ಡ್ಯಾನಿಶ್‌ ಕನೇರಿಯಾ ಪಾಕಿಸ್ತಾನ ಕ್ರಿಕೆಟ್‌ ತಂಡದ ಪರವಾಗಿ ಆಡಿದ 2ನೇ ಹಿಂದು. ಪಾಕ್‌ ಪರವಾಗಿ ಆಡಿದ ಕೊನೆಯ ಹಿಂದು ಕೂಡ ಹೌದು. ಕಳೆದೆರಡು ವರ್ಷಗಳಿಂದ ಕನೇರಿಯಾ ಅವರು ತಮ್ಮ ದೇಶದಲ್ಲಿ ಪಾಕಿಸ್ತಾನಿ ಹಿಂದೂಗಳ ಹದಗೆಟ್ಟ ಪರಿಸ್ಥಿತಿಯನ್ನು ಗಮನಿಸುವಂತೆ ವಿಶ್ವ ಸಮುದಾಯವನ್ನು ಮನವಿ ಮಾಡಿದ್ದಾರೆ. 

ನವದೆಹಲಿ (ನ.4): ಟೀಮ್‌ ಇಂಡಿಯಾ ಮಾಜಿ ಆಲ್ರೌಂಡರ್‌ ಇರ್ಫಾನ್‌ ಪಠಾಣ್‌ ಇತ್ತೀಚೆಗೆ ಇಸ್ರೇಲ್‌ ಹಾಗೂ ಹಮಾಸ್‌ ನಡುವಿನ ಯುದ್ಧದ ಕುರಿತಾಗಿ ತಮ್ಮ ಮೌನವನ್ನು ಮುರಿದಿದ್ದರು. ಶುಕ್ರವಾರ ತಮ್ಮ ಎಕ್ಸ್‌ನಲ್ಲಿ ಗಾಜಾದ ಕುರಿತಾಗಿ ಇರ್ಫಾನ್‌ ಪಠಾಣ್‌ ಬರೆದುಕೊಂಡಿದ್ದಾರೆ. ಯುದ್ಧಪೀಡಿತ ಗಾಜಾದಲ್ಲಿ ತುರ್ತಾಗಿ ಶಾಂತಿಯನ್ನು ಮರುಸ್ಥಾಪನೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಬರೆದುಕೊಂಡಿದ್ದರು. ಗಾಜಾದಲ್ಲಿ ನಡೆಯುತ್ತಿರುವ ಪ್ರಜ್ಞಾಶೂನ್ಯ ಹತ್ಯೆಯನ್ನು ಕೊನೆಗಾಣಿಸಲು ವಿಶ್ವ ನಾಯಕರು ಒಂದಾಗಬೇಕು ಎಂದು ಅವರು ಒತ್ತಾಯಿಸಿದರು. ಜಗತ್ತು ವಿನಾಶಕ್ಕೆ ಕೇವಲ ಪ್ರೇಕ್ಷಕರಾಗಿ ಉಳಿದಿರುವಾಗ ಅಮಾಯಕ ಮಕ್ಕಳು ಕೊಲ್ಲಲ್ಪಡುತ್ತಿದ್ದಾರೆ ಎಂದು ಇರ್ಫಾನ್ ಹೇಳಿದರು. ಎಕ್ಸ್‌ನಲ್ಲಿನ ಅವರ ಪೋಸ್ಟ್ ವೈರಲ್ ಆಗಿದೆ. ಸರಿಯಾದ ವಿಷಯವನ್ನು ಹೇಳಲು ಹಾಗೂ ಶಾಂತಿಗಾಗಿ ಕರೆ ನೀಡಲು ತಮ್ಮ ದೊಡ್ಡ ಮಟ್ಟದ ಫಾಲೋವರ್ಸ್‌ಗಳನ್ನು ಬಳಗವನ್ನು ಇರ್ಫಾನ್‌ ಪಠಾಣ್‌ ಬಹಳ ಸೂಕ್ತವಾಗಿ ಬಳಸಿಕೊಂಡಿದ್ದಾರೆ ಎಂದು ಜನರು ಪ್ರಶಂಸೆ ಮಾಡಿದ್ದಾರೆ.

