ಇರಾನ್ ಸರ್ಕಾರವು 19 ವರ್ಷದ ಕುಸ್ತಿ ಚಾಂಪಿಯನ್ ಸಲೇಹ್ ಮೊಹಮ್ಮದಿ ಸೇರಿದಂತೆ ಮೂವರು ಯುವ ಪ್ರತಿಭಟನಾಕಾರರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದೆ. ಚಿತ್ರಹಿಂಸೆ ನೀಡಿ ಪಡೆದ ತಪ್ಪೊಪ್ಪಿಗೆ ಪಡೆದು ಬಳಿಕ ಈ ಮರಣದಂಡನೆ ವಿಧಿಸಲಾಗಿದೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಆರೋಪಿಸಿವೆ.
ಪ್ರತಿಭಟನಾಕಾರರ ವಿರುದ್ಧ ಮುಂದುವರೆದ ಇರಾನ್‌ನ ದಮನಕಾರಿ ನೀತಿ
ಅಮೆರಿಕಾ ಇಸ್ರೇಲ್ ಇರಾನ್ ನಡುವಣ ಯುದ್ಧ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇದರ ನಡುವೆಯೇ ಇರಾನ್ ತನ್ನ ದೇಶದ ರಸ್ಲಿಂಗ್ ಚಾಂಪಿಯನ್ ಕೇವಲ 19 ವರ್ಷದ ಸಲೇಹ್ ಅವರು ಸೇರಿದಂತೆ ಒಟ್ಟು ಮೂವರು ತರುಣರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದೆ ಎಂದು ವರದಿಯಾಗಿದೆ. ಇರಾನ್‌ನ ಕೋಮ್‌ನಲ್ಲಿ ಮೂವರು ಪ್ರತಿಭಟನಾಕಾರರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗಿದೆ ಎಂದು ಇರಾನ್‌ನ ರಾಜ್ಯ ಮಾಧ್ಯಮ ಹಾಗೂ ಮಾನವಹಕ್ಕುಗಳ ಗುಂಪು ಈ ಬಗ್ಗೆ ವರದಿ ಮಾಡಿವೆ. ಈ ಕ್ರಮವು ಸರ್ಕಾರದ ವಿರುದ್ಧ ಭಿನ್ನಾಭಿಪ್ರಾಯದ ಹೊಂದಿರುವವರ ವಿರುದ್ಧ ಸರ್ಕಾರ ನಡೆಸುತ್ತಿರುವ ದಮನಕಾರಿ ನೀತಿಯ ವ್ಯಾಪಕ ಹೆಚ್ಚಳವಾಗಿದೆ ಎಂದು ಇರಾನ್ ಮಾನವ ಹಕ್ಕುಗಳ ಕಾರ್ಯಕರ್ತರು ಹೇಳಿದ್ದಾರೆ.
ಯುವ ಕುಸ್ತಿಪಟು ಸಲೇಹ್ ಮೊಹಮ್ಮದಿ ಸೇರಿ ಮೂವರಿಗೆ ಮರಣದಂಡನೆ
ಉದಯೋನ್ಮುಖ ಕುಸ್ತಿ ಪ್ರತಿಭೆಯಾಗಿದ್ದ ಸಲೇಹ್ ಮೊಹಮ್ಮದಿ ಅವರನ್ನು ಸಯೀದ್ ದಾವೋಡಿ ಮತ್ತು ಮೆಹದಿ ಘಾಸೆಮಿ ಅವರೊಂದಿಗೆ ಗಲ್ಲಿಗೇರಿಸಲಾಯಿತು. ಜನವರಿ 8, 2026 ರಂದು ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಇಬ್ಬರು ಪೊಲೀಸರ ಹತ್ಯೆಯಲ್ಲಿ ಈ ಮೂವರು ಭಾಗಿಯಾಗಿದ್ದರು ಎಂದು ಇವರ ಮೇಲೆ ಆರೋಪ ಹೊರಿಸಲಾಗಿದೆ.
