ಅವ್ರದ್ದು ಯುದ್ಧ ಆರಂಭಿಸುವ ಬಯಕೆ, ನಮ್ದು ಮುಗಿಸುವ ಬಯಕೆ: ಎಸ್ಪರ್!
ಯುದ್ಧದ ಹೊಸ್ತಿಲಲ್ಲಿ ಹೂಂಕರಿಸುತ್ತಿರುವ ಅಮೆರಿಕ-ಇರಾನ್| ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ| ನಮ್ನನ್ನು ಕೆಣಕುವ ದುಸ್ಸಾಹಸಕ್ಕೆ ಕೈ ಹಾಕದಂತೆ ಇರಾನ್‌ಗೆ ಎಚ್ಚರಿಸಿದ ಅಮೆರಿಕ| ಯುದ್ಧ ಆರಂಭಿಸುವುದಿಲ್ಲ ಮುಗಿಸುತ್ತೇವೆ ಎಂದ ಅಮೆರಿಕದ ರಕ್ಷಣಾ ಕಾರ್ಯದರ್ಶಿ| 'ಯುದ್ಧ ಆರಂಭಿಸುವುದು ಇರಾನ್ ಬಯಕೆಯಾದರೆ ಯುದ್ಧ ಮುಗಿಸುವುದು ಅಮೆರಿಕದ ಬಯಕೆ'| ಅಮೆರಿಕ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಮಾರ್ಮಿಕ ಹೇಳಿಕೆ| ಇರಾಕ್‌ನಿಂದ ಸೇನೆ ವಾಪಸ್ ಕರೆಸಿಕೊಳ್ಳುವುದಿಲ್ಲ ಎಂದ ಎಸ್ಪರ್|
ವಾಷಿಂಗ್ಟನ್(ಜ.08): ಇರಾಕ್‌ನಲ್ಲಿರುವ ತನ್ನ ಸೇನಾ ನೆಲೆಗಳ ಮೇಲೆ ಇರಾನ್ ನಡೆಸಿರುವ ಕ್ಷಿಪಣಿ ದಾಳಿಯನ್ನು ಖಂಡಿಸಿರುವ ಅಮೆರಿಕ, ನಮ್ನನ್ನು ಕೆಣಕುವ ದುಸ್ಸಾಹಸಕ್ಕೆ ಕೈ ಹಾಕದಂತೆ ಎಚ್ಚರಿಕೆ ನೀಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್, ನಾವು ಇರಾನ್‌ನೊಂದಿಗೆ ಯುದ್ಧ ಆರಂಭಿಸಲ್ಲ, ಬದಲಿಗೆ ಮುಗಿಸುತ್ತೇವೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಇರಾನ್ ಮಿಸೈಲ್ ದಾಳಿಗೆ 80 'ಅಮೆರಿಕನ್ ಭಯೋತ್ಪಾದಕರ' ಸಾವು?: ಏನಾಗಿಲ್ಲ ಎಂದ ಟ್ರಂಪ್!
ಇರಾನ್‌ನೊಂದಿಗೆ ಯುದ್ಧ ಆರಂಭಿಸುವ ಯಾವುದೇ ಇರಾದೆ ಅಮೆರಿಕಕ್ಕೆ ಇಲ್ಲ. ಆದರೆ ಯುದ್ಧವಾದರೆ ಅದಕ್ಕೆ ತಾರ್ಕಿಕ ಅಂತ್ಯ ಕಾಣಿಸುವತ್ತ ಅಮೆರಿಕ ಗಮನಹರಿಸಿದೆ ಎಂದು ಎಸ್ಪರ್ ಸ್ಪಷ್ಟಪಡಿಸಿದ್ದಾರೆ.
ಅಮೆರಿಕದ ಮಿಲಿಟರಿ ಶಕ್ತಿಯ ಅರಿವಿರದ ಇರಾನ್, ಕ್ಷಿಪಣಿ ದಾಳಿಯ ಮೂಲಕ ನಮ್ಮನ್ನು ಕೆಣಕುವ ದುಸ್ಸಾಹಸಕ್ಕೆ ಕೈ ಹಾಕಿದೆ. ಯುದ್ಧ ಆರಂಭಿಸುವುದು ಇರಾನ್ ಬಯಕೆಯಾದರೆ ಯುದ್ಧ ಮುಗಿಸುವುದು ಅಮೆರಿಕದ ಬಯಕೆ ಎಂದು ಎಸ್ಪರ್ ನುಡಿದಿದ್ದಾರೆ.
ಇದೇ ವೇಳೆ ಇರಾಕ್‌ನಿಂದ ಅಮೆರಿಕದ ಸೇನಾಪಡೆಗಳನ್ನು ವಾಪಸ್ ಕರೆಸಿಕೊಳ್ಳುವುದಿಲ್ಲ ಎಂದಿರುವ ಎಸ್ಪರ್, ಇರಾಕ್ ಸಂಸತ್ತಿನಲ್ಲಿ ಈ ಕುರಿತು ಕೈಗೊಂಡ ನಿರ್ಣಯದಲ್ಲಿ ಸ್ಪಷ್ಟತೆ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.