ಹವಾಮಾನ ವೈಪರೀತ್ಯ ಇಲ್ಲವೇ ತಾಂತ್ರಿಕ ಕಾರಣದಿಂದಾಗಿ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಘಟನೆಗಳನ್ನು ಕೇಳಿದ್ದೇವೆ. ಆದರೆ, ಪ್ರಯಾಣಿಕನೊಬ್ಬನ ಅವಾಂತರದಿಂದ ಅಮೆರಿಕದ ಚಿಕಾಗೊದಿಂದ ಹಾಂಗ್ ಕಾಂಗೆ ಹೊರಟಿದ್ದ ವಿಮಾನ ಅರ್ಧದಾರಿಯಲ್ಲೇ ಇಳಿದಿದೆ.

ಚಿಕಾಗೋ (ಜ.07): ಹವಾಮಾನ ವೈಪರೀತ್ಯ ಇಲ್ಲವೇ ತಾಂತ್ರಿಕ ಕಾರಣದಿಂದಾಗಿ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಘಟನೆಗಳನ್ನು ಕೇಳಿದ್ದೇವೆ. ಆದರೆ, ಪ್ರಯಾಣಿಕನೊಬ್ಬನ ಅವಾಂತರದಿಂದ ಅಮೆರಿಕದ ಚಿಕಾಗೊದಿಂದ ಹಾಂಗ್ ಕಾಂಗೆ ಹೊರಟಿದ್ದ ವಿಮಾನ ಅರ್ಧದಾರಿಯಲ್ಲೇ ಇಳಿದಿದೆ. ಆಗಿದ್ದೇನೆಂದರೆ, ಟಾಯ್ಲೆಟ್‌ಗೆ ಹೋದ ಪ್ರಯಾಣಿಕನೊಬ್ಬ ಎಲ್ಲೆಂದರಲ್ಲಿ ಮಲವನ್ನು ಚೆಲ್ಲಿ ದುರ್ನಾತ ಸೃಷ್ಟಿಸಿದ್ದ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊನೆಗೆ ಬೇರೆ ದಾರಿ ಕಾಣದೇ ವಿಮಾನವನ್ನು ಅಲಾಸ್ಕಾದ ಆ್ಯಂಕೊರೇಜ್ ನಗರದಲ್ಲಿ ಇಳಿಸಲಾಗಿದೆ. ಆತ ವಿಮಾನದ ಎರಡೂ ಟಾಯ್ಲೆಟ್‌ಗಳಲ್ಲಿ ಮಲವನ್ನು ಚೆಲ್ಲಿ ಗಲೀಜು ಮಾಡಿದ್ದ ಅಲ್ಲದೇ ತನ್ನ ಟೀ ಶರ್ಟ್‌ನಿಂದ ಅದನ್ನು ಮುಚ್ಚಿಡಲು ಯತ್ನಿಸಿದ್ದ. ಇದರಿಂದ ಇತರ ಪ್ರಯಾಣಿಕರಿಗೆ ತೊಂದರೆಯಾಗಿದ್ದು, ವಿಮಾನವನ್ನು ಅರ್ಧದಾರಿಯಲ್ಲೇ ಇಳಿಸಿ ಸ್ವಚ್ಛಗೊಳಿಸಲಾಯಿತು.