಪೂರೈಕೆಗೆ ಇಸ್ರೇಲ್‌ ಅನುಮತಿ

ಜೆರುಸಲೇಂ: ಗಾಜಾ ಪಟ್ಟಿಗೆ ಈಜಿಪ್ಟ್‌ನಿಂದ ಆಹಾರ, ನೀರು, ಔಷಧಗಳನ್ನು ಪೂರೈಕೆ ಮಾಡಲು ಇಸ್ರೇಲ್ ಅನುಮತಿ ನೀಡಿದೆ. ಅ.7ರ ಹಮಾಸ್‌ ದಾಳಿಗೆ ಪ್ರತಿಯಾಗಿ ಇಸ್ರೇಲ್‌ ಗಾಜಾ ಪಟ್ಟಿಯ ಈಜಿಪ್ಟ್‌ ಗಡಿಯನ್ನು ಸಂಪೂರ್ಣವಾಗಿ ಬಂದ್‌ ಮಾಡಿತ್ತು. ಅಲ್ಲಿ ಈಜಿಪ್ಟ್‌ನಿಂದ ಪೂರೈಕೆಯಾಗುತ್ತಿದ್ದ ವಸ್ತುಗಳನ್ನು ನಿಲ್ಲಿಸಿತ್ತು. ಈಗ ಆಸ್ಪತ್ರೆ ಮೇಲೆ ದಾಳಿಯಾದ ಬಳಿಕ ಅಮೆರಿಕ ಅಧ್ಯಕ್ಷ ಬೈಡೆನ್‌ ಭೇಟಿ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.