ಹಮಾಸ್ ಮೇಲಿನ ಯುದ್ಧಕ್ಕೆ ಇಸ್ರೇಲ್ ಇಟ್ಟಿದೆ ಭಾರೀ ಬಜೆಟ್!
ಇಸ್ರೇಲ್ ಹಾಗೂ ಹಮಾಸ್ ನಡುವಿನ ಭೀಕರ ಯುದ್ಧಕ್ಕೆ 1 ತಿಂಗಳಾಗಿದೆ. ಕದನ ವಿರಾಮಕ್ಕೆ ವಿಶ್ವಸಂಸ್ಥೆ ಕರೆ ನೀಡಿದ್ದರು, ಇಸ್ರೇಲ್ ಮಾತ್ರ ಹಮಾಸ್‌ನ ನಿರ್ನಾಮ ಮಾಡಿಯೇ ಕದನವಿರಾಮಕ್ಕೆ ಇಳಿಯಲಿದ್ದೇವೆ ಎಂದು ತಿಳಿಸಿದೆ.

ಬೆಂಗಳೂರು (ನ.7): ಇಸ್ರೇಲ್‌ನ ನಾಗರೀಕರ ಮೇಲೆ ಹಮಾಸ್ ಭೀಕರ ರಾಕೆಟ್ ದಾಳಿ ನಡೆಸಿ ಅದರ ಬೆನ್ನಿಗೇ ಉದ್ಭವವಾದ ಯುದ್ಧ ಪರಿಸ್ಥಿತಿಗೆ ಈಗ ಒಂದು ತಿಂಗಳು. ಒಂದೆಡೆ ಇಸ್ರೇಲ್, ಗಾಜಾದ ಮೇಲೆ ತನ್ನ ಭೂಸೇನೆಯ ಮೂಲಕ ದಾಳಿ ಮಾಡಲು ಆರಂಭಿಸಿದೆ. ಇಸ್ರೇಲ್‌ನ ಬಲಿಷ್ಠ ಸೇನೆ ಗಾಜಾಪಟ್ಟಿಯ ಒಳಗೆ ನುಗ್ಗಿದ್ದು ತನ್ನ ಕಾರ್ಯಾಚರಣೆಗಳನ್ನು ಆರಂಭ ಮಾಡಿದೆ. ಗಾಜಾದ ಸುರಂಗಗಳಲ್ಲಿ ಹಮಾಸ್ ಉಗ್ರರಿಗಾಗಿ ಹುಡುಕಾಟ ನಡೆಸುತ್ತಿದೆ.ಇನ್ನು ಗಾಜಾ ಭೂ ಆಕ್ರಮಣದ ಭಯಾನಕ ದೃಶ್ಯಗಳನ್ನು ಕೂಡ ಇಸ್ರೇಲ್ ಹಂಚಿಕೊಂಡಿದೆ. ಹಮಾಸ್‌ನ ಭಯೋತ್ಪಾದಕರು ಮಸೀದಿ, ಶಾಲೆ, ಆಸ್ಪತ್ರೆಗಳಲ್ಲಿ ರಾಕೆಟ್ ಲಾಂಚರ್‌ಗಳು ಇರಿಸಿಕೊಂಡಿರುವ ವಿಡಿಯೋವನ್ನು ಇಸ್ರೇಲಿ ಸೇನೆ ಹಂಚಿಕೊಂಡಿದೆ.ಇನ್ನು ಸಾವು ನೋವುಗಳ ವಿಚಾರಕ್ಕೆ ಬರುವುದಾದರೆ, ಈವರೆಗೂ ಇಸ್ರೇಲ್‌ನಲ್ಲಿ 1400 ಮಂದಿ ಸಾವು ಕಂಡಿದ್ದರೆ, 5400 ಮಂದಿ ಗಾಯಾಳು ಹಾಗೂ 240 ಮಂದಿ ಒತ್ತೆಯಾಳುಗಳಾಗಿದ್ದಾರೆ. ಗಾಜಾದಲ್ಲಿ ಸಾವುಡಾಲರ್ನ ಪ್ರಮಾಣ 10,022 ಆಗಿದ್ದು, 32, 516 ಮಂದಿ ಗಾಯಗೊಂಡಿದ್ದಾರೆ. 2030 ಮಂದಿ ನಾಪತ್ತೆಯಾಗಿದ್ದಾರೆ ಎನ್ನುವ ಮಾಹಿತಿ ಬಂದಿದೆ.
ಇನ್ನು ಗಾಜಾಪಟ್ಟಿಯಲ್ಲಿ ಈವರೆಗೂ 30 ಸಾವಿರ ಟನ್ ಬಾಂಬ್‌ಅನ್ನು ಇಸ್ರೇಲ್ ಎಸೆದಿದೆ ಎನ್ನುವ ಮಾಹಿತಿ ಸಿಕ್ಕಿದೆ. ಶೇ. 70ರಷ್ಟು ಮಂದಿ ನಿರಾಶ್ರಿತರಾಗಿದ್ದರೆ, ಶೇ.60ರಷ್ಟು ಮನೆಗಳು ನಾಶವಾಗಿದೆ. ಇಲ್ಲಿಯವರೆಗೂ ಗಾಜಾಗೆ 450 ಟನ್ ನೆರವು ಸಾಮಗ್ರಿಗಳು ಬಂದಿವೆ.
