ಕೋಂಡೇನಹಳ್ಳಿ ಗ್ರಾಮದ ರೈತ ಕುಟುಂಬದ ಸುರೇಶ್ ಗಟ್ಟಾಪುರ್, ಯುನೈಟೆಡ್ ಕಿಂಗ್‌ಡಮ್‌ನ ಸ್ವಿಂಡನ್‌ನಲ್ಲಿ ನಡೆದ ಬರೋ ಕೌನ್ಸಿಲ್ ಚುನಾವಣೆಯಲ್ಲಿ ಸತತ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಓದಿ, ಸಾಫ್ಟ್‌ವೇರ್ ಕ್ಷೇತ್ರದಿಂದ ರಾಜಕೀಯಕ್ಕೆ ಬಂದ ಅವರ ಪಯಣ ಸ್ಪೂರ್ತಿದಾಯಕವಾಗಿದೆ.

ಚಿಕ್ಕಬಳ್ಳಾಪುರ: ಜಿಲ್ಲೆಯ ಕೋಂಡೇನಹಳ್ಳಿ ಗ್ರಾಮದ ಸುರೇಶ್ ಗಟ್ಟಾಪುರ್ ಯುಕೆ ಚುನಾವಣೆಯಲ್ಲಿ ಗೆದ್ದಿದ್ದಾರೆ.ಯುನೈಟೆಡ್ ಕಿಂಗ್‌ಡಮ್‌ನ ಸ್ವಿಂಡನ್‌ನಲ್ಲಿ ಸದ್ಯ ವಾಸವಿದ್ದಾರೆ, ಅವರು ಮೇ 7 ರಂದು ನಡೆದ ಬರೋ ಎಲೆಕ್ಷನ್‌ನಲ್ಲಿ ಗೆಲುವು ಸಾಧಿಸಿದ್ದಾರೆ.

ರೈತಾಪಿ ಕುಟುಂಬದಲ್ಲಿ ಬೆಳೆದ ಸುರೇಶ್‌ ತನ್ನ ಪ್ರಾಥಮಿಕ ಶಾಲೆಯ 1ನೇ ತರಗತಿಯಿಂದ 6ನೇ ತರಗತಿ ವರೆಗೂ ಹಳ್ಳಿಯಲ್ಲಿಯೇ ಮುಗಿಸಿದರು. ಅಲ್ಲಿಂದ 7ನೇ ತರಗತಿಯಿಂದ 10ನೇ ತರಗತಿ ವರೆಗೂ ಮೇಲೂರಿನಲ್ಲಿ ಓದಿದರು. 10ನೇ ತರಗತಿ ವರೆಗೂ ನಾನು ಕನ್ನಡ ಮೀಡಿಯಂನಲ್ಲೇ ಓದಿದ್ದು ವಿಶೇಷ.

ಅನಂತರ ಆಮೇಲೆ ಪಿಯುಸಿಗೆ ಚಿಕ್ಕಬಳ್ಳಾಪುರ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿದರು. ಅಲ್ಲಿಂದ ಸಿಇಟಿಯಲ್ಲಿ ಅರ್ಹತೆ ಪಡೆದು, ಜೆ.ಎಂ.ಐ.ಟಿ ಚಿತ್ರದುರ್ಗದಲ್ಲಿ ಆಟೋಮೊಬೈಲ್ ಇಂಜಿನಿಯರಿಂಗ್ ಮುಗಿಸಿ, ಮೈಸೂರು ಯೂನಿವರ್ಸಿಟಿಯಿಂದ ಪದವಿ ಪೂರ್ಣಗೊಳಿಸಿದರು.

2004ರಿಂದ ಸ್ವಿಂಡನ್‌ನಲ್ಲಿ ವಾಸ

ಅದಾದಮೇಲೆ ಕೆ.ಜಿ.ಎಫ್‌ ನಲ್ಲಿನ ಬಿ.ಇ.ಎಂ.ಎಲ್ 1992 ರಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿ ಹತ್ತು ವರ್ಷ ಕೆಲಸ ಮಾಡಿದ ನಂತರ, ಸಾಫ್ಟ್‌ವೇರ್ ಕ್ಷೇತ್ರಕ್ಕೆ ಬರಬೇಕೆಂಬ ಹೆಂಡತಿಯ ಒತ್ತಾಯದ ಮೇರೆಗೆ ಸಾಫ್ಟ್‌ವೇರ್‌ಗೆ ಕಾಲಿಟ್ಟರು. ಬಳಿಕ ಸ್ವಿಜರ್ಲ್ಯಾಂಡ್ ಕಂಪನಿಯೊಂದರ ಕಚೇರಿಯು ಶ್ರೀಲಂಕಾದಲ್ಲಿತ್ತು. ಅಲ್ಲಿ ಕೆಲಸ ಸಿಕ್ಕಿತು. ಅಲ್ಲಿ ಕೆಲಸ ಮಾಡಿ, 2004 ರ ಏಪ್ರಿಲ್‌ನಲ್ಲಿ ಹೆಂಡತಿ ಮತ್ತು ಮಕ್ಕಳ ಜೊತೆ ಸ್ವಿಂಡನ್ ಗೆ ಕಾಲಿಟ್ಟರು. ಅಂದಿನಿಂದ . ಅವತ್ತಿನಿಂದ ಅದೇ ಅವರ ಮನೆಯಾಗಿ ಅಲ್ಲಿಯೇ ವಾಸವಿದ್ದಾರೆ.

