Asianet Suvarna News Asianet Suvarna News

ಪ್ಯಾಲೆಸ್ತೀನ್‌ಗೆ ಎಲ್ಲಾ ಮಾನವೀಯ ನೆರವು: ಪ್ಯಾಲೆಸ್ತೀನ್‌ ಅಧ್ಯಕ್ಷರಿಗೆ ಕರೆ ಮಾಡಿದ ಮೋದಿ

ಗಾಜಾ ಪಟ್ಟಿ ಪ್ರದೇಶದ ಅಲ್‌ ಅಹ್ಲಿ ಆಸ್ಪತ್ರೆಯಲ್ಲಿ ನಡೆದ ದುರ್ಘಟನೆಯಲ್ಲಿ 500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ಗುರುವಾರ ಪ್ಯಾಲೆಸ್ತೀನ್‌ ಅಧ್ಯಕ್ಷ ಮಹಮ್ಮದ್‌ ಅಬ್ಬಾಸಿ ಅವರಿಗೆ ದೂರವಾಣಿ ಕರೆ ಮಾಡಿ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.

All humanitarian aid to Palestine PM Modi called and told to Palestinian President sympathized with the hospital attack incident akb
Author
First Published Oct 20, 2023, 11:51 AM IST

ನವದೆಹಲಿ: ಗಾಜಾ ಪಟ್ಟಿ ಪ್ರದೇಶದ ಅಲ್‌ ಅಹ್ಲಿ ಆಸ್ಪತ್ರೆಯಲ್ಲಿ ನಡೆದ ದುರ್ಘಟನೆಯಲ್ಲಿ 500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ಗುರುವಾರ ಪ್ಯಾಲೆಸ್ತೀನ್‌ ಅಧ್ಯಕ್ಷ ಮಹಮ್ಮದ್‌ ಅಬ್ಬಾಸಿ ಅವರಿಗೆ ದೂರವಾಣಿ ಕರೆ ಮಾಡಿ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟರ್‌ನಲ್ಲಿ ಮಾಹಿತಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ‘ಪ್ಯಾಲೆಸ್ತೀನ್‌ ಅಧ್ಯಕ್ಷ ಮೊಹಮ್ಮದ್‌ ಅಬ್ಬಾಸಿ (Muhammad Abbasi) ಅವರೊಂದಿಗೆ ಇಂದು ಮಾತುಕತೆ ನಡೆಸಿದೆ. ಈ ವೇಳೆ ಅಲ್‌ ಅಹ್ಲಿ ಆಸ್ಪತ್ರೆ ದುರಂತದಲ್ಲಿ ಅಮಾಯಕರ ನಾಗರಿಕರ ಕುರಿತು ತೀವ್ರ ಸಂತಾಪ ವ್ಯಕ್ತಪಡಿಸಿದೆ. ಜೊತೆಗೆ ಪ್ಯಾಲೆಸ್ತೀನಿ ಜನರಿಗೆ ಎಲ್ಲಾ ರೀತಿಯ ಮಾನವೀಯ ನೆರವುಗಳನ್ನು ಮುಂದುವರೆಸುವ ಭರವಸೆಯನ್ನು ನೀಡಿದ್ದೇನೆ. ಅಲ್ಲದೆ ಆ ಪ್ರದೇಶದಲ್ಲಿ ತಲೆದೋರಿರುವ ಭಯೋತ್ಪಾದನೆ, ಹಿಂಸಾಚಾರ ಮತ್ತು ಭದ್ರತಾ ಪರಿಸ್ಥಿತಿ ಕುಸಿಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಜೊತೆಗೆ ಇಸ್ರೇಲ್‌- ಪ್ಯಾಲೆಸ್ತೀನ್‌ ವಿಷಯದಲ್ಲಿ ಸುದೀರ್ಘ ಕಾಲದಿಂದ ಹೊಂದಿರುವ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಲಾಯಿತು’ ಎಂದು ಮಾಹಿತಿ ನೀಡಿದ್ದಾರೆ.

ಗಾಜಾ ಗಡಿ ಮತ್ತಷ್ಟು ಉದ್ವಿಗ್ನ

ಖಾನ್‌ ಯೂನಿಸ್‌: ಹಮಾಸ್‌ ಉಗ್ರರನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಪಣ ತೊಟ್ಟಿರುವ ಇಸ್ರೇಲ್ ಗಾಜಾಪಟ್ಟಿಯ ಮೇಲೆ ತನ್ನ ವಾಯುದಾಳಿಯನ್ನು ಮುಂದುವರೆಸಿತ್ತು. ಅಲ್ಲದೇ ಗಡಿ ಭಾಗದಲ್ಲಿ ಟ್ಯಾಂಕರ್‌ಗಳ ಜಮಾವಣೆಯನ್ನು ಹೆಚ್ಚಳ ಮಾಡಿದ್ದು, ಯಾವುದೇ ಕ್ಷಣದಲ್ಲಿ ಭೂದಾಳಿ ಆರಂಭಿಸಲು ಸಿದ್ಧತೆ ನಡೆಸಿದೆ.

