ಭಾರಿ ರಿಯಾಯಿತಿಯಲ್ಲಿ ಭಾರತಕ್ಕೆ 3.5 ಮಿಲಿಯನ್ ಬ್ಯಾರಲ್ Crude Oil ಮಾರಲು ಸಜ್ಜಾದ ರಷ್ಯಾ!

ದೊಡ್ಡ ಮಟ್ಟದ ರಿಯಾಯಿತಿಯಲ್ಲಿ ಭಾರತಕ್ಕೆ 3.5 ಮಿಲಿಯನ್ ಕಚ್ಚಾ ತೈಲ

ಕಚ್ಚಾ ತೈಲದ ಬ್ಯಾರಲ್ ಗಳ ಸಾಗಾಣೆ ಹಾಗೂ ವಿಮೆಯ ಭರವಸೆ ನೀಡಿದ ರಷ್ಯಾ

ವಿಶ್ವಸಂಸ್ಥೆಯಲ್ಲಿ ಭಾರತದ ತಟಸ್ಥ ನಿಲುವಿಗಾಗಿ ರಷ್ಯಾದ ಆಫರ್

India old ally Russia may be all set to sell India 3-5 million barrels of its crude at deep discounts san

ನವದೆಹಲಿ (ಮಾ. 16): ಕಚ್ಚಾತೈಲ (Crude Oil) ದರ ಏರಿಕೆಯ ಹಿನ್ನೆಲೆಯಲ್ಲಿ ದೇಶದಲ್ಲಿ ಇಂಧನ ಬೆಲೆ ಏರಿಕೆಯಾಗುವ ನಿರೀಕ್ಷೆಯಲ್ಲಿರುವ ಸರಕಾರಕ್ಕೆ ಮತ್ತು ಜನತೆಗೆ ನಿರಾಳವಾಗಿದ್ದು, ಯುದ್ಧದ ನಡುವೆಯೂ ಮಿತ್ರ ದೇಶ (India Old ally) ಭಾರತದ ಸಹಾಯಕ್ಕೆ ನಿಂತಿದೆ. ಕಚ್ಚಾ ತೈಲದ ದರ ಏರಿಕೆಯನ್ನು ಗಮನಿಸಿರುವ ರಷ್ಯಾ (Russia), ಭಾರತಕ್ಕೆ ಬರೋಬ್ಬರಿ 3.5 ಮಿಲಿಯನ್ ಬ್ಯಾರಲ್ ಕಚ್ಚಾ ತೈಲವನ್ನು ಭಾರೀ ರಿಯಾಯಿತಿಯಲ್ಲಿ ನೀಡಲು ಮುಂದಾಗಿದ್ದು, ಭಾರತ ಕೂಡ ಬಹುತೇಕವಾಗಿ ಇದಕ್ಕೆ ಒಪ್ಪಿಕೊಂಡಿದೆ ಎನ್ನಲಾಗಿದೆ. ಪಾಶ್ಚಿಮಾತ್ಯ ದೇಶಗಳ ನಿರ್ಬಂಧಗಳಿಂದ ಸಂಕಷ್ಟದಲ್ಲಿರುವ ರಷ್ಯಾಗೂ ಇದು ಅಗತ್ಯವಾಗಿ ಬೇಕಾದ ಒಪ್ಪಂದ ಎನಿಸಿದೆ.

ಚೀನಾದ ಬಳಿಕ ಭಾರತವು ವಿಶ್ವದ ಅತಿದೊಡ್ಡ ಕಚ್ಚಾ ತೈಲದ ಆಮದುದಾರ ದೇಶವಾಗಿದೆ. ಅದರೆ, ಉಕ್ರೇನ್ (Ukraine) ದೇಶದ ಮೇಲೆ ರಷ್ಯಾದ ಆಕ್ರಮಣದ ಬೆನ್ನಲ್ಲಿಯೇ ಒಂದು ಬ್ಯಾರಲ್ ಕಚ್ಚಾ ತೈಲದ ದರ 140 ಯುಎಸ್ ಡಾಲರ್ ಗೆ ತಲುಪಿದೆ. ಭಾರೀ ರಿಯಾಯಿತಿಯಲ್ಲಿರುವ ರಷ್ಯಾದ ತೈಲವನ್ನು ಕೊಂಡುಕೊಳ್ಳುವ ಮೂಲಕ ಚಾಲ್ತಿ ಖಾತೆ ಕೊರತೆಯನ್ನು ಕಡಿಮೆ ಮಾಡುವ ಮೂಲಕ ದೇಶದ ಹಣಕಾಸಿನ ಸ್ಥಿತಿಗೆ ಪ್ರಮುಖ ಉತ್ತೇಜನವನ್ನು ನೀಡುವ ನಿಟ್ಟಿನಲ್ಲಿ ಭಾರತ ಗಮನಹರಿಸಿದೆ. 

