Asianet Suvarna News Asianet Suvarna News

ಪ್ರೊಟೀನ್ ಶೇಕ್ ಕುಡಿದು 16 ವರ್ಷದ ಭಾರತದ ಬಾಲಕ ಸಾವು, ಕಂಪನಿಗೆ ಕೋರ್ಟ್ ವಾರ್ನಿಂಗ್ !

16 ವರ್ಷದ ಭಾರತೀಯ ಮೂಲದ ಬಾಲಕ ಲಂಡನ್‌ನಲ್ಲಿ ಪ್ರೊಟೀನ್ ಶೇಕ್ ಕುಡಿದು ಮೃತಪಟ್ಟ ಘಟನೆ ಭಾರಿ ಆತಂಕ ಸೃಷ್ಟಿಸಿತ್ತು. ಈ ಕುರಿತು ವಿಚಾರಣೆ ನಡೆಸಿರುವ ಕೋರ್ಟ್, ಪ್ರೊಟೀನ್ ಶೇಕ್ ಉತ್ಪನ್ನ ಕಂಪನಿಗಳಿಗೆ ಖಡಕ್ ವಾರ್ನಿಂಗ್ ನೀಡಿದೆ.
 

Indian origin boy dies after consuming protein shake UK Court issues warning label to product ckm
Author
First Published Jun 29, 2023, 3:31 PM IST

ಲಂಡನ್(ಜೂ.29) ಭಾರತೀಯ ಮೂಲಕ 16 ವರ್ಷದ ಬಾಲಕ ಪ್ರೊಟೀನ್ ಶೇಕ್ ಕುಡಿದು ಮೃತಪಟ್ಟ ಘಟನೆ ಭಾರಿ ಕೋಲಾಹಲ ಸೃಷ್ಟಿಸಿತ್ತು. ಈ ಪ್ರಕರಣದ ಕುರಿತು ಸುದೀರ್ಘ ವಿಚಾರಣೆ ನಡೆಸಿರುವ ಕೋರ್ಟ್ ಇದೀಗ ಮಹತ್ವದ ಆದೇಶ ನೀಡಿದೆ. ಪ್ರೊಟೀನ್ ಶೇಕ್ ಉತ್ಪನ್ನದ ಬಾಟಲಿ ಮೇಲೆ ಎಚ್ಚರಿಕೆ ವಾರ್ನಿಂಗ್ ಕಡ್ಡಾಯವಾಗಿ ಹಾಕಬೇಕು ಎಂದಿದೆ. ವೈದ್ಯರ ಸೂಚನೆ ಮೇರೆಗೆ ಮಾತ್ರ ಪ್ರೊಟೀನ್ ಶೇಕ್ ನೀಡಬೇಕು ಎಂದು ಕೋರ್ಟ್ ಸೂಚಿಸಿದೆ.

ಆಗಸ್ಟ್ 12, 2020ರಂದು ಭಾರತೀಯ ಮೂಲದ 16 ವರ್ಷದ ರೋಹನ್ ಗೊಧಾನಿಯಾ ದುರಂತ ಅಂತ್ಯ ಕಂಡಿದ್ದ. ರೋಹನ್ ಆರೋಗ್ಯವಾಗಿದ್ದರೂ ತೆಳ್ಳಗಿದ್ದ. ಹೀಗಾಗಿ ಮಸಲ್ ಬೆಳೆಸಲು ಹಾಗೂ ಸದೃಢವಾಗಿ ಕಾಣಲು ರೋಹನ್‌ಗೆ ತಂದ ಪ್ರೊಟೀನ್ ಶೇಕ್ ಖರೀದಿಸಿದ್ದಾರೆ. ಇತ್ತ ರೋಹನ್ ಕೂಡ ಕಟ್ಟು ಮಸ್ತಾದ ದೇಹಕ್ಕಾಗಿ ಇನ್ನಿಲ್ಲದ ಕಸರತ್ತು ಮಾಡಿದ್ದ. ಉತ್ತಮ ಆಹಾರ ಸೇರಿದಂತೆ ಇತರ ಪೌಷ್ಟಿಕಾಂಶಗಳನ್ನು ಸೇವಿಸಿದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ತಂದೆ ಖರೀಗಿಸಿದ ಪ್ರೊಟೀನ್ ಶೇಕ್ ಸೇವಿಸಲು ಆರಂಭಿಸಿದ್ದ.

ಹೆಚ್ಚಿನ ಪ್ರೋಟೀನ್ ಸೇವನೆ ಮಾಡಿದ್ರೆ, ಆರೋಗ್ಯದ ಮೇಲೆ ಏನು ಪರಿಣಾಮ ಬೀರುತ್ತೆ ಗೊತ್ತಾ ?

ಪ್ರೊಟೀಶನ್ ಶೇಕ್ ಸೇವಿಸಿದ ಬೆನ್ನಲ್ಲೇ ರೋಹನ್ ಗುಧಾನಿಯಾ ಆರೋಗ್ಯ ಹದಗೆಟ್ಟಿತ್ತು. ಒಂದೇ ದಿನಕ್ಕೆ ರೋಹನ್ ಸಂಪೂರ್ಣ ಅಸ್ವಸ್ಥನಾಗಿದ್ದಾನೆ. ಗಾಬರಿಗೊಂಡ ಪೋಷಕರು ತಕ್ಷಣವೇ ಪೂರ್ವ ಮಿಡ್ಲ್‌ಸೆಕ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸತತ ಮೂರು ದಿನಗಳ ಚಿಕಿತ್ಸೆ ಬಳಿಕ ರೋಹನ್ ಮೃತಪಟ್ಟಿದ್ದಾನೆ. ಪ್ರೊಟೀಶನ್ ಶೇಕ್ ಸೇವೆನೆ ಬಳಿಕ ರೋಹನ್ ಗೊಧಾನಿಯಾಗೆ ಮೆದುಳು ನಿಷ್ಕ್ರೀಯಗೊಂಡಿತ್ತು. 

