ವಿಮಾನದಲ್ಲೇ ಪ್ರಾಣಬಿಟ್ಟ ಪ್ರಯಾಣಿಕ: ದೆಹಲಿ-ದೋಹಾ ವಿಮಾನ ಕರಾಚಿಯಲ್ಲಿ ತುರ್ತು ಲ್ಯಾಂಡಿಂಗ್
ದೆಹಲಿಯಿಂದ ದೋಹಾಗೆ ತೆರಳುತ್ತಿದ್ದ ವಿಮಾನವೊಂದು ವೈದ್ಯಕೀಯ ಅಗತ್ಯದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಲ್ಯಾಂಡ್ ಆದ ಘಟನೆ ನಡೆದಿದೆ.
ದೆಹಲಿ: ದೆಹಲಿಯಿಂದ ದೋಹಾಗೆ ತೆರಳುತ್ತಿದ್ದ ವಿಮಾನವೊಂದು ವೈದ್ಯಕೀಯ ಅಗತ್ಯದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಲ್ಯಾಂಡ್ ಆದ ಘಟನೆ ನಡೆದಿದೆ. ವಿಮಾನದಲ್ಲಿ ನೈಜಿರೀಯಾ ಮೂಲದ ಪ್ರಜೆಯೊಬ್ಬರು ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದು, ಈ ಹಿನ್ನೆಲೆಯಲ್ಲಿ ದೋಹಾಗೆ ಹೊರಟಿದ್ದ ವಿಮಾನವನ್ನು ಪಾಕಿಸ್ತಾನದ ಕರಾಚಿಗೆ ತಿರುಗಿಸಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು. ಆದರೆ ಅಷ್ಟರಲ್ಲಿ ಪ್ರಯಾಣಿಕನ ಪ್ರಾಣಪಕ್ಷಿ ಹಾರಿ ಹೋಗಿದೆ. ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಅಸ್ವಸ್ಥ ಪ್ರಯಾಣಿಕನನ್ನು ತಪಾಸಣೆ ನಡೆಸಿದ ಕರಾಚಿ ಏರ್ಪೋರ್ಟ್‌ನ ವೈದ್ಯಕೀಯ ತಂಡ ಆತ ಸಾವಿಗೀಡಾಗಿದ್ದಾನೆ ಎಂದು ಘೋಷಿಸಿದರು.
ಹೀಗಾಗಿ ವಿಮಾನ ಕರಾಚಿಯಿಂದ ವಾಪಸ್ ಪ್ರಯಾಣಿಕನ ಮೃತದೇಹದೊಂದಿಗೆ ದೆಹಲಿಗೆ ಬಂದಿದೆ. ಪ್ರಯಾಣಿಕನ ಪ್ರಾಣ ಉಳಿಸುವ ಸಲುವಾಗಿ ವಿಮಾನದ ತುರ್ತು ಲ್ಯಾಂಡಿಂಗ್‌ಗೆ ಅವಕಾಶ ಮಾಡಿಕೊಡಲಾಯಿತು ಎಂದು ಅಧಿಕೃತ ಮೂಲಗಳು ಹೇಳಿವೆ. ಆದರೆ ದುರಾದೃಷ್ಟವಶಾತ್ ಪ್ರಯಾಣಿಕನ ಪ್ರಾಣಪಕ್ಷಿ ಹಾರಿ ಹೋಗಿದೆ. ಮೃತ ಯುವಕನನ್ನು 60 ವರ್ಷ ಪ್ರಾಯದ ಅಬ್ದುಲ್ಲಾ (Abdullah) ಎಂದು ಗುರುತಿಸಲಾಗಿದ್ದು, ಈತ ನೈಜಿರೀಯನ್ (Nigerian) ಪ್ರಜೆ ಎಂದು ತಿಳಿದು ಬಂದಿದೆ.
ವಿಮಾನದ ರೆಕ್ಕೆಯಲ್ಲಿ ಬೆಂಕಿ: ಸಕಾಲದಲ್ಲಿ ಫ್ಲೈಟ್ ಲ್ಯಾಂಡ್ ಮಾಡಿ ನೂರಾರು ಜನರ ಜೀವ ಉಳಿಸಿದ ಕ್ಯಾಪ್ಟನ್..!
ಏರ್‌ಕ್ರಾಫ್ಟ್ A320-271N ವಿಮಾನವನ್ನು ಕರಾಚಿ ಏರ್‌ಪೋರ್ಟ್‌ನಲ್ಲಿ ಐದು ಗಂಟೆಗಳವರೆಗೆ ಪಾರ್ಕ್ ಮಾಡಲಾಗಿತ್ತು. ಕರಾಚಿಯ ಅಧಿಕಾರಿಗಳು ಪ್ರಯಾಣಿಕನ ಮರಣ ಪ್ರಮಾಣಪತ್ರವನ್ನು ನೀಡಿ ಎಲ್ಲಾ ಔಪಚಾರಿಕತೆಗಳನ್ನು ಮುಗಿಸಿಕೊಂಡ ನಂತರ ದೆಹಲಿಗೆ ಮರಳಿತು. ಪ್ರಯಾಣಿಕನೋರ್ವ ವಿಮಾನದಲ್ಲಿ ಅಸ್ವಸ್ಥಗೊಂಡಿದ್ದ, ಹೀಗಾಗಿ ವಿಮಾನದ ಕ್ಯಾಪ್ಟನ್ ಕರಾಚಿಯ (Karachi) ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Jinnah International Airport) ಅಧಿಕಾರಿಗಳನ್ನು ಸಂಪರ್ಕಿಸಿ ತುರ್ತು ಲ್ಯಾಂಡಿಂಗ್‌ಗೆ ಅನುಮತಿ ಕೇಳಿದರು. ಅದರಂತೆ ವಿಮಾನ ತುರ್ತು ಲ್ಯಾಂಡ್ ಮಾಡಲಾಯಿತು ಎಂದು ಕರಾಚಿಯ ನಾಗರಿಕ ವಿಮಾನ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.
ನಾವು ಈ ಘಟನೆಯಿಂದ ಬಹಳ ಬೇಸರಗೊಂಡಿದ್ದೇವೆ. ನಮ್ಮ ಪ್ರಾರ್ಥನೆ ಹಾಗೂ ಸಾಂತ್ವನ ಮೃತರ ಕುಟುಂಬದ ಜೊತೆ ಇರಲಿದೆ. ನಾವೀಗ ಸಂಬಂಧಿತ ಅಧಿಕಾರಿಗಳ ಸಮನ್ವಯದೊಂದಿಗೆ ಪ್ರಸ್ತುತ ಇತರ ಪ್ರಯಾಣಿಕರನ್ನು ಅವರು ತೆರಳಬೇಕಾದಲ್ಲಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ ಎಂದು ಇಂಡಿಗೋ (IndiGo) ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಯಾಣಿಕನ ಶೌಚ ರಂಪಾಟ : ವಿಮಾನ ತುರ್ತು ಲ್ಯಾಂಡಿಂಗ್