Russia Ukraine War ಎಲ್ಲ 694 ಭಾರತೀಯರ ರಕ್ಷಣೆ

- ರಷ್ಯಾದಿಂದ ಕೆಲಕಾಲ ಕದನ ವಿರಾಮ,  ಸುಮಿಯಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳು 12 ಬಸ್‌ಗಳಲ್ಲಿ ಗಡಿಗೆ ಸ್ಥಳಾಂತರ

- ಭಾರತೀಯರ ಜತೆ ಪಾಕ್‌, ನೇಪಾಳದ ಓರ್ವರು, 13 ಬಾಂಗ್ಲನ್ನರು ಕೂಡ ರಕ್ಷಣೆ

ಈವರಗೆ 17600 ಮಂದಿ ರಕ್ಷಣೆ ಆಪರೇಷನ್‌ ಗಂಗಾ ತೆರವು ಕಾರ್ಯಾಚರಣೆ ಬಹುತೇಕ ಅಂತ್ಯದತ್ತ
 

russia ukraine war all 694 indian students stuck In ukraines sumy moved out says government san

ಸುಮಿ (ಉಕ್ರೇನ್‌): ಸಮರಪೀಡಿತ ಉಕ್ರೇನ್‌ನ (war torn Ukraine) ಸುಮಿ (Sumy) ನಗರದಲ್ಲಿ ಸಿಲುಕಿ ಪರದಾಡುತ್ತಿದ್ದ ಎಲ್ಲ ಭಾರತೀಯರನ್ನು(Indians) ಕೊನೆಗೂ ಮಂಗಳವಾರ ಸಂಜೆ ರಕ್ಷಿಸಲಾಗಿದೆ. ಸುಮಿಯಲ್ಲಿದ್ದ ಎಲ್ಲ 694 ಭಾರತೀಯ ವಿದ್ಯಾರ್ಥಿಗಳನ್ನು ಹಾಗೂ ಇತರರನ್ನು ರಕ್ಷಿಸಿ ಪೊಲ್ಟಾವಾಗೆ (Poltova) ಕರೆತರಲಾಗಿದೆ. ಅಲ್ಲಿಂದ ಅವರನ್ನು ರೈಲಿನ ಮೂಲಕ ದೇಶದ ಪಶ್ಚಿಮ ಗಡಿ ಪ್ರದೇಶಕ್ಕೆ ಕರೆದೊಯ್ಯಲಾಗುವುದು ಎಂದು ಭಾರತ ಸರ್ಕಾರ (Indian  government) ಹೇಳಿದೆ.

ರಷ್ಯಾ (Russia) ಮಂಗಳವಾರ ಮಾನವೀಯ  ನೆಲೆಯಲ್ಲಿ (humanitarian Grounds) ಸುಮಿ ನಗರದ ಮೇಲೆ ಕೆಲಕಾಲ ದಾಳಿ ನಿಲ್ಲಿಸುವುದಾಗಿ ಹೇಳಿತ್ತು. ಈ ಹಿನ್ನೆಲೆಯಲ್ಲಿ ಭಾರತೀಯ ದೂತಾವಾಸವು ರೆಡ್‌ಕ್ರಾಸ್‌ ಸಹಯೋಗದಲ್ಲಿ 12 ಬಸ್ಸುಗಳನ್ನು ಸಜ್ಜುಗೊಳಿಸಿ ಭಾರತೀಯರನ್ನು ಸುಮಿಯಿಂದ 175 ಕಿ.ಮೀ ದೂರದ ಪೊಲ್ಟಾವಾ ನಗರಕ್ಕೆ ಸ್ಥಳಾಂತರಿಸಿದೆ. ಭಾರತೀಯರಷ್ಟೇ ಅಲ್ಲದೆ, ಒಬ್ಬ ಪಾಕಿಸ್ತಾನಿ, ಒಬ್ಬ ನೇಪಾಳಿ, 13 ಬಾಂಗ್ಲಾದೇಶೀಯರು ಹಾಗೂ ಇಬ್ಬರು ಟ್ಯುನೀಶಿಯನ್ನರನ್ನೂ ಸ್ಥಳಾಂತರಿಸಲಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಇದರೊಂದಿಗೆ ಉಕ್ರೇನ್‌ನಲ್ಲಿ ಸಿಕ್ಕಿಬಿದ್ದ ಭಾರತೀಯರ ತೆರವಿಗೆ ಆರಂಭಿಸಲಾಗಿದ್ದ ಆಪರೇಷನ್‌ ಗಂಗಾ (Operation Ganga) ಬಹುತೇಕ ಅಂತ್ಯದತ್ತ ಸಾಗಿದಂತಾಗಿದೆ.

52 ನಾವಿಕರ ರಕ್ಷಣೆ: ಯುದ್ಧ ಪೀಡಿದ ಉಕ್ರೇನ್‌ನ ಮೈಕೋಲಿವ್‌ ನಗರದಲ್ಲಿ ಸಿಲುಕಿಕೊಂಡಿರುವ 75 ನಾವಿಕರಲ್ಲಿ 52 ಜನರನ್ನು ಮಂಗಳವಾರ ರಕ್ಷಣೆ ಮಾಡಲಾಗಿದೆ. ಉಳಿದ 23 ಜನರನ್ನೂ ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಕ್ರಮ ಕೈಗೊಳ್ಳಲಾಗಿದೆ ಎಂದು ರಾಯಭಾರ ಕಚೇರಿ ಹೇಳಿದೆ.