ಯುದ್ಧಕ್ಕಾಗಿ ಇಸ್ರೇಲ್ 51 ಸಾವಿರ ಕೋಟಿ ಖರ್ಚು: ಇನ್ನು ಇಸ್ರೇಲ್ ಈ ಯುದ್ಧಕ್ಕೆ 51 ಬಿಲಿಯನ್ ಡಾಲರ್ ಅಂದರೆ 51 ಸಾವಿರ ಕೋಟಿ ರೂಪಾಯಿಯನ್ನು ಮೀಸಲಿಟ್ಟಿದೆ. ಹಮಾಸ್ ವಿರುದ್ಧ ಇಸ್ರೇಲ್ ಯುದ್ಧಕ್ಕೆ 51 ಬಿಲಿಯನ್ ಡಾಲರ್ ಖರ್ಚಾಗಲಿದೆ ಎಂದು ಕ್ಯಾಲ್ಕಲಿಸ್ಟ್ ದಿನಪತ್ರಿಕೆ ಯುದ್ಧ ಖರ್ಚು ಅಂದಾಜು ಮಾಡಿದೆ. ಇಸ್ರೇಲ್ ಜಿಡಿಪಿಯ ಶೇ.10ರಷ್ಟು ಹಮಾಸ್ ವಿರುದ್ಧದ ಯುದ್ಧಕ್ಕೆ ಖರ್ಚು ಮಾಡಲಾಗುತ್ತಿದೆ. ಇಸ್ರೇಲ್ ಹಣಕಾಸು ಇಲಾಖೆ ಮಾಹಿತಿ ಆಧರಿಸಿ ಯುದ್ಧದ ಖರ್ಚು ಅಂದಾಜು ಮಾಡಲಾಗಿದೆ. ಯುದ್ಧ 8 ರಿಂದ 12 ತಿಂಗಳು ಮುಂದುವರಿದರೆ 51 ಬಿಲಿಯನ್ ಡಾಲರ್‌ಅನ್ನು ಇಸ್ರೇಲ್ ಖರ್ಚು ಮಾಡಲಿದೆ. ಈಗಾಗಲೇ ಯುದ್ಧಕ್ಕೆ 8.2 ಬಿಲಿಯನ್ ಡಾಲರ್ (8200 ಕೋಟಿ) ಹಣವನ್ನು ಇಸ್ರೇಲ್ ಖರ್ಚಿ ಮಾಡಿದೆ.
1 ದಿನಕ್ಕೆ ಯುದ್ಧಕ್ಕಾಗಿ 258 ಮಿಲಿಯನ್ ಡಾಲರ್ ಖರ್ಚಾಗುತ್ತಿದೆ. ಈ ಯುದ್ಧದಿಂದ ಇಸ್ರೇಲ್‌ಗೆ 15 ಬಿಲಿಯನ್ ಡಾಲರ್‌ನಷ್ಟು ಆದಾಯ ಖೋತಾ ಆಗಿದೆ. ಕಾರ್ಪೊರೇಟ್ ಕಂಪನಿಗಳ ಪರಿಹಾರವಾಗಿ 5 ಬಿಲಿಯನ್ ಡಾಲರ್ ವೆಚ್ಚ ಮಾಡಲಾಗುತ್ತಿದೆ. ಇಸ್ರೇಲಿ ಪ್ರಜೆಗಳ ಪುನರ್ವಸತಿಗಾಗಿ 5 ಬಿಲಿಯನ್ ಡಾಲರ್ ಖರ್ಚು ಅಂದಾಜು ಮಾಡಲಾಗಿದೆ.
ಪಾಕ್ ಹಿಂದೂಗಳ ಬಗ್ಗೆಯೂ ಮಾತನಾಡಿ, ಇರ್ಫಾನ್ ಪಠಾಣ್ ಗಾಜಾ ಟ್ವೀಟ್‌ಗೆ ಕನೇರಿಯಾ ರಿಪ್ಲೈ!
ಇನ್ನೊಂದೆಡೆ ಇಸ್ರೇಲ್ ಗಾಜಾ ಪಟ್ಟಿ ವಶಪಡಿಸಿಕೊಳ್ಳುವ ಸುಳಿವು ನೀಡಿದೆ. ಯುದ್ಧ ಮುಗಿದ ನಂತರ ಗಾಜಾ ನಮ್ಮ ನಿಯಂತ್ರಣದಲ್ಲಿರಲಿದೆ. ಯುದ್ಧದ ನಂತರ ಗಾಜಾ ಭದ್ರತೆಯ ಜವಾಬ್ದಾರಿ ನಮ್ಮದು. ಅನಿರ್ದಿಷ್ಟ ಅವಧಿಯವರೆಗೆ ಗಾಜಾ ಭದ್ರತೆ ನೋಡಿಕೊಳ್ಳುತ್ತೇವೆ ಇಸ್ರೇಲ್ ಮೇಲೆ ನಡೆದ ದಾಳಿ ಮತ್ತೆ ಆಗದಂತೆ ಎಚ್ಚರ ವಹಿಸುತ್ತೇವೆ ಎಂದು ತಿಳಿಸಿದೆ.
ಗಾಜಾ, ಪ್ಯಾಲೆಸ್ತೇನ್ ಜನತೆ ಪರವಾಗಿ ಧ್ವನಿ ಎತ್ತಿದ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ!