Asianet Suvarna News Asianet Suvarna News

ಅಪ್ಪನ ಕಂಡಕೂಡ್ಲೇ ಓಡಿಹೋಗಿ ಅಪ್ಪಿಕೊಂಡ ಬಾಲಕ: ಹಮಾಸ್‌ ಉಗ್ರರ ಒತ್ತೆಯಾಳಾಗಿದ್ದ ಇಸ್ರೇಲಿಯ ವಿಡಿಯೋ ವೈರಲ್‌

ಹಮಾಸ್ ಒತ್ತೆಯಾಳಾಗಿ ಇಟ್ಟುಕೊಂಡಿದ್ದ 50 ಮಹಿಳೆಯರು ಮತ್ತು 19 ವರ್ಷದೊಳಗಿನ ಮಕ್ಕಳನ್ನು ಪ್ರಸ್ತುತ ಇಸ್ರೇಲ್‌ ಬಂಧನದಲ್ಲಿರುವ 150 ಪ್ಯಾಲೆಸ್ತೀನ್‌ ಜನರ ಬದಲಾಗಿ ಬಿಡುಗಡೆ ಮಾಡಲಿದೆ. 

israeli boy held hostage by hamas reunites with family ash
Author
First Published Nov 26, 2023, 1:34 PM IST

ಹೊಸದಿಲ್ಲಿ (ನವೆಂಬರ್ 26, 2023): ಇಸ್ರೇಲ್ - ಹಮಾಸ್‌ ಯುದ್ಧ ನಲ್ಲುವ ಆಶಾಕಿರಣವೊಂದು ಕಾಣಿಸಿಕೊಂಡಿದ್ದು, ಸದ್ಯ 4 ದಿನಗಳ ಕದನ ವಿರಾಮ ಘೋಷಿಸಲಾಗಿದೆ. ಈ ವೇಳೆ, ಇಸ್ರೇಲ್‌ ಸೇರಿ ಇತರೆ ದೇಶಗಳ ಪ್ರಜೆಗಳನ್ನು ಒತ್ತೆಯಾಳುಗಳಾಗಿದ್ದವರನ್ನು ಬಿಡುಗಡೆ ಮಾಡಲಾಗಿದೆ. ಕತಾರ್, ಈಜಿಪ್ಟ್ ಮತ್ತು ಯುನೈಟೆಡ್ ಸ್ಟೇಟ್ಸ್ ಮಧ್ಯಸ್ಥಿಕೆಯಲ್ಲಿ 4 ದಿನಗಳ ಕದನ ವಿರಾಮದ ಅಡಿಯಲ್ಲಿ ಗಾಜಾದಲ್ಲಿ ಹಮಾಸ್ ಕೈಯಲ್ಲಿ 49 ದಿನಗಳ ಸೆರೆಯಲ್ಲಿ 4 ಮಕ್ಕಳು ಮತ್ತು 6 ವೃದ್ಧ ಮಹಿಳೆಯರು ಸೇರಿದಂತೆ 13 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ. 13 ಮಂದಿ ಶುಕ್ರವಾರ ಬಿಡುಗಡೆಯಾದ ಒತ್ತೆಯಾಳುಗಳ ಮೊದಲ ಬ್ಯಾಚ್‌ನ ಭಾಗವಾಗಿದ್ದರು.

ಈ ಒಪ್ಪಂದದ ಅಡಿಯಲ್ಲಿ, ಹಮಾಸ್ ಒತ್ತೆಯಾಳಾಗಿ ಇಟ್ಟುಕೊಂಡಿದ್ದ 50 ಮಹಿಳೆಯರು ಮತ್ತು 19 ವರ್ಷದೊಳಗಿನ ಮಕ್ಕಳನ್ನು ಪ್ರಸ್ತುತ ಇಸ್ರೇಲ್‌ ಬಂಧನದಲ್ಲಿರುವ 150 ಪ್ಯಾಲೆಸ್ತೀನ್‌ ಜನರ ಬದಲಾಗಿ ಬಿಡುಗಡೆ ಮಾಡಬಹುದು. ಷ್ನೇಯ್ಡರ್ ಚಿಲ್ಡ್ರನ್ಸ್ ಮೆಡಿಕಲ್ ಸೆಂಟರ್ (SCMC) ಬಿಡುಗಡೆ ಮಾಡಿದ ವಿಡಿಯೋದಲ್ಲಿ, 9 ವರ್ಷದ ಓಹದ್ ಮುಂಡರ್, ತನ್ನ ತಂದೆಯನ್ನು ನೋಡಿದ ಕೂಡಲೇ ಅವರ ಬಳಿಗೆ ಓಡಿ ತಬ್ಬಿಕೊಂಡಿದ್ದಾನೆ. ಓಹದ್ ಜತೆಗೆ ಆತನ ತಾಯಿ ಕೆರೆನ್ ಮುಂದರ್ (55) ಮತ್ತು ಅಜ್ಜಿ ರುತಿ ಮುಂದರ್ (78) ಸಹ ಬಿಡುಗಡೆಯಾಗಿದ್ದಾರೆ.