‘ಮೈಕೋಲಿವ್‌ನಲ್ಲಿ( Mykholiv ) ಸಿಲುಕಿಕೊಂಡಿರುವ ನಾವಿಕರನ್ನು ಸುರಕ್ಷಿತವಾಗಿ ಕರೆತರಲು ಬಸ್‌ಗಳನ್ನು ನಿಯೋಜನೆ ಮಾಡಲಾಗಿತ್ತು. ಲೆಬನಾನ್‌ನ ಇಬ್ಬರು ಮತ್ತು ಸಿರಿಯಾದ ಮೂವರು ನಾವಿಕರು ಸೇರಿದಂತೆ ಒಟ್ಟು 75 ಜನರನ್ನು ಮಂಗಳವಾರ ರಕ್ಷಣೆ ಮಾಡಲಾಯಿತು’ ಎಂದು ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಟ್ವೀಟ್‌ ಮಾಡಿದೆ. ಆಪರೇಶನ್‌ ಗಂಗಾ ಯೋಜನೆಯಡಿ ಭಾರತ ಈವರೆಗೆ 87 ವಿಮಾನಗಳಲ್ಲಿ 17,600ಕ್ಕೂ ಹೆಚ್ಚು ಭಾರತೀಯರನ್ನು ಸ್ವದೇಶಕ್ಕೆ ಕರೆತಂದಿದೆ.

ನಾನು ಕೀವ್‌ನಲ್ಲೇ ಇದ್ದೇನೆ, ಯಾರಿಗೂ ಹೆದರುವುದಿಲ್ಲ: ಪುಟಿನ್‌ಗೆ ಉಕ್ರೇನ್ ಅಧ್ಯಕ್ಷನ ಚಾಲೆಂಜ್!
ನಿನ್ನೆ 410 ಭಾರತೀಯರು ತವರಿಗೆ
ನವದೆಹಲಿ:
ರೊಮೇನಿಯಾದ ( Romania ) ಸುಸೇವಾದಿಂದ ( Suseva ) ಎರಡು ನಾಗರಿಕ ವಿಮಾನಗಳು ಮಂಗಳವಾರ 410 ಭಾರತೀಯ ಪ್ರಜೆಗಳನ್ನು ಭಾರತಕ್ಕೆ ಕರೆತಂದಿವೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ( Civil Aviation Ministry ) ತಿಳಿಸಿದೆ. ರಷ್ಯಾ ಉಕ್ರೇನಿನ ಮೇಲೆ ಯುದ್ಧ ಘೋಷಿಸಿದ ನಂತರ ನಾಗರಿಕ ವಿಮಾನಗಳಿಗಾಗಿ ಉಕ್ರೇನಿನ ವಾಯುಮಾರ್ಗ ಮುಚ್ಚಲಾಗಿತ್ತು. ಈ ಹಿನ್ನೆಲೆಯಲ್ಲಿ ಉಕ್ರೇನಿನಲ್ಲಿ ಸಿಲುಕಿರುವ ಭಾರತೀಯರಿಗೆ ಗಡಿದಾಟಿ ನೆರೆಯ ರಾಷ್ಟ್ರಗಳಾದ ರೊಮೇನಿಯಾ, ಹಂಗೇರಿ, ಸ್ಲೊವಾಕಿಯಾ ಹಾಗೂ ಪೋಲೆಂಡಿಗೆ ಬರಲು ಸೂಚಿಸಲಾಗಿತ್ತು.

PayPal Service ರಷ್ಯಾಗೆ ಮತ್ತೊಂದು ಹೊಡೆತ, ವೀಸಾ, ಮಾಸ್ಟರ್‌ಕಾರ್ಡ್ ಬಳಿಕ ಪೇಪಾಲ್ ಸೇವೆ ಸ್ಥಗಿತ!
ಡಾಲರ್‌ ಎದುರು ರು. ಮೌಲ್ಯ7 ಪೈಸೆ ಕುಸಿತ:
ಮುಂಬೈ:
ಸತತ 5ನೇ ದಿನವೂ ಡಾಲರ್‌ ( dollar ) ಎದುರು ರುಪಾಯಿ ( Rupee ) ಮೌಲ್ಯ ಕುಸಿತ ಕಂಡಿದೆ. ಮಂಗಳವಾರ ಇಲ್ಲಿ ವಿದೇಶಿ ವಿನಿಮಯ ವಹಿವಾಟಿನಲ್ಲಿ ( foreign exchange rate ) ಡಾಲರ್‌ ಎದುರು ರುಪಾಯಿ ಮೌಲ್ಯ 7 ಪೈಸೆ ಕುಸಿದು 77.05ಕ್ಕೆ ತಲುಪಿದೆ. ಇದು, ಇದುವರೆಗೆ ಡಾಲರ್‌ ಎದುರು ರುಪಾಯಿಯ ಅತಿ ಕನಿಷ್ಠ ಮೌಲ್ಯವಾಗಿದೆ. ರಷ್ಯಾ- ಉಕ್ರೇನ್‌ ಯುದ್ಧ ( Russia Ukraine war ) ಮುಗಿಯುವ ಯಾವುದೇ ಸೂಚನೆ ಕಾಣದೇ ಇರುವುದು, ತೈಲ ಬಿಕ್ಕಟ್ಟು ಮೊದಲಾದ ಕಾರಣಗಳಿಂದಾಗಿ ಈ ಬೆಳವಣಿಗೆ ಕಂಡುಬರುತ್ತಿದೆ.

Latest Videos
Follow Us:
Download App:
  • android
  • ios