ಕೋಮ್‌ನಲ್ಲಿ ಜನರ ಗುಂಪಿನ ಮುಂದೆಯೇ ಈ ಮೂವರಿಗೆ ಮರಣದಂಡನೆ ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ ಎಂದು ರಾಜ್ಯ ಮಾಧ್ಯಮ ವರದಿ ಮಾಡಿದೆ. ಈ ಮೂವರು ಇರಾನ್‌ನಲ್ಲಿ ಡಿಸೆಂಬರ್ 2025 ರ ಅಂತ್ಯದಲ್ಲಿ ಪ್ರಾರಂಭವಾಗಿ ಜನವರಿ 2026 ರವರೆಗೆ ಮುಂದುವರಿದ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಸಂಬಂಧಿಸಿದಂತೆ ಗಲ್ಲಿಗೇರಿಸಲ್ಪಟ್ಟ ಮೊದಲ ಪ್ರತಿಭಟನಾಕಾರರಾಗಿದ್ದಾರೆ.
ಇರಾನ್ ಮಾನವ ಹಕ್ಕುಗಳು (IHRNGO) ಆಯೋಗವು ಈ ಪ್ರಕರಣದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದು, ಸರ್ಕಾರ ಇನ್ನೂ ಹೆಚ್ಚಿನ ಮರಣದಂಡನೆಗಳನ್ನು ಕಾರ್ಯರೂಪಕ್ಕೆ ತರಬಹುದಾದ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ. ಪ್ರತಿಭಟನಾಕಾರರಿಗೆ ಚಿತ್ರಹಿಂಸೆ ಮತ್ತು ಬಲವಂತದ ಅಡಿಯಲ್ಲಿ ಪಡೆದ ತಪ್ಪೊಪ್ಪಿಗೆಗಳ ಆಧಾರದ ಮೇಲೆ ಹಾಗೂ ಅನ್ಯಾಯದ ವಿಚಾರಣೆಗಳ ನಂತರ ಈ ಮೂವರು ಪ್ರತಿಭಟನಾಕಾರರಿಗೆ ಮರಣದಂಡನೆ ವಿಧಿಸಲಾಯಿತು ಎಂದು ಮಾನವ ಹಕ್ಕುಗಳ ಗುಂಪಿನ ನಿರ್ದೇಶಕ ಮಹಮೂದ್ ಅಮಿರಿ-ಮೊಘದ್ದಮ್ ಹೇಳಿದ್ದಾರೆ.
ಇರಾನ್ ಮಾನವಹಕ್ಕುಗಳ ಆಯೋಗದಿಂದ ತೀವ್ರ ಆಕ್ರೋಶ
ಈ ಮರಣದಂಡನೆಗಳನ್ನು ನಾವು ಕಾನೂನು ಬಾಹಿರ ಹತ್ಯೆಗಳೆಂದು ಪರಿಗಣಿಸುತ್ತೇವೆ, ರಾಜಕೀಯ ಭಿನ್ನಾಭಿಪ್ರಾಯವನ್ನು ನಿಗ್ರಹಿಸಲು ಭಯ ಸೃಷ್ಟಿಸುವ ಉದ್ದೇಶದಿಂದ ಇದನ್ನು ಮಾಡಲಾಗಿದೆ ಎಂದು ಅವರು ಹೇಳಿದರು.ಮುಂದೆ ಇವರು ಪ್ರತಿಭಟನಾಕಾರರ ಸಾಮೂಹಿಕ ಮರಣದಂಡನೆ ನಡೆಸಬಹುದು ಎಂದು ಹೇಳುವ ಮೂಲಕ ಅಮಿರಿ ಮೊಘದ್ದಮ್ ಅವರು ಮುಂದೆ ಏನಾಗಬಹುದು ಎಂಬುದರ ಕುರಿತು ಎಚ್ಚರಿಸಿದ್ದಾರೆ. ನಾವು ನಿಜವಾದ ಮತ್ತು ಸನ್ನಿಹಿತ ಅಪಾಯವನ್ನು ಎದುರಿಸುತ್ತಿದ್ದೇವೆ, ಅಂತರರಾಷ್ಟ್ರೀಯ ಸಮುದಾಯವು ತುರ್ತಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದ್ದಾರೆ.
