Asianet Suvarna News Asianet Suvarna News

'ನಿಮ್ಮತ್ರಾಗಲ್ಲ ಮನೆಗೋಗಿ' ಕುತಂತ್ರಿ ಚೀನಾ ಕಂಪನಿಗೆ ಭಾರತೀಯ ರೈಲ್ವೆ ಮೆಗಾ ಶಾಕ್

ಚೀನಿ ಕಂಪನಿಗೆ ಭಾರತೀಯ ರೈಲ್ವೆ ಶಾಕ್/ ದೊಡ್ಡ ಒಪ್ಪಂದ ರದ್ದು ಮಾಡಿದ ರೈಲ್ವೆ/ ರೈಲ್ವೆ ಕಾರಿಡಾರ್  ನಿರ್ಮಾಣ ಹೊಣೆ ಹೊತ್ತಿದ್ದ ಚೀನಾ ಕಂಪನಿ/ ಸೋಶಿಯಲ್ಲಿ ಮೀಡಿಯಾದಲ್ಲಿ ಬಾಯ್ಕಾಟ್ ಚೀನಾ  ಕ್ಯಾಂಪೇನ್

Indian Railways to terminate Chinese company contract due to poor progress
Author
Bengaluru, First Published Jun 18, 2020, 6:56 PM IST

ನವದೆಹಲಿ(ಜೂ. 18)  ಚೀನಾ ವಸ್ತುಗಳನ್ನು ಬಹಿಷ್ಕಾರ ಮಾಡಿ ಎಂಬ ಕೂಗು ಜೋರಾಗಿ ಕೇಳಿಬರುತ್ತಲೇ ಇದೆ. ಚೀನಾ ಮಾಡಿದ ಕುತಂತ್ರಕ್ಕೆ ತಕ್ಕ ಪಾಠ ಕಲಿಸಲು ಇದೀಗ ಭಾರತೀಯ ರೈಲ್ವೆ ಸಹ ಮುಂದಾಗಿದೆ.

ಭಾರತೀಯ ರೈಲ್ವೆ  ಚೀನಾದ ಕಂಪನಿಯೊಂದಕ್ಕೆ ನೀಡಿದ್ದ ದೊಡ್ಡ ಗುತ್ತಿಗೆಯನ್ನು ರದ್ದು ಮಾಡಿದೆ. ಉತ್ತರ ಪ್ರದೇಶದ ಕಾನ್ಪುರ ಮತ್ತು ಮುಘಲ್​ಸರಾಯ್ ಮಾರ್ಗದ 400  ಕಿಮೀ ಉದ್ದದ ಕಾರಿಡಾರ್​ನಲ್ಲಿ ಸಿಗ್ನಲ್ ಮತ್ತು ಟೆಲಿಕಮ್ಯೂನಿಕೇಶನ್ ಕಾಮಗಾರಿ ಕೆಲಸದ ಗುತ್ತಿಗೆಯನ್ನು ಬೀಜಿಂಗ್ ನ್ಯಾಷನಲ್ ರೈಲ್ವೆ ರೀಸರ್ಚ್ ಸಂಸ್ಥೆಗೆ ನೀಡಲಾಗಿತ್ತು.   2016ರಲ್ಲಿಯೇ ಗುತ್ತಿಗೆ ನೀಡಲಾಗಿತ್ತು.

ಯುದ್ಧಕ್ಕೆ ಸನ್ನದ್ಧವಾದ ತಕ್ಷಣ ಎಚ್ಚೆತ್ತ ಚೀನಾ ಮಾಡಿದ್ದೇನು?

ನಾಲ್ಕು ವರ್ಷದಲ್ಲಿ ಶೇ.  20  ರಷ್ಟು ಕೆಲಸ ಮಾತ್ರ ಆಗಿದೆ. ಕಾಮಗಾರಿ ವಿಳಂಬ ಮಾಡುತ್ತಿರುವುದಕ್ಕೆ ಗುತ್ತಿಗೆ ರದ್ದು ಮಾಡಲಾಗಿದೆ ಎಂದು ವರದಿ ಹೇಳಿದೆ.

ಇದಲ್ಲದೇ , ತಾಂತ್ರಿಕ ದಾಖಲಾತಿಗಳನ್ನು ಸರಿಯಾಗಿ ನೀಡದಿರುವುದು, ವರ್ಕ್ ಪ್ಲೇಸ್ ನಲ್ಲಿ ನುರಿತ ಇಂಜಿನಿಯರ್ ಗಳು ಕಾರ್ಯ ನಿರ್ವಹಿಸದೇ ಇರುವುದು, ಕಾಮಗಾರಿ ಅತಿ ನಿಧಾನ, ಕಳಪೆ ಕಚ್ಚಾ ವಸ್ತುಗಳ ಬಳಕೆ ಮಾಡಲಾಗುತ್ತಿದೆ ಎಂಬ ಕಾರಣವನ್ನು ಭಾರತೀಯ ರೈಲ್ವೆ ನೀಡಿದೆ.

ಸುಮಾರು 500  ಕೋಟಿ ರೂ. ಮೊತ್ತದ ಪ್ರಾಜೆಕ್ಟ್ ಇದಾಗಿತ್ತು. ಡಿಸೈನ್, ಟೆಸ್ಟಿಂಗ್, ನಿರ್ಮಾಣ ಸೇರಿದಂತೆ ಎಲ್ಲ ರೀತಿಯ ಜವಾಬ್ದಾರಿ ವಹಿಸಿಕೊಳ್ಳಬೇಕಿತ್ತು.   ಗಡಿಭಾಗದ ಸಂಘರ್ಷಕ್ಕೂ ಚೀನೀ ಸಂಸ್ಥೆ ಗುತ್ತಿಗೆ ರದ್ದತಿಗೆ ಸಂಬಂಧ ಇಲ್ಲ ಎಂದು ಭಾರತೀಯ ರೈಲ್ವೆ ಸ್ಪಷ್ಟನೆ ನೀಡಿದೆ. 

ಭಾರತದ ದೂರಸಂಪರ್ಕ ಸಂಪರ್ಕ ಇಲಾಖೆ  ಮುಂದಿನ ದಿನದಲ್ಲಿ ಹುವಾವೇ ಮತ್ತು ಝಟಿಇಯಂಥ ಚೀನೀ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳದಿರಲೆಂದು ದೂರವಾಣಿ ಸೇವಾ ಕಂಪನಿಗಳಿಗೆ ಸಲಹೆ ನೀಡಿತ್ತು.   ಸೋಶಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ ಚೀನಾ ಪ್ರಾಡಕ್ಟ್ ಅಭಿಯಾನ ನಡೆಯುತ್ತಿದ್ದು ಅದೆಲ್ಲದರ ನಡುವೆ ರೈಲ್ವೆ ಇಲಾಖೆ  ಚೀನಾ ಕಂಪನಿಗೆ ಒಂದು ಶಾಕ್ ನೀಡಿದೆ.

 

Follow Us:
Download App:
  • android
  • ios