Sania Mirza on Palestinians: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪ್ಯಾಲೆಸ್ತೀನ್ ಮತ್ತು ಗಾಜಾದ ಜನರ ಪರವಾಗಿ ಧ್ವನಿ ಎತ್ತಿದ್ದಾರೆ. ಸಂತ್ರಸ್ತರಿಗೆ ಆಹಾರ, ನೀರು ಮತ್ತು ವಿದ್ಯುತ್ ನಿಲ್ಲಿಸಿರುವ ಬಗ್ಗೆ ಅವರು ಪ್ರಶ್ನೆ ಎತ್ತಿದ್ದಾರೆ.

ಬೆಂಗಳೂರು (ನ.2): ಭಾರತದ ಪರವಾಗಿ ಹಲವು ವರ್ಷಗಳ ಕಾಲ ಟೆನಿಸ್‌ ಆಡಿ ಸಾಕಷ್ಟು ಗ್ರ್ಯಾಂಡ್‌ ಸ್ಲಾಂ ಪ್ರಶಸ್ತಿ ಗೆದ್ದಿರುವ ಸೂಪರ್‌ ಸ್ಟಾರ್‌ ಸಾನಿಯಾ ಮಿರ್ಜಾ ಇದೇ ಮೊದಲ ಬಾರಿ ಗೆ ಇಸ್ರೇಲ್‌-ಹಮಾಸ್‌ ನಡುವಿನ ಯುದ್ಧದ ಬಗ್ಗೆ ಮಾತನಾಡಿದ್ದಾರೆ. ಇಸ್ರೇಲ್‌ ದಾಳಿಯಿಂದ ಸಂತ್ರಸ್ತರಾಗಿರುವ ಗಾಜಾ ಹಾಗೂ ಪ್ಯಾಲೆಸ್ತೇನ್‌ ನಾಗರೀಕರ ಪರವಾಗಿ ಅವರು ಧ್ವನಿ ಎತ್ತಿದ್ದಾರೆ. ಪ್ಯಾಲೆಸ್ತೇನ್‌ ಹಾಗೂ ಗಾಜಾದ ಕುರಿತಾಗಿ ಸಾನಿಯಾ ಮಿರ್ಜಾ ತಮ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಕೆಲವು ಸ್ಟೋರಿಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಸ್ಟೋರಿಯಲ್ಲಿ ಸಾನಿಯಾ ಮಿರ್ಜಾ ಗಾಜಾದಲ್ಲಿ ಇಸ್ರೇಲ್‌ನ ದಾಳಿಯಿಂದಾಗಿ ಗಾಯಗೊಂಡು ಬಳಲುತ್ತಿರುವ ಜನರಿಗೆ ಆಹಾರ, ನೀರು ಹಾಗೂ ವಿದ್ಯುತ್‌ ಸಂಪರ್ಕವನ್ನು ನಿಲ್ಲಿಸಿರುವ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಯಾರ ಪರ ನಿಂತರೂ ಪರವಾಗಿಲ್ಲ ಕನಿಷ್ಠ ಮಾನವೀಯತೆಯಾದರೂ ಇರಬೇಕು ಎಂದು ಅವರು ಬರೆದುಕೊಂಡಿದ್ದಾರೆ.ಸಾನಿಯಾ ಮಿರ್ಜಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ಏನು ಸಂದೇಶ ನೀಡಿದ್ದಾರೆ ಎನ್ನುವುದರ ವಿವರ ಇಲ್ಲಿದೆ.

