Asianet Suvarna News Asianet Suvarna News

ಆಪರೇಷನ್‌ ಗಂಗಾದಲ್ಲಿ ರಕ್ಷಿಸಲ್ಪಟ್ಟ ಪಾಕಿಸ್ತಾನಿ ವಿದ್ಯಾರ್ಥಿನಿ... ಮೋದಿ ಬಗ್ಗೆ ಹೇಳಿದ್ದಿಷ್ಟು

  • ಉಕ್ರೇನ್‌ನಿಂದ ಪಾಕಿಸ್ತಾನಿ ವಿದ್ಯಾರ್ಥಿನಿಯ ರಕ್ಷಣೆ
  • ಭಾರತದ ಪ್ರಧಾನಿ, ಅಧಿಕಾರಿಗಳಿಗೆ ಥ್ಯಾಂಕ್ಸ್‌ ಹೇಳಿದ ವಿದ್ಯಾರ್ಥಿನಿ
  • ಆಪರೇಷನ್‌ ಗಂಗಾದಲ್ಲಿ ಪಾಕಿಸ್ತಾನಿ ಪ್ರಜೆ ಅಸ್ಮಾ ಶಫೀಕ್‌ಳ ರಕ್ಷಣೆ
Indian Embassy evacuates Pakistani national from Ukraine what she said about PM Modi read here Akb
Author
Bangalore, First Published Mar 9, 2022, 9:39 AM IST

ಯುದ್ಧ ಪೀಡಿತ ಉಕ್ರೇನ್‌ನಿಂದ ಭಾರತೀಯ ಪ್ರಜೆಗಳನ್ನು ಆಪರೇಷನ್‌ ಗಂಗಾ ಕಾರ್ಯಾಚರಣೆಯ ಮೂಲಕ ಭಾರತ ಸರ್ಕಾರ ರಕ್ಷಣೆ ಮಾಡುತ್ತಿದೆ. ಆದರೆ ಇತರ ದೇಶಗಳು ಭಾರತದಂತೆ ತನ್ನ ಪ್ರಜೆಗಳ ರಕ್ಷಣೆಗೆ ಮುಂದಾಗಿಲ್ಲ. ಆದರಲ್ಲೂ ನೇಪಾಳ ತನ್ನ ವಿದ್ಯಾರ್ಥಿಗಳನ್ನು ರಕ್ಷಿಸುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿತ್ತು. ಈ ಮಧ್ಯೆ ಮಾನವೀಯತೆ ಮೆರೆದ ಭಾರತ ಸರ್ಕಾರ ತನ್ನ ದೇಶದ ವಿದ್ಯಾರ್ಥಿಗಳ ಜೊತೆ ಬಾಂಗ್ಲಾದ 13, ಪಾಕಿಸ್ತಾನ ಹಾಗೂ ನೇಪಾಳದ ತಲಾ  ಒಬ್ಬ ವಿದ್ಯಾರ್ಥಿಯನ್ನು ರಕ್ಷಣೆ ಮಾಡಿದೆ. ಹೀಗೆ ಭಾರತದ ಅಧಿಕಾರಿಗಳಿಂದ ರಕ್ಷಿಸಲ್ಪಟ್ಟ ಪಾಕಿಸ್ತಾನ ವಿದ್ಯಾರ್ಥಿ ಪ್ರಧಾನಿ ಮೋದಿ ಹಾಗೂ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ್ದಾಳೆ. 


