ಲೊಂಡಾ ರೈಲು ನಿಲ್ದಾಣದಲ್ಲಿ ಇಂಜಿನಿಯರಿಂಗ್ ಕಾಮಗಾರಿಯಿಂದಾಗಿ ಜು.22ರಿಂದ 28ರವರೆಗೆ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಮಿರಜ್-ಲೊಂಡಾ ಮತ್ತು ಮಿರಜ್-ಕ್ಯಾಸಲ್ ರಾಕ್ ಮಾರ್ಗದ ನಾಲ್ಕು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದ್ದು, ಕೆಲವು ರೈಲುಗಳು ವಿಳಂಬವಾಗಿ ಸಂಚರಿಸಲಿವೆ.
ಬೆಳಗಾವಿ: ಲೊಂಡಾ ರೈಲು ನಿಲ್ದಾಣದ ಯಾರ್ಡ್‌ನಲ್ಲಿ ಇಂಜಿನಿಯರಿಂಗ್ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜು.22ರಿಂದ 28ರವರೆಗೆ ಕೆಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ನಾಲ್ಕು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದ್ದು, ಎರಡು ರೈಲುಗಳ ಸಂಚಾರವನ್ನು ವಿಳಂಬಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಜು.24ರಿಂದ 27ರವರೆಗೆ ರೈಲು ಸಂಖ್ಯೆ 56931 ಮಿರಜ್ ಲೊಂಡಾ ಡೈಲಿ ಪ್ಯಾಸೆಂಜರ್ ರೈಲು ಬೆಳಗಾವಿ ಮತ್ತು ಲೊಂಡಾ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಲೊಂಡಾಕ್ಕೆ ತೆರಳದೆ ಬೆಳಗಾವಿಯಲ್ಲಿಯೇ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ. ಜು.25ರಿಂದ 28ರವರೆಗೆ ರೈಲು ಸಂಖ್ಯೆ 56932 ಲೊಂಡಾ ಮಿರಜ್ ಡೈಲಿ ಪ್ಯಾಸೆಂಜರ್ ರೈಲು ಲೊಂಡಾ ಮತ್ತು ಬೆಳಗಾವಿ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಲೊಂಡಾ ಬದಲಿಗೆ ಬೆಳಗಾವಿಯಿಂದಲೇ ತನ್ನ ನಿಗದಿತ ವೇಳೆಗೆ ಪ್ರಯಾಣ ಆರಂಭಿಸಲಿದೆ.
ಮಿರಜ್ ಕ್ಯಾಸಲ್ ರಾಕ್ ಡೈಲಿ ಎಕ್ಸ್ ಪ್ರೆಸ್
ಜು. 25ರಿಂದ 27ರವರೆಗೆ ರೈಲು ಸಂಖ್ಯೆ 17333 ಮಿರಜ್ ಕ್ಯಾಸಲ್ ರಾಕ್ ಡೈಲಿ ಎಕ್ಸ್ ಪ್ರೆಸ್ ರೈಲು ಬೆಳಗಾವಿ ಮತ್ತು ಕ್ಯಾಸಲ್ ರಾಕ್ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಕ್ಯಾಸಲ್ ರಾಕ್ ಬದಲಿಗೆ ಬೆಳಗಾವಿಯಲ್ಲಿಯೇ ತನ್ನ ಪ್ರಯಾಣವನ್ನು ಮುಕ್ತಾಯಗೊಳಿಸಲಿದೆ.
ಇದೇ ಅವಧಿಯಲ್ಲಿ ರೈಲು ಸಂಖ್ಯೆ 17334 ಕ್ಯಾಸಲ್ ರಾಕ್ ಮಿರಜ್ ಡೈಲಿ ಎಕ್ಸ್ ಪ್ರೆಸ್ ರೈಲು ಕ್ಯಾಸಲ್ ರಾಕ್ ಮತ್ತು ಬೆಳಗಾವಿ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಕ್ಯಾಸಲ್ ರಾಕ್ ಬದಲಿಗೆ ಬೆಳಗಾವಿಯಿಂದಲೇ ತನ್ನ ನಿಗದಿತ ವೇಳೆಗೆ ಪ್ರಯಾಣ ಆರಂಭಿಸಲಿದೆ.
ಲೋಕಮಾನ್ಯ ತಿಲಕ್ ಟರ್ಮಿನಸ್ ಎಸ್ ಎಂ ವಿಟಿ ಬೆಂಗಳೂರು ದ್ವಿಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು
ಜು. 22ರಂದು ಲೋಕಮಾನ್ಯ ತಿಲಕ್ ಟರ್ಮಿನಸ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16554 ಲೋಕಮಾನ್ಯ ತಿಲಕ್ ಟರ್ಮಿನಸ್ ಎಸ್ ಎಂ ವಿಟಿ ಬೆಂಗಳೂರು ದ್ವಿಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಮಾರ್ಗ ಮಧ್ಯೆ 40 ನಿಮಿಷಗಳ ವಿಳಂಬದೊಂದಿಗೆ ಸಂಚರಿಸಲಿದೆ. ಜು. 26 ಮತ್ತು 27ರಂದು ಕೆ ಎಸ್ ಆರ್ ಬೆಂಗಳೂರುದಿಂದ ಹೊರಡುವ ರೈಲು ಸಂಖ್ಯೆ 20653 ಕೆ ಎಸ್ ಆರ್ ಬೆಂಗಳೂರು ಬೆಳಗಾವಿ ಡೈಲಿ ಎಕ್ಸ್ ಪ್ರೆಸ್ ರೈಲು ಕ್ರಮವಾಗಿ 30 ನಿಮಿಷ ಹಾಗೂ 60 ನಿಮಿಷಗಳ ವಿಳಂಬದೊಂದಿಗೆ ಸಂಚರಿಸಲಿದೆ. ಪ್ರಯಾಣಿಕರು ತಮ್ಮ ಪ್ರಯಾಣಕ್ಕೂ ಮುನ್ನ ರೈಲುಗಳ ವೇಳಾಪಟ್ಟಿಯನ್ನು ಪರಿಶೀಲಿಸಿ ಪ್ರಯಾಣ ಕೈಗೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.