ಇರ್ಫಾನ್‌ ಪಠಾಣ್‌ ತಮ್ಮ ಪೋಸ್ಟ್‌ನಲ್ಲಿ ಪ್ರತಿದಿನ ಗಾಜಾದಲ್ಲಿ ನವಜಾತ ಶಿಶುಗಳಿಂದ ಹಿಡಿದು 10 ವರ್ಷದವರೆಗಿನ ಮಕ್ಕಳು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ, ಜಗತ್ತು ಮಾತ್ರ ಈ ವಿಚಾರವಾಗಿ ಶಾಂತವಾಗಿದೆ. ಒಬ್ಬ ಕ್ರೀಡಾಪಟುವಾಗಿ ನಾನು ಈಗ ಮಾತನಾಡಲಷ್ಟೇ ಸಾಧ್ಯ. ಆದರೆ, ವಿಶ್ವನಾಯಕರು ಒಂದಾಗಿ ಈ ಪ್ರಜ್ಞಾಶೂನ್ಯ ಹತ್ಯೆಗಳನ್ನು ಕೊನೆಗಾಣಿಸಲು ಇದು ಸರಿಯಾದ ಸಮಯವಾಗಿದೆ' ಎಂದು ಬರೆದುಕೊಂಡಿದ್ದಾರೆ. ವಿಶ್ವಸಂಸ್ಥೆಯನ್ನು ಟ್ವೀಟ್‌ನಲ್ಲಿ ಟ್ಯಾಗ್‌ ಮಾಡಿರುವ ಇರ್ಫಾನ್‌ ಪಠಾಣ್‌, ಸ್ಟಾಪ್‌ ದ ವಯಲೆನ್ಸ್‌ ಮತ್ತು ಗಾಜಾ ಚಿಲ್ಡ್ರನ್‌ ಎನ್ನುವ ಹ್ಯಾಶ್‌ಟ್ಯಾಗ್‌ಅನ್ನೂ ಬಳಸಿದ್ದಾರೆ.

ಇದರ ನಡುವೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ಪಾಕ್‌ ತಂಡವನ್ನು ಪ್ರತಿನಿಧಿಸಿದ ಕೇವಲ 2ನೇ ಹಾಗೂ ಕೊನೆಯ ಹಿಂದು ಅಗಿರುವ ಡ್ಯಾನಿಶ್‌ ಕನೇರಿಯಾ, ಇರ್ಫಾನ್‌ ಪಠಾಣ್‌ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇರ್ಫಾನ್‌ ಪಠಾಣ್‌ ಟ್ವೀಟ್‌ಗೆ ಕೋಟ್‌ ಟ್ವೀಟ್‌ ಮಾಡಿರುವ ಕನೇರಿಯಾ ಟೀಮ್‌ ಇಂಡಿಯಾದ ಮಾಜಿ ವೇಗಿ ನೆರೆಯ ದೇಶದಲ್ಲಿ ತಾರತಮ್ಯ ಎದುರಿಸುತ್ತಿರುವ ಪಾಕಿಸ್ತಾನದಲ್ಲಿರುವ ಹಿಂದೂಗಳ ಪರವಾಗಿಯೂ ಮಾತನಾಡಬೇಕು ಎಂದು ಆಗ್ರಹಿಸಿದ್ದಾರೆ. ಇಸ್ಲಾಮಿಕ್ ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಡ್ಯಾನಿಶ್ ಬಹಳ ಸಮಯದಿಂದ ಧ್ವನಿಯೆತ್ತಿದ್ದಾರೆ. ಮಾಜಿ ಲೆಗ್ ಸ್ಪಿನ್ನರ್ ಶಾಹಿದ್ ಅಫ್ರಿದಿ ಸೇರಿದಂತೆ ಪಾಕಿಸ್ತಾನದ ಅನೇಕ ಹಿಂದಿನ ಶ್ರೇಷ್ಠ ಆಟಗಾರರು ಆಡುವ ದಿನಗಳಲ್ಲಿ ಪಾಕಿಸ್ತಾನಿ ಕ್ರಿಕೆಟ್ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ತಾರತಮ್ಯವನ್ನು ತೋರಿದ್ದರು ಎಂದು ಆರೋಪಿಸಿದ್ದಾರೆ.

