- Home
- News
- State
- ಹಾಸನ ಬಾಗಲಕೋಟೆಯಲ್ಲಿ ಲೋಕಾಯುಕ್ತ ದಾಳಿ: ಲೋಕಾ ಅಧಿಕಾರಿಗಳಿಗೆ ಮನೆ ಬಾಗಿಲು ತೆರೆಯದ ಇಂಜಿನಿಯರ್ ಸತ್ಯಾನಾರಾಯಣ
ಹಾಸನ ಬಾಗಲಕೋಟೆಯಲ್ಲಿ ಲೋಕಾಯುಕ್ತ ದಾಳಿ: ಲೋಕಾ ಅಧಿಕಾರಿಗಳಿಗೆ ಮನೆ ಬಾಗಿಲು ತೆರೆಯದ ಇಂಜಿನಿಯರ್ ಸತ್ಯಾನಾರಾಯಣ
ಹಾಸನ ಮತ್ತು ಬಾಗಲಕೋಟೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಹಾಸನದಲ್ಲಿ ಪಾಲಿಕೆ ಇಂಜಿನಿಯರ್ ಬಾಗಿಲು ತೆರೆಯಲು ನಿರಾಕರಿಸಿದರೆ, ಬಾಗಲಕೋಟೆಯಲ್ಲಿ ರಸ್ತೆ ಅಭಿವೃದ್ಧಿ ನಿಗಮದ ಚೀಫ್ ಇಂಜಿನಿಯರ್ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆದಿದೆ.

ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿ
ಹಾಸನ/ಬಾಗಲಕೋಟೆ: ಬೆಳ್ಳಂಬೆಳಗ್ಗೆ ಹಾಸನ ಹಾಗೂ ಬಾಗಲಕೋಟೆಯಲ್ಲಿ ಲೋಕಾಯುಕ್ತ ದಾಳಿ ನಡೆದಿದೆ. ಹಾಸನದಲ್ಲಿ ಮಹಾನಗರಪಾಲಿಕೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸತ್ಯನಾರಾಯಣ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.
ಹಾಸನ ಬಾಗಲಕೋಟೆಯಲ್ಲಿ ಲೋಆಯುಕ್ತ ದಾಳಿ
ಹಾಸನ ನಗರದ ರವೀಂದ್ರ ನಗರದಲ್ಲಿರುವ ಮನೆ ಮೇಲೆ ಲೋಕಾಯುಕ್ತ ಡಿಎವೈಎಸ್ಫಿ ಸುರೇಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಆದರೆ ಅಧಿಕಾರಿಗಳು ಮನೆ ಬಾಗಿಲು ತೆರೆಯದೇ ಒಳಗಡೆ ಕುಳಿತಿದ್ದು, ಲೋಕಾಯುಕ್ತ ಅಧಿಕಾರಿಗಳು ಮನೆ ಬಾಗಿಲು ತೆರೆಯುವುದಕ್ಕೆ ಹರಸಾಹಸ ಪಡುತ್ತಿದ್ದಾರೆ.
ಹಾಸನದಲ್ಲಿ ಬಾಗಿಲು ತೆರೆಯದ ಅಧಿಕಾರಿ
ಮನೆ ಮೇಲೆ ಹೋಗಲು ಅಧಿಕಾರಿಗಳ ಹರಸಾಹಸಪಡುತ್ತಿದ್ದು, ಜೀಪ್ ಮೇಲೆ ಹತ್ತಿ ಮೊದಲನೆ ಮಹಡಿಗೆ ಹೋಗಿದ್ದಾರೆ. ನಂತರ ಬಾಗಿಲು ಬಡಿದರು ಮನೆಯಿಂದ ಯಾರೂ ಹೊರಗೆ ಬಂದಿಲ್ಲ. ಹೀಗಾಗಿ ಮನೆ ಬಾಗಿಲು ತೆಗೆಯುವುದಕ್ಕೆ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.
