Asianet Suvarna News Asianet Suvarna News

ಮಾರ್ಚ್‌ 31ರ ಭಾನುವಾರ ದೇಶದ ಯಾವುದೇ ಬ್ಯಾಂಕ್‌ಗೆ ರಜೆ ಇಲ್ಲ: ಆರ್‌ಬಿಐ

ವಾರ್ಷಿಕ ಲೆಕ್ಕಪತ್ರಗಳ ಕ್ಲೋಸಿಂಗ್‌ ದಿನವಾಗಿರುವ ಕಾರಣಕ್ಕೆ ಮಾರ್ಚ್‌ 31ರ ಭಾನುವಾರದಂದು ದೇಶಾದ್ಯಂತ ಎಲ್ಲಾ ಬ್ಯಾಂಕ್‌ಗಳು ಸಾರ್ವಜನಿಕರಿಗೆ ತೆರೆದಿರಲಿದೆ ಎಂದು ಆರ್‌ಬಿಐ ತಿಳಿಸಿದೆ.

RBI says All Agency Banks to remain open for public on 2024 March 31 san
Author
First Published Mar 20, 2024, 7:56 PM IST

ನವದೆಹಲಿ (ಮಾ.20): ದೇಶಾದ್ಯಂತ ವಾರ್ಷಿಕ ಲೆಕ್ಕಪತ್ರಗಳ ಕ್ಲೋಸಿಂಗ್‌ ದಿನವಾಗಿರುವ ಕಾರಣಕ್ಕೆ ಮಾರ್ಚ್‌ 31ರ ಭಾನುವಾರದಂದು ದೇಶದ ಎಲ್ಲಾ ಬ್ಯಾಂಕ್‌ಗಳು ಸಾರ್ವಜನಿಕರಿಗೆ ಮುಕ್ತವಾಗಿರಲಿದೆ ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ. ಏಜೆನ್ಸಿ ಬ್ಯಾಂಕ್‌ಗಳು ಮಾರ್ಚ್ 31 ರಂದು ಸರ್ಕಾರಿ ವ್ಯವಹಾರಗಳನ್ನು ತೆರೆದಿಡಬೇಕು ಎಂದು ಆರ್‌ಬಿಐ ಪ್ರಕಟಣೆಯಲ್ಲಿ ಹೇಳಿದೆ.ಕೇಂದ್ರ ಸರ್ಕಾರ ಈ ಕುರಿತಾಗಿ ಆರ್‌ಬಿಐಗೆ ಮನವಿ ಮಾಡಿದ್ದು, ಸರ್ಕಾರಿ ವ್ಯವಹಾರಗಳನ್ನು ಹೊಂದಿರುವ ದೇಶದ ಎಲ್ಲಾ ಬ್ಯಾಂಕ್‌ಗಳು ಮಾರ್ಚ್‌ 31ರ ಭಾನುವಾರದಂದು ತೆರೆದಿರಬೇಕು ಎಂದು ಹೇಳಿದೆ. ಆ ಮೂಲಕ 2023-24ರ ಹಣಕಾಸು ವರ್ಷಕ್ಕೆ ಸಂಬಂಧಿಸಿದ ಸರ್ಕಾರಿ ವ್ಯವಹಾರಗಳನ್ನು ಮುಗಿಸುವ ಇರಾದೆ ಹೊಂದಿದೆ. ಇದರಿಂದಾಗಿ ಸರ್ಕಾರಿ ವ್ಯವಹಾರಗಳನ್ನು ಹೊಂದಿರುವ ಎಲ್ಲಾ ಏಜೆನ್ಸಿ ಬ್ಯಾಂಕ್‌ಗಳು ಹಣಕಾಸು ವರ್ಷದ ಕೊನೆ ದಿನ ತೆರೆದಿರಲಿದೆ ಎಂದು ಆರ್‌ಬಿಐ ತಿಳಿಸಿದೆ.

ಇದಕ್ಕೂ ಮುನ್ನ ಆದಾಯ ತೆರಿಗೆ ಇಲಾಖೆಯು ಮಾರ್ಚ್ 29 ರಿಂದ ಮಾರ್ಚ್ 31 ರವರೆಗಿನ ದೀರ್ಘ ವೀಕೆಂಡ್‌ಅನನ್ನು ಬಾಕಿ ಉಳಿದಿರುವ ತೆರಿಗೆ ಸಂಬಂಧಿತ ಕೆಲಸವನ್ನು ಪರಿಗಣಿಸಿ ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ. ಮಾರ್ಚ್ 29 ಗುಡ್ ಫ್ರೈಡೇ ರಜಾದಿನವಾಗಿದೆ, ಮಾರ್ಚ್ 30 ಶನಿವಾರ, ಆದರೆ ಮಾರ್ಚ್ 31 ಭಾನುವಾರವಾಗಿದೆ.

"ಬಾಕಿ ಉಳಿದಿರುವ ಇಲಾಖಾ ಕಾರ್ಯಗಳನ್ನು ಪೂರ್ಣಗೊಳಿಸಲು ಅನುಕೂಲವಾಗುವಂತೆ, ಭಾರತದಾದ್ಯಂತ ಎಲ್ಲಾ ಆದಾಯ ತೆರಿಗೆ ಕಚೇರಿಗಳು 29, 30 ಮತ್ತು 31 ಮಾರ್ಚ್ 2024 ರಂದು ತೆರೆದಿರುತ್ತವೆ" ಎಂದು ಆದಾಯ ತೆರಿಗೆ ಇಲಾಖೆಯು ಮಾರ್ಚ್ 31, 2024 ರ ಆದೇಶದಲ್ಲಿ ತಿಳಿಸಿದೆ.

RBI says All Agency Banks to remain open for public on 2024 March 31 san
 

Follow Us:
Download App:
  • android
  • ios