ರೋಹನ್ ಆರೋಗ್ಯ ಹಾಗೂ ಆತನ ಅನುವಂಶಿಯ ಆರೋಗ್ಯ ಸಮಸ್ಯೆಗಳಿಗೆ ಖರೀದಿಸಿದ ಪ್ರೊಟೀನ್ ಶೇಕ್ ಉತ್ತಮವಲ್ಲ. ಪ್ರತಿಯೊಬ್ಬರ ದೈಹಿಕ ಸದೃಢತೆ, ಅವರ ಆರೋಗ್ಯ ಪರಿಸ್ಥಿತಿ, ರಕ್ತ ಸೇರಿದಂತೆ ಹಲವು ವಿಚಾರಗಳನ್ನು ಪರಿಗಣಿಸಿ ಅದಕ್ಕೆ ತಕ್ಕಂತೆ ಪ್ರೊಟೀನ್ ಶೇಕ್ ನೀಡುವುದು ಉತ್ತಮ ಅನ್ನೋದು ವೈದ್ಯರು ಹೇಳಿದ್ದರು. ರೋಹನ್ ಗೊಧಾನಿಯಾ ಸಾವಿಗೆ ಸೂಕ್ತವಲ್ಲದ ಪ್ರೊಟೀನ್ ಶೇಕ್ ಸೇವನೆ ಕಾಣವಾಗಿತ್ತು ಅನ್ನೋದು ಸ್ಪಷ್ಟವಾಗಿತ್ತು.

ಈ ಕುರಿತು ಪ್ರಕರಣ ದಾಖಲಾಗಿತ್ತು. 2020ರಿಂದ ಇಲ್ಲೀವೆಗೆ ವಿಚಾರಣೆ ನಡೆಸಿರುವ ಕೋರ್ಟ್ ಇದೀಗ ಮಹತ್ವದ ಆದೇಶ ನೀಡಿದೆ. ಪ್ರೊಟೀನ್ ಶೇಕ್ ಬೇಕಾಬಿಟ್ಟಿ ಖರೀದಿಸಿ ಸೇವಿಸುವುದು ಆರೋಗ್ಯಕ್ಕೆ ಉತ್ತಮವಲ್ಲ. ಇದಕ್ಕೆ ವೈದ್ಯರ ಅನುಮತಿ ಅಗತ್ಯ. ಹೀಗಾಗಿ ಪ್ರೊಟೀನ್ ಪಾನಿಯಗಳ ಪ್ಯಾಕೇಜ್ ಮೇಲೆ ಎಚ್ಚರಿಕೆ ಲೇಬಲ್ ಕಡ್ಡಾಯವಾಗಿ ಹಾಕಬೇಕು. ಕೊರೆನ ಪೌಷ್ಠಿಕಾಂಶ ಕೊರತೆ ಇರುವ ವ್ಯಕ್ತಿಗಳು ಪ್ರೊಟೀನ್ ಶೇಕ್ ಸೇವಿಸುವು ಮೊದಲು ವೈದ್ಯರನ್ನು ಸಂಪರ್ಕಿಸುವುದು ಒಳಿತು. ಹೀಗಾಗಿ ಉತ್ಪನ್ನಗಳ ಬಾಟಲಿ ಮೇಲೆ ಎಚ್ಚರಿಕೆ ಸಂದೇಶ ಕಡ್ಡಾಯ ಮಾಡಬೇಕು ಎದು ಕೋರ್ಟ್ ಸೂಚಿಸಿದೆ.

ಬಾಡಿ ಬಿಲ್ಡ್ ಮಾಡಲು ಹೆಚ್ಚು ಪ್ರೊಟೀನ್ ಸೇವಿಸೋರು ಇದನ್ನ ಓದಿ..

ಹೈ ಪ್ರೊಟೀನ್‌ನಿಂದಾಗಿ ರೋಹನ್ ಗೊಧಾನಿಯಾ ಮೆದುಳಿಗೆ ತೀವ್ರ ರಕ್ತಸಂಚಾರವಾಗಿತ್ತು. ಇದರಿಂದ ರೋಹನ್ ಗೊಧಾನಿಯಾ ಮೆದುಳು ನಿಷ್ಕ್ರೀಯಗೊಂಡಿದೆ. ಪುತ್ರನ ಕಳೆದುಕೊಂಡ ಪೋಷಕರು ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಇದೀಗ ಸುದೀರ್ಘ ವರ್ಷಗಳ ಬಳಿಕ ಈ ಘಟನೆ ತೀರ್ಪು ಹೊರಬಿದಿದ್ದೆ. ಆದರೆ ಪುತ್ರನ ಸದೃಢ ದೇಹಕ್ಕಾಗಿ ಪ್ರೊಟೀನ್ ಖರೀದಿಸಿ ಮಗನ ಸಾವನ್ನೇ ಕಣ್ಣೆದುರು ನೋಡಿದ ಪೋಷಕರು ಶಾಕ್‌ನಿಂದ ಇನ್ನೂ ಚೇತರಿಸಿಕೊಂಡಿಲ್ಲ.
 

Follow Us:
Download App:
  • android
  • ios