ಇಸ್ರೇಲ್‌ ಪೊಲೀಸರಿಗೆ ಕೇರಳದಿಂದ ಸಮವಸ್ತ್ರ ಪೂರೈಕೆ: ಯುದ್ಧಾರಂಭದ ನಂತರ ಹೆಚ್ಚಿದ ಬೇಡಿಕೆ

ಗಾಜಾಪಟ್ಟಿಯ ಮೇಲೆ ಯುದ್ಧ ಆರಂಭವಾದಾಗಿನಿಂದಲೂ ವಾಯುದಾಳಿ ನಡೆಸುತ್ತಿರುವ ಇಸ್ರೇಲ್‌, ಸಮುದ್ರದ ಮಾರ್ಗವನ್ನು ಸಹ ಸಂಪೂರ್ಣವಾಗಿ ಹತೋಟಿಗೆ ತೆಗೆದುಕೊಂಡಿದೆ. ಇದೀಗ ಭೂ ದಾಳಿಗೂ ಮುಂದಾಗಿರುವುದರಿಂದ ಇಲ್ಲಿನ ನಾಗರಿಕರ ಆತಂಕ ಮತ್ತಷ್ಟು ಹೆಚ್ಚಾಗಿದ್ದು, ಸುರಕ್ಷಿತ ಸ್ಥಳ ಸಿಗದೇ ಪರದಾಡುವಂತಾಗಿದೆ. ಗಡಿ ಪ್ರದೇಶದಲ್ಲಿ 100ಕ್ಕೂ ಹೆಚ್ಚು ಟ್ಯಾಂಕರ್‌ಗಳನ್ನು ಇಸ್ರೇಲ್‌ ನಿಯೋಜಿಸಿದೆ.

ಇಸ್ರೇಲ್‌ ಸುರಕ್ಷಿತ ಪ್ರದೇಶ ಎಂದು ಘೋಷಿಸಿದ್ದ ದಕ್ಷಿಣದ ಮೇಲೂ ದಾಳಿ ನಡೆಸುತ್ತಿದೆ ಎಂದು ಪ್ಯಾಲೆಸ್ತೀನ್‌ ಆಡಳಿತ ಆರೋಪಿಸಿದ್ದು, ಇಸ್ರೇಲ್‌ನ ವಾಯುದಾಳಿಗೆ ಖಾನ್‌ಯೂನಿಸ್‌ನಲ್ಲಿನ ಅನೇಕ ಕಟ್ಟಡಗಳು ನಾಶಗೊಂಡಿವೆ ಎಂದು ಹೇಳಿದೆ.

ನೀರು, ಆಹಾರವಿಲ್ಲದೇ ಪರದಾಟ:

ಇಸ್ರೇಲ್‌ನ ವಾಯುದಾಳಿಯಿಂದ ಗಾಜಾಪಟ್ಟಿಯಲ್ಲಿರುವ ಬಹುತೇಕ ಬೇಕರಿಗಳು ಮತ್ತು ಅಂಗಡಿಗಳು ನಾಶಗೊಂಡಿದ್ದು, ಜನ ಆಹಾರದ ಕೊರತೆ ಎದುರಿಸುತ್ತಿದ್ದಾರೆ. ಅಲ್ಲದೇ ಹೆಚ್ಚಿನ ಜನ ದಕ್ಷಿಣ ಗಾಜಾದಲ್ಲೇ ಉಳಿದುಕೊಂಡಿರುವುದರಿಂದ ಕುಡಿಯಲು ಶುದ್ಧ ನೀರು ಸಹ ಸಿಗದೇ ಕಲುಷಿತ ನೀರನ್ನೇ ಶೋಧಿಸಿ ಕುಡಿಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಡಿ ಭಾಗದಲ್ಲಿ ಹೆಚ್ಚಿದ ಟ್ಯಾಂಕರ್‌ ಜಮಾವಣೆ: ಸದ್ಯಕ್ಕೆ ಭಾರತೀಯರ ತೆರವು ಕಷ್ಟ

ಲೆಬನಾನ್‌ನಿಂದ ರಾಕೆಟ್‌ ದಾಳಿ:

ಗಾಜಾ ಪಟ್ಟಿಯ ಮೇಲೆ ನಡೆಯುತ್ತಿರುವ ದಾಳಿಗೆ ಪ್ರತಿಕಾರವಾಗಿ ಹಮಾಸ್‌ ಉಗ್ರರ ಬೆಂಬಲಿಗರಾದ ಹಿಜ್ಬುಲ್ಲಾ ಉಗ್ರರು ಲೆಬನಾನ್‌ ಕಡೆಯಿಂದ ಇಸ್ರೇಲ್‌ ಮೇಲೆ ದಾಳಿ ನಡೆಸಿದ್ದಾರೆ. ಲೆಬನಾನ್‌ನಿಂದ ಹಾರಿಸಲ್ಪಟ್ಟ 4 ರಾಕೆಟ್‌ಗಳನ್ನು ನಿಷ್ಕ್ರಿಯಗೊಳಿಸಿದ್ದಾಗಿ ಇಸ್ರೇಲ್‌ ಸೇನೆ ಹೇಳಿದೆ. ಅಲ್ಲದೇ ಟ್ಯಾಂಕರ್‌ ಬಳಸಿ ಹಿಜ್ಬುಲ್ಲ ಉಗ್ರರ ಮೂಲ ಸೌಕರ್ಯಗಳನ್ನು ನಾಶ ಮಾಡಿರುವುದಾಗಿ ಹೇಳಿದೆ.

Follow Us:
Download App:
  • android
  • ios