ಯುದ್ಧಪೀಡಿತ ಉಕ್ರೇನ್‌ನಿಂದ ಸ್ಥಳಾಂತರಿಸಲು ಸಹಾಯ ಮಾಡಿದ್ದಕ್ಕಾಗಿ ಪ್ರಧಾನಿ ಮೋದಿ (PM Modi)  ಮತ್ತು ಭಾರತೀಯ ಅಧಿಕಾರಿಗಳಿಗೆ ಪಾಕಿಸ್ತಾನಿ ಪ್ರಜೆ ಅಸ್ಮಾ ಶಫೀಕ್ (Asma Shafique)  ಧನ್ಯವಾದ ಸಲ್ಲಿಸಿದ್ದಾಳೆ. ಸುದ್ದಿ ಸಂಸ್ಥೆ ANI ಪಾಕಿಸ್ತಾನಿ ಪ್ರಜೆ ಅಸ್ಮಾ ಶಫೀಕ್ ಅವರ ವೀಡಿಯೊವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ವೀಡಿಯೊದಲ್ಲಿ, ಅಸ್ಮಾ, 'ಹಲೋ, ನನ್ನ ಹೆಸರು ಅಸ್ಮಾ ಶಫೀಕ್ ಮತ್ತು ನಾನು ಪಾಕಿಸ್ತಾನದಿಂದ ಬಂದಿದ್ದೇನೆ. ಯುದ್ಧಪೀಡಿತ ಉಕ್ರೇನ್‌ನಲ್ಲಿ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿದ್ದ ನಮಗೆ ಅಲ್ಲಿ ಎಲ್ಲಾ ರೀತಿಯಲ್ಲಿ ಬೆಂಬಲ ನೀಡಿದ್ದಕ್ಕಾಗಿ ಕೈವ್‌ನ ಭಾರತೀಯ ರಾಯಭಾರ ಕಚೇರಿಗೆ ನಾನು ತುಂಬಾ ಕೃತಜ್ಞಳಾಗಿದ್ದೇನೆ ಮತ್ತು ಭಾರತದ ಪ್ರಧಾನ ಮಂತ್ರಿಯವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ನಮ್ಮನ್ನು ಬೆಂಬಲಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು. ಭಾರತೀಯ ರಾಯಭಾರ (Indian Embassy) ಕಚೇರಿಯಿಂದಾಗಿ ನಾವು ಸುರಕ್ಷಿತವಾಗಿ ಮನೆಗೆ ಹೋಗುತ್ತೇವೆ ಎಂದು ನಾನು ಭಾವಿಸುತ್ತೇನೆ ಎಂದು ಆಕೆ ಹೇಳಿದ್ದಾಳೆ.

 

ಗಮನಾರ್ಹವಾಗಿ, ಫೆಬ್ರವರಿ 28 ರಂದು, ಪ್ರಧಾನಿ ಕಾರ್ಯಾಲಯವು ಉಕ್ರೇನ್‌ನಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುವ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿತು. ಇದರಲ್ಲಿ ಅವರು ಉಕ್ರೇನ್‌ನಲ್ಲಿ ಸಿಲುಕಿರುವ ನೆರೆಯ ದೇಶಗಳ ವಿದ್ಯಾರ್ಥಿಗಳು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಜನರಿಗೆ ಭಾರತೀಯ ಅಧಿಕಾರಿಗಳು ಸಹಾಯ ಮಾಡುತ್ತಾರೆ ಎಂದು ಹೇಳಿದರು. ಭಾರತದ ಧ್ಯೇಯವಾಕ್ಯ 'ವಸುಧೈವ ಕುಟುಂಬಕಂ' ಇಡೀ ಜಗತ್ತು ಒಂದೇ ಕುಟುಂಬ ಎಂಬ ವಿಚಾರದಿಂದ ಪ್ರಭಾವಿಸಲ್ಪಟ್ಟಿರುವ ಪ್ರಧಾನಿ, ಉಕ್ರೇನ್‌ನಲ್ಲಿ ಸಿಲುಕಿರುವ ನೆರೆಯ ದೇಶಗಳು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಜನರಿಗೆ ಭಾರತ ಸಹಾಯ ಮಾಡುತ್ತದೆ ಮತ್ತು ಅವರು ಸಹಾಯವನ್ನು ಪಡೆಯಬಹುದು ಎಂದು ಹೇಳಿದರು.

Russia Ukraine War ಎಲ್ಲ 694 ಭಾರತೀಯರ ರಕ್ಷಣೆ

ಯುದ್ಧ ಪೀಡಿತ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸುವ ವಿಚಾರದಲ್ಲಿ ಭಾರತವು ಈ ಹಿಂದೆಯೂ ಹಲವಾರು ದೇಶಗಳಿಗೆ ನೆರವು ನೀಡಿದೆ. 2015 ರಲ್ಲಿ ದಿವಂಗತ ಸುಷ್ಮಾ ಸ್ವರಾಜ್ (Sushma Swaraj) ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದಾಗ,  ಯೆಮೆನ್‌ನಿಂದ (Yemen) ಭಾರತವು 4714 ಭಾರತೀಯರನ್ನು ಮಾತ್ರವಲ್ಲದೆ 48 ದೇಶಗಳ 1947 ಜನರನ್ನು ರಕ್ಷಿಸಿತ್ತು. ಜನರಲ್ (ನಿವೃತ್ತ) ವಿ.ಕೆ .ಸಿಂಗ್ (VK Singh) ಅವರು ಯೆಮೆನ್‌ನಿಂದ ಸ್ಥಳಾಂತರಿಸುವ ಈ ರಾಹತ್‌ ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಿದ್ದರು.

ಮುಂದುವರೆದ ಆಪರೇಷನ್ ಗಂಗಾ, ಉಕ್ರೇನ್‌ನಲ್ಲಿನ ಭೀಕರ ಪರಿಸ್ಥಿತಿ ಬಿಚ್ಚಿಟ್ಟ ಕನ್ನಡತಿ

Follow Us:
Download App:
  • android
  • ios