ಅರ್ಧಗಂಟೆಯಿಂದ ಮನೆ ಮುಂದೆ ಕಾಯುತ್ತಲೇ ಇರುವ ಅಧಿಕಾರಿಗಳು
ಕಳೆದ ಅರ್ಧ ಗಂಟೆಯಿಂದ ಅಧಿಕಾರಿ ಮನೆ ಮುಂದೆ ಲೋಕಾಯುಕ್ತ ಅಧಿಕಾರಿಗಳು ಕಾದು ಕುಳಿತಿದ್ದಾರೆ. ಸತ್ಯನಾರಾಯಣ ಅವರು ಹಾಸನ ಮಹಾನಗರ ಪಾಲಿಕೆಯಲ್ಲಿ ಇಂಜಿನಿಯರ್ ಆಗಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಸುರೇಶ್, ಇನ್ಸ್ ಪೆಕ್ಟರ್ ಶಿಲ್ಪಾ ನೇತೃತ್ವದಲ್ಲಿ ದಾಳಿ ನಡೆದಿದೆ.
ಬಾಗಲಕೋಟೆಯಲ್ಲೂ ವಸಂತ ವಾಲಪ್ಪ ನಾಯಕ ಮನೆ ಮೇಲೆ ದಾಳಿ
ಹಾಗೆಯೇ ಬಾಗಲಕೋಟೆಯಲ್ಲೂ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಚೀಫ್ ಇಂಜಿನಿಯರ್ ವಸಂತ ವಾಲಪ್ಪ ನಾಯಕ ಅವರ ಬೆಂಗಳೂರು ಹಾಗೂ ಬಾಗಲಕೋಟೆಯಲ್ಲಿರುವ ಮನೆಯ ಮೇಲೆ ದಾಳಿ ನಡೆದಿದೆ.
ಎಎಸ್‌ಐ ಭೀಮಸಿಂಗ್ ನಾಯಕ್ ಮನೆ ಮೇಲೂ ದಾಳಿ
ವಸಂತ ಸಹೋದರ ಭೀಮಸಿಂಗ್ ನಾಯಕ್ ಅವರ ಬಾಗಲಕೋಟೆ ಮನೆ ಮೇಲೆ ದಾಳಿ ನಡೆದಿದೆ. ಭೀಮಸಿಂಗ್ ನಾಯಕ ಬಾಗಲಕೋಟೆ ಡಿಎಆರ್‌ನಲ್ಲಿ ಎಎಸ್‌ಐ ಆಗಿದ್ದಾರೆ. ಬಾಗಲಕೋಟೆಯ ಪೋಸ್ಟಲ್ ಕಾಲೋನಿಯಲ್ಲಿರುವ ಭೀಮಸಿಂಗ್ ಮನೆ ಮೇಲೆ ದಾಳಿ ನಡದಿದೆ.
ಇದನ್ನೂ ಓದಿ: ಲೋಕಾ ದಾಳಿಗೊಳಗಾದ KREIS ಎಂಜಿನಿಯರ್ ಜನಾರ್ಧನ್ ಒಂದು ತಿಂಗಳಿಂದ ನಿಗೂಢ ನಾಪತ್ತೆ
ಬಸವನಗರ ತಾಂಡಾದಲ್ಲಿರುವ ಮನೆ ಮೇಲೆ ದಾಳಿ
ಹಾಗೆಯೇ ವಸಂತ ನಾಯಕ ಅವರ ಮೂಲ ಗ್ರಾಮ ಬಾಗಲಕೋಟೆ ತಾಲೂಕಿನ ಬಸವನಗರ ತಾಂಡಾದಲ್ಲಿರುವ ಮನೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಾಗಲಕೋಟೆ ಲೋಕಾಯುಕ್ತ ಎಸ್ ಪಿ ಮಾನಿಂಗ್ ನಂದಗಾವಿ ಮಾರ್ಗದರ್ಶನದಲ್ಲಿ ಲೋಕಾ ಡಿವೈಎಸ್ ಪಿ ಸುರೇಶ್ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆದಿದೆ.
ಇದನ್ನೂ ಓದಿ: ಸಿದ್ಧಾಪುರ ಠಾಣೆ ಪೊಲೀಸರಿಗೀಗ ಕೇಸ್‌ಗಿಂತ 7 ಕೋಟಿ ಕಾಸು ಕಾಯುವುದೇ ಚಿಂತೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

