'ಡೋಲಾ ರೆ ಡೋಲಾ' ಹಾಡಿಗೆ ಮಾಧುರಿ ದೀಕ್ಷಿತ್ - ಐಶ್ವರ್ಯಾ ರೈರಂತೆ ಕುಣಿದ ಭಾರತ - ಕೆನಡಾ ಜೋಡಿ: ನೆಟ್ಟಿಗರ ಮೆಚ್ಚುಗೆ

ಈ ಹಾಡಿನ ಮ್ಯಾಜಿಕ್ ಅನ್ನು ಮರುಸೃಷ್ಟಿಸಲು ಹಲವಾರು ಕಲಾವಿದರು ವರ್ಷಗಳಿಂದಲೂ ತಮ್ಮ ಸ್ಟೆಪ್ಸ್‌ ಹಾಕುತ್ತಿದ್ದಾರೆ ಹಾಗೂ ಮಾಧುರಿ ದೀಕ್ಷಿತ್, ಐಶ್ವರ್ಯ ರೈ ಹೆಜ್ಜೆಗಳನ್ನು ಅನುಕರಿಸಲು ಪ್ರಯತ್ನಿಸುತ್ತಲೇ ಇದ್ದಾರೆ.

indian canadian duo grooves to dola re dola on new york streets leaves internet in awe ash

ಮಾಧುರಿ ದೀಕ್ಷಿತ್ (Madhuri Dixit) ಹಾಗೂ ಐಶ್ವರ್ಯಾ ರೈ (Aishwarya Rai) ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದೇ ರೀತಿ, ಅವರ ಡ್ಯಾನ್ಸ್‌ (Dance) ಕೂಡ. ಇವರಿಬ್ಬರೂ ಅಪ್ರತಿಮ ಬಾಲಿವುಡ್ ಬೆಡಗಿಯರೇ (Bollywood Beauties) ಸರಿ. ಇನ್ನು, ಇವರಿಬ್ಬರು ಒಟ್ಟಿಗೆ ನಟಿಸಿದ ದೇವದಾಸ್ (Devdas) ಚಿತ್ರದಲ್ಲಿ ಮಾಡಿರುವ ಅಭಿನಯ, ಡ್ಯಾನ್ಸ್‌ ಸ್ಟೆಪ್ಸ್‌ ಅನ್ನು ಈಗಲೂ ಅನೇಕರು ಮರೆತಿಲ್ಲ ಬಿಡಿ. ಅದರಲ್ಲೂ, ‘ಡೋಲಾ ರೆ ಡೋಲಾ’ (Dola Re Dola) ಹಾಡು ಬಂದ್ರೆ ಸಾಕು ನಿಮಗೂ ಕುಣೀಬೇಕು ಅನ್ಸುತ್ತೆ ಅಲ್ವಾ..  2002 ರಲ್ಲಿ ಈ ಚಿತ್ರ ಬಿಡುಗಡೆಯಾಗಿದ್ದರೂ 2 ದಶಕಗಳ ಬಳಿಕವೂ ಭಾರತೀಯರ ಈ ಕ್ರೇಜ್‌ ಈಗಲೂ ಪ್ರಚಲಿತದಲ್ಲಿದೆ. ಈ ಹಾಡಿನ ಮ್ಯಾಜಿಕ್ ಅನ್ನು ಮರುಸೃಷ್ಟಿಸಲು ಹಲವಾರು ಕಲಾವಿದರು ವರ್ಷಗಳಿಂದಲೂ ತಮ್ಮ ಸ್ಟೆಪ್ಸ್‌ ಹಾಕುತ್ತಿದ್ದಾರೆ ಹಾಗೂ ಮಾಧುರಿ ದೀಕ್ಷಿತ್, ಐಶ್ವರ್ಯ ರೈ ಹೆಜ್ಜೆಗಳನ್ನು ಅನುಕರಿಸಲು ಪ್ರಯತ್ನಿಸುತ್ತಲೇ ಇದ್ದಾರೆ.

