United Kingdom Prime Minister Election: ಮೊದಲ ಸುತ್ತಿನ ಮತದಾನದಲ್ಲಿ ಭಾರತ ಮೂಲದ ರಿಷಿ ಸುನಕ್‌ ಮುನ್ನಡೆ ಸಾಧಿಸಿದ್ದು, ಸದ್ಯ ರೇಸ್‌ನಲ್ಲಿ ಮೂವರು ಮಾತ್ರ ಉಳಿದಿದ್ದಾರೆ. ಇನ್ಫೋಸಿಸ್‌ ನಾರಾಯಣ ಮೂರ್ತಿ ಅಳಿಯ ಎಂಬ ಕಾರಣಕ್ಕೆ ಭಾರತದಲ್ಲೂ ಬ್ರಿಟನ್‌ ಚುನಾವಣೆ ಕುರಿತಂತೆ ಕುತೂಹಲ ಮನೆ ಮಾಡಿದೆ.

ನವದೆಹಲಿ: ಇಂಗ್ಲೆಂಡಿನ ಮಾಜಿ ಚಾನ್ಸೆಲ್ಲರ್‌ ರಿಷಿ ಸುನಕ್‌ ಯುನೈಟೆಡ್‌ ಕಿಂಗ್‌ಡಮ್‌ನ ಪ್ರಧಾನಿ ಚುನಾವಣೆಯ ಮೊದಲ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬೋರಿಸ್‌ ಜಾನ್ಸನ್‌ ರಾಜೀನಾಮೆಯ ನಂತರ ಇನ್ಫೋಸಿಸ್‌ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್‌ ಇಂಗ್ಲೆಂಡ್‌ನ ನೂತನ ಪ್ರಧಾನಿಯಾಗುವುದು ಬಹುತೇಕ ಖಚಿತ ಎನ್ನಲಾಗಿತ್ತು. ಇದೀಗ ಮೊದಲ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ, ಗೆಲ್ಲುವ ನಿರೀಕ್ಷೆ ಹೆಚ್ಚಿಸಿದ್ದಾರೆ. ರಿಷಿ ಸುನಕ್‌ 88 ಮತಗಳನ್ನು ಪಡೆದರೆ, ಹತ್ತಿರದ ಪ್ರತಿಸ್ಪರ್ಧಿ ಪೆನ್ನಿ ಮೊರ್ಡಾಂಟ್‌ 67 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ಟ್ರಸ್‌ ಲಿಜ್‌ ಇದ್ದು 50 ಮತಗಳನ್ನು ಪಡೆದುಕೊಂಡಿದ್ದಾರೆ. ಜತೆಗೆ ಹಣಕಾಸು ಸಚಿವ ನಧಿಮ್‌ ಜಹಾವಿ ಮತ್ತು ಮಾಜಿ ಕ್ಯಾಬಿನೆಟ್‌ ಸಚಿವ ಜೆರೆಮಿ ಹಂಟ್‌ ಪ್ರಧಾನಿ ರೇಸ್‌ನಿಂದ ಸೋತು ಆಚೆ ಹೋಗಿದ್ದಾರೆ. 

ಪ್ರಧಾನಿ ಚುನಾವಣೆಯಲ್ಲಿ ಇನ್ನೊಂದು ವಿಶೇಷತೆಯೆಂದರೆ ಭಾರತ ಮೂಲದ ಅಟಾರ್ನಿ ಜನರಲ್‌ ಸುಯೆಲ್ಲಾ ಬ್ರೇವರ್‌ಮ್ಯಾನ್‌ ಕೂಡ ಇದ್ದರು. ಆದರೆ ಅವರು ಕೂಡ ಸ್ಪರ್ಧೆಯಿಂದ ಆಚೆ ನಡೆದಿದ್ದಾರೆ. ಸೆಪ್ಟೆಂಬರ್ 5ರ ಒಳಗೆ ಬೋರಿಸ್‌ ಜಾನ್ಸನ್‌ರ ಉತ್ತರಾಧಿಕಾರಿಯನ್ನು ಇಂಗ್ಲೆಂಡ್‌ ಸಂಸತ್ತು ಆಯ್ಕೆ ಮಾಡಬೇಕಿದೆ. ಇದೀಗ ಮೊದಲ ಹಂತದ ಚುನಾವಣಾ ಮತದಾನ ಪ್ರಕ್ರಿಯೆ ಅಂತ್ಯಗೊಂಡಿದ್ದು, ರಿಷಿ ಸುನಕ್‌ ಮುಂದಿನ ಹಂತದಲ್ಲೂ ಹೆಚ್ಚು ಮತಗಳನ್ನು ಸೆಳೆಯುವ ಸಾಧ್ಯತೆಯಿದೆ. 