ಇದನ್ನು ಓದಿ: ಇಸ್ರೇಲ್‌ಗೆ ರಹಸ್ಯವಾಗಿ ಪಾಕ್‌ನಿಂದ ಶಸ್ತ್ರಾಸ್ತ್ರ ಪೂರೈಕೆ? ಹಮಾಸ್‌ ವಿರುದ್ಧದ ಯುದ್ಧದಲ್ಲಿ ಯಹೂದಿ ರಾಷ್ಟ್ರಕ್ಕೆ ಬೆಂಬಲ!

ಇನ್ನು, ಈ ಸಂಬಂಧ ಓಹದ್‌ ಸಹೋದರ ರಾಯ್ ಜಿಚ್ರಿ ಮುಂಡರ್ ಇಸ್ರೇಲಿ ರಕ್ಷಣಾ ಪಡೆಗೆ (ಐಡಿಎಫ್) ಧನ್ಯವಾದ ಅರ್ಪಿಸಿದ್ದಾರೆ. ಎಲ್ಲಾ ಇಸ್ರೇಲ್ ಜನರಿಗೆ ಧನ್ಯವಾದಗಳು. ನಾವು ಇಂದು ಆಚರಿಸುತ್ತಿಲ್ಲ ಎಂದು ಹೇಳುವುದು ನನಗೆ ಬಹಳ ಮುಖ್ಯವಾಗಿದೆ.

 ನಾವು ಸಂತೋಷವಾಗಿದ್ದೇವೆ, ಆದರೆ, ನಾವು ಹೆಚ್ಚು ಒತ್ತೆಯಾಳುಗಳನ್ನು ಹೊಂದಿರುವುದರಿಂದ ನಮ್ಮ ಅಭಿಯಾನವನ್ನು ನಾವು ಮುಂದುವರಿಸಬೇಕಾಗಿದೆ. ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೆ ನಾವು ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತೇವೆ ಎಂದು ಓಹಾದ್ ಸಹೋದರ ರಾಯ್ ಜಿಚ್ರಿ ಮುಂಡರ್ ಇಸ್ರೇಲಿ ರಕ್ಷಣಾ ಪಡೆಗೆ (ಐಡಿಎಫ್) ಧನ್ಯವಾದ ಅರ್ಪಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ಉಲ್ಲೇಖಿಸಿದೆ. ಭರವಸೆ ಕಳೆದುಕೊಳ್ಳಬೇಡಿ, ಅವರು ಶೀಘ್ರದಲ್ಲೇ ಹಿಂತಿರುಗುತ್ತಾರೆ ಎಂದೂ ಅವರು ಹೇಳಿದರು.

ಇದನ್ನು ಓದಿ: ಗಾಜಾದಲ್ಲಿರೋ ಹಮಾಸ್ ಸಂಸತ್ತಿನ ಕಟ್ಟಡವನ್ನೇ ವಶಪಡಿಸಿಕೊಂಡ ಇಸ್ರೇಲ್‌ ಸೇನೆ: ಉಗ್ರರ ಖೇಲ್‌ ಖತಂ?

4 ದಿನಗಳ ಕದನ ವಿರಾಮದ ಸಮಯದಲ್ಲಿ, ಅಕ್ಟೋಬರ್ 7 ರ ದಾಳಿಯ ಸಮಯದಲ್ಲಿ ಹಮಾಸ್ 50 ಒತ್ತೆಯಾಳುಗಳನ್ನು ಬ್ಯಾಚ್‌ಗಳಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಎರಡನೇ ಬ್ಯಾಚ್‌ನಲ್ಲಿ 13 ಇಸ್ರೇಲಿ ಮತ್ತು ನಾಲ್ವರು ಥಾಯ್ ಪ್ರಜೆಗಳನ್ನು ಶನಿವಾರ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: 16 ವರ್ಷಗಳ ಬಳಿಕ ಹಮಾಸ್ ಗಾಜಾ ಪಟ್ಟಿಯ ನಿಯಂತ್ರಣ ಕಳೆದುಕೊಂಡಿದೆ: ಇಸ್ರೇಲ್‌ ರಕ್ಷಣಾ ಸಚಿವ

Latest Videos
Follow Us:
Download App:
  • android
  • ios