ಈ ಮಧ್ಯೆ 2010 ರಲ್ಲಿ ಅಲ್ಲಿನ ಪ್ರಮುಖ ರಾಜಕೀಯ ಪಕ್ಷ ಕನ್ಸರ್ವೇಟಿವ್ ಸದಸ್ಯತ್ವ ಪಡೆದರು. 2017 ರಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿ ಪ್ಯಾರಿಷ್‌ಗೆ ನಾಲ್ಕು ಬಾರಿ ಆಯ್ಕೆಯಾಗಿದ್ದರು ಈಗ ಬರೋ ಕೌನ್ಸಿಲ್‌ಗೆ ಎರಡನೇ ಬಾರಿ ಗೆದ್ದಿದ್ದಾರೆ.

ಅವರು ಕನ್ಸರ್ವೇಟಿವ್ ಪಾರ್ಟಿಯಲ್ಲಿ ಡೆಪ್ಯುಟಿ ಚೇರ್ಮನ್ ಆಗಿ ಕೆಲಸ ಮಾಡಿದ್ದರು. ಆಮೇಲೆ ಬರೋ ಕೌನ್ಸಿಲ್ ಎಲೆಕ್ಷನ್‌ಗೆ ನಿಂತು, 2022 ರಲ್ಲಿ ಬರೋ ಕೌನ್ಸಿಲ್‌ಗೆ ಆಯ್ಕೆಯಾದರು. ಈಗ 2026 ರಲ್ಲಿ ಜನರು ಮತ್ತೊಮ್ಮೆ ಗೆಲ್ಲಿಸಿದ್ದಾರೆ.

ರಾಜಕೀಯದ ಬಗ್ಗೆ ಸುರೇಶ್ ಮಾತು

‘ನನಗೆ ರಾಜಕೀಯದಲ್ಲಿ ಮುಂಚಿನಿಂದಲೂ ತುಂಬಾ ಆಸಕ್ತಿಯಿತ್ತು. ನಮ್ಮ ಭಾರತದಲ್ಲಿದ್ದಾಗ ಇಂಜಿನಿಯರಿಂಗ್ ಓದುವ ಸಮಯದಲ್ಲಿ ಜನತಾ ಪಕ್ಷದ ಸ್ಟೂಡೆಂಟ್ ವಿಂಗ್‌ನಲ್ಲಿ ಕೆಲಸ ಮಾಡಿದ ಅನುಭವವಿತ್ತು. ಆದರೆ ಆಮೇಲೆ ಅದು ಡಿಸ್ಕಂಟಿನ್ಯೂ ಆಯ್ತು. ಈಗ ದೇವರ ಅನುಗ್ರಹದಿಂದ ಯುನೈಟೆಡ್ ಕಿಂಗ್‌ಡಮ್‌ಗೆ ಬಂದು ಇಲ್ಲಿ ಕೌನ್ಸಿಲ್ ಎಲೆಕ್ಷನ್‌ನಲ್ಲಿ ನಿಂತು ಗೆದ್ದಿದ್ದೇವೆ. ನಾನೊಬ್ಬನೇ ಅಲ್ಲ, ಬೇರೆ ಸಾಕಷ್ಟು ಭಾರತೀಯರು ಯುನೈಟೆಡ್ ಕಿಂಗ್‌ಡಮ್‌ನಾದ್ಯಂತ ರಾಜಕೀಯದಲ್ಲಿ ಭಾಗವಹಿಸುತ್ತಿದ್ದಾರೆ. ಏಕೆಂದರೆ ನಮ್ಮ ಧ್ವನಿ ಸ್ಥಳೀಯ ಮಟ್ಟದಲ್ಲಿ ಕೇಳಬೇಕಾಗುತ್ತದೆ, ಆ ಕಾರಣದಿಂದ ನಾನು ಪೊಲಿಟಿಕಲ್ ಸಿಸ್ಟಮ್ ಸೇರಿಕೊಂಡೆ’ ಎನ್ನುವುದು ಸುರೇಶ್‌ ಅವರ ಮಾತು.