ಅದೇ ರೀತಿ, ಅಮೆರಿಕದ  ನ್ಯೂಯಾರ್ಕ್ ನಗರದ ಬೀದಿಗಳಲ್ಲಿ ಭಾರತೀಯ-ಕೆನಡಾದ ಜೋಡಿ ಇದನ್ನೇ ಪ್ರಯತ್ನಿಸಿದ್ದಾರೆ ನೋಡಿ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೋ ಈ ಜೋಡಿಯ ಅದ್ಭುತ ನೃತ್ಯ ಚಲನೆಗಳು ಮತ್ತು ಈ ಹಾಡಿನ ಪ್ರಖ್ಯಾತ ಹೆಜ್ಜೆಗಳನ್ನು ಸೆರೆಹಿಡಿದಿದೆ.

ಇದನ್ನು ಓದಿ: ಯಾರಿಗೇಕೆ ಬಾದರ್ ಮಾಡಬೇಕು, ಬೇಶರಮ್ ಹಾಡಿಗೆ ಪ್ಲಸ್ ಸೈಜ್ ಯುವತಿ ಡ್ಯಾನ್ಸಿಗೆ ಫ್ಯಾನ್ಸ್ ಫಿದಾ!

 
 
 
 
 
 
 
 
 
 
 
 
 
 
 

A post shared by Alex Wong (@alexdwong)

ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಕ್ಲಿಪ್ ವೈರಲ್‌ ಆಗಿದ್ದು, ಬಿಳಿ ಬಣ್ಣದ ಶರ್ಟ್‌, ಲೆಹೆಂಗಾ, ದುಪಟ್ಟಾ ಮತ್ತು ಕಡವನ್ನು ಧರಿಸಿ ಇಬ್ಬರು ನೃತ್ಯಗಾರರು ಹೆಜ್ಜೆ ಹಾಕಿದ್ದಾರೆ. ಕೆನಡಾದ ನರ್ತಕ ಅಲೆಕ್ಸ್ ವಾಂಗ್‌ ಹಾಗೂ ಭಾರತೀಯ ನರ್ತಕ ಜೈನಿಲ್ ಮೆಹ್ತಾ - ಇಬ್ಬರೂ ನ್ಯೂಯಾರ್ಕ್‌ನಲ್ಲಿ ಭೇಟಿಯಾಗಿದ್ದರಂತೆ. ನಂತರ, ಈ ಇಬ್ಬರಿಗೂ ಪ್ರಸಿದ್ಧ ಹಾಡುಗಳಲ್ಲಿ ಒಂದಾದ 'ಡೋಲಾ ರೇ ಡೋಲಾ' ಹಾಡಿನಲ್ಲಿ ಐಶ್ವರ್ಯಾ ರೈ ಮತ್ತು ಮಾಧುರಿ ದೀಕ್ಷಿತ್‌ ಅನ್ನು ಅನುಕರಿಸಲು ಮತ್ತು ಹೆಜ್ಜೆ ಹಾಕಲು ನಿರ್ಧರಿಸಿದರು. 

ನಿಸ್ಸಂದೇಹವಾಗಿ, ಈ ಜೋಡಿಯು ಹಿಂದಿ ಹಾಡಿಗೆ ಅದ್ಭುತವಾಗಿ ಡ್ಯಾನ್ಸ್‌ ಮಾಡಿದ್ದು,  ಮತ್ತು ಆನ್‌ಲೈನ್‌ನಲ್ಲಿ ಭಾರತೀಯ ಮೂಲದವರ ಹೃದಯ ಗೆದ್ದಿದ್ದಾರೆ. ಇನ್ನು, ಜೈನಿಲ್ ಮತ್ತು ಅಲೆಕ್ಸ್ ನ್ಯೂಯಾರ್ಕ್‌ನ ಬೀದಿಗಳಲ್ಲಿ ಬರಿಗಾಲಲ್ಲೇ ಹೆಜ್ಜೆ  ಹಾಕಿದ್ದಾರೆ. ಈ ಹಿನ್ನೆಲೆ, ತಮ್ಮ ಅನುಕರಣೀಯ ನಡೆಗಳು ಮತ್ತು ಸಾಂಪ್ರದಾಯಿಕ ಉಡುಗೆಯೊಂದಿಗೆ ನೃತ್ಯವನ್ನು ಪೂರ್ಣಗೊಳಿಸುವ ವಿಧಾನವನ್ನು ನೆಟ್ಟಿಗರು ಇಷ್ಟಪಟ್ಟಿದ್ದಾರೆ. 