ಚಿತ್ರಹಿಂಸೆ ನೀಡಿ ತಪ್ಪೊಪ್ಪಿಗೆ ಪಡೆದು ಬಳಿಕ ಮರಣದಂಡನೆ
ಮಾನವ ಹಕ್ಕುಗಳ ಗುಂಪುಗಳು ಹೇಳುವಂತೆ, ಮೊಹಮ್ಮದಿ ಅವರಿಗೆ ಸಾಕಷ್ಟು ಚಿತ್ರಹಿಂಸೆಯ ನೀಡಿ, ಅವರು ದೇವರ ವಿರುದ್ಧ ಯುದ್ಧ ಮಾಡುವುದು ಎಂಬ ಆರೋಪಗನ್ನು ಹೊರಿಸಿ ಅವುಗಳನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಲಾಯ್ತು. ದೇವರ ವಿರುದ್ಧ ಯುದ್ಧದ(waging war against God) ತಪ್ಪಿಗೆ ಇದು ಇರಾನ್‌ನಲ್ಲಿ ಮರಣದಂಡನೆ ಶಿಕ್ಷೆ ಇದೆ.
ಆ ಮೂವರು ವ್ಯಕ್ತಿಗಳಿಗೆ ರಕ್ಷಣೆ ನಿರಾಕರಿಸಲಾಯಿತು ಮತ್ತು ಮಾಡದ ತಪ್ಪನ್ನು ಒಪ್ಪಿಕೊಳ್ಳುವಂತೆ ಒತ್ತಾಇಸಲಾಯ್ತು. ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಅಮ್ನೆಸ್ಟಿ ಇಂಟರ್ನ್ಯಾಷನಲ್ ಹೇಳಿದೆ. ಈ ಪ್ರಕರಣವನ್ನು ಅರ್ಥಪೂರ್ಣ ವಿಚಾರಣೆಗೆ ಹೋಲುವಂತಹ ತ್ವರಿತ ಪ್ರಕ್ರಿಯೆಗಳ ಮೂಲಕ ಮುನ್ನಡೆಸಲಾಯಿತು ಎಂದು ಅದು ಹೇಳಿದೆ.
ಇದೊಂದು ಸ್ಪಷ್ಟ ರಾಜಕೀಯ ಕೊಲೆ
ಇರಾನಿನ ಕ್ರೀಡಾಪಟು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತೆ ನಿಮಾ ಫಾರ್, ಈ ಮರಣದಂಡನೆಯನ್ನು ಒಂದು ಸ್ಪಷ್ಟ ರಾಜಕೀಯ ಕೊಲೆ ಎಂದು ಕರೆದಿದ್ದಾರೆ. ಅವನ ಮರಣದಂಡನೆಯು ಒಂದು ಸ್ಪಷ್ಟ ರಾಜಕೀಯ ಕೊಲೆಯಾಗಿತ್ತು, ಇರಾನ್ ಇಸ್ಲಾಮಿಕ್ ಗಣರಾಜ್ಯವು ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಮತ್ತು ಸಮಾಜವನ್ನು ಭಯಭೀತಗೊಳಿಸಲು ಕ್ರೀಡಾಪಟುಗಳನ್ನು ಗುರಿಯಾಗಿಸುವ ಮಾರ್ಗವನ್ನು ಅನುಸರಿಸಿದೆ ಎಂದು ಫಾರ್ ಫಾಕ್ಸ್ ನ್ಯೂಸ್‌ಗೆ ಅವರು ಹೇಳಿದ್ದಾರೆ. ಈ ಪ್ರಕರಣವು 2020 ರಲ್ಲಿ ಇರಾನಿನ ಕುಸ್ತಿಪಟು ನವಿದ್ ಅಫ್ಕಾರಿ ಅವರನ್ನು ಗಲ್ಲಿಗೇರಿಸಿದ್ದ ಪ್ರಕರಣಕ್ಕೆ ಹೋಲುತ್ತಿದೆ. ಇದು ಜಾಗತಿಕ ಆಕ್ರೋಶಕ್ಕೆ ಕಾರಣವಾಯಿತು ಎಂದು ಅವರು ಹೇಳಿದರು.
ಇದನ್ನೂ ಓದಿ: ಅಮೆರಿಕಾದ F-35 ಯುದ್ಧ ವಿಮಾನಕ್ಕೂ ಹೊಡೆಯಿತಾ ಇರಾನ್: ಅಮೆರಿಕಾ ಹೇಳಿದ್ದೇನು?
