ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ, ತಮ್ಮ ತಂದೆ ಅಲಿ ಖಮೇನಿ ಅವರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಅಮೆರಿಕ ಮತ್ತು ಇಸ್ರೇಲ್‌ಗೆ ಎಚ್ಚರಿಕೆ ನೀಡಿದ್ದಾರೆ. ತಂದೆಯ ಅಂತ್ಯಕ್ರಿಯೆಯ ನಂತರ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಮೊದಲ ಭಾಷಣದಲ್ಲಿ ಅವರು ಈ ಶಪಥ ಮಾಡಿದ್ದಾರೆ.

ಇರಾನ್‌ನ ನೂತನ ಸರ್ವೋಚ್ಚ ನಾಯಕನಾಗಿ ಅಧಿಕಾರ ವಹಿಸಿಕೊಂಡಿರುವ ಮೊಜ್ತಬಾ ಖಮೇನಿ(Mojtaba Khamenei), ತಮ್ಮ ತಂದೆಯ ಹ ತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಅಮೆರಿಕ ಮತ್ತು ಇಸ್ರೇಲ್‌(US and Iran)ಗೆ ನೇರ ಎಚ್ಚರಿಕೆ ರವಾನಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ನಂತರ ರಾಷ್ಟ್ರವನ್ನುದ್ದೇಶಿಸಿ ಮಾಡಿದ ತಮ್ಮ ಮೊದಲ ಭಾಷಣದಲ್ಲಿ ಅವರು ಈ ಕಠಿಣ ಸಂದೇಶ ನೀಡಿದ್ದಾರೆ. ಜುಲೈ 9 ರಂದು ಅಲಿ ಖಮೇನಿ ಅವರ ಅಂತ್ಯಕ್ರಿಯೆ ನಡೆದಿತ್ತು. ಇದರ ಬೆನ್ನಲ್ಲೇ ಅವರ ಪುತ್ರ ಮೊಜ್ತಬಾ ಅವರು ದೇಶದ ಅತ್ಯುನ್ನತ ನಾಯಕನ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಅಧಿಕಾರ ಸ್ವೀಕರಿಸಿದ ಬಳಿಕ ಮಾಡಿದ ಮೊದಲ ಭಾಷಣದಲ್ಲೇ ಅವರು ತಮ್ಮ ಮುಂದಿನ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

'ರಕ್ತಕ್ಕೆ ಸೇಡು ತೀರಿಸಿಕೊಳ್ಳುತ್ತೇವೆ'

ತಮ್ಮ ಭಾಷಣದಲ್ಲಿ ಅಮೆರಿಕ ಮತ್ತು ಇಸ್ರೇಲ್ ಅನ್ನು ನೇರವಾಗಿ ಗುರಿಯಾಗಿಸಿಕೊಂಡ ಮೊಜ್ತಬಾ, 'ಇರಾನ್‌ನಲ್ಲಿ ಹರಿಸಿದ ಅಮಾಯಕರ ರಕ್ತಕ್ಕೆ ಸೇಡು ತೀರಿಸಿಕೊಳ್ಳದೆ ಬಿಡೋದಿಲ್ಲ' ಎಂದು ಪ್ರತಿಜ್ಞೆ ಮಾಡಿದ್ದಾರೆ. ಈ ಮೂಲಕ ತಮ್ಮ ತಂದೆಯ ಹ ತ್ಯೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಮೊಜ್ತಬಾ ಖಮೇನಿ ಅವರ ಈ ಮಾತುಗಳು ನಿರೀಕ್ಷಿತವೇ ಆಗಿದ್ದರೂ, ನಾಯಕನಾಗಿ ಅವರ ಮೊದಲ ಅಧಿಕೃತ ಹೇಳಿಕೆಯೇ ಅಮೆರಿಕ ಇಸ್ರೇಲ್ ವಿರುದ್ಧ ರಿವೇಂಜ್ ಹೇಳಿಕೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಯು ಮಧ್ಯಪ್ರಾಚ್ಯದಲ್ಲಿ ಈಗಾಗಲೇ ಇರುವ ಉದ್ವಿಗ್ನ ಪರಿಸ್ಥಿತಿಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ತಮ್ಮ ತಂದೆಯ ಹಾದಿಯಲ್ಲೇ ಸಾಗುವ ಸ್ಪಷ್ಟ ಸಂದೇಶವನ್ನು ಅವರು ಈ ಮೂಲಕ ನೀಡಿದ್ದಾರೆ.

ಇರಾನ್ ಗೆ ಟ್ರಂಪ್ ಎಚ್ಚರಿಕೆ

ಈ ನಡುವೆ ಇರಾನ್ ಬೆದರಿಕೆಗೆ ಟ್ರಂಪ್ ಕಠಿಣ ಪ್ರತಿಕ್ರಿಯೆ ನೀಡಿದ್ದು, ಹ ತ್ಯೆ ಪ್ರಯತ್ನ ನಡೆದರೆ ಇರಾನ್ ಸಂಪೂರ್ಣ ನಾಶಪಡಿಸುತ್ತೇವೆ. ಇರಾನ್ ನಾಶಕ್ಕಾಗಿ ಯುಎಸ್ ಒಂದು ಸಾವಿರ ಕ್ಷಿಪಣಿಗಳನ್ನ ಮೀಸಲಿಟ್ಟಿದೆ ಎಂಬ ಎಚ್ಚರಿಕೆಯೂ ನೀಡಿದ್ದಾರೆ.