Asianet Suvarna News Asianet Suvarna News

Terrorism : ISIS ನಲ್ಲಿ ಭಾರತ ಮೂಲದ 66 ಉಗ್ರರು, ಬೆಚ್ಚಿ ಬೀಳಿಸುವ ವರದಿ

* ಐಸಿಸ್‌ನಲ್ಲಿ ಭಾರತದ 66  ಉಗ್ರರು ಅಮೆರಿಕ ವರದಿ

* ಭಾರತದ ಉಗ್ರ ನಿಗ್ರಹ ಕ್ರಮಗಳ ಬಗ್ಗೆ ಮೆಚ್ಚುಗೆ

* ಟಾಪ್‌- ಕೇರಳದಿಂದ ಹೋದವರ ಬಗ್ಗೆ ಉಲ್ಲೇಖ?

* ಶೂಟೌಟ್‌ ಬೆದರಿಕೆಯಿಂದ ಅಮೆರಿಕದ ಶಾಲೆಗಳಿಗೆ ರಜೆ

Islamic State ISIS has 66 known Indian-origin fighters US report on terrorism mah
Author
Bengaluru, First Published Dec 18, 2021, 3:05 AM IST
  • Facebook
  • Twitter
  • Whatsapp

ವಾಷಿಂಗ್ಟನ್‌(ಡಿ. 18)  ಭಾರತವನ್ನು(India) ಗುರಿಯಾಗಿಸಿ ದಾಳಿ ನಡೆಸುವ ಉಗ್ರ ಸಂಘಟನೆಗಳು ಪಾಕಿಸ್ತಾನದಲ್ಲೂ (Pakistan)ಈಗಲೂ ಕಾರ್ಯಾಚರಿಸುತ್ತಿವೆ. 2008ರ ಮುಂಬೈ (Mumbai Attack)ದಾಳಿ ಮೇಲಿನ ದೂವಾರಿ ಸಾಜಿದ್‌ ಮೀರ್‌, ಅಂತಾರಾಷ್ಟ್ರೀಯ ಉಗ್ರ ಮಸೂದ್‌ ಅಜರ್‌ ಸೇರಿ ಹಲವರು ಮುಕ್ತವಾಗಿ ಓಡಾಡಿಕೊಂಡಿದ್ದಾರೆ. ಆದರೂ ಪಾಕಿಸ್ತಾನ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಮೆರಿಕ ಚಾಟಿ ಬೀಸಿದೆ.

ಜಾಗತಿಕ ಭಯೋತ್ಪಾದಕ ಗುಂಪು ಇಸ್ಲಾಮಿಕ್‌ ಸ್ಟೇಟ್‌ (ISIS)ನಲ್ಲಿ ಭಾರತ ಮೂಲದ 66 ಉಗ್ರರು ಇದ್ದಾರೆ ಎಂಬ ಆತಂಕಕಾರಿ ಸಂಗತಿಯನ್ನು ಅಮೆರಿಕ (USA)ವಿದೇಶಾಂಗ ಇಲಾಖೆ ವರದಿ ಮಾಡಿದೆ. ಇದೇ ವೇಳೆ ರಾಷ್ಟ್ರೀಯ ಮತ್ತು ಪ್ರಾದೇಶಿಕ ಭಯೋತ್ಪಾದಕ ಶಕ್ತಿಗಳ ನಿಗ್ರಹಕ್ಕೆ ಎನ್‌ಐಎ ಸೇರಿದಂತೆ ಭಾರತದ ಭಯೋತ್ಪಾದನಾ ನಿಗ್ರಹ ಪಡೆಗಳ ಶ್ರಮವನ್ನು ಶ್ಲಾಘಿಸಿದೆ.

ಅಮೆರಿಕ ವಿದೇಶಾಂಗ ಇಲಾಖೆ ಕಾರ‍್ಯದರ್ಶಿ ಆ್ಯಂಟನಿ ಬ್ಲಿಂಕೆನ್‌ 2020ನೇ ಸಾಲಿನ ಭಯೋತ್ಪಾದಕ ವರದಿಯನ್ನು ಗುರುವಾರ ಬಿಡುಗಡೆ ಮಾಡಿದ್ದು, ನವೆಂಬರ್‌ವರೆಗಿನ ಅಂಕಿ- ಅಂಶಗಳ ಪ್ರಕಾರ ಭಾರತ ಮೂಲದ 66 ಮಂದಿ ಐಸಿಸ್‌ ಉಗ್ರ ಸಂಘಟನೆಗೆ ಸೇರಿದ್ದಾರೆ. ಆದರೆ 2020ರಲ್ಲಿ ಯಾವುದೇ ಭಯೋತ್ಪಾದಕರು ವಿದೇಶಗಳಿಂದ ಭಾರತಕ್ಕೆ ಗಡೀಪಾರಾಗಿಲ್ಲ ಎಂದು ತಿಳಿಸಿದ್ದಾರೆ.

