ವಾಷಿಂಗ್ಟನ್(ನ.02)‌: ನ.3ರಂದು ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟ್‌ ಪಕ್ಷದ ಜೊ ಬೈಡನ್‌ ಅವರು ಗೆಲುವು ಸಾಧಿಸಿದರೆ, ಕರ್ನಾಟಕದ ಮಂಡ್ಯ ಮೂಲದ ಡಾ. ವಿವೇಕ್‌ ಮೂರ್ತಿ ಅವರಿಗೆ ಮಹತ್ವದ ಹುದ್ದೆ ಒಲಿಯುವ ಸಾಧ್ಯತೆ ಇದೆ.

ಬೈಡೆನ್‌ಗೆ ಭಾರತೀಯರದ್ದೇ ಬಲ! ಇವರಿಬ್ಬರ ಸಲಹೆ ಇಲ್ದೇ ಇದ್ರೆ ಏನೂ ನಡೆಯಲ್ಲ!

ಈ ಹಿಂದೆ ಅಧ್ಯಕ್ಷ ಒಬಾಮಾ ಅವಧಿಯಲ್ಲಿ ಅತಿ ಕಿರಿಯ ಸರ್ಜನ್‌ ಜನರಲ್‌ ಆಗಿದ್ದ ವಿವೇಕ್‌ ಮೂರ್ತಿ ಅವರು 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡನ್‌ ಅವರಿಗೆ ಚುನಾವಣಾ ತಂತ್ರಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೈಡನ್‌ ಅವರ ಪ್ರಮುಖ ಚುನಾವಣಾ ತಂತ್ರಗಾರರ ಪೈಕಿ ವಿವೇಕ್‌ ಮೂರ್ತಿ ಅವರು ಕೂಡ ಒಬ್ಬರಾಗಿದ್ದಾರೆ. ಹೀಗಾಗಿ ಬೈಡನ್‌ ಅಧ್ಯಕ್ಷರಾದರೆ ವಿವೇಕ್‌ ಮೂರ್ತಿ ಅವರನ್ನು ತಮ್ಮ ಪ್ರಮುಖ ತಂತ್ರಜ್ಞರಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

ವಿವೇಕ್‌ ಮೂರ್ತಿ ಮೂಲತಃ ಕರ್ನಾಟಕದ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹಲ್ಲೆಗೆರೆ ಗ್ರಾಮದವರು. 2014ರಲ್ಲಿ ಅವರು ಒಬಾಮಾ ಸರ್ಕಾರದಲ್ಲಿ ಸಾರ್ವಜನಿಕ ಆರೋಗ್ಯ ಸೇವೆಯ ಮುಖ್ಯಸ್ಥ ಹುದ್ದೆ ಆದ ಸರ್ಜನ್‌ ಜನರಲ್‌ ಆಗಿ ಕಾರ್ಯನಿರ್ವಹಿಸಿದ್ದರು.