ಬೋರಿಸ್‌ ಜಾನ್ಸನ್‌ ರಾಜೀನಾಮೆ ಬೆನ್ನಲ್ಲೇ, ಬ್ರಿಟನ್ ಮುಂದಿನ ಪ್ರಧಾನಿ ಯಾರು ಅನ್ನೋ ಕುತೂಹಲ, ಚರ್ಚೆ ಜೋರಾಗಿ ಆರಂಭವಾಗಿತ್ತು. ಇದರ ನಡುವೆ ಪ್ರದಾನಿ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅಳಿಯ ರಿಶಿ ಸುನಕ್ ಟ್ವಿಟರ್ ಮೂಲಕ ಹೊಸ ಘೋಷಣೆ ಮಾಡಿದ್ದರು. ಬ್ರಿಟನ್ ಕನ್ಸರ್ವೇಟೀವ್ ಪಕ್ಷದ ಮುಂದಿನ ನಾಯಕ ಹಾಗೂ ಬ್ರಿಟನ್ ಪ್ರಧಾನಿಯಾಗಲು ನಿಂತಿದ್ದೇನೆ ಎಂದು ಘೋಷಿಸಿದ್ದರು.

ವಿಡಿಯೋ ಸಂದೇಶದಲ್ಲಿ ರಿಷಿ ಸುನಕ್, ತಾನು ಪ್ರಧಾನಿಯಾಗಲು ಸೂಕ್ತ ಅಭ್ಯರ್ಥಿ ಎಂದಿದ್ದರು. ಇಷ್ಟೇ ಅಲ್ಲ ಪ್ರಧಾನಿಯಾದ ಬಳಿಕ ಮುಂದಿರುವ ಸವಾಲುಗಳನ್ನು ಎದುರಿಸುವ ರೂಪುರೇಶೆಯನ್ನು ತೆರೆದಿಟ್ಟಿದ್ದರು. ವಿಶೇಷ ಅಂದರೆ ರಿಷಿ ವಿಡಿಯೋದಲ್ಲಿ ತಮ್ಮ ಕುಟುಂಬದ ಕುರಿತು ಹೇಳಿದ್ದರು. ಪೋಷಕರು, ಕುಟುಂಬ, ದೇಶ ಪ್ರೇಮ, ಆರ್ಥಿಕತೆ ಕುರಿತು ಮಾತನಾಡಿದ್ದರು. ಇದು ಜನರನ್ನು ಆಗಲೇ ಆಕರ್ಷಿಸಿತ್ತು.

ಇದನ್ನೂ ಓದಿ: ಟೀ ಸರ್ವ್‌ ಮಾಡುತ್ತಿರುವ ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ

ಎರಡು ವರ್ಷ ಕೊರೋನಾದಿಂದ ತತ್ತರಿಸಿದ ಸಂದರ್ಭದಲ್ಲಿ ಅತ್ಯುತ್ತಮವಾಗಿ ಆರ್ಥಿಕತೆಯನ್ನು ನಿರ್ವಹಿಸಿದ್ದೇನೆ. ಇದೀಗ ಹೊಸ ಬ್ರಿಟನ್ ಕಟ್ಟಬೇಕಿದೆ. ಹೊಸ ಆರ್ಥಿಕತೆ ಬೇಕಿದೆ ಎಂದಿದ್ದರು. ತಮ್ಮ ತಾಯಿ ಬ್ರಿಟನ್‌ಗೆ ಆಗಮಿಸಿದ ಕತೆಯಿಂದ ಹಿಡಿದು ಇದೀಗ ಪ್ರಧಾನಿಯಾಗುವ ವರೆಗಿನ ಕತೆಯನ್ನು ಪುಟ್ಟದಾಗಿ ಚೊಕ್ಕವಾಗಿ ರಿಷಿ ಹೇಳಿದ್ದರು. ಇಲ್ಲಿವರೆಗೆ ನನ್ನ ಕತೆ ಹೇಳಿದರೆ, ಮುಂದಿನ ನಿಮ್ಮ ಕತೆ, ಈ ದೇಶದ ಕತೆಯನ್ನು ಮತ್ತಷ್ಟು ಸುಂದರವಾಗಿಸಬೇಕಿದೆ ಎಂದು ಹೊಸ ಭರವಸೆ ತುಂಬಿದ್ದರು.

ಯುರೋಪ್‌ ಒಕ್ಕೂಟವನ್ನು ಬ್ರಿಟನ್‌ ತೊರೆದ (ಬ್ರೆಕ್ಸಿಟ್‌) ನಂತರದ ನಿರ್ವಹಣಾ ವೈಫಲ್ಯ, ಹಲವು ಹಗರಣಗಳು, ವಿವಾದಗಳಿಂದ ಕೂಡಿದ 3 ವರ್ಷಗಳ ಆಡಳಿತ ಬಳಿಕ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಜು.06 ಬೋರಿಸ್‌ ನಾಯಕತ್ವ ವಿರೋಧಿಸಿ ಅವರ ಸಂಪುಟದ ಸದಸ್ಯರು ಸಾಲು ಸಾಲು ರಾಜೀನಾಮೆ ನೀಡಿದ ನಂತರ ಬೊರಿತ್ ಪದತ್ಯಾಗಕ್ಕೆ ಭಾರಿ ಒತ್ತಡ ಕೇಳಿಬಂದಿತ್ತು. ಬೊರಿಸ್ ರಾಜೀನಾಮೆ ಬಳಿಕ ಮುಂದಿನ ಪ್ರಧಾನಿ ರಿಶಿ ಸುನಕ್ ಎಂದೇ ಬಿಂಬಿತವಾಗಿದೆ. 