ಈ ಹಿಂದೆ ಕೇರಳ ಹಾಗೂ ದೇಶದ ಹಲವು ಭಾಗಗಳಿಂದ ಐಸಿಸ್‌ಗೆ ಯುವಕರು ಸೇರ್ಪಡೆಯಾಗಿದ್ದರು. ಸಿರಿಯಾ, ಇರಾಕ್‌ ಸೇರಿದಂತೆ ಹಲವು ದೇಶಗಳಿಗೆ ಭಾರತದಿಂದ ತೆರಳಿದ್ದರು ಎಂದು ವರದಿ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು. ಅಮೆರಿಕದ ವರದಿಯು ಅದನ್ನು ದೃಢೀಕರಿಸುತ್ತದೆ.

ಇದೇ ವೇಳೆ ಭಾರತದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಭಯೋತ್ಪಾದಕ ವಿರೋಧಿ ಪಡೆಗಳು ಸಕ್ರಿಯವಾಗಿ ಉಗ್ರ ಮೂಲಗಳ ಕಿತ್ತೊಗೆಯಲು ಶ್ರಮಿಸುತ್ತಿವೆ ಎಂದು ಬ್ಲಿಂಕನ್‌ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Tablighi Jamaat : ಬ್ಯಾನ್ ಮಾಡುವಂತೆ ವಿಶ್ವ ಹಿಂದೂ ಪರಿಷತ್ ಆಗ್ರಹ

ಭಯೋತ್ಪಾದನೆ ನಿಗ್ರಹಕ್ಕೆ ಅಮೆರಿಕದೊಂದಿಗೆ ಭಾರತ ಕೈಜೋಡಿಸಿದೆ. ಉಭಯ ದೇಶಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಉಗ್ರವಾದ ನಿಗ್ರಹ ಕುರಿತ ‘ನಿರ್ಣಯ-2309’ರ ಅನುಷ್ಠಾನಕ್ಕೆ ಶ್ರಮಿಸುತ್ತಿವೆ. ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಇದೇ ರೀತಿ ಮುಂದುವರೆಯುತ್ತದೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಶೂಟೌಟ್‌ ಬೆದರಿಕೆಯಿಂದ ಅಮೆರಿಕದ ಶಾಲೆಗಳಿಗೆ ರಜೆ: ವಾಷಿಂಗ್ಟನ್‌: ಜನಪ್ರಿಯ ವೀಡಿಯೊ ಹಂಚಿಕೆ ಆ್ಯಪ್‌ ಟಿಕ್‌ಟಾಕ್‌ನಲ್ಲಿ ಹರಿದಾಡುತ್ತಿರುವ ವೈರಲ್‌ ಪೋಸ್ಟ್‌ ಕಾರಣ ಅಮೆರಿಕದ ಹಲವಾರು ಶಾಲೆಗಳನ್ನು ಶುಕ್ರವಾರ ಮುಚ್ಚಲಾಗಿದೆ. ಶಾಲೆಗಳಲ್ಲಿ ಗುಂಡು ಹಾರಿಸುವಿಕೆ ಹಾಗೂ ಬಾಂಬ್‌ ಬೆದರಿಕೆಯ ಚಾಲೆಂಜ್‌ಅನ್ನು ಈ ಪೋಸ್ಟ್‌ನಲ್ಲಿ ಹಾಕಲಾಗಿದ್ದು, ಶಾಲಾಧಿಕಾರಿಗಳು ಇದನ್ನು ಸುಳ್ಳು ಬೆದರಿಕೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ನ.30 ರಂದು ಆಕ್ಸ್‌ಫರ್ಡ್‌ ಹೈಸ್ಕೂಲ್‌ ವಿದ್ಯಾರ್ಥಿಯೊಬ್ಬ ಶಾಲೆಯಲ್ಲೇ ಗುಂಡು ಹಾರಿಸಿದ್ದ. ಇದರಿಂದ ನಾಲ್ಕು ಮಕ್ಕಳು ಮೃತಪಟ್ಟರೆ, 7 ಮಕ್ಕಳು ಗಂಭೀರ ಗಾಯಕ್ಕೆ ಒಳಗಾಗಿದ್ದರು. ಈ ಹಿನ್ನೆಲೆ ಎಚ್ಚರಿಕೆಯ ಕ್ರಮವಾಗಿ ಕೆಲವೆಡೆ ಶಾಲೆಗಳನ್ನು ಮುಚ್ಚಲಾಗಿದ್ದು, ಕೆಲವೆಡೆ ಶಾಲಾ ಆವರಣದಲ್ಲಿ ಪೊಲೀಸ್‌ರನ್ನು ನೇಮಕ ಮಾಡಿಲಾಗಿದೆ. ಈ ಚಾಲೆಂಜ್‌ನ್ನು ಅರಿಜೋನಾದ ಆನಾಮಿಕ ವ್ಯಕ್ತಿಯೊಬ್ಬ ಪೋಸ್ಟ್‌ ಮಾಡಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ.