ಇದನ್ನೂ ಓದಿ: Viral Video: ನೃತ್ಯ ಮಾಡಿದ ಬಾಲಕಿಯ ತಲೆ ಮೇಲೆ ಸೊಂಡಿಲಿಟ್ಟು ಆಶೀರ್ವದಿಸಿದ ಆನೆ

"ಇದು ತುಂಬಾ ಕೂಲ್‌ ಆಗಿದೆ" ಎಂದು ಒಬ್ಬರು ಬಳಕೆದಾರ ಬರೆದುಕೊಂಡರೆ, ಮತ್ತೊಬ್ಬರು "ಇದು ನನ್ನ ಮೆಚ್ಚಿನ ಬಾಲಿವುಡ್ ಚಲನಚಿತ್ರ, ನೀವು ಅದನ್ನು ಅದ್ಭುತವಾಗಿ ಪರ್ಫಾಮ್‌ ಮಾಡಿದ್ದೀರಿ!!" “ಅದ್ಭುತ! ಮತ್ತು ಹೌದು ನ್ಯೂಯಾರ್ಕ್‌ನ ಪಾದಚಾರಿ ಮಾರ್ಗದಲ್ಲಿ ಬರಿಗಾಲಿನಲ್ಲಿ ನೃತ್ಯ ಮಾಡಿರುವುದಕ್ಕೆ ಅಭಿನಂದನೆಗಳು..! ಒಂದು ದಿನ ನಾನು ನಿಮ್ಮೊಂದಿಗೆ ಸೇರಲು ಆಶಿಸುತ್ತೇನೆ. ಯಶಸ್ವಿ ಮತ್ತು ಪ್ರೀತಿಯ 2023!" ಎಂದೂ ಮತ್ತೊಬ್ಬರು ಆನ್‌ಲೈನ್ ಬಳಕೆದಾರರರು ಅವರನ್ನು ಶ್ಲಾಘಿಸಿದ್ದಾರೆ.

ಈ ಹಿಂದೆ, ಮಾಧುರಿ ದೀಕ್ಷಿತ್ ಮತ್ತು ಐಶ್ವರ್ಯಾ ರೈ ಅವರ 'ಡೋಲಾ ರೆ ಡೋಲಾ' ಹಾಡಿನ ಹೆಜ್ಜೆಗಳನ್ನು ಅಭಿಮಾನಿಯೊಬ್ಬರು ಎಡಿಟ್‌ ಮಾಡಿ ರೋಮಾಂಚಕಾರಿ ಟ್ವಿಸ್ಟ್‌ ನೀಡಿದ್ದರು. ಅಂದರೆ, ಈ ಬೀಟ್‌ಗಳನ್ನು ಡೋಲಾ ರೆ ಡೋಲಾ ಹಾಡಿನ ಬದಲಿಗೆ ವಾಕಾ ವಾಕಾ ಎಂಬ ಹಾಡಿಗೆ ಬದಲಾಯಿಸಿದ್ದರು. ಈ ವೈರಲ್‌ ವಿಡಿಯೋ ಸಹ ಇಂಟರ್ನೆಟ್‌ ಅನ್ನು ರಂಜಿಸಿತ್ತು. ಏಕೆಂದರೆ, ಅವರ ಹೆಜ್ಜೆಗಳು ವಾಕಾ ವಾಕಾ ಹಾಡಿನೊಂದಿಗೂ ಉತ್ತಮವಾಗಿ ಸಂಯೋಜಿತವಾಗಿತ್ತು ಎಂದು ಹೇಳಬಹುದು.

ಇದನ್ನೂ ಓದಿ: ಹೊಸ ವರ್ಷಕ್ಕೆ ಗೊಂಬೆ ಸರ್ಪ್ರೈಸ್: 'ಸೂತ್ರಧಾರಿ' ಹಾಡಿಗೆ ಸೊಂಟ ಬಳುಕಿಸಿದ ನಿವೇದಿತಾ

Latest Videos
Follow Us:
Download App:
  • android
  • ios