ಇದನ್ನೂ ಓದಿ: ಬ್ರಿಟನ್ ಪ್ರಧಾನಿ ರೇಸ್‌ನಲ್ಲಿರುವ ರಿಷಿ ಸುನಕ್ 21 ವರ್ಷದ ಹಿಂದಿನ ವಿಡಿಯೋ ವೈರಲ್!

ಆಡಳಿತಾರೂಢ ಕನ್ಸರ್ವೇಟಿವ್‌ ಪಕ್ಷದಲ್ಲಿ ಮುಂದಿನ ಪ್ರಧಾನಿಗೆ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಕನ್ಸರ್ವೇಟಿವ್‌ ಪಕ್ಷದ 716 ಸದಸ್ಯರ ಸಮೀಕ್ಷೆಯಲ್ಲಿ ರಕ್ಷಣಾ ಸಚಿವ ಬೆನ್‌ ವ್ಯಾಲೇಸ್‌ ಮುಂಚೂಣಿಯಲ್ಲಿದ್ದಾರೆ ಎಂದು ‘ಮೈ ಗವ್‌’ ಸಮೀಕ್ಷೆ ಹೇಳಿದ್ದವು. ಈನ್ನೂ ಕೆಲವು ಮಾಧ್ಯಮಗಳು ಗೋವಾ ಮೂಲದ ರಾಜಕಾರಣಿ, ಬ್ರಿಟನ್‌ನ ಹಾಲಿ ಅಟಾರ್ನಿ ಜನರಲ್‌ ಸುಯೆಲ್ಲಾ ಬ್ರೇವರ್‌ಮ್ಯಾನ್‌ ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿದ್ದವು. ಪ್ರೀತಿ ಪಟೇಲ್‌, ಪೆನ್ನಿ ಮೊರ್ಡುವಾಂಟ್‌, ಸ್ಟೀವ್‌ ಬೇಕರ್‌, ಸಾಜಿದ್‌ ಜಾವಿದ್‌ ಹೆಸರು ಕೂಡ ಚಾಲ್ತಿಯಲ್ಲಿದೆ.

ಕನ್ಸರ್ವೇಟಿವ್‌ ಪಕ್ಷ ಆಂತರಿಕ ಚುನಾವಣೆ ನಡೆಸಿ ಮುಂದಿನ ಪ್ರಧಾನಿಯನ್ನು ಆಯ್ಕೆ ಮಾಡಬೇಕಾಗುತ್ತದೆ. ಈ ಆಂತರಿಕ ಚುನಾವಣೆ ತಕ್ಷಣವೇ ಏರ್ಪಡದು. ಅಕ್ಟೋಬರ್‌ನಲ್ಲಿ ನಡೆಯಬಹುದು ಎಂದು ವರದಿಗಳು ಹೇಳಿವೆ. ಅಲ್ಲಿವರೆಗೂ ಬೋರಿಸ್‌ ಜಾನ್ಸನ್‌ ಅವರು ಹಂಗಾಮಿ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ.

ಇದನ್ನೂ ಓದಿ: ಬ್ರಿಟನ್ ಪ್ರಧಾನಿ ಬೋರಿಸ್‌ ರಾಜಕೀಯ ಜೀವನ ಸರ್ವನಾಶಗೊಳಿಸಿದ ಐದು ವಿವಾದಗಳು!

ಜಗತ್ತಿನ ಅತ್ಯುತ್ತಮ ಕೆಲಸವನ್ನು ನಾನು ಕೈಬಿಡುತ್ತಿದ್ದೇನೆ. ಇದರಿಂದ ನಾನೆಷ್ಟುದುಃಖಿತನಾಗಿದ್ದೇನೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು’ ಎಂದು ನುಡಿದಿದ್ದರು. ‘ರಾಜಕೀಯದಲ್ಲಿ ಯಾರೂ ತೀರಾ ಅನಿವಾರ್ಯವಲ್ಲ. ಹೀಗಾಗಿ ಮುಂದಿನ ನಾಯಕನಿಗೆ ಸಾಧ್ಯವಾದಷ್ಟುಬೆಂಬಲವನ್ನು ನೀಡುತ್ತೇನೆ’ ಎಂದೂ ವಿಷಾದ ಭಾವದಿಂದಲೇ ಜಾನ್ಸನ್ ಹೇಳಿದ್ದರು.