ದೇಶ ಮೊದಲು.. ಮಗನನ್ನೂ ಸಮರ ಭೂಮಿಗೆ ಕಳುಹಿಸಿದ್ರಾ ಇಸ್ರೇಲ್ ಪ್ರಧಾನಿ?
ಮೊನ್ನೆ ಮೊನ್ನೆಯಷ್ಟೇ ಹಮಾಸ್ ಉಗ್ರರ ವಿರುದ್ಧದ ಈ ಹೋರಾಟಕ್ಕೆ ಶಕ್ತಿ ತುಂಬಲು ಇಸ್ರೇಲ್ ಸರ್ಕಾರ ಬಹುಕೋಟಿ ಡಾಲರ್ ಮೊತ್ತದ ವಿದೇಶಿ ಮೀಸಲನ್ನೇ ಮಾರಾಟ ಮಾಡಿದ್ದು, ದೊಡ್ಡ ಸುದ್ದಿಯಾಗಿತ್ತು. ಇದಾದ ಬಳಿಕ ಈಗ ಇಸ್ರೇಲ್ ಪ್ರಧಾನಿ ತಮ್ಮ ಮಗನನ್ನೇ ಯುದ್ಧಭೂಮಿಗೆ ಕಳುಹಿಸಿಕೊಡುತ್ತಿದ್ದಾರೆ ಎನ್ನಲಾದ ಫೋಟೋವೊಂದು ಈಗ ವೈರಲ್ ಆಗಿದೆ.
ಇಸ್ರೇಲ್ ಹಮಾಸ್ ನಡುವಣ ಯುದ್ಧ 5ನೇ ದಿನಕ್ಕೆ ಕಾಲಿರಿಸಿದೆ. ತನ್ನ ಕೆಣಕಿದ ಹಮಾಸ್ ಉಗ್ರರನ್ನು ಹೆಡೆಮುರಿ ಕಟ್ಟಿ ಗಾಜಾ ಪಟ್ಟಿಯನ್ನೇ ಭೂಪಟದಿಂದ ಅಳಿಸಲು ಪಣ ತೊಟ್ಟಿರುವ ಇಸ್ರೇಲಿಗರು ಈಗ ಇದಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧರಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಹಮಾಸ್ ಉಗ್ರರ ವಿರುದ್ಧದ ಈ ಹೋರಾಟಕ್ಕೆ ಶಕ್ತಿ ತುಂಬಲು ಇಸ್ರೇಲ್ ಸರ್ಕಾರ ಬಹುಕೋಟಿ ಡಾಲರ್ ಮೊತ್ತದ ವಿದೇಶಿ ಮೀಸಲನ್ನೇ ಮಾರಾಟ ಮಾಡಿದ್ದು, ದೊಡ್ಡ ಸುದ್ದಿಯಾಗಿತ್ತು. ಇದಾದ ಬಳಿಕ ಈಗ ಇಸ್ರೇಲ್ ಪ್ರಧಾನಿ ತಮ್ಮ ಮಗನನ್ನೇ ಯುದ್ಧಭೂಮಿಗೆ ಕಳುಹಿಸಿಕೊಡುತ್ತಿದ್ದಾರೆ ಎನ್ನಲಾದ ಫೋಟೋವೊಂದು ಈಗ ವೈರಲ್ ಆಗಿದೆ. ಆದರೆ ಈ ಫೋಟೋದ ಸತ್ಯಾಸತ್ಯತೆಯನ್ನು ಖಚಿತಪಡಿಸಿದಾಗ ಇದು 2017ರ ಫೋಟೋ ಎಂಬುದು ತಿಳಿದು ಬಂದಿದೆ.
ಇಸ್ರೇಲ್‌ನಲ್ಲಿ ಪ್ರತಿಯೊಬ್ಬರಿಗೂ ಸೇನಾ ತರಬೇತಿ ಕಡ್ಡಾಯವಾಗಿದ್ದು, 2017ರಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರ ಮಗ ಅವ್ನೀರ್ ನೇತನ್ಯಾಹು ಈ ಸೇನಾ ತರಬೇತಿಯನ್ನು ಮುಗಿಸಿದ ವೇಳೆ ತೆಗೆದ ಫೋಟೋ ಇದು ಎಂದು ತಿಳಿದು ಬಂದಿದೆ. ಇಸ್ರೇಲ್ ಡಿಫೆನ್ಸ್ ಸರ್ವೀಸ್‌ನಲ್ಲಿ 2017ರಲ್ಲಿಯೇ ಅವ್ನೀರ್ ನೇತನ್ಯಾಹು ಸೇನಾ ತರಬೇತಿ ಪೂರ್ಣಗೊಳಿಸಿದ್ದರು. ಅವ್ನರ್ ಯುದ್ಧ ಗುಪ್ತಚರ ಕಲೆಕ್ಷನ್ ಕಾರ್ಪ್ಸ್‌ನಲ್ಲಿ ತರಬೇತಿ ಪೂರೈಸಿ ಸೇವೆ ಸಲ್ಲಿಸಿದರು.