ಪಾಕಿಸ್ತಾನ ವಿಫಲ:  ಭಯೋತ್ಪಾದನೆ ನಿಗ್ರಹ ಮತ್ತು 2008ರ ಮುಂಬೈ ದಾಳಿಯ (2008 Mumbai attacks ) ಮಾಸ್ಟರ್ ಮೈಂಡ್‌ ಗಳಾದ ಜೈಶ್-ಎ-ಮೊಹಮದ್ (ಜೆಇಎಂ) ಸಂಸ್ಥಾಪಕ ಮಸೂದ್ ಅಜರ್ (Masood Azhar ) ಮತ್ತು ಲಷ್ಕರ್-ಎ-ತೈಬಾದ (ಎಲ್ ಇಟಿ) ಸಾಜಿದ್ ಮಿರ್ (Sajid Mir) ಸೇರಿದಂತೆ ಭಯೋತ್ಪಾದಕರನ್ನು ವಿಚಾರಣೆಗೆ ಒಳಪಡಿಸಿ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ ಮೆಂಟ್ ( US State Dept Report)ತನ್ನ ನೂತನ ವರದಿಯಲ್ಲಿ ತಿಳಿಸಿದೆ. ಅದರೊಂದಿಗೆ ಭಯೋತ್ಪಾದನೆ ನಿಗ್ರಹ ಮಾಡುವ ವಿಚಾರದಲ್ಲಿ ಪಾಕಿಸ್ತಾನ ತಾನೇ ಹೇಳಿದ ಮಾತುಗಳಿಗೆ ಬದ್ಧವಾಗಿಲ್ಲ ಎಂದೂ ವರದಿಯಲ್ಲಿ ಹೇಳಲಾಗಿದೆ.

ಭಯೋತ್ಪಾದನೆ ನಿಗ್ರಹ ನಿಟ್ಟಿನಲ್ಲಿ ಪಾಕಿಸ್ತಾನ ಸಲ್ಲಿಸಿದ 2015ರ ತನ್ನ ರಾಷ್ಟ್ರೀಯ ಕ್ರಿಯಾ ಯೋಜನೆಯಲ್ಲಿ(2015 National Action Plan) ದೇಶದಲ್ಲಿರುವ ಎಲ್ಲಾ ಭಯೋತ್ಪಾದಕ ಸಂಘಟನೆಯನ್ನು ಬುಡಸಮೇತ ಕಿತ್ತು ಹಾಕುವ ನಿಟ್ಟಿನಲ್ಲಿ ಯಾವುದೇ ತಾರತಮ್ಯವಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಹೇಳಿತ್ತು. ಇದು ಆ ಯೋಜನೆಯ ಅತ್ಯಂತ ಕಷ್ಟಕರ ಕ್ರಮವೂ ಆಗಿತ್ತು. ಆದರೆ, ಇದನ್ನು ಸಾಧಿಸುವಲ್ಲಿಯೇ ಪಾಕಿಸ್ತಾನ ಸೀಮಿತ ಪ್ರಗತಿ ಸಾಧಿಸಿದೆ' ಎಂದು ಭಯೋತ್ಪಾದನೆ ಕುರಿತಾಗಿ ದೇಶಗಳ ವರದಿ (ಕಂಟ್ರೀಸ್ ರಿಪೋರ್ಟ್ಸ್ ಆನ್ ಟೆರರಿಸಂ) 2020ಯಲ್ಲಿ (2020 Country Reports on Terrorism)ಅಮೆರಿಕದ ಸ್ಟೇಟ್ ಡಿಪಾರ್ಟ್ ಮೆಂಟ್ ಹೇಳಿದೆ.

 

 

Follow Us:
Download App:
  • android
  • ios