ಒಪ್ಪಂದದ ನಿಯಮಗಳ ಅನುಸಾರ ರಷ್ಯಾವು ಭಾರತಕ್ಕೆ ತಲುಪಿಸಲಾಗುವ ಕಚ್ಚಾ ತೈಲದ ಸಾಗಣೆ ಮತ್ತು ವಿಮೆಯನ್ನು ಸಹ ನೋಡಿಕೊಳ್ಳುತ್ತದೆ ಎನ್ನಲಾಗಿದೆ. ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ, ದೇಶದ ಅಗ್ರ ರಿಫೈನರ್ ಇಂಡಿಯನ್ ಆಯಿಲ್ ಕಾರ್ಪೊರೇಷನ್ 3 ಮಿಲಿಯನ್ ಬ್ಯಾರೆಲ್ ರಷ್ಯಾದ ಯುರಲ್ಸ್ ಅನ್ನು ಖರೀದಿಸಿದೆ. ಫೆಬ್ರವರಿ 24 ರಂದು ರಷ್ಯಾ ಉಕ್ರೇನ್ ಅನ್ನು ಆಕ್ರಮಿಸಿದ ನಂತರ ಇದು ಗ್ರೇಡ್‌ನ ಮೊದಲ ಖರೀದಿಯಾಗಿದೆ.

ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳಿಂದ ರಷ್ಯಾದ ಮೇಲಿನ ನಿರ್ಬಂಧಗಳು ಅನೇಕ ಕಂಪನಿಗಳು ಮತ್ತು ದೇಶಗಳು ರಷ್ಯಾದ ತೈಲದಿಂದ  ದೂರವಿಡುವಂತೆ ಮಾಡಿದೆ. ಇನ್ನೊಂದೆಡೆ ಮಾಸ್ಕೋ ದೊಡ್ಡ ಖರೀದಿದಾರರನ್ನು ಹುಡುಕುವ ಪ್ರಯತ್ನದಲ್ಲಿದ್ದು, ದಾಖಲೆಯ ರಿಯಾಯಿತಿ ಮಟ್ಟದಲ್ಲಿ ಮಾರಾಟ ಮಾಡಲು ಒತ್ತಾಯಿಸಿದೆ. ಹಡಗುಗಳನ್ನು ಫಿಕ್ಸ್ ಮಾಡುವ ಮತ್ತು ವಿಮೆಗೆ ಸಂಬಂಧಿಸಿದ ಯಾವುದೇ ತೊಡಕುಗಳನ್ನು ತಪ್ಪಿಸಲು ವಿತರಿಸಿದ ಆಧಾರದ ಮೇಲೆ ರಷ್ಯಾದ ತೈಲವನ್ನು ಖರೀದಿಸುವುದಾಗಿ ಫೆಬ್ರವರಿ ಅಂತ್ಯದಲ್ಲಿ ಐಒಸಿ ಹೇಳಿತ್ತು. ಮೂಲಗಳ ಪ್ರಕಾರ ತೈಲವನ್ನು ಈವರೆಗೀ ನಿಷೇಧಿಸಲಾಗಿಲ್ಲ ಮತ್ತು ಅದು ನಿರ್ಬಂಧಿತ  ಘಟಕದೊಂದಿಗೆ ವ್ಯವಹರಿಸುತ್ತಿಲ್ಲವಾದ್ದರಿಂದ ಸರಕುಗಳಿಗೆ ಪಾವತಿಸುವಲ್ಲಿ ಇಂಡಿಯನ್ ಆಯಿಲ್ ಯಾವುದೇ ತೊಂದರೆಯನ್ನು ಎದುರಿಸಿಲ್ಲ.

