ಭಾರತೀಯ ಮೂಲದ ಐರಿಶ್ ಪ್ರಧಾನಿ ಲಿಯೋ ವರದ್ಕರ್ ಮುಂಬರುವ ಸಾರ್ವತ್ರಿಕ ಚುನಾವಣೆಗೆ ಮುನ್ನ ತಮ್ಮ ಸ್ಥಾನಕ್ಕೆ ಹಾಗೂ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡಲಿದ್ದಾರೆ. 

ನವದೆಹಲಿ (ಮಾ.20): ಭಾರತೀಯ ಮೂಲದ ಐರಿಶ್ ಪ್ರಧಾನಿ ಲಿಯೋ ವರದ್ಕರ್ ಅವರು ಸಾರ್ವತ್ರಿಕ ಚುನಾವಣೆಗೂ ಮುನ್ನ ತಮ್ಮ ಹುದ್ದೆಯಿಂದ ಕೆಳಗಿಳಿಯುವುದಾಗಿ ಬುಧವಾರ ಘೋಷಿಸಿದ್ದಾರೆ. 45 ವರ್ಷ ವಯಸ್ಸಿನ ನಾಯಕ ತಮ್ಮ ಪಕ್ಷವಾದ ಫೈನ್‌ ಗೇಲ್‌ನ ನಾಯಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. "ನಾನು ಇಂದು ಜಾರಿಯಲ್ಲಿರುವ ಫೈನ್ ಗೇಲ್‌ನ ಅಧ್ಯಕ್ಷ ಮತ್ತು ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಮತ್ತು ನನ್ನ ಉತ್ತರಾಧಿಕಾರಿ ಆ ಕಚೇರಿಯನ್ನು ವಹಿಸಿಕೊಂಡ ತಕ್ಷಣ ಟಾವೊಸೀಚ್ (ಪ್ರಧಾನಿ) ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ" ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಡುಬ್ಲಿನ್‌ನ ಸರ್ಕಾರಿ ಕಚೇರಿಯ ಎದುರೇ ಅವರು ಈ ಹೇಳಿಕೆ ನೀಡಿದ್ದಾರೆ. ಪದಾತ್ಯಾಗಕ್ಕೆ ರಾಜಕೀಯ ಹಾಗೂ ವೈಯಕ್ತಿಕ ಎರಡೂ ಕಾರಣಗಳಿವೆ ಎಂದು ಐರಿಸ್‌ ನಾಯಕ ಹೇಳಿದ್ದಾರೆ. ಆದರೆ, ಭವಿಷ್ಯದಲ್ಲಿ "ಯಾವುದೇ ವೈಯಕ್ತಿಕ ಅಥವಾ ರಾಜಕೀಯ ಯೋಜನೆಗಳನ್ನು ಹೊಂದಿಲ್ಲ" ಎಂದು ಹೇಳಿದರು. 

2017 ರಲ್ಲಿ ಅಧಿಕಾರಕ್ಕೆ ಬಂದ ವರದ್ಕರ್ ಅವರು ಐರ್ಲೆಂಡ್‌ನ ಅತ್ಯಂತ ಕಿರಿಯ ಪ್ರಧಾನಿ (ಟಾವೋಸೆಚ್) ಆಗಿದ್ದರು. ವರದ್ಕರ್ ಅವರು ತಮ್ಮ ರಾಜೀನಾಮೆ ಯೋಜನೆಯನ್ನು ಪ್ರಕಟ ಮಾಡುವ ವೇಳೆ, ರಾಷ್ಟ್ರದ ಮುಖ್ಯಸ್ಥರಾಗಿದ್ದ ಅವರ ಅಧಿಕಾರಾವಧಿಯು "ನನ್ನ ಜೀವನದ ಅತ್ಯಂತ ತೃಪ್ತಿಕರ ಅವಧಿಯಾಗಿದೆ" ಎಂದು ಹೇಳಿದ್ದಾರೆ. ಹಾಗಿದ್ದರೂ, ಮೂರು ಪಕ್ಷಗಳ ಒಕ್ಕೂಟದ ಮುಖ್ಯಸ್ಥ ವರದ್ಕರ್ ರಾಜೀನಾಮೆಯು ಸಾರ್ವತ್ರಿಕ ಚುನಾವಣೆಯನ್ನು ಸ್ವಯಂಚಾಲಿತವಾಗಿ ಸಮರ್ಥಿಸುವುದಿಲ್ಲ. ಅವರನ್ನು ಹೊಸ ಫೈನ್ ಗೇಲ್ ನಾಯಕನಿಂದ ಬದಲಾಯಿಸಬಹುದಾಗಿದೆ.

ಮಾರ್ಚ್‌ 31ರ ಭಾನುವಾರ ದೇಶದ ಯಾವುದೇ ಬ್ಯಾಂಕ್‌ಗೆ ರಜೆ ಇಲ್ಲ: ಆರ್‌ಬಿಐ

9 ವರ್ಷದ ಬಾಲಕನನ್ನು ರಾಮಲಲ್ಲಾ ಮೂರ್ತಿಯನ್ನಾಗಿ ಮಾಡಿದ ಮೇಕಪ್‌ ಆರ್ಟಿಸ್ಟ್‌!