ಇದರ ವಿರುದ್ಧಅಂತರರಾಷ್ಟ್ರೀಯ ಕ್ರೀಡಾ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕೆಂದು ಫಾರ್ ಒತ್ತಾಯಿಸಿದರು. ಪ್ರತಿಭಟನಾಕಾರರು ಮತ್ತು ಕ್ರೀಡಾಪಟುಗಳ ಮರಣದಂಡನೆಯನ್ನು ನಿಲ್ಲಿಸುವವರೆಗೆ, ನಕಲಿ ವಿಚಾರಣೆಗಳಲ್ಲಿ ಜೈಲಿನಲ್ಲಿರುವವರನ್ನು ಬಿಡುಗಡೆ ಮಾಡುವವರೆಗೆ ಮತ್ತು ಮಾತನಾಡುವ ಸ್ಪರ್ಧಿಗಳ ವಿರುದ್ಧ ಪ್ರತೀಕಾರವನ್ನು ಕೊನೆಗೊಳಿಸುವವರೆಗೆ ಇರಾನ್ ಅನ್ನು ಅಂತರರಾಷ್ಟ್ರೀಯ ಸ್ಪರ್ಧೆಗಳಿಂದ ನಿಷೇಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಸಾವಿರಾರು ಬಂಧನಗಳಿಗೆ ಕಾರಣವಾದ ವ್ಯಾಪಕ ಪ್ರತಿಭಟನೆಗಳ ನಂತರ ಈ ಮರಣದಂಡನೆಗಳು ಜಾರಿಗೆ ಬಂದಿವೆ. ಮುಂಬರುವ ವಾರಗಳಲ್ಲಿ ಹೆಚ್ಚಿನ ಮರಣದಂಡನೆಗಳನ್ನು ಜಾರಿಗೊಳಿಸಬಹುದು ಎಂದು ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ. ಇದರ ವಿರುದ್ಧ ಅಂತರರಾಷ್ಟ್ರೀಯ ಸಮುದಾಯವು ಕಾರ್ಯನಿರ್ವಹಿಸುವಂತೆ ಇರಾನ್ ಮಾನವ ಹಕ್ಕುಗಳ ಆಯೋಗ (IHRNGO)ಕರೆ ನೀಡಿದೆ, ನಿರ್ದಿಷ್ಟವಾಗಿ ಯುರೋಪಿಯನ್ ಒಕ್ಕೂಟವು ಮತ್ತಷ್ಟು ಮರಣದಂಡನೆಗಳನ್ನು ತಡೆಗಟ್ಟಲು ಮತ್ತು ಅಪಾಯದಲ್ಲಿರುವವರನ್ನು ರಕ್ಷಿಸಲು ಲಭ್ಯವಿರುವ ಎಲ್ಲಾ ರಾಜತಾಂತ್ರಿಕ ಸಾಧನಗಳನ್ನು ಬಳಸಬೇಕು ಎಂದು ಅದು ಹೇಳಿದೆ.
ಇದನ್ನೂ ಓದಿ: ಫ್ಲೈಒವರ್‌ನಿಂದ ಕೆಳಗೆ ಬಿದ್ದ ಫಾರ್ಚುನರ್ : ಲಡಾಕ್ ಟ್ರಿಪ್ ಮುಗಿಸಿ ವಾಪಸ್ ಬರ್ತಿದ್ದ ಮೂವರು ಸ್ನೇಹಿತರು ಸಾವು
ಇರಾನ್ ಇಸ್ಲಾಮಿಕ್ ಗಣರಾಜ್ಯವು ತನ್ನ ಉಳಿವಿಗಾಗಿ ಹೋರಾಡುತ್ತಿದೆ ಎಂದು ಅಮಿರಿ-ಮೊಗದ್ದಮ್ ಹೇಳಿದ್ದಾರೆ. ಮತ್ತು ಅದರ ಅಸ್ತಿತ್ವಕ್ಕೆ ದೊಡ್ಡ ಬೆದರಿಕೆ ಮೂಲಭೂತ ಬದಲಾವಣೆಯನ್ನು ಬಯಸುವ ಇರಾನಿನ ಜನರಿಂದ ಬರುತ್ತದೆ ಎಂದು ಅದು ತಿಳಿದಿದೆ ಎಂದು ಆಯೋಗ ಹೇಳಿದೆ