ಡಾಲರ್ ಗೆ ಯುವಾನ್ ಟಕ್ಕರ್; ಚೀನಾಕ್ಕೆ ಕಚ್ಚಾ ತೈಲ ಡಾಲರ್ ಬದಲು ಯುವಾನ್ ನಲ್ಲಿ ಮಾರಾಟಕ್ಕೆ ಸೌದಿ ಸಿದ್ಧತೆ!
ಈ ನಡುವೆ ನಿರ್ಬಂಧಕ್ಕೆ ಒಳಗಾಗಿರುವ ದೇಶದ ತೈಲ ಮತ್ತು ಅನಿಲ ವಲಯದಲ್ಲಿ ತನ್ನ ಹೂಡಿಕೆಗಳನ್ನು ಆಳವಾಗಿಸಲು ರಷ್ಯಾ ಇತ್ತೀಚೆಗೆ ಭಾರತವನ್ನು ಒತ್ತಾಯಿಸಿದೆ. ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯಲ್ಲಿ ರಷ್ಯಾದ ಕಂಪನಿಗಳ ಮಾರಾಟ ಜಾಲವನ್ನು ವಿಸ್ತರಿಸಲು ಉತ್ಸುಕವಾಗಿದೆ. 1991 ರ ಸೋವಿಯತ್ ಒಕ್ಕೂಟದ ಪತನದ ನಂತರ ರಷ್ಯಾದ ಆರ್ಥಿಕತೆಯು ಅದರ ಕೆಟ್ಟ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಉಕ್ರೇನ್ ನ ಮೇಲೆ ರಷ್ಯಾ ಮಾಡಿರುವ ಆಕ್ರಮಣದಿಂದಾಗಿ ಪಶ್ಚಿಮದ ದೇಶಗಳು ತೀವ್ರ ನಿರ್ಬಂಧಗಳನ್ನು ವಿಧಿಸಿದೆ. ಭಾರತಕ್ಕೆ ದೀರ್ಘಾವಧಿಯ ಶಸ್ತ್ರಾಸ್ತ್ರ ಪೂರೈಕೆದಾರ ದೇಶವಾಗಿರುವ ಮಾಸ್ಕೋ ವಿರುದ್ಧ ವಿಶ್ವಸಂಸ್ಥೆಯಲ್ಲಿ ಮತದಾನದಿಂದ ದೂರ ಉಳಿದ ನಂತರ, ಕೆಲವು ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಉಕ್ರೇನ್‌ನಲ್ಲಿ ರಷ್ಯಾದ ಕ್ರಮಗಳನ್ನು ಖಂಡಿಸಲು ಭಾರತವನ್ನು ಒತ್ತಾಯಿಸಿದ್ದಾರೆ.

ಕಚ್ಚಾತೈಲ ದರ 140 ಡಾಲರ್‌ನಿಂದ 99.84 ಡಾಲರ್‌ಗೆ ಭಾರೀ ಇಳಿಕೆ!
ಇನ್ನೊಂದೆಡೆ ಜಗತ್ತಿನ ಅತೀದೊಡ್ಡ ಕಚ್ಚಾ ತೈಲ (Crude oil) ರಫ್ತು ರಾಷ್ಟ್ರ ಸೌದಿ ಅರೇಬಿಯಾ (Saudi Arabia) ಅಮೆರಿಕದ (US)ಮೇಲಿನ  ಅಸಮಾಧಾನವನ್ನು ಈಗ ಬಹಿರಂಗವಾಗಿ ವ್ಯಕ್ತಪಡಿಸಲು ಮುಂದಾಗಿದೆ. ಚೀನಾಕ್ಕೆ (Chinna) ಕಚ್ಚಾ ತೈಲವನ್ನು ಅಮೆರಿಕನ್ ಡಾಲರ್ (Dollar) ಬದಲು ಯುವಾನ್ (Yuan) ಬೆಲೆಯಲ್ಲಿ ಮಾರಾಟ ಮಾಡಲು ಸಿದ್ಧತೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಸೌದಿ ಅರೇಬಿಯಾ ಈಗಾಗಲೇ ಚೀನಾದೊಂದಿಗೆ ಮಾತುಕತೆಯಲ್ಲಿ ನಿರತವಾಗಿದೆ ಎಂದು ಮೂಲಗಳು ತಿಳಿಸಿವೆ. ಸೌದಿ ಅರೇಬಿಯಾದ ಈ ನಡೆ ಮುಂದಿನ ದಿನಗಳಲ್ಲಿ ಜಾಗತಿಕ ಪೆಟ್ರೋಲಿಯಂ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಪ್ರಾಬಲ್ಯಕ್ಕೆ ಹೊಡೆತ ನೀಡೋ ಎಲ್ಲ ಸಾಧ್ಯತೆಗಳಿವೆ.

Latest Videos
Follow Us:
Download App:
  • android
  • ios