ಕನೇರಿಯಾ ತಮ್ಮ ಎಕ್ಸ್‌ ಪೇಜ್‌ನಲ್ಲಿ, 'ಇರ್ಫಾನ್‌ ಭಾಯ್‌, ಮಕ್ಕಳ ಕುರಿತಾದ ನೋವನ್ನು ನೀವು ಅರ್ಥ ಮಾಡಿಕೊಂಡಿದ್ದಕ್ಕೆ ಖುಷಿಯಾಗಿದೆ. ಇದಕ್ಕೆ ನನ್ನ ಬೆಂಬಲ ಕೂಡ ನಿಮಗಿದೆ. ಅದೇ ರೀತಿ ನೀವು ಪಾಕಿಸ್ತಾನದ ಹಿಂದುಗಳ ಕುರಿತಾಗಿಯೂ ಮಾತನಾಡಿದೆ. ಪಾಕಿಸ್ತಾನದಲ್ಲಿ ಅವರ ಸ್ಥಿತಿಗಳೇನು ಭಿನ್ನವಾಗಿಲ್ಲ ಎಂದು ಬರೆದಿದ್ದಾರೆ.

ಇನ್ನು ಡ್ಯಾನಿಶ್‌ ಕನೇರಿಯಾ ಅವರ ಟ್ವೀಟ್‌ಗೆ ಇರ್ಫಾನ್‌ ಪಠಾಣ್‌ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. 'ಜಗತ್ತಿನಲ್ಲಿರುವ ಎಲ್ಲಾ ದುಷ್ಟತನವು ನಿವಾರಣೆಯಾಗಲಿ ಎಂದು ಹಾರೈಸುತ್ತೇನೆ ಎಂದು ಪಠಾಣ್‌ ಬರೆದಿದ್ದಾರೆ. ರಿಪ್ಲೈ ನೀಡಿರುವ ಇರ್ಫಾನ್‌ ಪಠಾಣ್‌, "ಖಂಡಿತವಾಗಿಯೂ ಸಹೋದರ ಡ್ಯಾನಿಶ್, ಈ ವಿಷಯದ ಬಗ್ಗೆ ನೀವು ನನ್ನೊಂದಿಗೆ ನಿಂತಿದ್ದಕ್ಕೆ ಸಂತೋಷವಾಗಿದೆ. ಪ್ರಪಂಚದಾದ್ಯಂತದ ಎಲ್ಲಾ ಕೆಟ್ಟದ್ದರ ಕುರಿತು ಮಾತನಾಡೋಣ ಆದ್ದರಿಂದ ನಾವು ಯಾವುದೇ ನಂಬಿಕೆಯನ್ನು ಲೆಕ್ಕಿಸದೆ ತಪ್ಪು ಕಾರ್ಯಗಳನ್ನು ತೊಡೆದುಹಾಕಬಹುದು ಎಂದು ಭಾವಿಸುತ್ತೇವೆ' ಎಂದಿದ್ದಾರೆ.

ಹೆಣ್ಣು ಮಗುವಿಗೆ ಜನ್ಮ ನೀಡಿದ ಟೀಮ್‌ ಇಂಡಿಯಾ ಸ್ಟಾರ್‌ ವೇಗಿಯ ಪತ್ನಿ!

ಇರ್ಫಾನ್, ಕಳೆದ ಒಂದು ವರ್ಷದಲ್ಲಿ ಪಾಕಿಸ್ತಾನದಲ್ಲಿ ಕೆಲವು ದ್ವೇಷಿಗಳನ್ನು ಪಡೆದುಕೊಂಡಿದ್ದಾರೆ. ಟ್ವಿಟರ್‌ನಲ್ಲಿ ಪಾಕಿಸ್ತಾನಿ ಕ್ರಿಕೆಟ್‌ಅನ್ನು ಟೀಕಿಸುವ ಅವರ ಪ್ರವೃತ್ತಿಗೆ ಪಾಕ್‌ನಲ್ಲಿ ಬಹಳ ದ್ವೇಷಿಗಳು ಹುಟ್ಟಿಕೊಂಡಿದ್ದಾರೆ. 

3 ಸಾವಿರ ಕೋಟಿ ರೂಪಾಯಿ ಮೌಲ್ಯದ ಐಪಿಎಲ್‌ನಲ್ಲಿ ಪಾಲು ಖರೀದಿಸಲು ಮುಂದಾದ ಸೌದಿ ಅರೇಬಿಯಾ!

Scroll to load tweet…