ಹಮಾಸ್ ಉಗ್ರರ ಬೆಂಬಲಿಸಿ ಬೀದಿಗಿಳಿದಿದ್ದವರಿಗೆ ಲಾಠಿರುಚಿ ತೋರಿಸಿದ ಫ್ರಾನ್ಸ್ ಪೊಲೀಸರು: ವೀಡಿಯೋ
ತಮ್ಮ ಪುತ್ರ ಈ ಸೇನಾ ತರಬೇತಿ ಪೂರ್ಣಗೊಳಿಸಿದ ಆ ಸಂದರ್ಭದಲ್ಲಿ ಮಾತನಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ (Benjamin Netanyahu), ನಾವು ನಿನ್ನ ಬಗ್ಗೆ ಹೆಮ್ಮೆ ಪಡುತ್ತೇವೆ ಹಾಗೂ ಪ್ರೀತಿಸುತ್ತೇವೆ. ಇದೇ ರೀತಿ ಮಕ್ಕಳನ್ನು ಸೇನಾ ತರಬೇತಿಗೆ ಕಳುಹಿಸಿ ಈ ಅದ್ಭುತ ಅನುಭವವನ್ನು ಅನುಭವಿಸುವ ಎಲ್ಲಾ ಇಸ್ರೇಲಿ ಪೋಷಕರ ಉತ್ಸಾಹವನ್ನು ನಾವು ಹಂಚಿಕೊಳ್ಳುತ್ತೇವೆ ಎಂದು ಹೇಳಿದ್ದರು. ಆ ಸಂದರ್ಭದ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಇಸ್ರೇಲ್ ಪ್ರಧಾನಿ ಪುತ್ರನೂ ಯುದ್ಧದಲ್ಲಿ ಭಾಗಿಯಾಗುತ್ತಿದ್ದಾರೆ. ದೇಶಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧವಿರುವ ಬೆಂಜಮಿನ್ ತಮ್ಮ ಮಗನನ್ನು ದೇಶಸೇವೆಗೆ ಕಳುಹಿಸಿದ್ದಾರೆ ಎಂದು ಬರೆದು ಈ ಫೋಟೋವೊಂದು ವೈರಲ್ ಆಗ್ತಿದೆ.
ಅಂತ್ಯ ಹಾಡುತ್ತೇವೆ... ಗಾಜಾದಲ್ಲಿ ಇನ್ನೆಂದು ಹೀಗಾಗಲು ಬಿಡಲ್ಲ: ಇಸ್ರೇಲ್ ರಕ್ಷಣಾ ಸಚಿವ
ತವರಿಗೆ ಮರಳಿದ ಸಾವಿರಾರು ಇಸ್ರೇಲಿಗರು
ಹಾಗಂತ ಇಸ್ರೇಲಿಗರ ದೇಶಪ್ರೇಮವನ್ನು ಪ್ರಶ್ನೆ ಮಾಡುವಂತಿಲ್ಲ, ಇಸ್ರೇಲಿಗರ ದೇಶ ಪ್ರೇಮ ಹಾಗೂ ಸ್ವಾಭಿಮಾನವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ, ಹಠ ಹೋರಾಟ ಶ್ರಮದಿಂದಲೇ ಸುತ್ತಲೂ ಶತ್ರು ರಾಷ್ಟ್ರಗಳಿದ್ದರೂ ನಿರ್ಭಿತವಾಗಿ ಬದುಕುತ್ತಿರುವ ಇಸ್ರೇಲ್‌ನ ಈ ಸಧೃಡತೆಯ ಹಿಂದೆ ಇರುವುದು ಇಸ್ರೇಲಿಗರ ಅಪಾರ ದೇಶಭಕ್ತಿ. ಒಂದು ದೇಶದಲ್ಲಿ ಯುದ್ಧ ಆರಂಭವಾದರೆ ಆ ಪ್ರದೇಶದ ಜನ ಸುರಕ್ಷಿತ ಪ್ರದೇಶಗಳತ್ತ ಓಡಲು ನೋಡುತ್ತಾರೆ. ಇದಕ್ಕೆ ಮಧ್ಯಪ್ರಾಚ್ಯಗಳ ದೇಶಗಳೇ ಸಾಕ್ಷಿ. ಸದಾ ಯುದ್ಧ ಹಾಗೂ ರಾಜಕೀಯ ಆಸ್ಥಿರತೆಯ ಕಾರಣದಿಂದ ಸಿರಿಯಾದಂತಹ ದೇಶಗಳ ಬಹುತೇಕ ಜನರು ಯುದ್ಧಕಾಲದಲ್ಲಿ ಪಾಶ್ಚಿಮಾತ್ಯ ದೇಶಗಳಲ್ಲಿ ಆಶ್ರಯ ಅರಸಿ ಹೊರಟು ಹೋಗಿರುವುದು ಇದಕ್ಕೆ ಉದಾಹರಣೆ.
