ಅಮೆರಿಕದ ಶಾಪಿಂಗ್‌ ಮಾಲ್‌ನಲ್ಲಿ, 'ನೀನು ಮುಸ್ಲಿಮನೆ?' ಎಂದು ಪ್ರಶ್ನಿಸಿದ ದುಷ್ಕರ್ಮಿಯೊಬ್ಬ, ಭಾರತೀಯ ಯುವಕ ಸೊಹೈಲ್‌ಗೆ 15 ಬಾರಿ ಚಾಕುವಿನಿಂದ ಇರಿದಿದ್ದಾನೆ. ಈ ದ್ವೇಷದ ಕೃತ್ಯ ಎಸಗಿದ 48 ವರ್ಷದ ಪೀಟರ್‌ ಮೈಕಲ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ವಾಷಿಂಗ್ಟನ್‌: ಅಮೆರಿಕದ ಶಾಪಿಂಗ್‌ ಮಾಲ್‌ವೊಂದರಲ್ಲಿ ದುಷ್ಕರ್ಮಿಯೊಬ್ಬ ಭಾರತೀಯನಿಗೆ, ‘ನೀನು ಮುಸ್ಲಿಮಾ?’ ಎಂದು ಪ್ರಶ್ನಿಸಿ 15 ಸಲ ಚಾಕುವಿನಿಂದ ಇರಿದಿರುವ ಆಘಾತಕಾರಿ ಘಟನೆ ನಡೆದಿದೆ.

ಉದ್ದೇಶಪೂರ್ವಕ ದಾಳಿ

ಇಲ್ಲಿನ ವೆಸ್ಟ್‌ ವ್ಯಾಲಿ ಸಿಟಿಯ ವ್ಯಾಲಿ ಫೇರ್‌ ಮಾಲ್‌ನಲ್ಲಿ ಘಟನೆ ನಡೆದಿದೆ. ಕಿಯೋಸ್ಕ್‌ನಲ್ಲಿ ಉದ್ಯೋಗದಲ್ಲಿರುವ ಸೋಹೈಲ್ ಇರಿತಕ್ಕೀಡಾದ ಯುವಕ. 48 ವರ್ಷದ ಪೀಟರ್‌ ಮೈಕಲ್‌ ಈ ಕೃತ್ಯ ಎಸಗಿದಾತ. ಸದ್ಯ ಪೊಲೀಸರು ಆತನನ್ನು ಬಂಧಿಸಿದ್ದು, ಆತ ಉದ್ದೇಶಪೂರ್ವಕವಾಗಿಯೇ ಮುಸ್ಲಿಂ ಎನ್ನುವ ಕಾರಣಕ್ಕೆ ಸೊಹೈಲ್ ಮೇಲೆ ದಾಳಿ ಮಾಡಿದ್ದಾನೆ ಎನ್ನಲಾಗಿದೆ.

ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿ ಪ್ರಕಾರ, ಮೈಕಲ್‌ ಮೊದಲು ಸೊಹೈಲ್‌ ಬಳಿ ‘ನೀನು ಯಾವ ದೇಶದವನು?’ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಸೊಹೈಲ್‌ ‘ನಾನು ಭಾರತದವನು, ನನ್ನ ಹೆಸರು ಸೊಹೈಲ್’ ಎಂದಿದ್ದಾನೆ. ಅದಕ್ಕೆ ಆರೋಪಿ, ‘ಮುಸ್ಲಿಂ?’ ಎಂದು ಮರು ಪ್ರಶ್ನಿಸಿದ್ದಾನೆ. ಇದಕ್ಕೆ ಸೋಹೈಲ್‌ ‘ ಹೌದು’ ಎಂದು ಉತ್ತರಿಸುತ್ತಿದ್ದಂತೆ ಮೈಕಲ್‌ ಚಾಕು ಇರಿದಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Hubballi: 1909ರಲ್ಲಿ 13 ವಿದ್ಯಾರ್ಥಿಗಳೊಂದಿಗೆ ಆರಂಭವಾದ ಶತಮಾನ ಕಂಡ ಶಾಲೆಗೆ ಹೊಸ ರೂಪ

ಇದನ್ನೂ ಓದಿ: Belagavi: ಜುಲೈ 22ರಿಂದ 28ರವರೆಗೆ ಹಲವು ರೈಲುಗಳು ಭಾಗಶಃ ರದ್ದು, ಸಂಚಾರದಲ್ಲಿ ಬದಲಾವಣೆ