ಸಾನಿಯಾ ಮಿರ್ಜಾ ಸ್ಟೋರಿಯಲ್ಲಿ ಬರೆದಿದ್ದೇನು: ಬಾಂಬ್ ದಾಳಿ ನಡೆಯುತ್ತಿರುವುದು ಬಹಳ ವಿಚಿತ್ರವಾಗಿದೆ. ಆದರೆ, ಅವರ ನಂಬಿಕೆ ಬೆಟ್ಟದಷ್ಟು ಗಟ್ಟಿಯಾಗಿದೆ. ನಮ್ಮ ಮನೆಯಲ್ಲಿ ಮಲಗಿದಾಗ ನಮ್ಮ ನಂಬಿಕೆ ಬುಡಮೇಲಾಗಿದೆ ಎಂದು ಅವರು ಒಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾಋಏ. ಇದರ ಹೊರತಾಗಿ ಸಾನಿಯಾ ತಮ್ಮ ಮತ್ತೊಂದು ಸ್ಟೋರಿಯಲ್ಲಿ, ನೀವು ಯಾವ ಕಡೆ ಇದ್ದೀರಿ, ನಿಮ್ಮ ರಾಜಕೀಯ ದೃಷ್ಟಿಕೋನ ಏನು ಎಂಬುದು ಮುಖ್ಯವಲ್ಲ. ಆದರೆ 20 ಲಕ್ಷಕ್ಕೂ ಹೆಚ್ಚು ಮುಗ್ಧ ಜನಸಂಖ್ಯೆಯ ನಗರಕ್ಕೆ ಆಹಾರ, ನೀರು ಮತ್ತು ವಿದ್ಯುತ್ ಕಡಿತಗೊಳಿಸುವ ಸುದ್ದಿಯನ್ನು ನೀವು ಈಗಾಗಲೇ ಕೇಳಿದ್ದೀರಿ. ಈ ವಿಷಯವನ್ನು ನಾವು ಒಪ್ಪಬಹುದೇ? ಅವರು ಎಲ್ಲಿಯೂ ಹೋಗಲಾಗದ ಜನರು, ಬಾಂಬ್ ದಾಳಿಯ ಸಮಯದಲ್ಲಿ ಅವರಿಗೆ ಅಡಗಿಕೊಳ್ಳಲು ಸ್ಥಳಗಳೂ ಅವರಿಗಿಲ್ಲ ಮತ್ತು ಅವರ ಜನಸಂಖ್ಯೆಯ ಅರ್ಧದಷ್ಟು ಜನರು ಮಕ್ಕಳಾಗಿದ್ದರೆ. ಇದು ಮಾತನಾಡಲು ಯೋಗ್ಯವಾದ ಮಾನವೀಯ ಬಿಕ್ಕಟ್ಟು ಅಲ್ಲವೇ?' ಎಂದು ಸಾನಿಯಾ ಪ್ರಶ್ನೆ ಮಾಡಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿದೆ. ಇದರಿಂದಾಗಿ ಗಾಜಾ ಪಟ್ಟಿಯಲ್ಲಿ ವಾಸಿಸುವ ಅಮಾಯಕ ಜನರು ಹೆಚ್ಚು ಬಳಲುತ್ತಿದ್ದಾರೆ. ಈ ಯುದ್ಧವನ್ನು ಪ್ಯಾಲೆಸ್ಟೈನ್‌ನಲ್ಲಿರುವ ಭಯೋತ್ಪಾದಕ ಸಂಘಟನೆಯಾದ ಹಮಾಸ್ ಇಸ್ರೇಲ್‌ನ ಮೇಲೆ 5000 ಕ್ಕೂ ಹೆಚ್ಚು ರಾಕೆಟ್‌ಗಳಿಂದ ದಾಳಿ ಮಾಡುವ ಮೂಲಕ ಪ್ರಾರಂಭಿಸಿತು, ನಂತರ ಇಸ್ರೇಲ್ ಕೂಡ ಸೇಡು ತೀರಿಸಿಕೊಳ್ಳಲು ಪ್ರಾರಂಭಿಸಿತು.

ಮಗನ ಬರ್ತ್‌ಡೇ ಜೊತೆಯಾಗಿ ಆಚರಿಸಿದ ಸಾನಿಯಾ-ಶೋಯೆಬ್‌, 'ಡೈವೋರ್ಸ್‌ ಆಗಿರೋ ಬಗ್ಗೆ ಡೌಟೇ ಇಲ್ಲ' ಎಂದ ಫ್ಯಾನ್ಸ್‌!

ವಾಯುದಾಳಿಗಳ ಮೂಲಕ ಗಾಜಾದ ಮೇಲೆ ಒಂದರ ನಂತರ ಒಂದರಂತೆ ನೂರಾರು ಮಿಲಿಯನ್ ಟನ್‌ ಬಾಂಬ್‌ಗಳನ್ನು ಬೀಳಿಸಿತು. ಈ ಭೀಕರ ಬಾಂಬ್ ದಾಳಿಯಲ್ಲಿ ಹಮಾಸ್ ಜೊತೆಗೆ ಗಾಜಾದಲ್ಲಿ ವಾಸಿಸುವ ಸಾವಿರಾರು ಜನರು ಸಹ ತೊಂದರೆಗೀಡಾದರು. ಇಲ್ಲಿಯವರೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ, ಗಾಜಾದಲ್ಲಿ 8 ಸಾವಿರಕ್ಕೂ ಅಧಿಕ ಮಂದಿ ಸಾವು ಕಂಡಿದ್ದು ಇದರಲ್ಲಿ 342 ಮಂದಿ ಮಕ್ಕಳಾಗಿದ್ದಾರೆ. 20 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ದುಬಾರಿ ಕಾರು, ಐಷಾರಾಮಿ ಮನೆ... ಕ್ರೀಡಾಲೋಕದ ಸ್ಟೈಲಿಶ್ ಐಕಾನ್ ಸಾನಿಯಾ ಮಿರ್ಜಾ ಆಸ್ತಿ ಮೌಲ್ಯ ಎಷ್ಟು ಕೋಟಿ?