ಇಸ್ರೇಲ್ ಸೇನೆಯಿಂದ ಗಾಜಾ಼ದಲ್ಲಿ ನಿಷೇಧಿತ ವೈಟ್ ಫಾಸ್ಫರಸ್ ಬಳಕೆ?
ಅಲ್ಲದೇ ಅಫ್ಘಾನಿಸ್ತಾನದಲ್ಲೂ ಅಫ್ಘಾನ್ ತಾಲಿಬಾನ್ (Taliban) ಸುಪರ್ದಿಗೆ ಸೇರುತ್ತಿದ್ದಂತೆ ಸಾವಿರಾರು ಜನ ಅಮೆರಿಕಾದಂತಹ ದೇಶಗಳಿಗೆ ವಲಸೆ ಹೋಗಿದ್ದರು. ಆದರೆ ಇಸ್ರೇಲಿಗರು ಇದಕ್ಕೆ ತದ್ವಿರುದ್ಧ, ತಮ್ಮ ತಾಯ್ನಾಡು ಸಂಕಷ್ಟದಲ್ಲಿದೆ. ಯುದ್ಧ ಪೀಡಿತವಾಗಿದೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ವಿದೇಶಗಳಲ್ಲಿ ನೆಲೆಯಾಗಿದ್ದ ಅನೇಕರು ತಾಯ್ನಾಡಿಗೆ ಮರಳಿದ್ದಾರೆ. ವಿದೇಶದಲ್ಲಿರುವ ಇಸ್ರೇಲಿಗರೆಲ್ಲರಿಗೂ ತಮ್ಮಿಷ್ಟದಂತೆ ಆರಾಮವಾಗಿ ಕಾಲ ಕಳೆಯಬಹುದು. ಆದರೆ ತಮ್ಮದೆನ್ನುವ ನೆಲೆಯೊಂದು ಇಲ್ಲದೇ ಹೋದರೆ ಏನಾಗುತ್ತದೆ ಎಂಬುದು ಇಸ್ರೇಲಿಗರಿಗೆ ಬಹಳ ಚೆನ್ನಾಗಿ ಗೊತ್ತಿದೆ. ಹಲವು ದಶಕಗಳ ಕಾಲ ನೆಲೆ ಇಲ್ಲದೇ ಪ್ರಪಂಚದೆಲ್ಲೆಡೆ ತಿರಸ್ಕರಿಸಲ್ಪಟ್ಟು ಅಲೆದಾಡಿದ ನಂತರ ಶ್ರಮದಿಂದ ಕಟ್ಟಿದ ತಾಯ್ನಾಡನ್ನು ಅಷ್ಟು ಸುಲಭವಾಗಿ ಬಿಡಲು ಸಾಧ್ಯವೇ.? ಇಸ್ರೇಲಿಗರ ಈ ಉನ್ನತವಾದ ಈ ದೇಶಭಕ್ತಿಯೇ ಅವರನ್ನು ಈ ಸಂಕಷ್ಟದ ಸಮಯದಲ್ಲೂ ಧೈರ್ಯದಿಂದ ಹೋರಾಡುವುದಕ್ಕೆ ಶಕ್ತಿ ನೀಡುತ್ತಿದೆ ಎಂದರೆ ತಪ್ಪಾಗಲಾರದೇನೋ...